ರಾಜ್ಯಪಾಲರಿಂದಲೇ ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ; ವಿ.ಎಸ್ ಉಗ್ರಪ್ಪಆರೋಪ

ಸದಸದ ಸಾರ್ವಭೌಮತ್ವವನ್ನ ರಾಜ್ಯಪಾಲರು ಅರ್ಥ ಮಾಡಿಕೊಳ್ಳದೆ ಬಹುಮತಸಾಬೀತು ಮಾಡುವಂತೆ ತರಾತುರಿಯಲ್ಲಿ ನಿರ್ದೇಶನ ನೀಡಿದ್ದರು. ಈ ತರಾತುರಿಯನ್ನು ಬಿಜೆಪಿ ಸರ್ಕಾರ ರಚನೆ ವಿಚಾರದಲ್ಲಿ ಏಕೆ ತೋರುತ್ತಿಲ್ಲ? ಎಂದು ಪ್ರಶ್ನಿಸಿದರು.

G Hareeshkumar | news18
Updated:July 26, 2019, 4:24 PM IST
ರಾಜ್ಯಪಾಲರಿಂದಲೇ ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ; ವಿ.ಎಸ್ ಉಗ್ರಪ್ಪಆರೋಪ
ಮಾಜಿ ಸಂಸದ ವಿ.ಎಸ್​. ಉಗ್ರಪ್ಪ
G Hareeshkumar | news18
Updated: July 26, 2019, 4:24 PM IST
ಬೆಂಗಳೂರು (ಜುಲೈ 26) :  ಶಾಸಕರ ರಾಜೀನಾಮೆ ವಿಚಾರಣೆ ಬಾಕಿ ಇದೆ. ಇದು ಇತ್ಯರ್ಥ ಆಗುವವರೆಗೂ ಅವರೆಲ್ಲಾ ಕಾಂಗ್ರೆಸ್-ಜೆಡಿಎಸ್ ಶಾಸಕರೇ ಆಗಿರುತ್ತಾರೆ. ಹೀಗಿರುವಾಗ 105 ಇರುವ ಶಾಸಕರ ಸಂಖ್ಯಾಬಲವನ್ನು ಬಿಜೆಪಿ, 112 ಮಾಡಿಕೊಳ್ಳುಲು ಹೇಗೆ ಸಾಧ್ಯ? ಕುದುರೆ ವ್ಯಾಪಾರದಿಂದ ಮಾತ್ರವೇ ಸಾಧ್ಯ. ವಾಮ ಮಾರ್ಗದಲ್ಲಿ ಮಾತ್ರವೇ ಸರ್ಕಾರ ರಚನೆ ಸಾಧ್ಯ ಎಂದು ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಆರೋಪಿದ್ದಾರೆ.

ಕುದುರೆ ವ್ಯಾಪಾರಕ್ಕೆ ಇತಿಶ್ರೀ ಹಾಡಬೇಕಿದ್ದ ರಾಜ್ಯಪಾಲರೇ ಕುದುರೆ ವ್ಯಾಪಾರದ ಮೂಲಕ ರಚನೆ ಆಗಲಿರುವ ಬಿಜೆಪಿ ಸರ್ಕಾರದ ರಚನೆಗೆ ಆವಕಾಶ ನೀಡಿದ್ದು ಖಂಡನೀಯ ಎಂದರು. ರಾಜ್ಯಪಾಲರ ನಿಲುವು ಸಂವಿಧಾನ ಬಾಹಿರ ಹಾಗೂ ಜನಾದೇಶಕ್ಕೆ ವಿರುದ್ಧವಾಗಿದ್ದು, ಪ್ರಜಾಪ್ರಭುತ್ವದ ಮೌಲ್ಯಕ್ಕೆ ಎಸಗುತ್ತಿರುವ ಅಪಚಾರವಾಗಿದೆ ಎಂದು ಕಿಡಿಕಾರಿದ್ದಾರೆ.

ಜನಾದೇಶ ಧಿಕ್ಕರಿಸುವಂತ, ಪ್ರಜಾಪ್ರಭುತ್ವ ನಿರಾಕರಿಸುಂತಹ ಕೆಲಸಗಳನ್ನು ಬಿಜೆಪಿ ಮಾಡುತ್ತಿದೆ. ಸದಸದ ಸಾರ್ವಭೌಮತ್ವವನ್ನ ರಾಜ್ಯಪಾಲರು ಅರ್ಥ ಮಾಡಿಕೊಳ್ಳದೆ ಬಹುಮತಸಾಬೀತು ಮಾಡುವಂತೆ ತರಾತುರಿಯಲ್ಲಿ ನಿರ್ದೇಶನ ನೀಡಿದ್ದರು. ಈ ತರಾತುರಿಯನ್ನು ಬಿಜೆಪಿ ಸರ್ಕಾರ ರಚನೆ ವಿಚಾರದಲ್ಲಿ ಏಕೆ ತೋರುತ್ತಿಲ್ಲ? ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅವರು ಬಹುಮತ ಇರುವಾಗ ಮುಖ್ಯಮಂತ್ರಿ ಆಗಿಲ್ಲ. 3 ಸಲವೂ ವಾಮ ಮಾರ್ಗದಲ್ಲಿಯೇ ಮುಖ್ಯಮಂತ್ರಿಗಳಾಗಿದ್ದಾರೆ. ಈ ಬಾರಿಯೂ ಆಪರೇಷನ್ ಕಮಲ ಮೂಲಕ ಕುದುರೆ ವ್ಯಾಪಾರ ನಡೆಸಿ, ಶಾಸಕರನ್ನು ಖರೀದಿಸಿ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಸಚಿವ ಸ್ಥಾನ ನೀಡಲು ಮುಂದಾಗಿರುವುದು ದೊಡ್ಡ ಅಕ್ರಮ : ಹೆಚ್​​ ಕೆ ಪಾಟೀಲ್

ಇತ್ತ ಗದಗನಲ್ಲಿ ಮಾತನಾಡಿದ ಶಾಸಕ ಹೆಚ್​ ಕೆ ಪಾಟೀಲ್​​​, ರಾಜೀನಾಮೆ ಸಲ್ಲಿಸಿರುವ ಅತೃಪ್ತ ಶಾಸಕರಿಗೆ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಲು ಮುಂದಾಗಿರುವುದು ದೊಡ್ಡ ಅಕ್ರಮ. ಇಂದು ಸಂಜೆ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದು, ಅತೃಪ್ತ ಶಾಸಕರಿಗೂ ಸಚಿವ ಸ್ಥಾನ ನೀಡಲಾಗುತ್ತಿದೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದಕ್ಕಿಂತ ದೊಡ್ಡ ರಾಜಕೀಯ ವ್ಯಭಿಚಾರ ಇನ್ನೊಂದಿಲ್ಲ. ಕಾಂಗ್ರೆಸ್ ಪಕ್ಷದ 9 ಶಾಸಕರನ್ನು ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಮಾಡುತ್ತಾರೆ ಎಂದರೆ ಇದಕ್ಕೇನು ಹೇಳಬೇಕು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಅಧಿಕಾರಕ್ಕಾಗಿ ಮತ್ತೆ ಬಿಜೆಪಿ ಕದತಟ್ಟಲಿದೆಯಾ ಜೆಡಿಎಸ್​? ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ ಎನ್ನುತ್ತಿವೆ ಮೂಲಗಳು 
Loading...

ಕಾಂಗ್ರೆಸ್ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದೇ ದೊಡ್ಡ ಅಕ್ರಮ. ಅವರ ರಾಜೀನಾಮೆಗಳು ಇನ್ನೂ ಇತ್ಯರ್ಥ ಆಗಿಲ್ಲ. ಅವುಗಳನ್ನು ಸ್ಪೀಕರ್ ಪರಿಶೀಲನೆ ಹಂತದಲ್ಲಿದ್ದರೂ ಹೀಗೆ ಮಾಡುವುದು ಅಕ್ರಮವಾಗುತ್ತದೆ. ರಾಜ್ಯಪಾಲಾರು ಇಂತಹ ಅಕ್ರಮಗಳಿಗೆ ಅವಕಾಶ ಮಾಡಿಕೊಟ್ಟರೆ ರಾಜಕೀಯ ಪಕ್ಷಗಳು ಮುಂದಿನ ಹೆಜ್ಜೆ ಬಗ್ಗೆ ಚಿಂತನೆ ಮಾಡಬೇಕಾಗುತ್ತದೆ ಎಂದು ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.

First published:July 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...