ಸಂಸತ್ ವಿಸರ್ಜಿಸಿ ಬ್ಯಾಲಟ್ ಪೇಪರ್​ನಲ್ಲಿ ಚುನಾವಣೆ ನಡೆಸಿ; ನೀವು ಗೆದ್ದರೆ ಜೀವನಪರ್ಯಂತ ಟೀಕಿಸಲ್ಲ: ಮೋದಿಗೆ ಉಗ್ರಪ್ಪ ಸವಾಲು

ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಉಗ್ರಪ್ಪ ವಾಗ್ದಾಳಿ ನಡೆಸಿದರು. ಅವರು ಅವಹೇಳನಕಾರಿ ಭಾಷಣ ಮಾಡಿದ್ದಾರೆ. ಈ ಬಗ್ಗೆ ಕೇಸ್ ದಾಖಲಾಗಿದೆ. ಇಂತಹವರು ಹಂಪಿ ಉತ್ಸವದಲ್ಲಿ ಸಿಎಂ‌ ಪಕ್ಕ ನಿಂತುಕೊಂಡಿದ್ದಾರೆ. ಅಪರಾಧಿ, ಆರೋಪಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಕದಲ್ಲೇ ನಿಲ್ಲಿಸಿಕೊಳ್ತಾರೆ ಅಂದ್ರೆ ಸೋಮಶೇಖರ್ ರೆಡ್ಡಿಗೆ ಖುದ್ದು ಸಿಎಂ ಅವರೇ ರಕ್ಷಣೆ ನೀಡ್ತಿದ್ದಾರೆ ಎಂದು ಕಿಡಿಕಾರಿದರು.

news18-kannada
Updated:January 11, 2020, 3:57 PM IST
ಸಂಸತ್ ವಿಸರ್ಜಿಸಿ ಬ್ಯಾಲಟ್ ಪೇಪರ್​ನಲ್ಲಿ ಚುನಾವಣೆ ನಡೆಸಿ; ನೀವು ಗೆದ್ದರೆ ಜೀವನಪರ್ಯಂತ ಟೀಕಿಸಲ್ಲ: ಮೋದಿಗೆ ಉಗ್ರಪ್ಪ ಸವಾಲು
ವಿ.ಎಸ್​.ಉಗ್ರಪ್ಪ-ಮೋದಿ
  • Share this:
ಬೆಂಗಳೂರು(ಜ.11): ಮಿಸ್ಟರ್ ಮೋದಿ ನಿಮಗೆ ಧಮ್​, ತಾಕತ್ತು ಇದ್ದರೆ ಸಂಸತ್​ ವಿಸರ್ಜಿಸಿ ಚುನಾವಣೆಗೆ ಬನ್ನಿ. ಬ್ಯಾಲೆಟ್​ ಪೇಪರ್ ಮೂಲಕ ಚುನಾವಣೆ ನಡೆಯಲಿ. ಗೆದ್ದು ಬನ್ನಿ ನೋಡೋಣ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಸವಾಲು ಎಸೆದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಂಸತ್​ ವಿಸರ್ಜಿಸಿ ಚುನಾವಣೆಯಲ್ಲಿ ನಿಂತು ಗೆಲ್ಲಿ ಎಂದು ಸವಾಲು ಹಾಕಿದರು. ನೀವು ಗೆದ್ದರೆ ನಾನು ಜೀವನ ಪರ್ಯಂತ ನಿಮ್ಮ ವಿರುದ್ಧ ಮಾತನಾಡಲ್ಲ. ಜೊತೆಗೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದರು.

ಭೈರಪ್ಪ ವಿರುದ್ಧ ಕಿಡಿ:

ಇದೇ ವೇಳೆ ಸಾಹಿತಿ ಎಸ್​.ಎಲ್​.ಭೈರಪ್ಪ ವಿರುದ್ಧ ಉಗ್ರಪ್ಪ ಕಿಡಿಕಾರಿದರು. ಭೈರಪ್ಪನವರು ಯಾವಾಗ ಬಿಜೆಪಿಗೆ ಸೇರಿದರು? ಭೈರಪ್ಪ ಕಾಂಗ್ರೆಸ್ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ.  ತಮ್ಮ ವ್ಯಕ್ತಿತ್ವಕ್ಕೆ ತಾವೇ ಮಸಿ ಬಳಿದುಕೊಳ್ಳುತ್ತಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್. ಬಾಂಗ್ಲಾ ವಿಮೋಚನೆ ಮಾಡಿದ್ದೂ ಕಾಂಗ್ರೆಸ್ ಪಕ್ಷವೇ. ವೋಟ್​​ ಬ್ಯಾಂಕ್ ರಾಜಕೀಯ ಮಾಡಿದ್ದರೆ ಸೋಲುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು. ಬಹುಶಃ ಪ್ರಧಾನಿಯವರು ಭೈರಪ್ಪನವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದರೆ ಬಿಜೆಪಿಯ ವಿಚಾರಧಾರೆಯನ್ನು ಸಮರ್ಥವಾಗಿ ಸಮರ್ಥಿಸಿಕೊಳ್ಳುತ್ತಿದ್ದರು‌ ಎಂದು ಕುಟುಕಿದರು.

ಸುಳ್ಳು ಸುದ್ದಿ - ಏಪ್ರಿಲ್​ನಲ್ಲಿ ಪಂಚಾಯತ್ ಚುನಾವಣೆ ಇಲ್ಲ: ಗೆಜೆಟ್ ನೋಟಿಫಿಕೇಶನ್ ನಕಲಿ - ಆಂತರಿಕ ತನಿಖೆಗೆ ಆದೇಶ

ಮುಂದುವರೆದ ಅವರು, ಕಾಶ್ಮೀರದಲ್ಲಿ ಸಂವಿಧಾನದ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ.  ಇದನ್ನು ಸುಪ್ರೀಂಕೋರ್ಟ್ ಹೇಳಿದ ನಂತರವಾದರೂ ಪ್ರಧಾನಿ ಮತ್ತು ಗೃಹ ಸಚಿವರು ದೇಶದ ಕ್ಷಮೆಯಾಚಿಸಬೇಕಿತ್ತು ಎಂದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಫ್ರೀ ಕಾಶ್ಮೀರ ಭಿತ್ತಿ ಪತ್ರ ಪ್ರದರ್ಶಿಸಿದ ವಿದ್ಯಾರ್ಥಿನಿಯ ಕ್ರಮವನ್ನು ವಿ.ಎಸ್​. ಉಗ್ರಪ್ಪ ಸಮರ್ಥಿಸಿಕೊಂಡರು. ಆ ವಿದ್ಯಾರ್ಥಿನಿ ಯಾವ ಅರ್ಥದಲ್ಲಿ  ಫ್ರೀ ಕಾಶ್ಮೀರ್ ಫಲಕ ಪ್ರದರ್ಶಿಸಿದರೋ ಗೊತ್ತಿಲ್ಲ.‌ ಆದರೆ ಕಾಶ್ಮೀರಿ ನಾಗರೀಕರನ್ನು ಬಲವಂತವಾಗಿ ಹಿಡಿದಿಟ್ಟುಕೊಂಡಿರುವ ನಿರಂತರ ನಿಷೇಧಾಜ್ಞೆ ಜಾರಿಗೊಳಿಸುವ ಹಾಗೂ ಇಂಟರ್ನೆಟ್ ಬಂದ್ ಮಾಡಿರುವ ಸರ್ಕಾರದ ಕ್ರಮಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪಿಸಿದೆ. ಇಂತಹ ಕ್ರಮಗಳಿಂದ ಕಾಶ್ಮೀರಿಗರನ್ನು ಮುಕ್ತಗೊಳಿಸಿ ಎಂಬುದು ಕೋರ್ಟ್ ಭಾವನೆ. ಅದನ್ನು ಕೇಂದ್ರ ಸರ್ಕಾರ ಪಾಲನೆ ಮಾಡಲೇಬೇಕು ಎಂದು ಆಗ್ರಹಿಸಿದರು.

ಸೋಮಶೇಖರ್​ ರೆಡ್ಡಿ ವಿರುದ್ಧ ಕಿಡಿ:ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಉಗ್ರಪ್ಪ ವಾಗ್ದಾಳಿ ನಡೆಸಿದರು. ಅವರು ಅವಹೇಳನಕಾರಿ ಭಾಷಣ ಮಾಡಿದ್ದಾರೆ. ಈ ಬಗ್ಗೆ ಕೇಸ್ ದಾಖಲಾಗಿದೆ. ಇಂತಹವರು ಹಂಪಿ ಉತ್ಸವದಲ್ಲಿ ಸಿಎಂ‌ ಪಕ್ಕ ನಿಂತುಕೊಂಡಿದ್ದಾರೆ. ಅಪರಾಧಿ, ಆರೋಪಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಕದಲ್ಲೇ ನಿಲ್ಲಿಸಿಕೊಳ್ತಾರೆ ಅಂದ್ರೆ ಸೋಮಶೇಖರ್ ರೆಡ್ಡಿಗೆ ಖುದ್ದು ಸಿಎಂ ಅವರೇ ರಕ್ಷಣೆ ನೀಡ್ತಿದ್ದಾರೆ ಎಂದು ಕಿಡಿಕಾರಿದರು.

2018ರಲ್ಲಿ 33,977 ಮಂದಿ ಮೇಲೆ ಅತ್ಯಾಚಾರ; ಶೇ. 25 ರೇಪ್ ಸಂತ್ರಸ್ತೆಯರು ಅಪ್ರಾಪ್ತರು: ಎನ್​ಸಿಆರ್​​ಬಿ ವರದಿ

ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಬಿಡುಗಡೆ ಮಾಡಿದ ಸಿಡಿ ಕುರಿತಾಗಿ ಉಗ್ರಪ್ಪ ಸಮರ್ಥಿಸಿಕೊಂಡರು.ಮ್ಯಾಜಿಸ್ಟ್ರೇಟ್ ತನಿಖೆ ಹೇಗೆ ಆಗುತ್ತೆ ಎಂಬುದು ಗೊತ್ತಿದೆ. ನಿಜವಾಗಲೂ ತನಿಖೆ ಮಾಡುವುದಾದರೆ ಹೈಕೋರ್ಟ್ ಅಥವಾ ಸುಪ್ರಿಂಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸಿ‌. ಆಗ ವಾಸ್ತವಾಂಶ ತಿಳಿಯುತ್ತದೆ ಎಂದರು.
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ