Muddahanumegowda: ಕಾಂಗ್ರೆಸ್​​ಗೆ ಗುಡ್ ಬೈ ಹೇಳಿದ ಮುದ್ದಹನುಮೇಗೌಡ; ಸಂಜೆ ರಾಜೀನಾಮೆ ಪತ್ರ ಸಲ್ಲಿಕೆ ಸಾಧ್ಯತೆ

ನನ್ನನ್ನು ಪಕ್ಷದಿಂದ ಬಿಡುಗಡೆ ಮಾಡುವಂತೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಕೇಳಿಕೊಂಡಿದ್ದೇನೆ. 2023ರ ಚುನಾವಣೆಯಲ್ಲಿ ನಾನು ಕುಣಿಗಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಘೋಷಿಸಿದರು.

ಎಸ್ ಪಿ ಮುದ್ದಹನುಮೇಗೌಡ

ಎಸ್ ಪಿ ಮುದ್ದಹನುಮೇಗೌಡ

  • Share this:
    ಮಾಜಿ ಸಂಸದ, ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡರು (SP Muddahanumegowda) ಕಾಂಗ್ರೆಸ್ (Congress) ತೊರೆಯುವ ನಿರ್ಧಾರ ಮಾಡಿದ್ದಾರೆ. ಇಂದು ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಮುದ್ದಹನುಮೇಗೌಡರು ರಾಜೀನಾಮೆ ನಿರ್ಧಾರ ಘೋಷಿಸಿದರು. ಕಳೆದ ಬಾರಿ ನಡೆದ ರಾಜ್ಯಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದರ. ಆದ್ರೆ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿತ್ತು. ಇನ್ನು ಕಳೆದ ಬಾರಿಯ ಲೋಕಸಭಾ ಚುನಾವಣೆ (Loksabha Election) ವೇಳೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಧಿಕಾರದಲ್ಲಿತ್ತು. ಈ ಹಿನ್ನೆಲೆ ತುಮಕೂರು (Tumakuru) ಲೋಕಸಭಾ ಕ್ಷೇತ್ರವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ (Former MP HD Deve gowda) ಬಿಟ್ಟುಕೊಟ್ಟಿದ್ದರು.

    ಮಾಧ್ಯಮಗಳ ಜೊತೆ ಮಾತನಾಡಿದ ಮುದ್ದಹನುಮೇಗೌಡರು, ಇಂದು ಸಂಜೆ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ. ನನ್ನನ್ನು ಪಕ್ಷದಿಂದ ಬಿಡುಗಡೆ ಮಾಡುವಂತೆ ಡಿಕೆಶಿ ಹಾಗೂ ಸಿದ್ದರಾಮಯ್ಯ ಕೇಳಿಕೊಂಡಿದ್ದೇನೆ. 2023ರ ಚುನಾವಣೆಯಲ್ಲಿ ನಾನು ಕುಣಿಗಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಘೋಷಿಸಿದರು.

    Former MP SP Muddahanumegowda quit congress party mrq
    ಡಿಕೆ ಶಿವಕುಮಾರ್ ಜೊತೆ ಚರ್ಚೆ


    ಯಾವ ಪಕ್ಷದಿಂದ ಇನ್ನು ತೀರ್ಮಾನ ಮಾಡುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಹಿಂದಿರುಗುವ ಮಾತೇ ಇಲ್ಲ. ಯಾವ ಮನವೊಲಿಕೆಯು ಸಾಧ್ಯವಿಲ್ಲ ಎಂದು ಹೇಳಿದರು.

    ಪಕ್ಷ ತೊರೆಯುತ್ತಿರೋದು ಏಕೆ?

    ನಾನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷದಿಂದ ಬಿಡುಗಡೆ ಮಾಡಿ ಎಂದು ಮನವಿ ಮಾಡಿ ಬಂದಿದ್ದೇನೆ. ಒಂದು ಪಕ್ಷ ಬಿಡಲು ಬಲವಾದ ಕಾರಣ, ಅದು ಪಕ್ಷದಿಂದ ಆಗಿರಬೇಕು ಮತ್ತು ಇಲ್ಲ ನನ್ನಿಂದ ಆಗಿರಬೇಕು. ಅದು ನನ್ನಿಂದ ಕಡೆ ಆದ್ರೆ ಪಕ್ಷ ಸ್ಪಷ್ಟವಾಗಿ ಹೇಳಿಬೇಕು. ಒಂದು ರಾಷ್ಟ್ರೀಯ ಪಕ್ಷ ಬಿಡಲು ಬಲವಾದ ಕಾರಣದಿಂದ ಇರಬೇಕು ತಾನೇ ಎಂದು ಪ್ರಶ್ನೆ ಮಾಡಿದರು.

    ಅಸಮಾಧಾನ ಹೊರ ಹಾಕಿದ ಗೌಡರು

    ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಮತ್ತು ಡಿಕೆಶಿ ಭೇಟಿ  ಮಾಡಿ ನನ್ನ ಸ್ಪಷ್ಟ ನಿರ್ಧಾರ ತಿಳಿಸಿದ್ದೇನೆ. 1989ರಲ್ಲಿ ಕಾಂಗ್ರೆಸ್ ಬಿ ಫಾರಂ ಕೊಟ್ಟು ನಂತರ ಬೇರೆಯವರಿಗೆ ಕೊಟ್ಟಿದ್ರು. ನಂತರ 2019ರಲ್ಲಿ ಸಂಸದ ಆಗಿದ್ದರೂ ನಿಲ್ಲಲು ಅವಕಾಶ ಕೊಡಲಿಲ್ಲ. ನಾಲ್ಕು ಬಾರೀ ಚುನಾವಣೆಗೆ ಸ್ಪರ್ಧೆ ಮಾಡುವುದನ್ನು ತಪ್ಪಿಸಲಾಗಿದೆ ಎಂದು ತಮ್ಮ ಅಸಮಧಾನ ಹೊರ ಹಾಕಿದರು.

    ಇದನ್ನೂ ಓದಿ:  KGF Babu: ನಾನು ಯಾರಿಗೂ ಹೆದರಲ್ಲ; 5 ಸಾವಿರ ರೂ ಚೆಕ್ ವಿತರಣೆ ಆರಂಭಿಸಿದ ಕೆಜಿಎಫ್ ಬಾಬು

    ಕಾಂಗ್ರೆಸ್ ಪಕ್ಷ ಶಾಸಕ, ಸಂಸದರಾಗಿ ಆಯ್ಕೆಯಾಗಲು ಅವಕಾಶ ಕೊಟ್ಟರು. ನಾನು ಅತ್ಯಂತ ಕ್ರಿಯಾಶೀಲನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷಕ್ಕೆ ನನ್ನದೇ ಆದ ಅಳಿಲು ಸೇವೆ ಮಾಡಿದ್ದೇನೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನನ್ನ ಸೇವೆಯು ಇದೆ ಎಂದರು.

    Former MP SP Muddahanumegowda quit congress party mrq
    ಡಿಕೆ ಶಿವಕುಮಾರ್ ಜೊತೆ ಚರ್ಚೆ


    ನನ್ನ ಕ್ರಿಯಾಶೀಲ ರಾಜಕೀಯ ನಿಂತಿಲ್ಲ

    ನನ್ನ ಕ್ರಿಯಾಶೀಲ ರಾಜಕೀಯ ನಿಂತಿಲ್ಲ. ಪಕ್ಷಕ್ಕೆ ಕೂಡ ನನ್ನ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ. ನಾಲ್ಕು ಬಾರೀ ಸ್ಪರ್ಧೆದಿಂದ ತಪ್ಪಿಸಲು ಅಂತಹ ಅನಿವಾರ್ಯ ಇರಲಿಲ್ಲ. ಸಿದ್ದರಾಮಯ್ಯ ಅವರು ಇಂತಹ ನಿರ್ಧಾರ ಮಾಡಬೇಡಿ ಎಂದು ಹೇಳಿದ್ರು. ನನ್ನ ರಾಜಕೀಯ ಜೀವನದಲ್ಲಿ ಯಾವ ರೀತಿ ಎದುರಿಸಿದೆ ಎಂದು ಜನರಿಗೆ ಗೊತ್ತಿದೆ. ಪಕ್ಷದಿಂದ ಬಿಡುಗಡೆ ಮಾಡಿ ಎಂದು ಕೇಳಿದ್ದೇನೆ ಎಂದು ತಿಳಿಸಿದರು.

    ಅತೀ ಶೀಘ್ರದಲ್ಲೇ ಒಂದು ಒಳ್ಳೆಯ ನಿರ್ಧಾರ

    ಇಷ್ಟು ವರ್ಷಗಳ ನಡೆದ ರಾಜಕೀಯ ಧೋರಣೆಗಳು ಇಂತಹ ಪರಿಸ್ಥಿತಿಗೆ ಕಾರಣ. ಇವತ್ತು ಈ ನಿರ್ಧಾರ ಮಾಡಿದ್ದೇನೆ. ಮುಂದೆ ಒಳ್ಳೆಯ ಅವಕಾಶಗಳು ಬರುತ್ತವೆ.  ಕುಣಿಗಲ್​ನಲ್ಲಿ ನಾನು ಎರಡು ಬಾರಿ ಶಾಸಕ ಆಗಿದ್ದೇನೆ. ಮುಂದೆ 2023ರಲ್ಲೂ ನಾನೇ ಸ್ಪರ್ಧೆ ಮಾಡಬೇಕು ಎಂದು ಅಲ್ಲಿ ಜನರು ಹೇಳಿದ್ದಾರೆ. ಅತೀ ಶೀಘ್ರದಲ್ಲೇ ಒಂದು ಒಳ್ಳೆಯ ನಿರ್ಧಾರಕ್ಕೆ ಬರುತ್ತೇನೆ ಎಂದರು.

    ಆಪರೇಷನ್ ಕಮಲ ಅಲ್ಲ

    ಆಪರೇಷನ್ ಕಮಲದ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುದ್ದಹನಮೇಗೌಡರು, ನಾನು ಏನೂ ಅಧಿಕಾರದಲ್ಲಿ ಇದ್ದೇನಾ ಆಪರೇಷನ್ ಮಾಡಲು? ಸುರ್ಜೇವಾಲ ಎಂಎಲ್‌ಸಿ ಚುನಾವಣೆ ಸಂದರ್ಭದಲ್ಲಿ ಪೋನ್ ಮಾಡಿ ಪಕ್ಷದಲ್ಲಿ ಇರಲು ಹೇಳಿದ್ರು ಅಷ್ಟೇ. ಯಾರ ಬಗ್ಗೆ ವೈಯಕ್ತಿಕವಾಗಿ ಮಾತನಾಡಲು ಬಯಸುವುದಿಲ್ಲ. ಇವತ್ತೇ ರಾಜೀನಾಮೆ ಪತ್ರವನ್ನು ಕಳುಹಿಸುತ್ತೇನೆ ತಮ್ಮ ನಿರ್ಧಾರವನ್ನು ಒತ್ತಿ ಒತ್ತಿ ಹೇಳಿದರು.

    ಇದನ್ನೂ ಓದಿ:  Murugha Shri: ಮುರುಘಾ ಶ್ರೀಗಳ ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆ

    ನನ್ನ ನಿರ್ಧಾರ ಅಚಲ

    ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡಲು ಈ ರೀತಿ ಮಾಡುತ್ತಿಲ್ಲ. ಕುಣಿಗಲ್ ವಿಧಾನಸಭೆ ಕ್ಷೇತ್ರದಿಂದ ಮುಂದೆ ಸ್ಪರ್ಧೆ ಮಾಡುತ್ತೇನೆ. ನಾನು ಮತ್ತು ನನ್ನ ನಿರ್ಧಾರ ಅಚಲವಾಗಿದೆ ಯಾವುದೇ ಕಾರಣಕ್ಕೂ ಬದಲಾಗಲ್ಲ ಎಂದು ಸ್ಪಷ್ಟಪಡಿಸಿದರು.
    Published by:Mahmadrafik K
    First published: