Bengaluru: ಬೆಂಗಳೂರಲ್ಲಿ ಮಾಜಿ ಸಂಸದ ಶಿವರಾಮೇಗೌಡರ ಅಳಿಯನ ಪುಂಡಾಟ; ಹುಲಿಹೈದರ ಗುಂಪು ಘರ್ಷಣೆಗೆ ಟ್ವಿಸ್ಟ್

ಎಲ್‌.ಆರ್ ಶಿವರಾಮೇಗೌಡರು ಮುಂಬರುವ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ. ಜೆಡಿಎಸ್‌ನಿಂದ ಉಚ್ಚಾಟನೆಗೊಂಡಿದ್ದ ಎಲ್ ಆರ್ ಶಿವರಾಮೇಗೌಡ, ಮಂಡ್ಯದ ನಾಗಮಂಗಲದಲ್ಲಿ ಪಕ್ಷೇತರವಾಗಿ ಕಣಕ್ಕಿಳಿಯಲು ಭರ್ಜರಿ ತಯಾರಿ ನಡೆಸಿದ್ದಾರೆ.

ರಾಜೀವ್ ರಾಥೋಡ್

ರಾಜೀವ್ ರಾಥೋಡ್

 • Share this:
  ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ (Former MP LR Shivaramegowda) ಅಳಿಯ ಪುಂಡಾಟ ಮೆರೆದಿದ್ದಾನೆ. ಸ್ಯಾಂಡಲ್‌ವುಡ್ ನಟನೂ (Sandalwood Actor) ಆಗಿರುವ ರಾಜೀವ್ ರಾಥೋಡ್ (Rajeev Rathod)‌ ಬೆಂಗಳೂರಿನ ವಿಜಯನಗರದಲ್ಲಿ (Vijayanagara) ಆಡಿ ಕಾರಿಗೆ ಆ್ಯಂಬುಲೆನ್ಸ್ ಸೈರನ್ (Ambulance Siren) ಹಾಕೊಂಡು ನ್ಯೂಸೆನ್ಸ್ ಮಾಡಿದ್ದಾರೆ. ಆ್ಯಂಬುನೆಲ್ಸ್‌ ಸೈರನ್ ಹಾಕಿಕೊಂಡು ತನ್ನ ಆಡಿ ಕಾರಿನಲ್ಲಿ (Car) ಇಷ್ಟ ಬಂದ ಹಾಗೆ ಓಡಾಡಿದ್ದಾನೆ. ಸಂಚಾರ ನಿಯಮ ಉಲ್ಲಂಘನೆ (Traffic Rules) ಹಿನ್ನೆಲೆ ವಿಜಯನಗರ ಸಂಚಾರಿ ಠಾಣೆ ಪೊಲೀಸರು ಕೇಸ್ ದಾಖಲಿಸಿ, ದಂಡ ಹಾಕಿದ್ದಾರೆ.

  ಇತ್ತ ಎಲ್‌.ಆರ್ ಶಿವರಾಮೇಗೌಡರು ಮುಂಬರುವ ಚುನಾವಣೆಗೆ ರಣಕಹಳೆ ಮೊಳಗಿಸಿದ್ದಾರೆ. ಜೆಡಿಎಸ್‌ನಿಂದ ಉಚ್ಚಾಟನೆಗೊಂಡಿದ್ದ ಎಲ್ ಆರ್ ಶಿವರಾಮೇಗೌಡ, ಮಂಡ್ಯದ ನಾಗಮಂಗಲದಲ್ಲಿ ಪಕ್ಷೇತರವಾಗಿ ಕಣಕ್ಕಿಳಿಯಲು ಭರ್ಜರಿ ತಯಾರಿ ನಡೆಸಿದ್ದಾರೆ.

  ನಾಗಮಂಗದಲ್ಲಿ ಶಿವರಾಮೇಗೌಡರ ಪ್ರಚಾರ

  ಇಂದಿನಿಂದ ನಾಗಮಂಗಲ ಕ್ಷೇತ್ರದಲ್ಲಿ ಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ. ಪ್ರತಿ ಗ್ರಾಮ ಗ್ರಾಮಗಳಿಗೂ LRS ಸಂಕಲ್ಪ ಯಾತ್ರೆ ತೆರಳಲಿದೆ. ಈ ಮೂಲಕ ಈಗಿನಿಂದ್ಲೇ ಮತದಾರರನ್ನು ಸೆಳೆಯಲು L.R ಶಿವರಾಮೇಗೌಡ ಮುಂದಾಗಿದ್ದಾರೆ.

  ರಾಜೀವ್ ರಾಥೋಡ್


  ಇದನ್ನೂ ಓದಿ:  National Highwayಯಲ್ಲಿ ಹೆಚ್ಚಾದ ಅಪಘಾತಗಳ ಸಂಖ್ಯೆ, ಶಹಾಪುರ ಜನರ ಸಂಕಷ್ಟ; ಬೈಪಾಸ್ ರಸ್ತೆ ಯಾವಾಗ?

  ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವು: ಪೋಷಕರ ಆರೋಪ

  ವೈದ್ಯರ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕಿ ಸಾವನ್ನಪ್ಪಿರೋ ಆರೋಪ ಕೇಳಿ ಬರ್ತಿದೆ. ಬೆಂಗಳೂರಿನ ಬಾಗಲಗುಂಟೆಯ 14 ವರ್ಷದ ಹರ್ಷಿತಾ ಮೃತ ಬಾಲಕಿ. ಕಳೆದ ಆಗಸ್ಟ್ 9ರಂದು ಹೆಸರಘಟ್ಟ ರಸ್ತೆಯಲ್ಲಿರೋ ಸಪ್ತಗಿರಿ ಆಸ್ಪತ್ರೆಯಲ್ಲಿ ಬಾಲಕಿಯನ್ನು ದಾಖಲಿಸಲಾಗಿತ್ತು.

  ಹೊಟ್ಟೆ ನೋವು ಜ್ವರದಿಂದ ಬಾಲಕಿ ಬಳಲುತ್ತಿದ್ವು. ಮೊನ್ನೆ ರಾತ್ರಿ ಬಾಲಕಿಗೆ ಆಪರೇಷನ್ ಮಾಡಲಾಗಿತ್ತು. ನಿನ್ನೆಯಿಂದ ಐಸಿಯುನಲ್ಲಿ  ಬಾಲಕಿಯನ್ನು ಇಡಲಾಗಿತ್ತು. ಇದ್ದಕ್ಕಿದ್ದಂತೆ ಬಾಲಕಿ ಸಾವನ್ನಪ್ಪಿದ್ದಾಳೆ ಅಂತ ವೈದ್ಯರು ಹೇಳ್ತಿದ್ದಾರೆ ಅಂತ ಮೃತ ಬಾಲಕ ಕುಟುಂಬಸ್ಥರು ಹೇಳ್ತಿದ್ದಾರೆ. ಸರಿಯಾದ ಚಿಕಿತ್ಸೆ ಕೊಡದೇ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ನಮ್ಮ ಮಗಳು ಮೃತಪಟ್ಟಿದ್ದಾಳೆ ಅಂತ ಪೋಷಕರು ಆರೋಪಿಸಿದ್ರು.

  ಹುಲಿಹೈದರ ಗುಂಪು ಘರ್ಷಣೆ ಪ್ರಕರಣಕ್ಕೆ ಟ್ವಿಸ್ಟ್

  ಹುಲಿಹೈದರ ಗುಂಪು ಘರ್ಷಣೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮುಸ್ಲಿಂ ಸಮುದಾಯದ 3 ಯುವತಿಯರನ್ನ ಯಂಕಪ್ಪ ಕುಟುಂಬದ ಯುವಕರು ಮದುವೆಯಾಗಿದ್ದಕ್ಕೆ ಇಷ್ಟೆಲ್ಲಾ ಅನಾಹುತವಾಗಿದೆ ಎಂದು ಎಸ್​​ಟಿ ಸಮಾಜದ ಜಿಲ್ಲಾಧ್ಯಕ್ಷ ರತ್ನಾಕರ್ ಹೇಳಿದ್ದಾರೆ. ಮೊಹರಂ ಸಂದರ್ಭದಲ್ಲಿ ಗಲಾಟೆಯಾಗುವ ಸಾಧ್ಯತೆ ಇತ್ತು.

  Koppal huli haidara clash complaint filed in kanakagiri police station mrq
  ಗಲಾಟೆ


  ಆದರೆ ಪೊಲೀಸ್ ಬಂದೋಬಸ್ತ್ ಮಾಡಿದ ಕಾರಣ ಗಲಾಟೆ ನಡೆಯಲಿಲ್ಲ.. ಆದ್ರೆ ಪೊಲೀಸ್ ವ್ಯಾನ್ ಅಲ್ಲಿಂದ ಹೋದ ಬಳಿಕ ಗಲಾಟೆಯಾಗಿದೆ. ಘಟನೆಯ ಹಿಂದೆ ಯಾವುದೇ ಕಾಣದ ಕೈಗಳಿರಲಿ ಅವರ ಮೇಲೆ‌ ಕ್ರಮವಾಗಬೇಕು ಎಂದು ಆಗ್ರಹಿಸಿದ್ದಾರೆ.

  ನಾಲ್ಕು ವರ್ಷದ ಬಾಲಕ ಸಾವು

  ಬೆಳಗಾವಿಯಲ್ಲಿ ಬೈಕ್‌ ಸವಾರನ ಎಡವಟ್ಟಿಗೆ 4 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಬೈಕ್‌ ಸವಾರರ ವೇಗವಾಗಿ ಬಂದು ಮನೆಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆದಿದ್ದಾನೆ.

  ಬೈಕ್‌ ಡಿಕ್ಕಿ ಹೊಡೆದ ರಭಸಕ್ಕೆ ಮನೆ ಕಾಂಪೌಂಡ್ ಗೇಟ್ ಕುಸಿದು ಬಿದ್ದು 4 ವರ್ಷದ ಅಜಯ್ ಸುಭಾಷ್ ಮೃತಪಟ್ಟಿದ್ದಾನೆ. ಈ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಮಹಾಂತೇಶ ನಗರದಲ್ಲಿ ನಡೆದಿದೆ.

  ಹಸುವನ್ನ ಎಳೆದೊಯ್ದ ಚಿರತೆ

  ಉತ್ತರ ಕನ್ನಡದ ದಾಂಡೇಲಿಯಲ್ಲಿ ಚಿರತೆಯೊಂದು ಹಸುವನ್ನು ಬೇಟೆಯಾಡಿದೆ. ಹಸುವಿನ ಮೇಲೆ ಚಿರತೆ ದಾಳಿ ಮಾಡಿದ್ದು, ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಹಸು ಪ್ರಯತ್ನಿಸಿದೆ. ಆದ್ರೆ ಸಾಧ್ಯವಾಗಿಲ್ಲ. ಕೊನೆಗೆ ಚಿರತೆ ಹಸುವನ್ನು ಎಳೆದೊಯ್ದಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

  ಹಸು


  ಇದನ್ನೂ ಓದಿ: Hubballi: ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹಿಂದೂಪರ ಸಂಘಟನೆಗಳ ಪಟ್ಟು; ಅಂದು ಉಮಾ ಭಾರತಿ ಸಿಎಂ ಸ್ಥಾನ ಕಳೆದುಕೊಂಡಿದ್ದು ಹೇಗೆ?

  ತಂದೆಯನ್ನು ಕೊಚ್ಚಿ ಕೊಂದ ಮಗ

  ತಂದೆಯನ್ನೇ ಪಾಪಿ ಮಗ ಕೊಚ್ಚಿ ಕೊಲೆಗೈದಿದ್ದಾನೆ. ಈ ಹೃದಯವಿದ್ರಾವಕ ಘಟನೆ ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆ 51 ವರ್ಷದ ತಂದೆ ಗಣೇಶ್‌ನನ್ನು ಮಗ ವಿಜಯ್ ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ. ಸ್ಥಳಕ್ಕೆ ಎಸ್​ಪಿ ಶಿವಪ್ರಕಾಶ್ ದೇವರಾಜು, ಡಿವೈಎಸ್​ಪಿ ಶಿವಾನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
  Published by:Mahmadrafik K
  First published: