ಕ್ರೈಸ್ತರ ಭಾವನೆಗಳಿಗೆ ಬೆಲೆ ಕೊಡದ ನೀವ್ಯಾಕೆ ಮಕ್ಕಳನ್ನು ಮಿಷನರಿ ಶಾಲೆಗಳಲ್ಲಿ ಓದಿಸುತ್ತೀರಿ?; ಬಿಜೆಪಿಗರಿಗೆ ಮಾಜಿ ಸಂಸದ ಪ್ರಶ್ನೆ

ಬಿಜೆಪಿಯವರದ್ದು ದಮನಕಾರಿ ಮನಸ್ಥಿತಿ. ಹಿಂದೂ ಧರ್ಮ ಬಿಟ್ಟು ಬೇರೆ ಏನು ಇರಬಾರದು ಎನ್ನುವ ಭಾವನೆ ಇಟ್ಟುಕೊಂಡಿದ್ದಾರೆ. ಇವರ ಮೂಲ ಅಜೆಂಡಾ ಪ್ರಚೋದನಕಾರಿ ಮೂಲಕ ಮತ ಸೆಳೆಯುವುದು. ಬಿಜೆಪಿಯವರು ಮೊದಲು ಅಸ್ಪೃಶ್ಯತೆ ಬಗ್ಗೆ ಮಾತನಾಡಲಿ- ಧ್ರುವನಾರಾಯಣ್​​

Latha CG | news18-kannada
Updated:December 28, 2019, 2:20 PM IST
ಕ್ರೈಸ್ತರ ಭಾವನೆಗಳಿಗೆ ಬೆಲೆ ಕೊಡದ ನೀವ್ಯಾಕೆ ಮಕ್ಕಳನ್ನು ಮಿಷನರಿ ಶಾಲೆಗಳಲ್ಲಿ ಓದಿಸುತ್ತೀರಿ?; ಬಿಜೆಪಿಗರಿಗೆ ಮಾಜಿ ಸಂಸದ ಪ್ರಶ್ನೆ
ಧ್ರುವನಾರಾಯಣ
  • Share this:
ಮೈಸೂರು(ಡಿ.28): "ಕ್ರೈಸ್ತರ ಸೇವೆ ಅಮೋಘ. ಅಂತಹ ಧರ್ಮವನ್ನ ಅವಮಾನಿಸುವುದು ಸರಿಯಲ್ಲ. ಬಿಜೆಪಿ ನಾಯಕರು ಕ್ರೈಸ್ತರ ಭಾವನೆಗಳಿಗೆ ಬೆಲೆ ಕೊಡುತ್ತಿಲ್ಲ" ಎಂದು ಚಾಮರಾಜನಗರ ಮಾಜಿ ಸಂಸದ ಧ್ರುವನಾರಾಯಣ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಧ್ರುವನಾರಾಯಣ್​, ಮಾಜಿ ಸಚಿವ ಡಿ.ಕೆ ಶಿವಕುಮಾರ್​​ ತನ್ನ ಕನಕಪುರ ಕ್ಷೇತ್ರದಲ್ಲಿ ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವುದನ್ನು ಬಿಜೆಪಿಗರು ರಾಜಕೀಯ ಮಾಡುತ್ತಿದ್ದಾರೆ. ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿಯವರು, ಎಲ್ಲದಕ್ಕೂ ಸೋನಿಯಾ  ಗಾಂಧಿ ಹೆಸರನ್ನು ತಳುಕು ಹಾಕುತ್ತಾರೆ. ಹೀಗೆ ಮಾಡುವುದು ತಪ್ಪು. ಹಾಗಾದರೆ ಬಿಜೆಪಿ ನಾಯಕರ ಯಾರ ಮಕ್ಕಳು ಕ್ರೈಸ್ತ ಶಾಲೆಗಳಲ್ಲಿ ಓದಿಲ್ಲವೇ? ಪ್ರತಾಪ್​ ಸಿಂಹ ಓದಿದ ಕಾಲೇಜು ಯಾವುದು? ಎಂದು ಪ್ರಶ್ನಿಸಿದರು.

ಇನ್ನು ಮಾಜಿ ಸಚಿವ ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಮುಂದುವರೆಸಿದ ಮಾಜಿ ಸಂಸದ ಧ್ರುವನಾರಾಯಣ್​​, ​​ ಸ್ಥಳೀಯರ ಮನವಿಗೆ ಸ್ಪಂದಿಸುವುದು ಶಾಸಕರ ಕರ್ತವ್ಯ. ಅದಕ್ಕಾಗಿ ಡಿಕೆಶಿ ಸರ್ಕಾರದಿಂದ ಜಾಗ ಕೊಡಿಸಿ ತಾವು ಹಣ ನೀಡಿದ್ದಾರೆ. ಇದನ್ನು ಬಿಜೆಪಿ ನಾಯಕರು ಟೀಕಿಸುವುದು ಸರಿಯಲ್ಲ ಎಂದರು.

ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಪೊಲೀಸ್​ ಸರ್ಪಗಾವಲು; ಕುಡಿದು ಡ್ರೈವ್ ಮಾಡಿದರೆ ಕ್ರಿಮಿನಲ್ ಕೇಸ್!

ಬಿಜೆಪಿಯವರ ಮನಸ್ಸಿನಲ್ಲಿ ವಿಷ ತುಂಬಿದೆ. ಬಿಜೆಪಿಯವರು ಕ್ರಿಶ್ಚಿಯನ್ನರ ಭಾವನೆಗಳಿಗೆ ಬೆಲೆ‌‌ ಕೊಡುತ್ತಿಲ್ಲ. ಇವರ ಈ ಹೇಳಿಕೆಗಳು ಅಕ್ಷಮ್ಯ ಅಪರಾಧ. ಮೃಗಗಳಿಗೆ ಮಾನವೀಯತೆ ಇರುತ್ತದೆ. ಆದರೆ ಬಿಜೆಪಿ ನಾಯಕರಿಗೆ ಮಾನವೀಯತೆ ಇಲ್ಲ. ಇವರೆಲ್ಲ ಮನುಷ್ಯರಾ?ಎಂದು ಕಿಡಿಕಾರಿದರು.

ಸಿಎಎ ಕಾಯ್ದೆಯನ್ನು ಧರ್ಮಾಧಾರಿತವಾಗಿ ಜಾರಿ ಮಾಡುತ್ತಿದ್ದಾರೆ. ಈಗ ಕ್ರಿಶ್ಚಿಯನ್ನರ ಭಾವನೆಗಳಿಗೆ ಬೆಲೆ ಕೊಡುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನು ಮಾಡಲು ಹೋಗುತ್ತಿವೆ. ಆ ಈಶ್ವರಪ್ಪನವರಿಗಂತು ಮನುಷ್ಯತ್ವವೇ ಇಲ್ಲ ಬಿಡಿ. ಅವರು ಕ್ರಿಶ್ಚಿಯನ್ನರಿಗೆ ನೋವಾಗುವ ಮಾತುಗಳನ್ನೇ ಆಡಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಬಿಜೆಪಿಯವರದ್ದು ದಮನಕಾರಿ ಮನಸ್ಥಿತಿ. ಹಿಂದೂ ಧರ್ಮ ಬಿಟ್ಟು ಬೇರೆ ಏನು ಇರಬಾರದು ಎನ್ನುವ ಭಾವನೆ ಇಟ್ಟುಕೊಂಡಿದ್ದಾರೆ. ಇವರ ಮೂಲ ಅಜೆಂಡಾ ಪ್ರಚೋದನಕಾರಿ ಮೂಲಕ ಮತ ಸೆಳೆಯುವುದು. ಬಿಜೆಪಿಯವರು ಮೊದಲು ಅಸ್ಪೃಶ್ಯತೆ ಬಗ್ಗೆ ಮಾತನಾಡಲಿ. ಹಿಂದೂ ಧರ್ಮದಲ್ಲಿರುವ ಅಸಮಾನತೆ ಬಗ್ಗೆ ತಮ್ಮ‌ ನಿಲುವು ಹೇಳಲಿ. ಕೆ.ಎಸ್​​ ಈಶ್ವರಪ್ಪ ಅಂತೂ ಎಲ್ಲರಿಗೂ ಅವಮಾನ ಮಾಡ್ತಿದ್ದಾರೆ. ಒಬ್ಬ ಮಂತ್ರಿಯಾಗಿ ಹೇಗೆ ಇರಬೇಕು ಎಂಬುದೇ ಆ ಮನುಷ್ಯನಿಗೆ ಗೊತ್ತಿಲ್ಲ ಎಂದು ಟೀಕಿಸಿದರು.ಕರ್ನಾಟಕದಲ್ಲಿ ಕನ್ನಡಕ್ಕೆ ಆದ್ಯತೆ ನೀಡಲೇಬೇಕು; ಹೈಕೋರ್ಟ್​ ತೀರ್ಪು ಸ್ವಾಗತರ್ಹ; ಸಚಿವ ಸಿ.ಟಿ ರವಿ

 

ನಾನು ಶಾಸಕನಾಗಿದ್ದಾಗ ಸಿ.ಟಿ.ರವಿ ನನಗೆ ಹೇಳುತ್ತಿದ್ದರು. ಯಾಕೆ ಶಾಲೆ ಕಾಲೇಜಿನ ಫೈಲ್ ತರುತ್ತೀರಾ? ಅದನ್ಯಾಕೆ ಮಾಡೋಕೆ ಹೋಗ್ತಿರಿ? ನಾವು ಕೇವಲ ವರ್ಷಕ್ಕೊಮ್ಮೆ ದತ್ತ ಪೀಠ ಮೆರವಣಿಗೆ ಮಾಡಿದರೆ ಚುನಾವಣೆಯಲ್ಲಿ ಗೆದ್ದು ಬರ್ತೀವಿ. ನೀವು ಹಾಗೆ ಮಾಡಿ ಎಂದು ಸಲಹೆ ಕೊಟ್ಟಿದ್ದರು. ಇನ್ನು ನಳಿನ್ ಕುಮಾರ್ ಕಟೀಲ್ ಸಂಸತ್​​ಗೆ ಬರದೆ ಉತ್ಸವದಲ್ಲಿ ಭಾಗಿಯಾಗುತ್ತಿದ್ದರು. ಸಂಸತ್ ಬಿಟ್ಟು ಉತ್ಸವದಲ್ಲಿ ಭಾಗಿಯಾಗ್ತಿರಾ ಅಂತ ಕೇಳಿದರೆ, ನಮಗೆ ಸಂಸತ್ ಗಿಂತ ಉತ್ಸವವೇ ಮುಖ್ಯ ಅಂತ ಹೇಳುತ್ತಿದ್ದರು. ಇಂತಹ ಮನಸ್ಥಿತಿ ಇರುವವಂತವರು ಬಿಜೆಪಿ ನಾಯಕರುಗಳು. ಇವರುಗಳಿಗೆ ಅಭಿವೃದ್ಧಿ ಬೇಡ. ಧರ್ಮದ ಮಧ್ಯ ಕಂದಕ ಸೃಷ್ಟಿಸುವುದೆ ಇವರ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

 

 
Published by: Latha CG
First published: December 28, 2019, 1:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading