Mangalore Potholes: ಮಂಗಳೂರಿನ ರಸ್ತೆ ಗುಂಡಿ ಫೋಟೋ ಕಳುಹಿಸಿ 5 ಸಾವಿರ ರೂ. ಗೆಲ್ಲಿ: 'ಸ್ಮಾರ್ಟ್​ ಸಿಟಿ' ಸ್ಪರ್ಧೆ!

ಮಂಗಳೂರು ನಗರದಲ್ಲಿ ರಸ್ತೆ ಗುಂಡಿಯಿಂದಾಗಿ ಸಂಭವಿಸುತ್ತಿರುವ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ. ಕಾಮಗಾರಿಗಳಿಗಾಗಿ ಗುಂಡಿ ಅಗೆದರೂ, ಕೆಲಸ ಪೂರ್ಣಗೊಂಡ ಬಳಿಕ ಅದನ್ನು ಮುಚ್ಚದಿರುವುದು ಅಪಾಯಕ್ಕೆ ಕಾರಣವಾಗುತ್ತಿವೆ. ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಸಿದರೂ ಪ್ರಯೋಜನವಾಗುತ್ತಿಲ್ಲ. ಹೀಗಿರುವಾಗ ಮಾಜಿ ಎಂಎಲ್​ಸಿ ಹಾಗೂ ಕಾಂಗ್ರೆಸ್​ ನಾಯಕ ಐವನ್​ ಡಿಸೋಜಾ ನೇತೃತ್ವದಲ್ಲಿ ಅಧಿಕಾರಿಗಳನ್ನು ಎಚ್ಚರಿಸುವ ಸಲುವಾಗಿ ವಿಭಿನ್ನ ಸ್ಪರ್ಧೆಯೊಂದನ್ನು ಏರ್ಪಡಿಸಲಾಗಿದೆ.

ಮಂಗಳೂರಿನ ರಸ್ತೆ (ಫೊಟೋ ಕೃಪೆ: ಟ್ವಿಟರ್)

ಮಂಗಳೂರಿನ ರಸ್ತೆ (ಫೊಟೋ ಕೃಪೆ: ಟ್ವಿಟರ್)

  • Share this:
ಮಂಗಳೂರು(ಆ.24): ಬೆಂಗಳೂರಿನಲ್ಲಿ ರಸ್ತೆ ಗುಂಡಿಯಿಂದ ಸಂಭವಿಸುವ ಅಪಘಾತ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಸದ್ಯ ಇದೇ ಪರಿಸ್ಥಿತಿ ಮಂಗಳೂರಿನಲ್ಲೂ ನಿರ್ಮಾಣವಾಗಿದೆ. ಮಂಗಳೂರು ನಗರದ ರಸ್ತೆಗಳಲ್ಲಿ ಅಲ್ಲಲ್ಲಿ ಗುಂಡಿಗಳನ್ನು ಅಗೆಯಲಾಗಿದ್ದು, ಇವುಗಳಿಂದ ರಸ್ತೆ ಅಪಘಾತ (Accident) ಹಾಗೂ ಪ್ರಾಣಹಾನಿ ಸಂಭವಿಸುತ್ತಿವೆ. ರಸ್ತೆ ಗುಂಡಿಗಳಿಂದ (Potholes) ವಾಹನ ಸಾವರರು ಹಾಗೂ ಪಾದಚಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಈ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಹಾಗೂ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಾಜಿ ಎಂಎಲ್ಸಿ ಐವನ್ ಡಿಸೋಜ (Ivan Dsouza) ವಿಶೇಷ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದಾರೆ. ಇದರ ಅನ್ವಯ ಸಾರ್ವಜನಿಕರು ಮಂಗಳೂರು ಮಂಗಳೂರಿನ ರಸ್ತೆ ಗುಂಡಿಗಳ ಫೋಟೋ ಹಾಗೂ ವಿವರವನ್ನು ನಿಗದಿತ ನಂಬರ್​ಗೆ ಕಳುಹಿಸಿ ವಿಜೇತರು ಬಹುಮಾನ ಗೆಲ್ಲಬಹುದಾಗಿದೆ.

ಹೌದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಂಗಳೂರಿನಲ್ಲಿ ಹೆಚ್ಚುತ್ತಿರುವ ರಸ್ತೆ ಗುಂಡಿ ಸಮಸ್ಯೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್​ ನಾಯಕ ಹಾಗೂ ಮಾಜಿ ಎಂಎಲ್ಸಿ ಐವನ್ ಡಿಸೋಜ "ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಂಎಸ್‌ಸಿಎಲ್) ಮತ್ತು ಮಂಗಳೂರು ಸಿಟಿ ಕಾರ್ಪೊರೇಷನ್‌ನ ಸ್ಮಾರ್ಟ್ ಸಿಟಿ ಅಭಿವೃದ್ಧಿ ಯೋಜನೆಗಳಿಂದಾಗಿ ಬಹುತೇಕ ರಸ್ತೆಗಳನ್ನು ಅಗೆಯಲಾಗಿದೆ. MSCL ಮತ್ತು MCCಯ ಈ ಯೋಜನೆಗಳ ಜೊತೆಗೆ, GAIL ಗ್ಯಾಸ್ ಪೈಪ್‌ಲೈನ್ ಕೋ ಮತ್ತು ಜಲಸಿರಿ 24X7 ತಮ್ಮ ಕೆಲಸವನ್ನು ಕೈಗೆತ್ತಿಕೊಂಡಿವೆ, ಇದರಿಂದಾಗಿ ರಸ್ತೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಕಾಮಗಾರಿ ಪೂರ್ಣಗೊಂಡ ನಂತರ ಅವುಗಳ ಮರುಸ್ಥಾಪಿಸಲಾಗಿಲ್ಲ ಎಂದು ಹೇಳಲು ನನಗೆ ನಾಚಿಕೆಯಾಗುತ್ತದೆ ಎಂದು ದೂರಿದ್ದಾರೆ.

ಇದನ್ನೂ ಓದಿ: Plastic Road: ಪ್ಲಾಸ್ಟಿಕ್ ಬಳಸಿ ತಯಾರಾಗಿದೆ ಈ ರೋಡ್, ಇದಕ್ಕಿದ್ಯಂತೆ ಇಷ್ಟೊಂದು ವರ್ಷ ಗ್ಯಾರೆಂಟಿ

ನಿದ್ರಿಸುತ್ತಿರುವ ಸ್ಮಾರ್ಟ್​ ಸಿಟಿ ಅಧಿಕಾರಿಗಳು

ಅಲ್ಲದೇ ರಾಷ್ಟ್ರೀಯ ಹೆದ್ದಾರಿ ಮತ್ತು ನಗರದಲ್ಲಿನ ಗುಂಡಿಗಳಿಂದ ದ್ವಿಚಕ್ರ ವಾಹನ ಸವಾರರು ಮತ್ತು ಇತರ ವಾಹನಗಳು ತೊಂದರೆ ಅನುಭವಿಸುತ್ತಿದ್ದಾರೆ, ಈ ಗುಂಡಿಗಳಿಂದ ಹಲವಾರು ಮೋಟಾರು ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಗುಂಡಿಗಳನ್ನು ತುಂಬಿಸುವಂತೆ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪಾಲಿಕೆಯಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಗುಂಡಿಗಳನ್ನು ಮುಚ್ಚಿ ರಸ್ತೆಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರ ರಸ್ತೆಗಳನ್ನು ಸುಸ್ಥಿತಿಯಲ್ಲಿಡಬೇಕು ಎಂದಿದ್ದಾರೆ.

rಸ್ತೆ ಗುಂಡಿಗಳ ಫೋಟೋ ಕಳುಹಿಸಿ

ಇದೇ ವೇಳೆ 'ಸ್ಮಾರ್ಟ್ ಸಿಟಿ-ಮಾದರಿ ರಸ್ತೆ-ಗುಂಡಿಗಳು-2022' ಪರಿಕಲ್ಪನೆಯ ಫೋಟೋ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಎಂಎಲ್ ಸಿ ಐವನ್ ಡಿಸೋಜ ನಗರದ ಮೂಲೆ ಮೂಲೆಗಳಲ್ಲಿ ಅಗೆದ ರಸ್ತೆಗಳು ಮತ್ತು ಹೊಂಡಗಳ ಮೂಲಕ ಪಾದಚಾರಿಗಳು ಮತ್ತು ವಾಹನ ಸವಾರರ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅಧಿಕಾರಿಗಳಿಗೆ ಜಾಗೃತಿ ಮೂಡಿಸಿ, ಅವರನ್ನುಎಚ್ಚೆತ್ತುಕೊಳ್ಳುವಂತೆ ಮಾಡುವ ಸಲುವಾಗಿ, ನಾವು 'ಸ್ಮಾರ್ಟ್ ಸಿಟಿ-ಮಾದರಿ ರಸ್ತೆ-ಗುಂಡಿಗಳು-2022' ಪರಿಕಲ್ಪನೆಯ ವಿಶಿಷ್ಟ ಫೋಟೋ ಸ್ಪರ್ಧೆ ಕಾರ್ಯಕ್ರಮ ಆಯೀಜಿಸುತ್ತಿದ್ದೇವೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಗುಂಡಿಗಳಿರುವ, ರಸ್ತೆ ಅಗೆದಿರುವ ಸ್ಥಳ ಅಥವಾ ಅತ್ಯಂತ ಕೊಳಕು ಮತ್ತು ಹಾಳಾದ ರಸ್ತೆಯ ಫೋಟೋಗಳನ್ನು ಕ್ಲಿಕ್ ಮಾಡಿ ಫೋಟೋ ನಮೂದಿಸಿದ ನಮ್ಮ ಸಂಖ್ಯೆಗೆ ವಾಟ್ಸಾಪ್ ಮಾಡಿ. ಉತ್ತಮ ಛಾಯಾಚಿತ್ರಗಳು ನಗದು ಬಹುಮಾನವನ್ನು ನೀಡಲಾಗುತ್ತದೆ. ಇದು ಮನೋರಂಜನೆಗೆ ಅಲ್ಲ, ಜನಜಾಗೃತಿ ಕಾರ್ಯಕ್ರಮ. ಆ.30 ರಂದು ಪಾಲಿಕೆ ಕಚೇರಿ ಮುಂದೆ ಬಹುಮಾನ ವಿತರಿಸಲಾಗುವುದು ಎಂದು ಹೇಳಿದ್ದಾರೆ.

ಈ ನಂಬರ್​ಗೆ ಫೋಟೋ ಕಳುಹಿಸಿ

“ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಸಾರ್ವಜನಿಕರು 9731485875 ಫೋನ್ ಸಂಖ್ಯೆಗೆ ಗುಂಡಿಗಳ ಫೋಟೋಗಳು, ವೀಡಿಯೊಗಳು ಮತ್ತು ಜಿಪಿಎಸ್ ಸ್ಥಳವನ್ನು ಕಳುಹಿಸಬಹುದು. ಮೊದಲ ಬಹುಮಾನ 5,000 ರೂ. ದ್ವಿತೀಯ ಬಹುಮಾನ 3 ಸಾವಿರ ರೂ., ತೃತೀಯ ಬಹುಮಾನ 2 ಸಾವಿರ ರೂ. ಆಗಸ್ಟ್ 30ರಂದು ಮಧ್ಯಾಹ್ನ 3.30ಕ್ಕೆ ಸ್ಮಾರ್ಟ್ ಸಿಟಿ ಕಚೇರಿ ಎದುರು ತೀರ್ಪುಗಾರರು ಬಹುಮಾನ ವಿತರಿಸಲಿದ್ದಾರೆ ಎಂದು ಐವನ್ ತಿಳಿಸಿದ್ದಾರೆ.

ಇದನ್ನೂ ಓದಿ: Bengaluru ರಸ್ತೆ ಗುಂಡಿ ಮುಚ್ಚಲು ಫೀಲ್ಡಿಗಿಳಿದ್ರು ಟ್ರಾಫಿಕ್ ಪೊಲೀಸ್! ಪೇದೆ ಕಾರ್ಯಕ್ಕೆ ಜನರ ಮೆಚ್ಚುಗೆ

ಸ್ಪರ್ಧೆಯ ತೀರ್ಪುಗಾರರಾಗಿ ಗಿಲ್ಬರ್ಟ್ ಡಿಸೋಜಾ, ಮಹೇಶ್ ಕೋಡಿಕಲ್, ಅಬ್ದುಲ್ ಹಾಝೀಝ್ ಕುದ್ರೋಳಿ ಭಾಗವಹಿಸಲಿದ್ದಾರೆ. ಸ್ಪರ್ಧೆಯ ಸಂಚಾಲಕರಾಗಿ ರಮಾನಂದ ಪೂಜಾರಿ, ಮಾರ್ಷಲ್ ಮೊಂತೇರೊ, ವಿಕಾಸ್ ಶೆಟ್ಟಿ, ಮೀನಾ ಟೆಲ್ಲಿಸ್, ದೀಕ್ಷಿತ್ ಅತ್ತಾವರ ಮೊದಲಾದವರು ಭಾಗವಹಿಸಿದ್ದರು.
Published by:Precilla Olivia Dias
First published: