• Home
  • »
  • News
  • »
  • state
  • »
  • Vijayanand Kashapanavar: ನಟಿ ಜೊತೆಗಿನ ಫೋಟೋ ವೈರಲ್; 2ನೇ ಮದ್ವೆಯಾದ್ರಾ ಕಾಶಪ್ಪನವರ್?

Vijayanand Kashapanavar: ನಟಿ ಜೊತೆಗಿನ ಫೋಟೋ ವೈರಲ್; 2ನೇ ಮದ್ವೆಯಾದ್ರಾ ಕಾಶಪ್ಪನವರ್?

ವಿಜಯಾನಂದ ಕಾಶಪ್ಪನವರ್

ವಿಜಯಾನಂದ ಕಾಶಪ್ಪನವರ್

ಇನ್ನೂ ಈ ಫೋಟೋ ನೋಡಿದ ಜನರು ವಿಜಯಾನಂದ ಕಾಶಪ್ಪನವರ್ ಎರಡನೇ ಮದುವೆ ಆಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

  • Share this:

ಹುನಗುಂದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ವಿಜಯಾನಂದ ಕಾಶಪ್ಪನವರ್ (Former MLA Vijayanand Kashappanavar) ಎರಡನೇ ಮದುವೆ (Second Marriage) ಆಗಿದ್ದಾರಾ ಅನ್ನೋ ಅನುಮಾನವೊಂದು ಮೂಡಿದೆ. ನಟಿ ಜೊತೆಗಿನ ಫೋಟೋ (photo) ಮತ್ತು ಮಗುವಿನ ಜನನ ಪ್ರಮಾಣಪತ್ರ (birth Certificate) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಜನನ ಪ್ರಮಾಪತ್ರದಲ್ಲಿ ತಾಯಿಯ ಹೆಸರು (Mother Name) ಪೂಜಶ್ರೀ ಎಂದು ಬರೆಯಲಾಗಿದ್ರೆ, ತಂದೆಯ ಹೆಸರು (Father Nanme) ವಿಜಯನಾಂದ ಕಾಶಪ್ಪನವರ್ ಎಂದು ಬರೆದಿರೋದನ್ನು ಗಮನಿಸಬಹುದು. ಇನ್ನೂ ಇದಕ್ಕೆ ಪ್ರತಿಕ್ರಿಯಿಸಿರುವ ಕಾಶಪ್ಪನವರ್ ಅತ್ಯಂತ ಜಾಣತನದ ಉತ್ತರ ನೀಡಿದ್ದಾರೆ. ನನಗೆ ಯಾವ ಫೋಟೋ ಅಥವಾ ಜನನ ಪ್ರಮಾಣ ಪತ್ರ ಬಂದಿಲ್ಲ. ಅವುಗಳನ್ನು ನೋಡಿದ್ರೆ ಪ್ರತಿಕ್ರಿಯೆ ನೀಡಬಹುದು ಎಂದು ಹೇಳಿದ್ದಾರೆ.


ಇನ್ನೂ ಈ ಫೋಟೋ ನೋಡಿದ ಜನರು ವಿಜಯಾನಂದ ಕಾಶಪ್ಪನವರ್ ಎರಡನೇ ಮದುವೆ ಆಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ವಿಜಯಾನಂದ ಅವರ ಪತ್ನಿ ವೀಣಾ ಕಾಶಪ್ಪನವರ ಸಹ ಕಾಂಗ್ರೆಸ್ ನಾಯಕಿಯಾಗಿದ್ದು, ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ.


ವರ್ಷದ ಹಿಂದೆ ಸಂಸಾರದಲ್ಲಿ ಮನಸ್ತಾಪ


ಸುಮಾರು ಒಂದು ವರ್ಷದ ಹಿಂದೆ ವಿಜಯಾನಂದ ಕಾಶಪ್ಪನವರ ಸಂಸಾರದಲ್ಲಿ ಮನಸ್ತಾಪ ಉಂಟಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಗಳು ಸಹ ಬಿತ್ತರವಾಗಿದ್ದವು. ಈ ಮನಸ್ತಾಪಕ್ಕೆ ವಿಜಯಾನಂದ ಕಾಶಪ್ಪನರ ಎರಡನೇ ಮದುವೆ ಕಾರಣ ಎಂದು ಹೇಳಲಾಗುತ್ತಿದೆ.


ದಾಖಲೆ ಕೊಟ್ರೆ ಮಾತಾಡ್ತಿನಿ


ಇನ್ನೂ ಈ ಬಗ್ಗೆ ಕೊಪ್ಪಳದಲ್ಲಿ ಪ್ರತಿಕ್ರಿಯೆ ನೀಡಿರುವ ವಿಜಯಾನಂದ ಕಾಶಪ್ಪನವರ್, ನೀವು ದಾಖಲೆ ತಂದು ಕೊಟ್ಟರೆ ಮಾತನಾಡುತ್ತೇನೆ. ಇಲ್ಲವಾದ್ರೆ ಮಾತನಾಡಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ:  Whatsapp Statusನಲ್ಲಿ RIP ಅಂತ ಹಾಕಿ ನೇಣಿಗೆ ಶರಣಾದ ಯುವಕ


ರಾಜಕೀಯ, ವೈಯಕ್ತಿಯ ಜೀವನ ಬೇರೆ


ವೈಯಕ್ತಿಕ ಬದುಕನ್ನು ಟಾರ್ಗೆಟ್ ಮಾಡಲಾಗ್ತಿದೆಯೇ ಪ್ರಶ್ನೆಗೆ ಉತ್ತರಿಸಿದ ಕಾಶಪ್ಪನವರ್, ಯಾರೂ ಯಾರ ವೈಯಕ್ತಿಕ ಬದುಕಿನ ಬಗ್ಗೆ ಹೋಗಬಾರರು. ರಾಜಕೀಯ ಮತ್ತು ವೈಯಕ್ತಿಯ ಜೀವನ ಬೇರೆ. ಚುನಾವಣೆ ಹತ್ತಿರ ಬರುತ್ತಿರುವ ಕಾರಣ ವಿರೋಧಿಗಳು ಇಂತದೆಲ್ಲಾ ಮಾಡುತ್ತಿರುತ್ತಾರೆ. ಇಂತಹವುದಕ್ಕೆಲ್ಲ ನಾವು ಬಗ್ಗಲ್ಲ. ಜನನ ಪ್ರಮಾಣ ಪತ್ರದ ದಾಖಲೆ ನೀಡಿದ್ರೆ ಪ್ರತಿಕ್ರಿಯಿಸುವೆ ಎಂದರು.


D K Shivakumar: ನೀವೆಲ್ಲಾ ನನ್ನ ಜೊತೆ ಇದ್ರೆ ನಾನೇ ಮುಂದಿನ ಮುಖ್ಯಮಂತ್ರಿ; ಡಿಕೆಶಿ ಸಿಎಂ ಮಂತ್ರ


ಕನಕಪುರದ ಕೆಡಿಪಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ (DK Shivakumar) ಅಧಿಕಾರಿಗಳನ್ನು ತೆಗೆದುಕೊಂಡ್ರು ಇದೇ ವೇಳೆ ಮತ್ತೆ ಸಿಎಂ ಆಗೋ ಆಸೆ ವ್ಯಕ್ತಪಡಿಸಿಕೊಂಡಿದ್ದಾರೆ. ನೀವೆಲ್ಲಾ ನನ್ನ ಜೊತೆ ಇದ್ರೆ ಮುಖ್ಯಮಂತ್ರಿ ಆಗೋದು ನಾನೇ ಎಂದು ಹೇಳಿದ್ದಾರೆ.


ಎಲೆಕ್ಷನ್ (Election)​ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್​ನಲ್ಲಿ (Congress) ಸಿಎಂ ಕಿತ್ತಾಟ ಜೋರಾಗಿದೆ. ನಾನೇ ಸಿಎಂ, ನಾನೇ ಸಿಎಂ ಎನ್ನುವ ನಾಯಕರ ಸಂಖ್ಯೆ ಹೆಚ್ಚಾಗಿದೆ. ಸಭೆಯಲ್ಲಿ ರೈತರ ಸಮಸ್ಯೆಗಳನ್ನು (Farmer Problem) ಆಲಿಸಿದ ಡಿ.ಕೆ ಶಿವಕುಮಾರ್​, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ಅಧಿಕಾರಿಗಳಿಗೆ ಡಿಕೆ ಶಿವಕುಮಾರ್​ ಕ್ಲಾಸ್


ಜಮೀನು ಪೋಡಿ, ಖಾತೆ ಮಾಡಿಸಲು 50-60 ಸಾವಿರ ಹಣ ನೀಡಬೇಕು. ಇಲ್ಲವಾದರೆ ನಮ್ಮ ಕೆಲಸ ಮಾಡಲ್ಲ ಎಂದು ರೈತನೊಬ್ಬ ಆರೋಪಿಸಿದ್ದಾನೆ. ನಮ್ಮ ಫೈಲ್ ಎಲ್ಲರೂ ಟೇಬಲ್​ನಲ್ಲೇ ಇಟ್ಟುಕೊಳ್ಳುತ್ತಾರೆ ಕೆಲಸ ಮಾಡಲ್ಲ ಎಂದ್ರು.


ಇದನ್ನೂ ಓದಿ:  Miracle: ಅನಂತಶಯನನ ಪಾದದಡಿ ಉದ್ಭವಿಸುತ್ತಾಳೆ ಗಂಗೆ! ಲಕ್ಷ್ಮೀವೆಂಕಟೇಶ್ವರನ ಪವಾಡಕ್ಕೆ ಕೈಮುಗಿದ ಭಕ್ತರು


ಈ ವಿಚಾರಕ್ಕೆ ಎಡಿಎಲ್‌ಆರ್​ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ನ​ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೋರಾಗಿ ಮಾತಾಡಯ್ಯ, ದುಡ್ಡು ಇಸ್ಕೋಳ್ಳುವಾಗ ಮೆತ್ತಗೆ ಮಾತನಾಡುತ್ತೀರಾ? ಕನಕಪುರ ಎಡಿಎಲ್‌ಆರ್ ಗಂಗಾಧರ್​ಗೆ ಕ್ಲಾಸ್​ ತೆಗೆದುಕೊಂಡ್ರು.

Published by:Mahmadrafik K
First published: