ಉಡುಪಿ: ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ಯುಆರ್ ಸಭಾಪತಿ (Former MLA UR Sabhapati) ನಿಧನರಾಗಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು. 1994 ರಲ್ಲಿ ಕೆಸಿಪಿ ಮತ್ತು 1999 ರಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿದ್ದರು. ಯುಆರ್ ಸಭಾಪತಿ ಅವರು ಮಾಜಿ ಸಿಎಂ ಬಂಗಾರಪ್ಪ (Former CM Bangarappa) ಅವರ ಅನುಯಾಯಿ ಆಗಿದ್ದರು. ಆಸ್ಕರ್ ಫರ್ನಾಂಡಿಸ್ ರಾಜಕೀಯ ಪ್ರವೇಶಕ್ಕೂ ಸಭಾಪತಿ ಪ್ರೇರಣೆಯಾಗಿದ್ದರು. ಯುಆರ್ ಸಭಾಪತಿ ರಾಷ್ಟ್ರೀಯ ಜನತಾದಳ, ಜಾತ್ಯಾತೀತ ಜನತಾದಳದೊಂದಿಗೂ ಗುರುತಿಸಿಕೊಂಡಿದ್ದರು. 80 -90ರ ದಶಕದ ಕರಾವಳಿಯ ಪ್ರಭಾವಿ ನಾಯಕರಾಗಿದ್ದರು.
ರಾಜೀವ್ ಗಾಂಧಿ 34ನೇ ಪುಣ್ಯತಿಥಿ
ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿಯವರ 34ನೇ ಪುಣ್ಯತಿಥಿ ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಹಲವು ನಾಯಕರು ಭಾಗವಹಿಸಿದ್ದರು.
ಈ ವೇಳೆ ರಾಜೀವ್ ಗಾಂಧಿ ಫೋಟೋಗೆ ನಮಿಸಿ, ಸ್ಮರಿಸಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಹಿಳೆಯರಿಗೆ ಮೊದಲು ಮೀಸಲಾತಿ ಇರಲಿಲ್ಲ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೂ ಮೀಸಲಾತಿ ಇರಲಿಲ್ಲ, ಬಿಜೆಪಿಯವರಿಗೆ ಯಾವ ನೈತಿಕತೆ ಇದೆ. ಪಾರ್ಲಿಮೆಂಟಿನಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಡಲಿ ಅಂತ ಹೇಳಿದರು.
ವಿಧಾನಮಂಡಲ ಕಲಾಪಕ್ಕೆ ಕ್ಯಾಮೆರಾ ನಿಷೇಧ
ಬಿಜೆಪಿ ಸರ್ಕಾರದಲ್ಲಿದ್ದ ಫರ್ಮಾನು ಈಗಲೂ ಮುಂದುವರಿಕೆ ಮಾಡಲಾಗ್ತಿದೆ. ನಾಳಿನ ವಿಧಾನಮಂಡಲ ಕಲಾಪಕ್ಕೆ ಮಾಧ್ಯಮ ಕ್ಯಾಮೆರಾ ನಿಷೇಧ ಹೇರಲಾಗಿದೆ.
ಇದನ್ನೂ ಓದಿ: Mangaluru News: ನಿರುಪಯುಕ್ತ ವಸ್ತುಗಳನ್ನು ಪಾಲಿಕೆಗೆ ಕೊಡಿ, ಸಾರ್ವಜನಿಕರಿಗೆ ಇಲ್ಲಿದೆ ಮಹತ್ವದ ಸೂಚನೆ
ಬಿಜೆಪಿ ಸರ್ಕಾರವಿದ್ದಾಗ ಈ ನಿಯಮವನ್ನು ಜಾರಿಗೊಳಿಸಲಾಗಿತ್ತು. ಕ್ಯಾಮೆರಾಮನ್/ಫೋಟೋಗ್ರಾಫರ್ಗೂ ನಿಷೇಧ ಜೊತೆಗೆ ಕಲಾಪ ಚಿತ್ರೀಕರಣ ಮಾಡುವಂತಿಲ್ಲ. ಮಾಧ್ಯಮ/ಪತ್ರಿಕೆ ವರದಿಗಾರರಿಗೆ ಮಾತ್ರ ಪ್ರವೇಶವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ