ಬೆಳಗಾವಿ(ಸೆಪ್ಟೆಂಬರ್,30)- ಬೆಳಗಾವಿ ಗ್ರಾಮೀಣ ಕ್ಷೇತ್ರ ಮತ್ತೊಮ್ಮೆ ಈಗ ಸುದ್ದಿಯಲ್ಲಿ ಇದೆ. ಈ ಹಿಂದೆ ಜಾರಕಿಹೊಳಿ ಹಾಗೂ ಹೆಬ್ಬಾಳ್ಕರ್ ನಡುವಿನ ಜಟಾಪಟಿಗೆ ಇದು ಸಾಕ್ಷಿಯಾಗಿತ್ತು. ಈಗ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಕೆಲ ಗ್ರಾಮಗಳ ರಸ್ತೆ ಗುಂಡಿ ವಿಚಾರ ತೀವ್ರ ಸ್ವರೂಪ ಪಡೆದಿದೆ. ಈ ವಿಚಾರವಾಗಿ ಕಾಂಗ್ರೆಸ್, ಬಿಜೆಪಿ ನಡುವೆ ಮಾತಿನ ಚಕಮಕಿ ನಡೆದಿದೆ. ಇನ್ನೂ ಮಾಜಿ ಶಾಸಕ ಸಂಜಯ ಪಾಟೀಲ್ ಹೆಬ್ಬಾಳ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಸಂಜಯ ಪಾಟೀಲ್, ಬಿಜೆಪಿಯವರಿಗೆ ನೈಟ್ ಪೊಲಿಟಿಕ್ಸ್ ಮಾಡಿ ಗೊತ್ತಿಲ್ಲ. ಕಾಂಗ್ರೆಸನವರು ನೈಟ್ ಪೊಲಿಟಿಕ್ಸ್ ಮಾಡ್ತಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಗೆ ನೈಟ್ ಪೊಲಿಟಿಕ್ಸ್ ಚೆನ್ನಾಗಿ ಗೊತ್ತು, ಹೀಗಾಗಿ ಗೆದ್ದು ಬಂದಿದ್ದಾರೆ ಎಂದು ನಾಲಿಗೆ ಹರಿಬಿಟ್ಟರು.
ರಸ್ತೆ ಗುಂಡಿ ರಾಜಕೀಯ
ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ರೋಡ್ ರಾಜಕೀಯ ಕಳೆದ 10 ದಿನಗಳಿಂದ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್ ಮಧ್ಯೆ ನೇರಾನೇರ ಮಾತಿನ ಯುದ್ದ ನಡೆಯುತ್ತಿದೆ. ಬೆಳಗಾವಿ ತಾಲೂಕಿನ ತಾರೀಹಾಳ, ಬೆಳಗುಂದಿ ಸೇರಿ ಅನೇಕ ಕಡೆ ರಸ್ತೆ ಗುಂಡಿಗಳು ಹೆಚ್ಚಾಗಿವೆ. ಈ ಬಗ್ಗೆ ಅಪರಿಚಿತರು ಎಲ್ಲಾ ಕಡೆಗಳಲ್ಲಿ ಕನ್ನಡ, ಮರಾಠಿಯಲ್ಲಿ ಬ್ಯಾನೆರ್ ಹಾಕಿದ್ದಾರೆ. ಬ್ಯಾನರ್ ನಲ್ಲಿ ಕುಕ್ಕರ್, ಕಮಿಷನ್ ವಿಚಾರವನ್ನು ಪ್ರಸ್ತಾಪ ಮಾಡಲಾಗಿದೆ. ಬ್ಯಾನರ್ ಹಾಕಿದ ಅಪರಿಚಿತ ವಿರುದ್ಧ ಕಾಂಗ್ರೆಸ್ ನಾಯಕರು ಹಿರೇಬಾಗೇವಾಡಿ ಪೊಲೀಸರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಹೆಬ್ಬಾಳ್ಕರ್ ಕೆಲಸ ಮಾಡುತ್ತಿಲ್ಲ
ನಂತರ ಬಿಜೆಪಿ ಗ್ರಾಮೀಣ ಮಂಡಲಷ ಅಧ್ಯಕ್ಷ ಧನಜಂಯ ಜಾಧವ್ ನೇತೃತ್ವದಲ್ಲಿ ಕಾರ್ಯಕರ್ತರು ರಸ್ತೆ ದುರಸ್ತಿ ಮಾಡಿದ್ದಾರೆ. ಎಲ್ಲರೂ ವಂತಿಗೆ ಹಣ ಸಂಗ್ರಹಿಸಿ ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ. ಈ ಬಗ್ಗೆ ಮಾತನಾಡಿದ ಧನಂಜಯ ಜಾಧವ್, ನಮ್ಮ ಕ್ಷೇತ್ರದ ಶಾಸಕಿ ಕೆಲಸ ಮಾಡುತ್ತಿಲ್ಲ ಎಂದು ಜನರ ಆಕ್ರೋಶ ಇದೆ. ಈ ಆಕ್ರೋಶ ಬ್ಯಾನರ್ ರೂಪದಲ್ಲಿ ಹೊರ ಬಂದಿದೆ. ಕಾರ್ಯಕರ್ತರು, ಜನ ನಮ್ಮ ಗಮನಕ್ಕೆ ಈ ವಿಚಾರ ತಂದ್ರು. ಬಳಿಕ ನಾನು ಎಲ್ಲಿರಂದ ಪಟ್ಟಿ ಸಂಗ್ರಹಿಸಿ ರಸ್ತೆ ರಿಪೇರಿ ಮಾಡಿದ್ದೇವೆ. ಮತ ಹಾಕಿ ಗೆಲ್ಲಿಸಿದ ಜನರನ್ನು ಪೊಲೀಸರು ತನಿಖೆ ಮಾಡುತ್ತಾರೆಯೆ. ಮಾಡಲಿ ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ. ತಮ್ಮ ಕೆಲಸದ ಬಗ್ಗೆ ಯಾರು ಪ್ರಶ್ನೆ ಮಾಡಬಾರದು ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಹೆಬ್ಬಾಳ್ಕರ್ ಎಂದು ಆರೋಪಿಸಿದರು.
ಇದನ್ನು ಓದಿ: ಹಾಲಕ್ಕಿ ಸಮುದಾಯಕ್ಕೆ ಅನ್ಯಾಯ; ಪದ್ಮಶ್ರೀ ಪ್ರಶಸ್ತಿ ಮರಳಿಸಲು ಮುಂದಾದ ಸುಕ್ರಿ ಬೊಮ್ಮುಗೌಡ
ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆ
ರಸ್ತೆಗುಂಡಿ ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಮಾಜಿ ಬಿಜೆಪಿ ಶಾಸಕ ಸಂಜಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಜೆಪಿಯವರಿಗೆ ನೈಟ್ ಪೊಲಿಟಿಕ್ಸ್ ಮಾಡಿ ಗೊತ್ತಿಲ್ಲ. ಕಾಂಗ್ರೆಸನವರು ನೈಟ್ ಪೊಲಿಟಿಕ್ಸ್ ಮಾಡ್ತಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಗೆ ನೈಟ್ ಪೊಲಿಟಿಕ್ಸ್ ಚೆನ್ನಾಗಿ ಗೊತ್ತು. ಹೀಗಾಗಿ ನೈಟ್ ಪೊಲಿಟಿಕ್ಸ್ ಮಾಡಿ ಗೆದ್ದು ಬಂದಿದ್ದಾರೆ ಎಂದ ಸಂಜಯ ಪಾಟೀಲ್ ಹೇಳಿದ್ದಾರೆ.
ಇದನ್ನು ಓದಿ: ಸಿದ್ಧರಾಮಯ್ಯ ಹಸಿ ಸುಳ್ಳುಗಾರ; ಹಿಂದುಳಿದ ವರ್ಗದ ಹೀರೋ ಆಗೋಕೆ ಹೊರಟಿದ್ದಾರೆ: ಶೆಟ್ಟರ್ ಲೇವಡಿ
ವಿಕೃತಿ ಮನಸ್ಥಿತಿ ಎಂದ ಹೆಬ್ಬಾಳ್ಕರ್
ಸಂಜಯ ಪಾಟೀಲ್ ಆರೋಪದ ಬಗ್ಗೆ ಮಾತನಾಡಿದ ಹೆಬ್ಬಾಳ್ಕರ್, ಹೀಗೆ ಆರೋಪ ಮಾಡುವುದು ಸುಲಭ, ಆದರೆ ಇದರಿಂದ ನನ್ನ, ಹಾಗೂ ನಮ್ಮ ಕುಟುಂಬ ಸದಸ್ಯರಿಗೆ ಆಗೋ ನೋವು ನಮಗೆ ಮಾತ್ರ ಗೊತ್ತು. ವಿಕೃತ ಮನಸ್ಥಿತಿ ಇರೋವರಿಗೆ ಈ ರೀತಿ ಆರೋಪ ಮಾಡೊದ್ರಿಂದ ಸಂತೋಷ ಆಗುತ್ತೆ ಎಂದು ಟಾಂಗ್ ಕೊಟ್ಟರು. ಮೂರು ವರ್ಷದಲ್ಲಿ 720 ಕೋಟಿ ಅನುದಾನ ತಂದು ಕೆರೆ ತುಂಬಿಸಿದ್ದೇನೆ. ಬ್ಯಾನರ್ ಹಾಕರೋ ಎರಡು ರಸ್ತೆ ಮಾತ್ರ ಹಾಳಾಗಿವೆ, ಕೊರೊನಾ ಕಾರಣಕ್ಕಾಗಿ 2 ವರ್ಷದಿಂದ ಅನುದಾನ ಬಿಡುಗಡೆ ಆಗಿಲ್ಲ ಎಂದು ಹೆಬ್ಬಾಳ್ಕರ್ ಹೇಳಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ