• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka BJP: ಅಮಿತ್ ಶಾ ಬಂದಾಗಲೇ ಟಿಕೆಟ್​ಗಾಗಿ ಪಟ್ಟು ಹಿಡಿದ ಮಾಜಿ ಶಾಸಕ; ಬಿಜೆಪಿಗೆ ಕಗ್ಗಂಟಾದ ಖೂಬಾ

Karnataka BJP: ಅಮಿತ್ ಶಾ ಬಂದಾಗಲೇ ಟಿಕೆಟ್​ಗಾಗಿ ಪಟ್ಟು ಹಿಡಿದ ಮಾಜಿ ಶಾಸಕ; ಬಿಜೆಪಿಗೆ ಕಗ್ಗಂಟಾದ ಖೂಬಾ

ಮಲ್ಲಿಕಾರ್ಜನ ಖೂಬಾ, ಮಾಜಿ ಶಾಸಕ

ಮಲ್ಲಿಕಾರ್ಜನ ಖೂಬಾ, ಮಾಜಿ ಶಾಸಕ

ಹಾಲಿ ಬಿಜೆಪಿ ಶಾಸಕ ಶರಣು ಸಲಗರ ಕಲಬುರಗಿ ಜಿಲ್ಲೆಯವರು. ಹಾಗಾಗಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಹೇಳುತ್ತಿದ್ದೇನೆ . 2021 ರಲ್ಲಿ ಪಕ್ಷದಿಂದ ಅಮಾನತು ಮಾಡಿದ್ರೂ ನಾನು ಇನ್ನು ಬಿಜೆಪಿಯಲ್ಲೆ ಇದ್ದೇನೆ ಎನ್ನುತ್ತಿದ್ದಾರೆ.

  • News18 Kannada
  • 3-MIN READ
  • Last Updated :
  • Bidar, India
  • Share this:

ಬೀದರ್: ಕೇಂದ್ರ ಗೃಹ ಸಚಿವ, ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ (Union Minister Amit Shah) ಗುರುವಾರ ರಾತ್ರಿ ಬಸವಕಲ್ಯಾಣಕ್ಕೆ (Basavakalyana) ಬಂದಿಳಿದಿದ್ದಾರೆ. ಇವತ್ತು ಬಸವಕಲ್ಯಾಣಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಸಹ ಆಗಮಿಸಲಿದ್ದಾರೆ. ಸಿಎಂ, ಮಾಜಿ ಸಿಎಂ ಮತ್ತು ಸ್ಥಳೀಯ ನಾಯಕರ ಜೊತೆ ಕ್ಷೇತ್ರದ ಕುರಿತು ಅಮಿತ್ ಶಾ ಚರ್ಚೆ ನಡೆಸಲಿದ್ದಾರೆ. ತದನಂತರ ಬೆಳಗ್ಗೆ 10 ಗಂಟೆಗೆ ಗುರುನಾನಕ್ ಗುರುದ್ವಾರಕ್ಕೆ ಭೇಟಿ ನೀಡಲಿದ್ದಾರೆ. ಅಮಿತ್ ಶಾ ಆಗಮನದ ದಿನವೇ ಬಸವಕಲ್ಯಾಣದಿಂದ ಸ್ಪರ್ಧೆ ಮಾಡಲು ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ್ ಖೂಬಾ (Former MLA Mallikarjun Khuba) ಒತ್ತಾಯಿಸಿದ್ದಾರೆ. ಪಕ್ಷದಿಂದ ಉಚ್ಛಾಟನೆಗೊಂಡಿದ್ರೂ ನಾನಿನ್ನು ಬಿಜೆಪಿಯಲ್ಲಿದ್ದೇನೆ ಎಂದು ಮಲ್ಲಿಕಾರ್ಜುನ್ ಖೂಬಾ ಹೇಳುತ್ತಾರೆ.


ಬಸವಕಲ್ಯಾಣದಿಂದ ಸ್ಥಳೀಯರಿಗೆ ಟಿಕೆಟ್ ನೀಡುವ ಮೂಲಕ ನ್ಯಾಯ ಕಲ್ಪಿಸುತ್ತಾರೆ ಎಂಬ ಭರವಸೆ ಇದೆ ಎಂದು ಮಲ್ಲಿಕಾರ್ಜುನ ಖೂಬಾ ವಿಶ್ವಾಸ್ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ 2021ರ ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖೂಬಾ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.


ಉಪ ಚುನಾವಣೆಯಲ್ಲಿ ಖುಬಾಗೆ ತಪ್ಪಿತ್ತು ಟಿಕೆಟ್


2018 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಲ್ಯಾಣದಿಂದ‌ ಸ್ಪರ್ಧೆ ಮಾಡಿ ಕಾಂಗ್ರೆಸ್​ ಬಿ.ನಾರಾಯಣ್ ರಾವ್ ವಿರುದ್ಧ ಸೋತಿದ್ದರು. ನಾರಾಯಣ್ ರಾವ್ ಅವರ ಅಕಾಲಿಕ ನಿಧನದಿಂದ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು. ಆದರೆ ಬಿಜೆಪಿ ಕಲಬುರಗಿ ಶರಣು ಸಲಗರ ಅವರಿಗೆ ಟಿಕೆಟ್ ನೀಡಿತ್ತು. ಶರಣು ಸಲಗರ ಗೆದ್ದು ಬಸವಕಲ್ಯಾಣದಲ್ಲಿ ಕಮಲ ವಿಜಯ ಪತಾಕೆ ಹಾರಿಸಿದ್ದರು. ಈಗ ಮತ್ತೆ ಬಿಜೆಪಿ ಟಿಕೆಟ್​ಗಾಗಿ ಮಲ್ಲಿಕಾರ್ಜುನ ಖುಬಾ ಪ್ರಯತ್ನಿಸುತ್ತಿದ್ದಾರೆ.


former mla mallikarjun khuba demand for bjp ticket mrq
ಮಲ್ಲಿಕಾರ್ಜನ ಖೂಬಾ, ಮಾಜಿ ಶಾಸಕ


2018ರ ಸೋಲಿನ ಕಾರಣ ಬಿಚ್ಚಿಟ್ಟ ಖೂಬಾ


ಬಿಜೆಪಿಯಲ್ಲಿ ನನಗೆ ಆಗಿರುವ ಅನ್ಯಾಯವನ್ನು ಪಕ್ಷದ ವರಿಷ್ಠರಲ್ಲಿ ಪ್ರಶ್ನಿಸಿ ನ್ಯಾಯ ಕೇಳುತ್ತೇನೆ. 2018ರ ವಿಧಾನಸಭೆ ಚುನಾವಣೆಗೂ ಮುನ್ನು ನಾನು ಜೆಡಿಎಸ್ ಪಕ್ಷದ ಶಾಸಕನಾಗಿದ್ದೆ. ಬಿಜೆಪಿಯಿಂದ ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದ  ಕಾರಣ ಜೆಡಿಎಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾದೆ. 2018ರ ನನಗೆ ಟಿಕೆಟ್ ನೀಡಿದರೂ ಸಹ ಪಕ್ಷದ ವರಿಷ್ಠರು ಹಾಗೂ ಸ್ಥಳೀಯ ಮುಖಂಡರು ಬೆಂಬಲ ಕೊಡಲಿಲ್ಲ. ಹಾಗಾಗಿ ಚುನಾವಣೆಯಲ್ಲಿ ಸೋಲಾಯ್ತು ಎಂದು ಸೋಲಿನ ಕಾರಣ ಹೇಳಿದರು.




ನಾನು ಬಿಜೆಪಿಯಲ್ಲಿಯೇ ಇದ್ದೇನೆ


2021ರಲ್ಲಿ ನನಗೂ ಹಾಗೂ ಸ್ಥಳೀಯರಿಗೆ ಕಡೆಗಣಿಸಿ ಏಕಾಏಕಿಯಾಗಿ ಹೊರಗಿನವರಿಗೆ ಟಿಕೆಟ್ ನೀಡಿದರ. ಹಾಲಿ ಬಿಜೆಪಿ ಶಾಸಕ ಶರಣು ಸಲಗರ ಕಲಬುರಗಿ ಜಿಲ್ಲೆಯವರು. ಹಾಗಾಗಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಹೇಳುತ್ತಿದ್ದೇನೆ . 2021 ರಲ್ಲಿ ಪಕ್ಷದಿಂದ ಅಮಾನತು ಮಾಡಿದ್ರೂ ನಾನು ಇನ್ನು ಬಿಜೆಪಿಯಲ್ಲೆ ಇದ್ದೇನೆ ಎನ್ನುತ್ತಿದ್ದಾರೆ.


ಇದನ್ನೂ ಓದಿ:  Ramesh Jarkiholi: ವ್ಯಕ್ತಿಯೊಬ್ಬರ ತೆವಲುಗಳಿಗೆ ಪಕ್ಷ ಮಣೆ ಹಾಕಬಾರದು; ಸಾಹುಕಾರನ ವಿರುದ್ಧ ಬಿಜೆಪಿ ಸಂಸದ ಕಿಡಿ


former mla mallikarjun khuba demand for bjp ticket mrq
ಮಲ್ಲಿಕಾರ್ಜನ ಖೂಬಾ, ಮಾಜಿ ಶಾಸಕ


ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಸವಾಲ್


ರಾಜಹಂಸಗಡ ಶಿವಾಜಿ ಮಹಾರಾಜರ ಪ್ರತಿಮೆ ವಿಚಾರವಾಗಿ ಕ್ರೆಡಿಟ್ ವಾರ್ ಜೋರಾಗಿದೆ. ನಿನ್ನೆ ಪ್ರತಿಮೆ ಉದ್ಘಾಟಿಸಿ ಮಾತಾಡಿದ ಸಿಎಂ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯಗೆ (Former CM Siddaramaiah) ಒಂದು ಸವಾಲು ಹಾಕಿದ್ದಾರೆ. ಸಿದ್ದರಾಮಯ್ಯರವರು ಅನುದಾನ ಕೊಟ್ಟಿದ್ದೀನಿ ಅಂತಾ ಹೇಳ್ತಾರೆ. ಆದರೆ, 2013ರಿಂದ 2018ರವರೆಗೆ ಸಿದ್ದರಾಮಯ್ಯ ಆಡಳಿತ ಇತ್ತು. ಈ ಕೋಟೆ ಅಭಿವೃದ್ಧಿಗೆ ಒಂದು ನಯಾಪೈಸೆ ಬಿಡುಗಡೆ ಮಾಡಿದ್ರೆ ಅವರನ್ನೇ ಇನ್ನೊಮ್ಮೆ ಕರೆಸಿ ಉದ್ಘಾಟನೆ ಮಾಡಿಸ್ತೀನಿ ಎಂದು ಸವಾಲ್ ಹಾಕಿದ್ದಾರೆ.

Published by:Mahmadrafik K
First published: