K.Virupaxappa: ಮಾರ್ಚ್​ 9ರಂದು ಮತ್ತೆ ಬಿಜೆಪಿ ಸೇರಲಿರುವ ಮಾಜಿ ಶಾಸಕ ಕೆ.ವಿರುಪಾಕ್ಷಪ್ಪ

ಈ ಮಧ್ಯೆ ಈಗಿನ ಯಡಿಯೂರಪ್ಪ ಸರಕಾರ ಬರಲು ಕಾರಣವಾದ ಮಸ್ಕಿ ಪ್ರತಾಪಗೌಡರ ಪ್ರತಿನಿಧಿಸುತ್ತಿದ್ದ ಮಸ್ಕಿ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಾಪಗೌಡರ ಗೆಲುವಿಗೆ ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿಯು ಕುರುಬ ಮತಗಳ ಮೇಲೆ ಕಣ್ಣಿಟ್ಟು ವಿರುಪಾಕ್ಷಪ್ಪರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ.

ಕೆ.ವಿರುಪಾಕ್ಷಪ್ಪ

ಕೆ.ವಿರುಪಾಕ್ಷಪ್ಪ

  • Share this:
ರಾಯಚೂರು(ಮಾ.07): ರಾಯಚೂರು ಹಾಗು ಕೊಪ್ಪಳ ಜಿಲ್ಲೆಯ ಪ್ರಭಾವಿ ನಾಯಕ ಸಿಂಧನೂರಿನ ಮಾಜಿ ಶಾಸಕ, ಕೊಪ್ಪಳ ಲೋಕಸಭೆಯ ಮಾಜಿ ಸದಸ್ಯ, ಕುರುಬರ ಎಸ್ಟಿ ಮೀಸಲಾತಿ ಹೋರಾಟ ಸಮಿತಿಯ ಸಂಚಾಲಕ, ಹಿರಿಯ ರಾಜಕಾರಣಿ ಕೆ ವಿರುಪಾಕ್ಷಪ್ಪ ಮತ್ತೆ ಬಿಜೆಪಿ ಸೇರಲಿದ್ದಾರೆ. ಈಗಾಗಲೇ ಮಾತುಕತೆ ಪೂರ್ಣಗೊಂಡು ಮಾರ್ಚ್​​ 9 ರಂದು ಬೆಂಗಳೂರಿನಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರಲಿದ್ದಾರೆ ಎನ್ನಲಾಗಿದೆ.

ರಾಯಚೂರು ಹಾಗು ಕೊಪ್ಪಳ ಜಿಲ್ಲೆಯ ಪ್ರಮುಖ ನಾಯಕ, ರಾಜ್ಯ ಕುರುಬ ಸಮಾಜದ ಪ್ರಭಾವಿ ಮುಖಂಡ ಕೆ ವಿರುಪಾಕ್ಷಪ್ಪ ಈಗ ಮತ್ತೆ ಬಿಜೆಪಿ ಸೇರಲಿದ್ದಾರೆ, ಕೆ ವಿರುಪಾಕ್ಷಪ್ಪ 1994 ರಿಂದ 1999 ರವರೆಗೆ ಸಿಂಧನೂರು ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು, 1999 ರಲ್ಲಿ ಸೋಲು ಅನುಭವಿಸಿದ್ದರು. 2004 ರಲ್ಲಿ ಕೊಪ್ಪಳ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. 2009 ರವರೆಗೂ ಕಾಂಗ್ರೆಸ್ ನಲ್ಲಿದ್ದ ವಿರುಪಾಕ್ಷಪ್ಪ , 2009 ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ನೀಡದ ಹಿನ್ನಲೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.

2009 ರಲ್ಲಿ ಬಿಜೆಪಿ ಶಿವರಾಮಗೌಡ ಹಾಗೂ 2014 ರಲ್ಲಿ ಸಂಗಣ್ಣ ಕರಡಿ ಸಂಸದರಾಗಿ ಆಯ್ಕೆಯಾಗಲು ವಿರುಪಾಕ್ಷಪ್ಪ ಕಾರಣವಾಗಿದ್ದರು. ಈ ಎರಡು ಚುನಾವಣೆಯಲ್ಲಿ ಸಿಂಧನೂರಿನಲ್ಲಿ ಬಿಜೆಪಿಗೆ 25 ಸಾವಿರಕ್ಕಿಂತ ಅಧಿಕ ಲೀಡ್ ಬಂದಿತ್ತು. ಆದರೆ 2018 ರಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಆದರೆ ಆಗ ಬಿಜೆಪಿಯಿಂದ ಕೊಲ್ಲ ಶೇಷಗಿರಿರಾವ್ ರಿಗೆ ಟಿಕೆಟ್ ನೀಡಿದ್ದರಿಂದ ವಿರುಪಾಕ್ಷಪ್ಪ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರಿದ್ದರು.

BMTC Ticket Price: ಬಿಎಂಟಿಸಿ ಟಿಕೆಟ್​ ದರ ಹೆಚ್ಚಳ ಸಾಧ್ಯತೆ; ನಾಳಿನ ಬಜೆಟ್​​ನಲ್ಲಿ ಘೋಷಣೆ

2018 ರಲ್ಲಿ ಸಿಂಧನೂರಿನಲ್ಲಿ ಜೆಡಿಎಸ್ ನ ವೆಂಕಟರಾವ್ ನಾಡಗೌಡ ಆಯ್ಕೆಯಾದರು. 2019 ರಲ್ಲಿ ಸಂಗಣ್ಣ ಕರಡಿ ಮರು ಆಯ್ಕೆಯಾಗುವಾಗ ಸಿಂಧನೂರಿನಿಂದ ಕೇವಲ 80 ಮತಗಳ ಅಂತರದಲ್ಲಿ ಲೀಡ್ ಇದ್ದರು. ಇದರಿಂದಾಗಿ ಸಿಂಧನೂರು ಹಾಗೂ ಮಸ್ಕಿ ತಾಲೂಕಿನಲ್ಲಿ ವಿರುಪಾಕ್ಷಪ್ಪರ ಹಿಡಿತವಿರುವುದು ಮತ್ತೊಮ್ಮೆ ಸಾಬೀತಾಗಿದೆ.

ಈ ಮಧ್ಯೆ ಈಗಿನ ಯಡಿಯೂರಪ್ಪ ಸರಕಾರ ಬರಲು ಕಾರಣವಾದ ಮಸ್ಕಿ ಪ್ರತಾಪಗೌಡರ ಪ್ರತಿನಿಧಿಸುತ್ತಿದ್ದ ಮಸ್ಕಿ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಾಪಗೌಡರ ಗೆಲುವಿಗೆ ಕಾರ್ಯತಂತ್ರ ರೂಪಿಸುತ್ತಿರುವ ಬಿಜೆಪಿಯು ಕುರುಬ ಮತಗಳ ಮೇಲೆ ಕಣ್ಣಿಟ್ಟು ವಿರುಪಾಕ್ಷಪ್ಪರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ.

ಮಸ್ಕಿಯಲ್ಲಿ ವಾಲ್ಮೀಕಿ ನಾಯಕ, ಲಿಂಗಾಯತ್ ರ ನಂತರ ಅಧಿಕ ಸಂಖ್ಯೆಯಲ್ಲಿರುವುದು ಕುರುಬ ಮತದಾರರು ಈ ಕಾರಣಕ್ಕೆ ವಿರುಪಾಕ್ಷಪ್ಪರನ್ನು ಸೆಳೆಯಲು ಮುಂದಾಗಿದೆ. ಈ ಮಧ್ಯೆ ನವೆಂಬರ್ 20ರಂದು ಸಿಂಧನೂರಿನಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯ ಮಧ್ಯೆ ಉಪಾಧ್ಯಕ್ಷ ವಿಜಯೇಂದ್ರ ವಿರುಪಾಕ್ಷಪ್ಪ ಭೇಟಿಯಾಗಿದ್ದರು. ಆಗಲೇ ಪಕ್ಷ ಸೇರ್ಪಡೆಯ ಬಗ್ಗೆ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಆದರೆ ಆಗ ವಿಜಯೇಂದ್ರ ಹಾಗೂ ವಿರುಪಾಕ್ಷಪ್ಪ ಇದು ಸೌಜನ್ಯದ ಭೇಟಿ ಎಂದಿದ್ದರು.

ಈ ಮಧ್ಯೆ ರಾಜ್ಯದಲ್ಲಿ ಕುರುಬರಿಗೆ ಎಸ್ಟಿ ಮೀಸಲಾತಿ ನೀಡಬೇಕೆಂದು ಸಚಿವ ಕೆ ಎಸ್ ಈಶ್ವರಪ್ಪ ನೇತೃತ್ವದಲ್ಲಿ ಹೋರಾಟ ನಡೆಯಿತು. ಈ ಸಂದರ್ಭದಲ್ಲಿ ವಿರುಪಾಕ್ಷಪ್ಪರನ್ನು ಹೋರಾಟ ಸಮಿತಿ ಸಂಚಾಲಕರನ್ನಾಗಿ ನೇಮಿಸಲಾಗಿತ್ತು. ಈ ಹೋರಾಟದಲ್ಲಿ ಸಿದ್ದರಾಮಯ್ಯ ಪಾಲ್ಗೊಳ್ಳದೆ ಇರುವುದಕ್ಕೆ ವಿರುಪಾಕ್ಷಪ್ಪ ನೇರವಾಗಿ ಸಿದ್ದರಾಮಯ್ಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.

ಜನವರಿ 4 ರಂದು ಸಿಂಧನೂರಿನಲ್ಲಿ ಕುರುಬ ಎಸ್ಟಿ ಮೀಸಲಾತಿ ಹೋರಾಟ ಸಮಾವೇಶದಲ್ಲಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದರು. ಇದೇ ವೇಳೆ ಕುರುಬರಿಗೆ ಎಸ್ಟಿ ಮೀಸಲಾತಿ ಹೋರಾಟದಲ್ಲಿ ಆರ್ ಎಸ್ ಎಸ್ ಕೈವಾಡವಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಸಿದ್ದರಾಮಯ್ಯ ಆರೋಪ ಈಗ ಮತ್ತೆ ಸಾಬೀತಾದಂತಾಗುತ್ತಿದೆ.

ಆದರೆ ವಿರುಪಾಕ್ಷಪ್ಪ ಇದಕ್ಕೆ ವಿರೋಧ ವ್ಯಕ್ತಪಡಿಸಿ ನಾನು ಸ್ವ ಇಚ್ಛೆಯಿಂದ ಬಿಜೆಪಿ ಸೇರುತ್ತಿದ್ದೇನೆ ಎಂದಿದ್ದಾರೆ. ಈಗಾಗಲೇ 83 ವಯಸ್ಸಿನ ವಿರುಪಾಕ್ಷಪ್ಪ ಮುಂದೆ ತಮ್ಮ ಅಳಿಯ ದೊಡ್ಡ ಬಸವರಾಜ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ಸೇರುತ್ತಿದ್ದಾರೆ ಎಂದು ತರ್ಕಿಸಲಾಗುತ್ತಿದೆ.
Published by:Latha CG
First published: