ದೇವೇಗೌಡರ ಮೂಗರ್ಜಿಯಿಂದಲೇ ಡಿಕೆಶಿ ಮೇಲೆ ಇಡಿ ದಾಳಿ ; ಕೆ.ಎನ್.ರಾಜಣ್ಣ ಸ್ಫೋಟಕ ಹೇಳಿಕೆ

ಸಿದ್ದಾರ್ಥ 50 ಸಾವಿರ ಜನರಿಗೆ ಉದ್ಯೋಗವಾದರೂ ನೀಡಿದ್ರು. ಅಂಥವರ ಬಗ್ಗೆ ಕಾಳಜಿ ತೋರುವ ಬದಲು ತಮ್ಮ ರಾಜಕೀಯ ಲಾಭಕ್ಕಾಗಿ ಮಾತ್ರ ಡಿಕೆಶಿ ಮೇಲೆ ಅನುಕಂಪ ತೋರುತಿದ್ದಾರೆ ಎಂದು ರಾಜಣ್ಣ ದೇವೇಗೌಡರ ಕುಟುಂಬದ ವಿರುದ್ದ ಹರಿಹಾಯ್ದಿದ್ದಾರೆ.

G Hareeshkumar | news18-kannada
Updated:November 5, 2019, 3:49 PM IST
ದೇವೇಗೌಡರ ಮೂಗರ್ಜಿಯಿಂದಲೇ ಡಿಕೆಶಿ ಮೇಲೆ ಇಡಿ ದಾಳಿ ; ಕೆ.ಎನ್.ರಾಜಣ್ಣ ಸ್ಫೋಟಕ ಹೇಳಿಕೆ
ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೆ ಎನ್​​ ರಾಜಣ್ಣ
  • Share this:
ತುಮಕೂರು(ನ.05): ಮಾಜಿ ಪ್ರಧಾನಿ ದೇವೇಗೌಡರು ಬರೆದ ಮೂಗರ್ಜಿಯಿಂದಲೇ ಡಿಕೆ ಶಿವಕುಮಾರ್ ಮೇಲೆ ಇ.ಡಿ. ದಾಳಿ ನಡೆದು ಜೈಲಿಗೆ ಹೋಗುವಂತಾಯಿತು ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಸ್ಪೋಟಕ ಹೇಳಿಕೆ ನೀಡಿದ್ದಾರೆ. 

ಮಾಜಿ ಪ್ರಧಾನಿಗಳು ಯಾವಾಗಲೂ ಮೂಗರ್ಜಿ ಗಿರಾಕಿಗಳು. ದೇವೇಗೌಡರೇ ಡಿಕೆಶಿ ವಿರುದ್ದ ಈ ಹಿಂದೆ ಮೂಗರ್ಜಿ ಹಾಕಿರುತ್ತಾರೆ. ಅವೆಲ್ಲಾವನ್ನೂ ಕ್ರೂಢಿಕರಿಸಿ ಅವರು ದಾಳಿ ನಡೆಸಿ ಬಂಧಿಸಿದ್ದಾರೆ. ತಾನು ಮೂಗರ್ಜಿ ಹಾಕಿಲ್ಲ ಎಂದು ದೇವೇಗೌಡರು ಯಾವುದಾದರೂ ದೇವಸ್ಥಾನದಲ್ಲಿ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ದೇವೇಗೌಡರು ಮೂಗರ್ಜಿ ಹಾಕಿರುವ ಬಗ್ಗೆ‌ ಸ್ವತಃ ಡಿಕೆಶಿಯವರಿಗೂ ಗೊತ್ತು ಎಂದ ರಾಜಣ್ಣ ತಮ್ಮ ಹೇಳಿಕೆಯನ್ನ ಪ್ರಮಾಣೀಕರಿಸುವ ಪ್ರಯತ್ನ ಮಾಡಿದ್ದಾರೆ. ಮೈತ್ರಿ ಸರ್ಕಾರ ರಚಿಸುವ ಮುಂಚೆ ಡಿಕೆಶಿ ವಿರುದ್ದ ದೇವೇಗೌಡರು ಎಲ್ಲಾ ರೀತಿಯ ಕೆಲಸ ಮಾಡಿದ್ದಾರೆ. ಪ್ರಧಾನಿ ಮಂತ್ರಿ ಅಲ್ಲಾ ಇವರು ಪಂಚಾಯತ್​ ಸದಸ್ಯ ಅಂತಾ ಡಿಕೆಶಿನೇ ಹೇಳಿದದರು ಎಂದರು.

ಇದನ್ನೂ ಓದಿ : ದೇವೇಗೌಡರ ವಿರುದ್ಧ ಆರೋಪ ಮಾಡಿದವರಿಗೆ ಗಿಫ್ಟ್ ಕೊಡ್ತಾರಂತೆ - ಯಡಿಯೂರಪ್ಪ ವಿರುದ್ಧ ರೇವಣ್ಣ ಕಿಡಿ

ಮೈತ್ರಿ ಸರ್ಕಾರ ರಚನೆಯಾದಾಗಿಂದ ದೇವೇಗೌಡರ ಕುಟುಂಬ ಡಿಕೆಶಿ ಪರ ಇದ್ದಾರೆ ಅಷ್ಟೇ. ಡಿಕೆಶಿ ಮೇಲೆ ಈಗ ದೇವೇಗೌಡರ ಕುಟುಂಬ ತೋರುವ ಅನುಕಂಪ, ಎಸ್ ಎಮ್ ಕೃಷ್ಣ ಅವರ ಅಳಿಯ ಕಾಫಿ ಡೇ ಸಿದ್ದಾರ್ಥ ಮೇಲೆ ಯಾಕೆ ತೋರುತಿಲ್ಲ. ಸಿದ್ದಾರ್ಥ 50 ಸಾವಿರ ಜನರಿಗೆ ಉದ್ಯೋಗವಾದರೂ ನೀಡಿದ್ರು. ಅಂಥವರ ಬಗ್ಗೆ ಕಾಳಜಿ ತೋರುವ ಬದಲು ತಮ್ಮ ರಾಜಕೀಯ ಲಾಭಕ್ಕಾಗಿ ಮಾತ್ರ ಡಿಕೆಶಿ ಮೇಲೆ ಅನುಕಂಪ ತೋರುತಿದ್ದಾರೆ ಎಂದು ರಾಜಣ್ಣ ದೇವೇಗೌಡರ ಕುಟುಂಬದ ವಿರುದ್ದ ಹರಿಹಾಯ್ದಿದ್ದಾರೆ.

ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡುವ ವಿಚಾರದಲ್ಲಿ ಮಾತನಾಡಿದ ರಾಜಣ್ಣ, ಹೆಚ್ಡಿಕೆ ವಚನಭ್ರಷ್ಟರು ಅನ್ನೋದು ಹಲವು ಬಾರಿ ರುಜುವಾತಾಗಿದೆ. ಅವರು ಯಾವುದೇ ಭರವಸೆ ಕೊಟ್ಟರು ಅದು ನಂಬಿಕೆಗೆ ಅರ್ಹವಲ್ಲ.  ಅಲ್ಲದೇ ಮಾಜಿ ಪ್ರಧಾನಿಗಳ ಕುಟುಂಬ ಅನ್ನೋ ಕಾರಣಕ್ಕೆ ಫೋನ್ ಕದ್ದಾಲಿಕೆ ತಪ್ಪುಗಳು ಮುಚ್ಚಿಹೋಗಬಹುದು ಎಂದಿದ್ದಾರೆ.

ಇದನ್ನೂ ಓದಿ : ಆಡಿಯೋ ಲೀಕ್ ಮಾಡಿದ್ದು ಸಿದ್ದರಾಮಯ್ಯ ಎಂದ ಸವದಿ; ಬಿಎಸ್ವೈ ಆಗದವರೇ ಮಾಡಿದ್ದು ಎಂದ ವಿಪಕ್ಷ ನಾಯಕಪೋನ್ ಕದ್ದಾಲಿಕೆ ಎಲ್ಲಾ ಸಿಎಂ ಗಳ ಕಾಲದಲ್ಲಿ ನಡೆದಿದ್ದು, ಯಾರು ಕೂಡ ಲಿಖಿತವಾಗಿ ಆದೇಶ ಮಾಡಲ್ಲಾ, ಮೌಖಿಕವಾಗಿ ಹೇಳಿರ್ತಾರೆ ಅಷ್ಟೇ. ಇವರ ತಪ್ಪಿಗೆ ಅಧಿಕಾರಿಗಳು ಬಲಿಯಾಗ್ತಾರೆ ಎಂದು ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.

First published:November 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ