ಮಾಜಿ ಶಾಸಕ, ಜೆಡಿಎಸ್​ ಹಿರಿಯ ಮುಖಂಡ ಕೆ.ಎಲ್​.ಶಿವಲಿಂಗೇಗೌಡ ನಿಧನ

ಭಾನುವಾರ ಬೆಳಗ್ಗೆ ಕನಕಪುರದ ಆರ್​ಇಎಸ್​ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಂತರ ಸ್ವಗ್ರಾಮವಾದ ಕಾಡಳ್ಳಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

HR Ramesh | news18
Updated:July 6, 2019, 10:33 PM IST
ಮಾಜಿ ಶಾಸಕ, ಜೆಡಿಎಸ್​ ಹಿರಿಯ ಮುಖಂಡ ಕೆ.ಎಲ್​.ಶಿವಲಿಂಗೇಗೌಡ ನಿಧನ
ಮಾಜಿ ಶಾಸಕ ಕೆ.ಎಲ್.ಶಿವಲಿಂಗೇಗೌಡ
  • News18
  • Last Updated: July 6, 2019, 10:33 PM IST
  • Share this:
ಕನಕಪುರ: ಸಾತನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಜೆಡಿಎಸ್​ ಹಿರಿಯ ಮುಖಂಡ ಕೆ.ಎಲ್.ಶಿವಲಿಂಗೇಗೌಡ (93) ಶನಿವಾರ ರಾತ್ರಿ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಇಂದು ಬೆಂಗಳೂರಿನ ಖಾಸಗಿ ನರ್ಸಿಂಗ್ ಹೋಮ್​ನಲ್ಲಿ ಕೊನೆಯುಸಿರೆಳೆದರು.

ಸಾತನೂರು ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಮೂರು ಬಾರಿಗೆ ಚುನಾಯಿತರಾಗಿದ್ದ ಶಿವಲಿಂಗೇಗೌಡ ಅವರಿಗೆ ಇಬ್ಬರು ಮಕ್ಕಳಿದ್ದಾರೆ. 1962ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಇವರು, ಆನಂತರ 1978 ಮತ್ತು 1985ರಲ್ಲಿ ಪುನರ್​ ಆಯ್ಕೆಯಾಗಿದ್ದರು. ಎಸ್​.ಕರಿಯಪ್ಪ ಗ್ರಾಮಾಂತರ ವಿದ್ಯಾ ಪ್ರಚಾರಕ ಸಂಘದ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಇದನ್ನು ಓದಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣ; ಮಗಳ ಮದುವೆ ಸಿದ್ಧತೆಗಾಗಿ ಆರೋಪಿ ನಳಿನಿಗೆ 1 ತಿಂಗಳ ಪೆರೋಲ್​ ನೀಡಿದ ಮದ್ರಾಸ್​ ಹೈಕೋರ್ಟ್​

ಬೆಂಗಳೂರಿನ ಜಯನಗರದಲ್ಲಿ ಇರುವ ಮನೆಗೆ ಮೃತದೇಹವನ್ನು ಕೊಂಡೊಯ್ಯಲಾಗಿದೆ. ಭಾನುವಾರ ಬೆಳಗ್ಗೆ ಕನಕಪುರದ ಆರ್​ಇಎಸ್​ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಂತರ ಸ್ವಗ್ರಾಮವಾದ ಕಾಡಳ್ಳಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

First published:July 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ