ರಾಮನಗರ(ಜೂ.24): ನಾನು ಬಿಜೆಪಿ ಗೂ (BJP) ಹೋಗಲ್ಲ - ಜೆಡಿಎಸ್ ಗೂ (JDS) ಹೋಗಲ್ಲ, ಕಾಂಗ್ರೆಸ್ ನಲ್ಲೇ (Congress) ಇರುತ್ತೇನೆ. ಇಲ್ಲೇ ಸಂಘಟನೆ ಮಾಡ್ತೇನೆ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ. ರಾಮನಗರ (Ramanagara) ಜಿಲ್ಲೆಯ ಮಾಗಡಿಯಲ್ಲಿ ಮಾತನಾಡಿರುವ ಬಾಲಕೃಷ್ಣಮಾಗಡಿ ಕ್ಷೇತ್ರದಲ್ಲಿ ಪಂಚಾಯ್ತಿವಾರು ಚುನಾವಣಾ ಸಭೆ ಮಾಡಲಾಗುತ್ತೆ. ಕಳೆದ ಬಾರಿ ಸೋಲಿನ ಅವಲೋಕನ ಆಗ್ತಿದೆ. ಮತಕ್ಕೆ ಕಾರಣ ಹುಡುಕಲು ಪ್ರತಿ ಬೂತ್ ನಲ್ಲಿ ಚರ್ಚೆ ಮಾಡಲಾಗುತ್ತೆ. ಪಕ್ಷ ಸಂಘಟನೆಗಾಗಿ ಚಿಂತನ ಮಂತನ ಶಿಬಿರ ಪ್ರಾರಂಭ ಆಗಿದೆ ಎಂದಿದ್ದಾರೆ.
ಕಳೆದ ಬಾರಿ ನನ್ನ ವಿರುದ್ದ ಮತ ನೀಡಿದವರಿಂದ ಮತ ಹೆಚ್ಚಿಸಲು ಚರ್ಚೆ ಮಾಡಿದ್ದೇವೆ. ಚುನಾವಣೆಯಲ್ಲಿ ನಾನು ಸೋತರು ಸಹ ಗ್ರಾಮ ಪಂಚಾಯತಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೆ. ಹಾಗಾಗಿ ಪ್ರತಿ ವಾರ ೨ ಪಂಚಾಯತಿ ಸಭೆ ಕರೆದು ಸಂಘಟನೆ ಮಾಡಲಾಗುವುದು. ಕಳೆದ ಬಾರಿ ಜೆಡಿಎಸ್ ಗೆ ಮತ ನೀಡಿದವರು ಈಗ ನಮ್ಮ ಪಕ್ಷಕ್ಕೆ ಬಂದಿದ್ದಾರೆ ಎಂದಿದ್ದಾರೆ.
ಅಲ್ಲದೇ ನಮ್ಮಲ್ಲೂ ಕೂಡ ಸಣ್ಣ ಪುಟ್ಟ ಗೊಂದಲವಿದೆ.ಅದನ್ನೂ ಕೂಡ ಸರಿ ಮಾಡುವ ಕೆಲಸ ಮಾಡುತ್ತೇವೆ. ಮುಂದಿನ ಬಾರಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಮಾಗಡಿಯಲ್ಲಿ ಮಾಜಿ ಶಾಸಕ ಬಾಲಕೃಷ್ಣ ಹೇಳಿಕೆ ನೀಡಿದರು.
ಸಿದ್ದಗಂಗಾ ಮಠದ ಭೇಟಿಯಿಂದ ಮೂಡಿದ್ದ ಕುತೂಹಲ:
ಸಿದ್ಧಗಂಗಾ ಶ್ರೀಗಳ ಮೊರೆ ಹೋಗಿದ್ದ ಮಾಗಡಿ ಮಾಜಿ ಶಾಸಕ ಪಕ್ಷಾಂತರಕ್ಕೆ ಮುಂದಾದರ ಎಂಬ ಅನುಮಾನ ಮೂಡಿತ್ತು.ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಶ್ರೀ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮೀಜಿಗಳ ಆಶಿರ್ವಾದ ಪಡೆದಿದ್ದರು ಮಾಜಿ ಶಾಸಕ ಬಾಲಕೃಷ್ಣ.
ರಾಜಸಭೆ ಚುನಾವಣೆ ಬಳಿಕ ರಾತ್ರಿ ವೇಳೆ ಸ್ವಾಮಿಜಿ ಭೇಟಿ ಮಾಡಿದ ಬಾಲಕೃಷ್ಣ ಪಕ್ಷ ಬದಲಿಸುವ ನಿರ್ಧಾರಕ್ಕೆ ಸಿದ್ಧಗಂಗಾ ಶ್ರೀ ಮೊರೆ ಹೋದ್ರಾ ಎಂಬ ಚರ್ಚೆ ಪ್ರಾರಂಭವಾಗಿತ್ತು.ಕೆಲ ಕಾಲ ಶ್ರೀಗಳ ಜೊತೆ ಗೌಪ್ಯ ಮಾತುಕತೆ ನಡೆಸಿದ್ದುಬಿಜೆಪಿ ಸೇರಲು ಶ್ರೀಗಳ ಸಲಹೆಗೆ ಮುಂದಾದ್ರಾ ಬಾಲಕೃಷ್ಣ ಎಂಬ ಚರ್ಚೆ ನಡೆಯುತ್ತಿತ್ತು.
ಇದನ್ನೂ ಓದಿ: Kolara: ಸರ್ಕಾರಿ ಭೂಮಿ ಕಬಳಿಕೆಗೆ ಜಿಲ್ಲಾಧಿಕಾರಿ ಸಹಿಯನ್ನೇ ಫೋರ್ಜರಿ ಮಾಡಿದ್ರು!
ಕೈ ಗೆ ಗುಡ್ ಬೈ ವದಂತಿ ಬೆನ್ನಲ್ಲೇ ಮಠಕ್ಕೆ ಭೇಟಿ ನೀಡಿರುವ ಬಾಲಕೃಷ್ಣ ನಿನ್ನೆ ರಾತ್ರಿ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಹಲವು ವಿಚಾರದ ಬಗ್ಗೆ ಶ್ರೀಗಳ ಚರ್ಚೆ ನಡೆಸಿ ಮಾರ್ಗದರ್ಶನ ಪಡೆದಿರುವ ಹೆಚ್.ಸಿ. ಬಾಲಕೃಷ್ಣ ಯಾವ ನಿರ್ಧಾರ ಮಾಡ್ತಾರೆಂಬುದು ಕುತೂಹಲ ಮೂಡಿಸಿತ್ತು.
ಡಿ.ಕೆ.ಶಿವಕುಮಾರ್ ಗೆ ಬಾಲಕೃಷ್ಣ ಬಹಿರಂಗ ಪತ್ರ, ಪಕ್ಷದಲ್ಲಿ ಗೊಂದಲ ಇತ್ತು :
ರಾಮನಗರ - ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಲ್ಲಿ ಗೊಂದಲವಾಗಿದ್ದುಮಾಜಿ ಶಾಸಕ ಹೆಚ್.ಸಿ.ಬಾಲಕೃಷ್ಣಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಪತ್ರ ಬರೆದು ಕೆಲ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Bengaluru Transgenders : ಗೃಹ ಪ್ರವೇಶ ಸಮಾರಂಭಕ್ಕೆ ನುಗ್ಗಿ ಹಣಕ್ಕಾಗಿ ಮಂಗಳಮುಖಿಯರ ದಾಂಧಲೆ, ಮನೆಯವರ ಮೇಲೆ ಹಲ್ಲೆ
ನನಗೆ 2023 ಕ್ಕೆ ಕಾಂಗ್ರೆಸ್ ಟಿಕೆಟ್ ಬೇಡ ಎಂದು ಪತ್ರ ಬರೆದಿದ್ದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ವಿರುದ್ಧ ಬಾಲಕೃಷ್ಣ ಗರಂ ಆಗಿದ್ದರು. ನಾನು ಮಾಗಡಿಯಲ್ಲಿ ಕಾಂಗ್ರೆಸ್ ಕಟ್ಟುತ್ತಿದ್ದೇನೆ, ಆದರೆ ರೇವಣ್ಣ ಜೆಡಿಎಸ್ ಶಾಸಕ ಎ.ಮಂಜು ಪರವಾಗಿದ್ದಾರೆ. ರೇವಣ್ಣ - ಮಂಜು ತುಂಬಾ ಚೆನ್ನಾಗಿದ್ದಾರೆ. ರೇವಣ್ಣ ಮಂಜುರನ್ನ ಹೊಗಳುತ್ತಾರೆ, ಮಂಜು ರೇವಣ್ಣ ನನ್ನ ಗುರುಗಳು ಅಂತಾರೆ.
ಹಾಗಾಗಿ ನನಗೆ ಕ್ಷೇತ್ರದಲ್ಲಿ ಇರುಸುಮುರುಸಾಗುತ್ತಿದೆ. ರೇವಣ್ಣರಿಗೆ ಪಕ್ಷದ ಟಿಕೆಟ್ ಕೊಡಿ, ನನಗೆ ಬೇಡ ಎಂದು ಬಾಲಕೃಷ್ಣ ಪತ್ರದಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ತಿಳಿಸಿದ್ದರು. ಇನ್ನು ನಮ್ಮದು ರಾಷ್ಟ್ರೀಯ ಪಕ್ಷ ಹಲವು ಅವಕಾಶ ಇದೆ. ಹಿಂದೆ ರೇವಣ್ಣ ಎಂಎಲ್ಸಿ ಆಗಿ ಮಂತ್ರಿ ಆಗಿದ್ದರು. ನಾನು ಮಾಗಡಿ ಬಿಟ್ಟು ಹೋಗಲ್ಲ ಎಂದರು. ಇನ್ನು ಬಾಲಕೃಷ್ಣ ಬಿಜೆಪಿ ಸೇರ್ತಾರೆಂಬ ಸುದ್ದಿಗೆ ಆಗ ಮತ್ತಷ್ಟು ರೆಕ್ಕೆಪುಕ್ಕ ಬಂದಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ