ಯು ಟರ್ನ್ ಹೊಡೆದ ಅನಿಲ್ ಲಾಡ್ ಕೈ ಪರ ಭರ್ಜರಿ ಪ್ರಚಾರ; ಲಿಂಗಾಯತ ಮತ ಸೆಳೆಯಲು ಫೀಲ್ಡಿಗಿಳಿದ ಸೋಮಣ್ಣ, ಮಾಧುಸ್ವಾಮಿ

ಇಂದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಪರ ಹೊಸಪೇಟೆಯ ವಿವಿಧ ಬಡಾವಣೆಯಲ್ಲಿ ಮಾಜಿ ಶಾಸಕ ಅನಿಲ್ ಲಾಡ್ ಪ್ರಚಾರ ಮಾಡಿದರು. ಶಾಸಕ ಭೀಮಾ ನಾಯ್ಕ್ ಜೊತೆ ಭರ್ಜರಿ ಪ್ರಚಾರ ಮಾಡುವ ಮೂಲಕ ತಾವು ಇನ್ನೂ ಕಾಂಗ್ರೆಸ್ ಪಕ್ಷದಲ್ಲಿಯೇ ಇರುವುದನ್ನು ಪ್ರದರ್ಶಿಸಿದರು.

news18-kannada
Updated:December 2, 2019, 6:38 PM IST
ಯು ಟರ್ನ್ ಹೊಡೆದ ಅನಿಲ್ ಲಾಡ್ ಕೈ ಪರ ಭರ್ಜರಿ ಪ್ರಚಾರ; ಲಿಂಗಾಯತ ಮತ ಸೆಳೆಯಲು ಫೀಲ್ಡಿಗಿಳಿದ ಸೋಮಣ್ಣ, ಮಾಧುಸ್ವಾಮಿ
ಅನಿಲ್ ಲಾಡ್
  • Share this:
ಬಳ್ಳಾರಿ(ಡಿ.02): ಬಿಜೆಪಿ ಸೇರಬೇಕಾಗಿದ್ದ ಅನಿಲ್ ಲಾಡ್ ಇಂದು ದಿಢೀರ್ ಪ್ರತ್ಯಕ್ಷವಾಗಿ ಕೈ ಅಭ್ಯರ್ಥಿ ಪರ ಪ್ರಚಾರಕ್ಕಿಳಿದು ಯು ಟರ್ನ್ ಹೊಡೆದರು. ಲಿಂಗಾಯತ ಮತದಾರರನ್ನು ಸೆಳೆಯಲು ಬಿಜೆಪಿಯ ಸಚಿವರಾದ ಸೋಮಣ್ಣ, ಮಾಧುಸ್ವಾಮಿ ಫೀಲ್ಡಿಗಿಳಿದಿದ್ದರು. ಇನ್ನು ಬಿಜೆಪಿ ಅಭ್ಯರ್ಥಿ ಮತದಾರರ ಚೀಟಿಯಲ್ಲಿಯೂ ಪ್ರಚಾರ ಮಾಡುತ್ತಿದೆಯೆಂದು ಜೆಡಿಎಸ್ ದೂರು ನೀಡುವ ಮೂಲಕ ವಿಜಯನಗರ ರಣಕಣ ಹೈಓಲ್ಟೇಜ್ ಸ್ವರೂಪ ಪಡೆದುಕೊಂಡಿದೆ.

ಉಪ ಚುನಾವಣೆ ಮತದಾನ ಹತ್ತಿರವಾಗುತ್ತಿದ್ದಂತೆ ವಿಜಯನಗರ ಕ್ಷೇತ್ರ ಉಪ ಚುನಾವಣೆಯಲ್ಲಿ ಅಚ್ಚರಿಯ ಬದಲಾವಣೆಗಳಾಗುತ್ತಿವೆ. ಇನ್ನೇನು ಅಧಿಕೃತವಾಗಿ ಮಾಜಿ ಶಾಸಕ ಅನಿಲ್ ಲಾಡ್ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ಕೊಂಡವರಿಗೆ ಬಿಗ್ ಶಾಕ್ ಕಾದಿತ್ತು. ಇಂದು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಪರ ಹೊಸಪೇಟೆಯ ವಿವಿಧ ಬಡಾವಣೆಯಲ್ಲಿ ಮಾಜಿ ಶಾಸಕ ಅನಿಲ್ ಲಾಡ್ ಪ್ರಚಾರ ಮಾಡಿದರು. ಶಾಸಕ ಭೀಮಾ ನಾಯ್ಕ್ ಜೊತೆ ಭರ್ಜರಿ ಪ್ರಚಾರ ಮಾಡುವ ಮೂಲಕ ತಾವು ಇನ್ನೂ ಕಾಂಗ್ರೆಸ್ ಪಕ್ಷದಲ್ಲಿಯೇ ಇರುವುದನ್ನು ಪ್ರದರ್ಶಿಸಿದರು.

ಮಾಜಿ ಶಾಸಕ ಅನಿಲ್ ಲಾಡ್​​ ಮಾತನಾಡಿ, ನಾನು ಬಿಜೆಪಿ ಸೇರುವುದಾಗಿ ಹೇಳಿದ್ದು ನಿಜ. ಆದರೆ ನನ್ನನ್ನು ಉಪ ಚುನಾವಣೆ ಮುಗಿಯುತ್ತಿದ್ದರೂ ಸಿಎಂ ಯಡಿಯೂರಪ್ಪ ಪಕ್ಷಕ್ಕೆ ಸೇರಿಸಿಕೊಳ್ಳಲಿಲ್ಲ ಎಂದೇಳಿದ ಅವರು, ಜಿಂದಾಲ್ ಭೂಮಿ ಪರಭಾರೆ ಮಾಡುವುದನ್ನು ವಿರೋಧಿಸಿದಾಗ ಸಿಂಗ್ ಜೊತೆ ನಾನು ಬೆಂಬಲಿಸಿದ್ದೆ. ಆದರೆ ಇದೀಗ ಅದರ ಬಗ್ಗೆ ಚರ್ಚೆಯಾಗುತ್ತಿಲ್ಲ. ಇದರಿಂದ ನನಗೆ ಮೋಸವಾಗಿದೆ. ಆನಂದ್ ಸಿಂಗ್ ಒಳ್ಳೆಯವನು. ಆದರೆ ಅವರ ಹಿಂದಿರುವವರು ದಾರಿ ತಪ್ಪಿಸುತ್ತಿದ್ದಾರೆ. ನಾನಿನ್ನೂ ಕಾಂಗ್ರೆಸ್ ನಲ್ಲಿಯೇ ಇದ್ದೇನೆ, ಸ್ವತಂತ್ರವಾಗಿ ಘೋರ್ಪಡೆ ಪರ ಪ್ರಚಾರಕ್ಕೆ ಬಂದಿದ್ದೇನೆ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಆನಂದ ಸಿಂಗ್​ ಪರವಾಗಿ ಸಚಿವರ ಪ್ರಚಾರ

ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಪರ ಲಿಂಗಾಯತ ಮುಖಂಡರು, ಸಚಿವರಾದ ಸೋಮಣ್ಣ, ಮಾಧುಸ್ವಾಮಿ ಫೀಲ್ಡಿಗಿಳಿದಿದ್ದರು. ಹೊಸಪೇಟೆ ನಗರದ ಪ್ರಮುಖ ವೀರಶೈವ ಲಿಂಗಾಯತ ಮುಖಂಡರ ಮನೆಗೆ ಭೇಟಿ ನೀಡಿ ಬಿಜೆಪಿ ಬೆಂಬಲಿಸುವಂತೆ ಸೋಮಣ್ಣ ಮನವಿ ಮಾಡಿಕೊಂಡರು. ಇನ್ನು ಸಚಿವ ಮಾಧುಸ್ವಾಮಿ ಸೇರಿದಂತೆ ಹಲವು ಲಿಂಗಾಯತ ನಾಯಕರು ಸೇರಿ ಲಿಂಗಾಯತ ಸಮುದಾಯದ ಸಭೆ ನಡೆಸಿದರು.

ಸಭೆಯಲ್ಲಿಮುಖ್ಯಮಂತ್ರಿಯಾಗಿ ಮುಂದುವರೆಯಲು ಸಹಕರಿಸಿ ಎಂದು ಮನವಿ ಮಾಡಿಕೊಂಡ ಸಚಿವ ವಿ ಸೋಮಣ್ಣ, ದೇವೇಗೌಡರು ತಂದೆ ಸಮಾನರು, ಆದರೆ ತನ್ನ ಏಳಿಗೆಯನ್ನು ಸಹಿಸದ ಪುಣ್ಯಾತ್ಮ ಕುಮಾರಸ್ವಾಮಿ ಸುಖಾಸುಮ್ಮನೆ ನನ್ನ ಮೇಲೆ ಬೈಯೋದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ : ಕುದುರೆ ವ್ಯಾಪಾರ ಮಾಡಿದ್ದೇ ಸಿಎಂ ಯಡಿಯೂರಪ್ಪನವರ ದೊಡ್ಡ ಸಾಧನೆ ; ಹೆಚ್​.ಡಿ. ದೇವೇಗೌಡ ಲೇವಡಿಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಕ್ಷೇತ್ರದ ಮತದಾರರಿಗೆ ಕೊಡುವ ಮತದಾರರ ಚೀಟಿಯ ಜೊತೆಗೆ ಪಕ್ಷದ ಪ್ರಚಾರ ಬರುವಂತೆ ಮುದ್ರಿಸಿ ಕೊಡುತ್ತಿರುವ ಬಗ್ಗೆ ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಚುನಾವಣಾಧಿಕಾರಿಗಳಿಗೆ ಜೆಡಿಎಸ್ ಅಭ್ಯರ್ಥಿ ನಬೀ ದೂರು ನೀಡಿದ್ದೇನೆ, ಚುನಾವಣಾಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕೆಂದು ಎಂದು ಜೆಡಿಎಸ್ ಅಭ್ಯರ್ಥಿ ನಬೀ ಆಕ್ರೋಶ ವ್ಯಕ್ತಪಡಿಸಿದರು.
First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading