• Home
  • »
  • News
  • »
  • state
  • »
  • Vinay Kulkarni: ವಿನಯ್ ಕುಲಕರ್ಣಿ ಅದ್ಧೂರಿ ಹುಟ್ಟುಹಬ್ಬದ ಹಿಂದಿನ ರಹಸ್ಯ ಇಲ್ಲಿದೆ

Vinay Kulkarni: ವಿನಯ್ ಕುಲಕರ್ಣಿ ಅದ್ಧೂರಿ ಹುಟ್ಟುಹಬ್ಬದ ಹಿಂದಿನ ರಹಸ್ಯ ಇಲ್ಲಿದೆ

ವಿನಯ್ ಕುಲಕರ್ಣಿ, ಮಾಜಿ ಸಚಿವ

ವಿನಯ್ ಕುಲಕರ್ಣಿ, ಮಾಜಿ ಸಚಿವ

ವಿನಯ್ ಕುಲಕರ್ಣಿ ಏನು ಸಾಧನೆ ಮಾಡಿದ್ದಾರೆ ಎಂದು ಜನ್ಮದಿನ ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆ ಬರುತ್ತಿದ್ದಾರೆ ಎಂದು ಸಂಜಯ್ ಪಾಟೀಲ್ ಪ್ರಶ್ನೆ ಮಾಡಿದ್ದಾರೆ.

  • News18 Kannada
  • Last Updated :
  • Belgaum, India
  • Share this:

ಬೆಳಗಾವಿ: ರಾಜ್ಯದಲ್ಲಿ ಚುನಾವಣೆಗೆ (Karnataka Assembly Election) ಕೆಲವೇ ತಿಂಗಳು ಬಾಕಿ ಉಳಿದುಕೊಂಡಿದ್ದು, ಜನರ ಬಳಿ ಹೋಗಲು ರಾಜಕೀಯ ನಾಯಕರು (Political Leaders) ಇನ್ನಿಲ್ಲದ ಕಸರತ್ತು ಆರಂಭ ಮಾಡಿದ್ದಾರೆ. ಸಮಾವೇಶ (Rally) ಭರಾಟೆ ಈಗಾಗಲೇ ರಾಜ್ಯದಲ್ಲಿ ಶುರುವಾಗಿದೆ. ರಾಜಕೀಯ ನಾಯಕರು ಹುಟ್ಟು ಹಬ್ಬದ (Birthday) ಹೆಸರಿನಲ್ಲಿ ಪಕ್ಷದಲ್ಲಿ ವರ್ಚಸ್ಸು ಹೆಚ್ಚು ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಈ ಸಾಲಿಗೆ ಈಗ ಮಾಜಿ ಸಚಿವ ವಿನಯ್ ಕುಲಕರ್ಣಿ (Former Minister Vinay Kulkarni) ಹೊಸ ಸೇರ್ಪಡೆಯಾಗಿದೆ. ಇಂದು ಕಿತ್ತೂರಿನಲ್ಲಿ (Kittur, Belagavi) ಅದ್ಧೂರಿ ಹುಟ್ಟು ಹಬ್ಬವನ್ನು ಕುಲಕರ್ಣಿ ಆಚರಣೆ ಮಾಡಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaiah), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಸೇರಿ ಅನೇಕ ಸ್ವಾಮೀಜಿಗಳು ಆಗಮಿಸಲಿದ್ದಾರೆ.


ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ (Yogesh Gowda Murder Case) ಕೇಸ್ ಹಿನ್ನೆಲೆಯಲ್ಲಿ ಸಿಬಿಐ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು. ಸದ್ಯ ಧಾರವಾಡ ಜಿಲ್ಲೆಯ ಪ್ರವೇಶಕ್ಕೆ ಕಲುಕರ್ಣಿಗೆ ಅವಕಾಶ ಇಲ್ಲ.


ಚುನಾವಣೆಗೆ ಸಿದ್ಧತೆ ಮಾಡಿಕೊಳ್ತಿರೋ ವಿನಯ್ ಕುಲಕರ್ಣಿ


ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾಗಿ ವಿನಯ್ ಕೆಲಸ ಮಾಡಿದ್ದಾರೆ. ಇನ್ನೂ ಧಾರವಾಡ ಲೋಕಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಿ ಸೋತ್ತಿದ್ದಾರೆ. ಮುಂಬರುವ ಚುನಾವಣೆಗೆ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಿತ್ತೂರು ಪಟ್ಟಣದಲ್ಲಿದ್ದುಕೊಂಡು ಧಾರವಾಡದಲ್ಲಿ ರಾಜಕೀಯ ಮಾಡುವ ಇರಾದೆಯನ್ನು ಹೊಂದಿದ್ದಾರೆ.


Former minitster vinay kulakarni celebrate his birthday in kittur today csb mrq
ವಿನಯ್ ಕುಲಕರ್ಣಿ, ಮಾಜಿ ಸಚಿವ


ಜನರ ಸಂಪರ್ಕ ಸಾಧಿಸಲು ಹುಟ್ಟು ಹಬ್ಬದ ನೆಪದಲ್ಲಿ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಶಕ್ತಿ ಪ್ರದರ್ಶನ ಮಾಡುವ ಮೂಲಕ ಮುಂದಿನ ಚುನಾವಣೆಯ ಟಿಕೆಟ್ ಪಡೆದುಕೊಂಡು ಸ್ಪರ್ಧಿಸುವ ಉದ್ದೇಶ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.


 ವಿವಿಧ ಮಠಾಧೀಶರು ಭಾಗಿ


ಕಿತ್ತೂರಿನ ಬಳಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಕುಮಾರ್ ಹಾಗೂ ವಿವಿಧ ಮಠಾಧೀಶರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.


ಇದನ್ನೂ ಓದಿ: Janardhana Reddy: ಕಾಂಗ್ರೆಸ್‌ನಿಂದ ರಾಜಕೀಯ ಅಖಾಡಕ್ಕೆ ಇಳಿತಾರಾ ಗಣಿಧಣಿ? ಹುಲಿ ಬೇಟೆಗೆ ನಿಂತ್ರೆ ಆಡದೇ ಬಿಡಲ್ಲ ಅಂದ್ರು ಜನಾರ್ದನ ರೆಡ್ಡಿ!


ಎಂಎಲ್​ಸಿ ಚನ್ನರಾಜ್ ಹಟ್ಟಿಹೊಳಿ, ಬಾಬಾಸಾಹೇಬ್ ಪಾಟೀಲ್ ಈ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ಧಾರವಾಡದಿಂದ ಹೆಚ್ಚು ಜನರನ್ನು ಇಲ್ಲಿ ಕರೆ ತರಲು ಎಲ್ಲಾ ಸಿದ್ಧತೆಗಳು ನಡೆದಿವೆ. ಇನ್ನೂ ವಿನಯ್ ಕುಲಕರ್ಣಿ ಅದ್ಧೂರಿ ಹುಟ್ಟು ಹಬ್ಬದ ಆಚರಣೆ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


vinay kulkarni cast, vinay kulkarni cars, vinay kulkarni daughter, vinay kulkarni mla, vinay kulkarni family, vinay kulkarni previous offices, vinay kulkarni wife, vinay kulkarni house, vinay kulkarni birthday, yogesh gowda murder case, kannada news, karnataka news, ವಿನಯ್ ಕುಲಕರ್ಣಿ ಬರ್ತ್​ ಡೇ, ವಿನಯ್ ಕುಲಕರ್ಣಿ ಜೈಲು
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ


ವಿನಯ್ ಕುಲಕರ್ಣಿ ಸಾಧನೆ ಏನು; ಬಿಜೆಪಿ ಪ್ರಶ್ನೆ


ವಿನಯ್ ಕುಲಕರ್ಣಿ ಕೊಲೆ ಪ್ರಕರಣದಲ್ಲಿ 9 ತಿಂಗಳು ಜೈಲಿನಲ್ಲಿ ಇದ್ದವರು. ಕೊಲೆ ಆರೋಪಿ ವಿನಯ್ ಕುಲಕರ್ಣಿ ಜನ್ಮದಿನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬರ್ತಿದ್ದಾರೆ. ವಿನಯ್ ಕುಲಕರ್ಣಿ ಏನು ಸಾಧನೆ ಮಾಡಿದ್ದಾರೆ ಎಂದು ಜನ್ಮದಿನ ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಖರ್ಗೆ ಬರುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.


ಕಾಂಗ್ರೆಸ್ ಮಾತನಾಡುವುದು ಬೇರೆ ನಡವಳಿಕೆ ಬೇರೆ ಎಂಬುದಕ್ಕೆ ಇದು ಜೀವಂತ ಉದಾಹರಣೆ. ಕ್ರಿಮಿನಲ್ ಅಂತಾ ಗುರುತಿಸಿಕೊಂಡವರ ಕೊಲೆ ಆರೋಪ ಹೊತ್ತವರ ಹುಟ್ಟುಹಬ್ಬಕ್ಕೆ ದೆಹಲಿಯಿಂದ ಬರ್ತಿದ್ದಾರೆ.


ಇದನ್ನೂ ಓದಿ:  Chandrashekhar Death: ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾದ್ರಾ ಶಾಸಕ ರೇಣುಕಾಚಾರ್ಯ ಪುತ್ರ ಚಂದ್ರಶೇಖರ್?


ಸಂಜಯ್ ಪಾಟೀಲ್ ವಾಗ್ದಾಳಿ


ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಕ್ಕೆ ಖುಷಿ ಇದೆ. ಮಲ್ಲಿಕಾರ್ಜುನ ಖರ್ಗೆ ದಲಿತ ನಾಯಕರು. ಒಬ್ಬ ವ್ಯಕ್ತಿಯ ಹತ್ಯೆ ಮಾಡಿದ ಆರೋಪ ಹೊಂದಿದವನ ಜನ್ಮದಿನಕ್ಕೆ ಬರ್ತಿದ್ದಾರೆ. ಕೊಲೆ ಆರೋಪ ಹೊತ್ತವರ ಜನ್ಮದಿನಕ್ಕೆ ಆಚರಣೆ ಬರುವುದು ಎಷ್ಟರ ಮಟ್ಟಿಗೆ ಸರಿ ಎಂದು  ಮಾಜಿ ಶಾಸಕ ಸಂಜಯ್ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

Published by:Mahmadrafik K
First published: