• Home
  • »
  • News
  • »
  • state
  • »
  • Vinay Kulkarni: ನನಗೆ ಬಂದ ಕಷ್ಟ ಯಾವ ಶತ್ರುಗಳಿಗೂ ಬರಬಾರದು; ವಿನಯ್ ಕುಲಕರ್ಣಿ ಭಾವುಕ

Vinay Kulkarni: ನನಗೆ ಬಂದ ಕಷ್ಟ ಯಾವ ಶತ್ರುಗಳಿಗೂ ಬರಬಾರದು; ವಿನಯ್ ಕುಲಕರ್ಣಿ ಭಾವುಕ

ವಿನಯ್ ಕುಲಕರ್ಣಿ, ಮಾಜಿ ಸಚಿವ

ವಿನಯ್ ಕುಲಕರ್ಣಿ, ಮಾಜಿ ಸಚಿವ

ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ವಿನಯ್ ಕುಲಕರ್ಣಿ 54ನೇ ಅದ್ಧೂರಿ ಹುಟ್ಟಹಬ್ಬದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರು, ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

  • Share this:

ಬೆಳಗಾವಿ: ನನ್ನನ್ನು ಧಾರವಾಡ (Dharwad) ಜಿಲ್ಲೆಯಿಂದ ಹೊರಗೆ ಇಟ್ಟರಬಹುದು. ಅಷ್ಟೇ ನಿಮ್ಮ ಹೃದಯದಿಂದ ನಾನು ಹೊರಗೆ ಹೋಗಿಲ್ಲ. ನಾನು ಕೂಡಾ ಒಬ್ಬ ಕೃಷಿಕ (Farmer), ನನ್ನ ಫಾರಂನಲ್ಲಿ 1,600 ಆಕಳು (Cows) ಜೊತೆಗೆ 5 ಸಾವಿರ ಪ್ರಾಣಿಗಳು ಇವೆ. ಎಲ್ಲಾ ಬಿಟ್ಟು ಹೊರಗೆ ಇರೋದು ಕಷ್ಟವಾಗಿದೆ. ನನಗೆ ಬಂದ ಕಷ್ಟ ಯಾವ ಶತ್ರುಗಳಿಗೂ ಆಗಬಾರದು. ಸಾಕಷ್ಟು ಜನರು ಯಾವಾಗ ಊರಿಗೆ ಬರ್ತಿರಿ ಅಂತಾ ಕೇಳ್ತಾರೆ. ನಾನು ಧಾರವಾಡಗೆ ಬಂದೇ ಬರ್ತಿನಿ, ಇವತ್ತಿನ ರಾಜಕೀಯ ಷಡ್ಯಂತ್ರ, ಸೋಲುಗಳಿಗೆ ನಾನು ಹೆದರಿಲ್ಲ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ (Former Minister Vinay Kulkarni) ಬಾವುಕರಾಗಿ ಭಾಷಣ ಮಾಡಿದ್ರು.


ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ವಿನಯ್ ಕುಲಕರ್ಣಿ 54ನೇ ಅದ್ಧೂರಿ ಹುಟ್ಟಹಬ್ಬದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರು, ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.


ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್, ಶಾಸಕರಾದ ಶಿವಾನಂದ್ ಪಾಟೀಲ್, ಯಶವಂತರಾಯ್ ಗೌಡ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಮಹಾಂತೇಶ್ ಕೌಜಲಗಿ ಪಾಲ್ಗೊಂಡಿದ್ದರು.


ಅನೇಕ ಕಷ್ಟಗಳನ್ನು ಬಿಜೆಪಿ ಸರ್ಕಾರ ಕೊಡ್ತಿದೆ


ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿಜೆಪಿ ಸ್ನೇಹಿತರು ವಿನಯ್ ಕುಲಕರ್ಣಿ ಎಂಬ ಬಂಡೆಯನ್ನ ಏಟು ನೀಡಿ ಮೂರ್ತಿ ಮಾಡ್ತಿದ್ದಾರೆ. ಆಡಳಿತ ದುರುಪಯೋಗಪಡಿಸಿಕೊಳ್ಳಬಹುದು. ಆದ್ರೆ ನಿಮ್ಮ ಕಡೆ ಏನೂ ಮಾಡಲು ಸಾಧ್ಯವಿಲ್ಲ. ನನಗೂ ಅನೇಕ ಕಷ್ಟಗಳನ್ನು ಬಿಜೆಪಿ ಸರ್ಕಾರ ಕೊಡ್ತಿದೆ ಎಂದರು.


ನನಗೆ ಕೊಟ್ಟ ಸಮನ್ಸ್‌ಗಳಿಗೆ ಗೌರವಯುತವಾಗಿ ಹೋಗ್ತಿದ್ದೇನೆ. ಇವತ್ತೂ ನನಗೆ ಸಮನ್ಸ್ ಜಾರಿ ಮಾಡಿದ್ರು ಆದ್ರೆ ನಾನು ಇವತ್ತೂ ಹಾಜರಾಗಲಿಲ್ಲ. ಇವತ್ತು ನನ್ನ ಮಿತ್ರ ವಿನಯ್ ಕುಲಕರ್ಣಿ ಜನ್ಮದಿನ ಇದೆ ಹೋಗಬೇಕು. ಎರಡು ವಾರ ಪರ್ಮಿಷನ್ ಕೊಡಬೇಕು ಅಂತಾ ಹೇಳಿದೆ.


ಬಿಜೆಪಿಗೆ ಎಚ್ಚರಿಕೆ ನೀಡಿದ ಡಿಕೆಶಿ


ಕಷ್ಟಕಾಲದಲ್ಲಿ ಶಿವಲೀಲಾ ಕುಲಕರ್ಣಿ, ವಿನಯ್ ಜೊತೆಗೆ ಶಕ್ತಿಯಾಗಿ ನಿಂತಿದ್ದಕ್ಕೆ ಅಭಿನಂದಿಸುವೆ. ವಿನಯ್ ಕುಲಕರ್ಣಿ ಅವರಿಗೆ ಸಿಬಿಐ ಮೂಲಕ ಕೊಡಬಾರದ ಕಷ್ಟ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


ಈ ಜಗತ್ತಿನಲ್ಲಿ ಸೂರ್ಯನೇ ಮುಳುಗುತ್ತಾನೆ, ಯಾವುದು ಶಾಶ್ವತವಲ್ಲ. ನಿಮ್ಮ ಕರ್ಮಗಳು ನಿಮ್ಮ ಪಾಲಿಗೆ ವೈರಿ ಆಗುತ್ತವೆ ಎಂದು ಬಿಜೆಪಿಗೆ ಎಚ್ಚರಿಕೆ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ರು.


ನಿಮಗೆ ನಮ್ಮನ್ನು ಕುಗ್ಗಿಸಲು ಆಗಲ್ಲ, ಸೋಲಿಸಲು ಆಗಲ್ಲ. ಇಡೀ ರಾಜ್ಯ ಬಹಳ ಕಷ್ಟದಲ್ಲಿದ್ದು, ಬಿಜೆಪಿ ಭ್ರಷ್ಟಾಚಾರದಲ್ಲಿ ತೊಡಗಿದೆ. ದ್ವೇಷ, ಅಸೂಯೆ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ನಾಯಕರನ್ನು, ನನ್ನನ್ನು, ವಿನಯ್‌ರನ್ನು ನೀವು ಜೈಲಿಗೆ ಹಾಕಬಹುದು. ಜನರ ಹೃದಯದಲ್ಲಿ ನಮ್ಮನ್ನು ಅಳಿಸಿ ಹಾಕಲು ನಿಮಗೆ ಆಗುವುದಿಲ್ಲ. ನೀಚ, ಭ್ರಷ್ಟ ಸರ್ಕಾರ ಕಿತ್ತೆಸೆಯಲು ನೀವು ಮುಂದಾಗಬೇಕು ಡಿಕೆ ಶಿವಕುಮಾರ್ ಕರೆ ನೀಡಿದ್ರು.


ಕುಲಕರ್ಣಿ ಪ್ರಾಮಾಣಿಕ ರಾಜಕಾರಣಿ


ವಿನಯ್ ಕುಲಕರ್ಣಿ ಜನ್ಮದಿನ ಆಚರಣೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಕುಲಕರ್ಣಿಗೆ ರಾಜಕೀಯ ಉಜ್ವಲ ಆಗಲಿ ಎಂದು ನನ್ನ ಹಾರೈಕೆ. ಒಬ್ಬ ಸಭ್ಯ ಪ್ರಾಮಾಣಿಕ ರಾಜಕಾರಣಿ ಕುಲಕರ್ಣಿಯನ್ನು ಸಿಎಂ ಆಗಿದ್ದ ವೇಳೆ ಗುರುತಿಸಿ ಮಂತ್ರಿ ಮಾಡಿದೆ ಎಂದು ಹೇಳಿದರು.


ಇದನ್ನೂ ಓದಿ: Bengaluru: ಸ್ವರ್ಗದಂತಿದೆ ಬೆಂಗಳೂರು, ವಿಶ್ವದಲ್ಲೇ ಬೆಸ್ಟ್​ ಎಂದ ನೆಟ್ಟಿಗ: ಇಂಟರ್‌ನೆಟ್‌ನಲ್ಲಿ ಅಚ್ಚರಿಯ ಪ್ರತಿಕ್ರಿಯೆ!


ಪಂಚಮಸಾಲಿ ಸಮಾಜದಲ್ಲಿ ಭವಿಷ್ಯದ ನಾಯಕ ಎಂದು ಮಂತ್ರಿ ಮಾಡಿದೆ. ಯಾವತ್ತು ಭ್ರಷ್ಟ ಆಗಲಿಲ್ಲ, ಸರ್ಕಾರಕ್ಕೆ ಒಳ್ಳೆಯ ಹೆಸರು ತರಲು ಪ್ರಾಮಾಣಿಕವಾಗಿ ಕೆಲಸ ಮಾಡಿದರು. ಪ್ರಾಮಾಣಿಕ ರಾಜಕೀಯ ಮಾಡಿದ್ರು. ಬಿಜೆಪಿಯ ರಾಜಕೀಯ ಷಡ್ಯಂತ್ರದಿಂದ ಕಷ್ಟದ ದಿನಗಳನ್ನು ಅನುಭವಿಸಬೇಕಾಯಿತು. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಅನೇಕ ಸಲ ಹೇಳಿದ್ದಾರೆ.


ರಾಜಕೀಯ ಷಡ್ಯಂತ್ರದಿಂದ ನನ್ನನ್ನು ಆರೋಪಿ ಮಾಡುತ್ತಿದ್ದಾರೆ ಎಂದು ಹೇಳಿದ್ರು. ಬಿಜೆಪಿಯರು ಕಷ್ಟ ಕೊಡೊದು ನಿಲ್ಲಿಸಲಿಲ್ಲ. ಕಷ್ಟದ ದಿನಗಳಲ್ಲಿ ಶಿವಾಲೀಲಾ ಹಾಗೂ ಮಕ್ಕಳು ಅವರ ಪರವಾಗಿ ಕೆಲಸ ಮಾಡಿದ್ದಾರೆ. ಇದು ಮಾದರಿಯಾದ ಕೆಲಸವಾಗಿದೆ.


ಹೆಣ್ಣು ಮಕ್ಕಳು ಜೊತೆಯಲ್ಲಿ ನಿಂತಿದ್ದಾರೆ


ನನ್ನನು ಭೇಟಿಯಾದಾಗ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ವಕೀಲರನ್ನು ಭೇಟಿ ಮಾಡಿ ಕುಲಕರ್ಣಿ ಪರ ಪತ್ನಿ ಕೆಲಸ ಮಾಡಿದ್ದಾರೆ. ಕುಲಕರ್ಣಿ ಮಗಳು ವೈಶಾಲಿ ಹೈನುಗಾರಿಕೆ ಮುಂದುವರಿಸಿದ್ದಾರೆ. ಕಷ್ಟ ಕಾಲದಲ್ಲಿ ಹೆಣ್ಣು ಮಕ್ಕಳು ಜೊತೆಗೆ ನಿಂತಿದ್ದಾರೆ.


ಇದನ್ನೂ ಓದಿ: Kodagu: ಬಲಿಗಾಗಿ ಕಾಯ್ತಿದೆ ಶಿಥಿಲಗೊಂಡ ಕಣಿವೆ ತೂಗುಸೇತುವೆ; ಪ್ರತಿದಿನ 300ಕ್ಕೂ ಜನರ ಓಡಾಟ


ಅವರಿಗೆ ಬಂದ ಸ್ಥಿತಿ ಬೇರೆ ಯಾರಿಗೂ ಬರದೇ ಇರಲಿ ಎಂಬುದು ನಮ್ಮ ಹಾರೈಕೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಎದುರಿಸಬೇಕು. ಕುತುಂತ್ರದ ಮೂಲಕ ಜೈಲಿಗೆ ಕಳಸುವ ಕೆಲಸ ಯಾರು ಮಾಡಬಾರದು. ಬಿಜೆಪಿಯವರಿಗೆ ಪ್ರಜಾತಂತ್ರದ ಮೇಲೆ ಸಂವಿಧಾನದ ಮೇಲೆ ಇಲ್ಲ. ಕುತಂತ್ರ, ಷಡ್ಯಂತ್ರದಿಂದ ರಾಜಕೀಯ ಮಾಡಲು ಬಿಜೆಪಿಯವರು ನಿಸ್ಸಿಮ್ಮರು ಎಂದು ಟಿಕೀಸಿದರು.

Published by:Mahmadrafik K
First published: