ಸಿದ್ದಗಂಗಾ ಮಠಕ್ಕೆ ಅಕ್ಕಿ ಸ್ಥಗಿತ ಪ್ರಕರಣ; ವಿಧಾನಸೌಧದಲ್ಲಿ ಹಾಲಿ-ಮಾಜಿ ಮುಖಾಮುಖಿ, ಶಶಿಕಲಾ ನನ್ನ ತಂಗಿ ಎಂದ ಖಾದರ್​

ನಾವಿಬ್ಬರು ಅಣ್ಣ ತಂಗಿ. ಇಬ್ಬರದ್ದೂ ಒಂದೇ ಖಾತೆ,  ನಾನು ಈ ಹಿಂದೆ ಇದ್ದ ಕ್ವಾಟ್ರಸ್​​​ನಲ್ಲೇ ಈಗ ಶಶಿಕಲಾ ಜೊಲ್ಲೆ ಇದ್ದಾರೆ, ಎಂದು ಖಾದರ್​ ನಕ್ಕರು. ಆಗ ನಾನು ಹೊಸಬಳು, ನನಗೆ ಮಾರ್ಗದರ್ಶನ ಮಾಡಿ, ಎಂದು ಶಶಿಕಲಾ ಜೊಲ್ಲೆ ಕೇಳಿದರು.

news18-kannada
Updated:February 5, 2020, 2:26 PM IST
ಸಿದ್ದಗಂಗಾ ಮಠಕ್ಕೆ ಅಕ್ಕಿ ಸ್ಥಗಿತ ಪ್ರಕರಣ; ವಿಧಾನಸೌಧದಲ್ಲಿ ಹಾಲಿ-ಮಾಜಿ ಮುಖಾಮುಖಿ, ಶಶಿಕಲಾ ನನ್ನ ತಂಗಿ ಎಂದ ಖಾದರ್​
ಸಚಿವೆ ಶಶಿಕಲಾ ಜೊಲ್ಲೆ-ಯು.ಟಿ.ಖಾದರ್
  • Share this:
ಬೆಂಗಳೂರು(ಫೆ.05): ಕಾಂಗ್ರೆಸ್​ ಸರ್ಕಾರ ಜಾರಿಗೆ ತಂದಿದ್ದ ಅನ್ನದಾಸೋಹ ಯೋಜನೆಯನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಆರೋಪಿಸಿ ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ನಿನ್ನೆ ಮಾಜಿ ಸಚಿವ ಯು.ಟಿ.ಖಾದರ್ ಮತ್ತು ವಿ.ಎಸ್.ಉಗ್ರಪ್ಪ ಸುದ್ದಿಗೋಷ್ಟಿ ನಡೆಸಿ ದಾಖಲೆ ಸಮೇತ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು.  ಸಿದ್ದಗಂಗಾ ಮಠ ಸೇರಿ ವಿವಿಧ ಮಠಗಳಿಗೆ ಪೂರೈಕೆಯಾಗುತ್ತಿದ್ದ ಅಕ್ಕಿ ಮತ್ತು ಗೋಧಿ ಸ್ಥಗಿತಗೊಂಡಿತ್ತು. ಈ ಕುರಿತು ಸಿಎಂ ಬಿಎಸ್​ವೈ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಗರಂ ಆಗಿದ್ದರು.

ಇಂದು ವಿಧಾನಸೌಧದಲ್ಲಿ ಮಾಜಿ ಸಚಿವ ಯು.ಟಿ.ಖಾದರ್​ ಮತ್ತು ಹಾಲಿ ಸಚಿವೆ ಶಶಿಕಲಾ ಜೊಲ್ಲೆ ಮುಖಾಮುಖಿಯಾಗಿದ್ದಾರೆ. ಆಹಾರ ಮತ್ತು ನಾಗರೀಕ ಸರಬರಾಜು ಸಚಿವೆಯಾಗಿರುವ ಶಶಿಕಲಾ ಜೊಲ್ಲೆ, ಮಠಗಳಿಗೆ ಅಕ್ಕಿ, ಗೋಧಿ ಸ್ಥಗಿತ ಮಾಡಿದ್ದರ ಕುರಿತಾಗಿ ಖಾದರ್​ಗೆ ಮಾಹಿತಿ ನೀಡಿದರು. "ಕೂಡಲೇ ಫೈಲ್ ತರಿಸಿ ಕ್ಲಿಯರ್ ಮಾಡಿದ್ದೇನೆ. ಈ ಹಿಂದಿನ ಸೂಚನೆಯಂತೆ ಮುಂದುವರೆಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಇದಕ್ಕೆ ಯು.ಟಿ.ಖಾದರ್ 'ಹೌದಾ, ಆಯ್ತು ಬನ್ನಿ,' ಎಂದು ನಕ್ಕರು.

ಅನ್ನದಾಸೋಹ ಯೋಜನೆ ರದ್ದು, ಸಿದ್ಧಗಂಗಾ ಮಠ ಸೇರಿ ನೂರಾರು ಸಂಸ್ಥೆಗೆ ನೀಡಲಾಗುತ್ತಿದ್ದ ಅಕ್ಕಿ, ಗೋಧಿಗೂ ಕತ್ತರಿ; ಯು.ಟಿ.ಖಾದರ್

"ನಾವಿಬ್ಬರು ಅಣ್ಣ ತಂಗಿ. ಇಬ್ಬರದ್ದೂ ಒಂದೇ ಖಾತೆ,  ನಾನು ಈ ಹಿಂದೆ ಇದ್ದ ಕ್ವಾಟ್ರಸ್​​​ನಲ್ಲೇ ಈಗ ಶಶಿಕಲಾ ಜೊಲ್ಲೆ ಇದ್ದಾರೆ,' ಎಂದು ಖಾದರ್​ ನಕ್ಕರು. ಆಗ "ನಾನು ಹೊಸಬಳು, ನನಗೆ ಮಾರ್ಗದರ್ಶನ ಮಾಡಿ,' ಎಂದು ಶಶಿಕಲಾ ಜೊಲ್ಲೆ ಕೇಳಿದರು. ಬಳಿಕ ಯು.ಟಿ.ಖಾದರ್​ ಶಶಿಕಲಾ ಜೊಲ್ಲೆ ಕೈ ಕುಲುಕಿ ವಿಧಾನಸೌಧ ಒಳಗೆ ತೆರಳಿದರು. ಈ ವೇಳೆ, ಹಿರಿಯ ಶಾಸಕ ಸಿಎಂ ಉದಾಸಿ ಕೂಡ ಅಲ್ಲೇ ಇದ್ದರು. ಯು.ಟಿ.ಖಾದರ್ ಈ ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಆಗಿದ್ಧರು. ಈಗ ಶಶಿಕಲಾ ಜೊಲ್ಲೆ ಇದೇ ಖಾತೆ ಸಚಿವೆಯಾಗಿದ್ಧಾರೆ.

ಅನ್ನದಾಸೋಹ ಯೋಜನೆ ರದ್ದು ಮಾಡಿರುವುದು ಸರಿಯಾದ ಕ್ರಮ ಅಲ್ಲ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ಧಾರೆ. "ಸರ್ಕಾರ ಮಾಡಬೇಕಿರುವ ಕೆಲಸವನ್ನು ಎಷ್ಟೋ ಮಠಗಳು ಮಾಡುತ್ತಿವೆ. ಆ ಮಠಗಳು ಸಾವಿರಾರು ವಿದ್ಯಾರ್ಥಿಗಳಿಗೆ ಊಟ, ವಸತಿ, ಶಿಕ್ಷಣ ನೀಡುತ್ತಿವೆ.  460 ಕ್ಕೂ ಹೆಚ್ಚು ಮಠಗಳಿಗೆ ಅನ್ನ ದಾಸೋಹಕ್ಕಾಗಿ ಅಕ್ಕಿ ಮತ್ತು ಗೋಧಿಯನ್ನು ತಕ್ಷಣ ಕೊಡಬೇಕು ಎಂದು ಆಗ್ರಹಿಸುತ್ತೇನೆ. ಸಿಎಂ ಮಠಗಳ ಎಲ್ಲಾ ನೋವನ್ನು ಆಲಿಸಿ ತಕ್ಷಣ ಅಕ್ಕಿ-ಗೋಧಿಯನ್ನು ಕೊಡಬೇಕು ಎಂದು ಮನವಿ ಮಾಡುತ್ತೇನೆ. ಈ ಕ್ರಮ ಸಚಿವರ ಕಣ್ತಪ್ಪಿನಿಂದ ಆಗಿದ್ದರೂ ಸಿಎಂ ಯಡಿಯೂರಪ್ಪ ಸರಿ ಮಾಡಿದ್ದಾರೆ," ಎಂದು ಹೇಳಿದರು.

ಮಠದ ವಿದ್ಯಾರ್ಥಿಗಳ ಅನ್ನ ಕಿತ್ಕೊಂಡ ಸರ್ಕಾರ ಅನ್ನೋ ಅಪವಾದ ಬರೋಲ್ವಾ?; ಶಶಿಕಲಾ ಜೊಲ್ಲೆ ವಿರುದ್ಧ ಸಿಎಂ ಗರಂ
First published: February 5, 2020, 2:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading