ರಮೇಶ ಸೀರಿಯಸ್ ರಾಜಕಾರಣಿ ಅಲ್ಲ, ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ: ಸತೀಶ್ ಜಾರಕಿಹೊಳಿ

ನೆರೆ ಸಂತ್ರಸ್ತರ ಪರವಾಗಿ ಹೋರಾಡಲು ನಾನು ಯಾವಾಗಲು ಸಿದ್ದನಿದ್ದೇನೆ. ಸಂತ್ರಸ್ತ್ರರಿಗೆ ಸರಿಯಾಗಿ ಪರಿಹಾರ ನೀಡಿದ ನಂತರ ನಾವು ಸಮಾವೇಶವನ್ನು ಮಾಡಿ ನಮ್ಮ ಶಕ್ತಿ ಪ್ರದರ್ಶನ ತೋರಿಸುತ್ತೇವೆ ಎಂದು ಮಾಜಿ ಸಚಿವರು ಹೇಳಿದರು.

G Hareeshkumar | news18
Updated:September 7, 2019, 6:15 PM IST
ರಮೇಶ ಸೀರಿಯಸ್ ರಾಜಕಾರಣಿ ಅಲ್ಲ, ಅವರನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ: ಸತೀಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ
  • News18
  • Last Updated: September 7, 2019, 6:15 PM IST
  • Share this:
ಬೆಳಗಾವಿ(ಸೆ. 07): ಜಾರಕಿಹೋಳಿ ಕುಟುಂಬದಲ್ಲಿ ಸಹೋದರರ ನಡುವೆ ಸವಾಲ್​​ ಏರ್ಪಟ್ಟಿದ್ದು, ರಾಜಕೀಯವಾಗಿ ಎರಡು ಗುಂಪುಗಳಲ್ಲಿ ಹಂಚಿಹೋಗಿರುವ ರಮೇಶ್ ಹಾಗೂ ಸತೀಶ್ ಜಾರಕಿಹೊಳಿ ಪರಸ್ಪರ ನಿಂದನೆಯಲ್ಲಿ ತೊಡಗಿದ್ದಾರೆ. ಗೋಕಾಕ್​ನ  ಸಮಾವೇಶದಲ್ಲಿ ನಮ್ಮ ಕುಟುಂಬದಲ್ಲಿ ಕಲಹ ಉಂಟಾಗಲು ಸತೀಶ್ ಕಾರಣ ಎಂದಿದ್ದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿಗೆ ಅವರ ಸಹೋದರ ತಿರುಗೇಟು ನೀಡಿದರು.

ರಮೇಶ ಜಾರಕಿಹೊಳಿ ಸೀರಿಯಸ್ ರಾಜಕಾರಣಿ ಅಲ್ಲ. ಅವರೇನೇ ಮಾತನಾಡಿದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಈ ಹಿಂದೆ ಅನೇಕ ಬಾರಿ ಹೇಳಿದ್ದೇನೆ, ಈಗಲೂ ಅದನ್ನೆ ಹೇಳುತ್ತೇನೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಇತ್ತ, ಭೀಕರ ನೆರೆಗೆ ರಾಜ್ಯ ತತ್ತರಿಸಿಸುತ್ತಿದ್ದರೆ, ಅತ್ತ ರಮೇಶ್ ದೆಹಲಿಯಲ್ಲಿ ಲಾಬಿ ಮಾಡಲು ಠಿಕಾಣಿ ಹೂಡುತ್ತಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸೀರಿಯಸ್ ರಾಜಕಾರಣಿ ಎನ್ನಲಾಗುವುದಿಲ್ಲ. ಜನರೂ ಕೂಡ ಅವರನ್ನು ನಂಬುವುದಿಲ್ಲ ಎಂದು ರಮೇಶ್ ವಿರುದ್ದ ಸತೀಶ್ ನೇರವಾದ ಆಪಾದನೆ ಮಾಡಿದರು.

ಇದನ್ನೂ ಓದಿ : ರಮೇಶ್​ ಜಾರಕಿಹೊಳಿ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು; ಗೋಕಾಕ್​ನಲ್ಲಿಂದು ಸಂಕಲ್ಪ ಸಮಾವೇಶ; ಕ್ಷೇತ್ರಕ್ಕೆ ಮುಂದಿನ ಅಭ್ಯರ್ಥಿ ಯಾರೆಂಬ ಸುಳಿವು ಸಿಗುತ್ತಾ?

ನೆರೆ ಸಂತ್ರಸ್ತರ ಪರವಾಗಿ ಹೋರಾಡಲು ನಾನು ಯಾವಾಗಲು ಸಿದ್ದನಿದ್ದೇನೆ. ಸಂತ್ರಸ್ತ್ರರಿಗೆ ಸರಿಯಾಗಿ ಪರಿಹಾರ ನೀಡಿದ ನಂತರ ನಾವು ಸಮಾವೇಶವನ್ನು ಮಾಡಿ ನಮ್ಮ ಶಕ್ತಿ ಪ್ರದರ್ಶನ ತೋರಿಸುತ್ತೇವೆ ಎಂದು ಮಾಜಿ ಸಚಿವರು ಹೇಳಿದರು.

ಗೋಕಾಕ್​​​ನಲ್ಲಿ ನಡೆಯುವ ಉಪ ಚುನಾವಣೆಗೆ ಕಾಂಗ್ರೆಸ್​ನಿಂದ ಅಭ್ಯರ್ಥಿಯಾಗಲು  ಲಖನ್​​ ಜಾರಕಿಹೊಳಿಯ ಹೆಸರು ಸೂಚಿಸಿದ್ದೇವೆ. ಈ ಬಗ್ಗೆ ಹೈಕಮಾಂಡ್ ತೆಗೆದುಕೊಳ್ಳಬೇಕಿದೆ. ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧವಾಗಿದ್ದೇವೆ ಎಂದು ಸತೀಶ್ ಸ್ಪಷ್ಟಪಡಿಸಿದರು.

ಚಮಚಾಗಿರಿ ಮಾಡೋರಿಗೆ ಕಾಂಗ್ರೆಸ್​ನಲ್ಲಿ ಬೆಲೆ: ರಮೇಶ್ ಜಾರಕಿಹೊಳಿಇದಕ್ಕೆ ಮುನ್ನ ಗೋಕಾಕ್​ನಲ್ಲಿ ನಡೆದ ಸಮಾವೇಶದಲ್ಲಿ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. ನಾನು ಕಾಂಗ್ರೆಸ್ ಪಕ್ಷದ ಮೂಲ ಕಾರ್ಯಕರ್ತ. ಕಾಂಗ್ರೆಸ್ ನಲ್ಲಿ ಚಮಚಾಗಿರಿ ಮಾಡೋವರಿಗೆ ಬೆಲೆ ಇದೆ. ಇನ್ನೂ 10-15 ಕಾಂಗ್ರೆಸ್ ಶಾಸಕರು ನಮ್ಮ ಜತೆಗೆ ಬರೋಕೆ ಸಿದ್ದರಿದ್ದಾರೆ. ಸ್ಪೀಕರ್ ಅನರ್ಹತೆ ಮಾಡಿದ್ದು ಕಾನೂನು ಬಾಹಿರ. ದೇವರ ಆಶೀರ್ವಾದದಿಂದ ಸುಪ್ರೀಂ ಕೋರ್ಟ್​ನಲ್ಲಿ ನಮಗೆ ನ್ಯಾಯ ಸಿಗಲಿದೆ. ಚುನಾವಣೆಗೆ ನಿಲ್ಲಲು ನನಗೆ ಅವಕಾಶ ಇದೆ. ನಾನ್ಯಾರಿಗೂ ಮೋಸ ಮಾಡಿಲ್ಲ. ಸತೀಶ್ ಜಾರಕಿಹೊಳಿ ನನ್ನ ಮತ್ತು ಲಖನ್ ನಡುವೆ ಜಗಳ ತಂದಿಡುತ್ತಿದ್ದಾರೆ. ಅವರಿಗೆ ತಾಕತ್ತಿದ್ದರೆ ನನ್ನೆದುರು ಯಮಕನಮರಡಿಗೆ ಬಂದು ರಾಜಕೀಯ ಆಟವಾಡಲಿ ಎಂದು ಸವಾಲು ಹಾಕಿದ್ದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ

First published:September 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading