ನಾನು ದುರ್ಯೋಧನ ಹೌದು, ಆದ್ರೆ ದುಶ್ಯಾಸನ ಅಲ್ಲ; ಹೆಚ್​.ವಿಶ್ವನಾಥ್​ಗೆ ಸಾ.ರಾ.ಮಹೇಶ್​ ತಿರುಗೇಟು

ಶಾಸಕ ಬದುಕಿದ್ದಾಗಲೇ ಉಪ ಚುನಾವಣೆ ನಡೆಯುತ್ತಿರುವುದು ಮೈಸೂರು ಜಿಲ್ಲೆ ಇತಿಹಾಸದಲ್ಲೇ  ಮೊದಲು. ಜನ ಎಲ್ಲವನ್ನೂ ಗಮನಿಸಿದ್ದಾರೆ. ಅವರೇ ಎಲ್ಲದಕ್ಕೂ ಉತ್ತರ ನೀಡುತ್ತಾರೆ. 

Latha CG | news18-kannada
Updated:November 26, 2019, 3:39 PM IST
ನಾನು ದುರ್ಯೋಧನ ಹೌದು, ಆದ್ರೆ ದುಶ್ಯಾಸನ ಅಲ್ಲ; ಹೆಚ್​.ವಿಶ್ವನಾಥ್​ಗೆ ಸಾ.ರಾ.ಮಹೇಶ್​ ತಿರುಗೇಟು
ಸಾ.ರಾ.ಮಹೇಶ್ ಮತ್ತು ಎಚ್.ವಿಶ್ವನಾಥ್
  • Share this:
ಮೈಸೂರು(ನ.26): ನಾನು ದುರ್ಯೋಧನ ಅಂತ ಒಪ್ಪಿಕೊಳ್ಳುತ್ತೇನೆ. ಆದರೆ ನಾನು ದುಶ್ಯಾಸನ ಅಲ್ವಲ್ಲ? ಎಂದು ಮಾಜಿ ಸಚಿವ ಸಾ.ರಾ.ಮಹೇಶ್​ ಹುಣಸೂರು ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್​​ಗೆ ತಿರುಗೇಟು ನೀಡಿದ್ದಾರೆ.

ತನ್ನನ್ನು ದುರ್ಯೋಧನ ಎಂದು ಕರೆದಿದ್ದ ಹಳ್ಳಿಹಕ್ಕಿ ವಿಶ್ವನಾಥ್​ಗೆ ಸಾ.ರಾ.ಮಹೇಶ್​ ತಿರುಗೇಟು ನೀಡಿ ಮಾತನಾಡಿದರು. "ನನ್ನನ್ನು ದುರ್ಯೋಧನ ಅಂತ ಕರೆದಿದ್ದಾರೆ. ದುರ್ಯೋಧನನಿಗೂ ಒಳ್ಳೆಯ ಗುಣಗಳಿದ್ದವು. ಪುಣ್ಯಕ್ಕೆ ನನ್ನನ್ನು ದುಶ್ಯಾಸನ ಅಂತ ಕರೆದಿಲ್ಲ. ದುರ್ಯೋಧನ ಯಾರೆಂದು ಜನ ತೀರ್ಮಾನಿಸುತ್ತಾರೆ ಎಂದರು.

ನಾವಿಬ್ಬರೂ ಆಣೆ ಪ್ರಯಾಣಕ್ಕಾಗಿ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದೇ ತಪ್ಪು. ನಾನು ದೇವಸ್ಥಾನ ಒಳಗೆ ಕುಳಿತಿದ್ದು ನಿಜ‌. ಒಂದು ವೇಳೆ ಹೊರಗಡೆ ಬಂದಿದ್ದರೆ ನನ್ನ ಜತೆ ನೂರಾರು ಜನ ಕಾರ್ಯಕರ್ತರು ಇದ್ದರು. ಒಂದು ಚೂರು ಹೆಚ್ಚು ಕಡಿಮೆ ಆಗಿದ್ದರೆ ಏನು ಮಾಡಬೇಕಿತ್ತು? ಜನ ಯಾರು ಪ್ರಾಮಾಣಿಕರು, ಯಾರು ಅಪ್ರಾಮಾಣಿಕರು ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ‌. ಆದರೆ ಮುಖ್ಯಮಂತ್ರಿಗಳು ಅನರ್ಹರನ್ನೇ  ಪ್ರಾಮಾಣಿಕರು ಅಂದರೆ ಏನು ಹೇಳೋದು.? ಎಂದು ವ್ಯಂಗ್ಯ ಮಾಡಿದರು.

ಕಾಶ್ಮೀರ ಯೂನಿವರ್ಸಿಟಿ ಬಳಿ ಗ್ರೆನೇಡ್​ ದಾಳಿ; ಹಲವರಿಗೆ ಗಾಯ

ಶಾಸಕ ಬದುಕಿದ್ದಾಗಲೇ ಉಪ ಚುನಾವಣೆ ನಡೆಯುತ್ತಿರುವುದು ಮೈಸೂರು ಜಿಲ್ಲೆ ಇತಿಹಾಸದಲ್ಲೇ  ಮೊದಲು. ಜನ ಎಲ್ಲವನ್ನೂ ಗಮನಿಸಿದ್ದಾರೆ. ಅವರೇ ಎಲ್ಲದಕ್ಕೂ ಉತ್ತರ ನೀಡುತ್ತಾರೆ. ಸರ್ಕಾರ ಬೀಳಿಸಲು ಮುಂಬೈಗೆ ಹೋಗಿ ಕುಳಿತಿದ್ದರು. ಪ್ರವಾಹ ಬಂದಾಗ ರೆಸಾರ್ಟ್ ಸೇರಿಕೊಂಡರು. ಜನರ ಕಷ್ಟ ಇವರಿಗೆ ಬೇಕಿಲ್ಲ. ಈಗ ಮಂತ್ರಿ ಮಾಡುವುದೇ ನಮ್ಮ ಗುರಿ ಅಂತಿದ್ದೀರಿ. ಜನರ ಕಷ್ಟ ಕೇಳೋದು ನಿಮ್ಮ ಗುರಿ ಅಲ್ವ ? ಎಂದು ಸಿಎಂ ಯಡಿಯೂರಪ್ಪಗೆ ಸಾ.ರಾ.ಮಹೇಶ್ ಪ್ರಶ್ನಿಸಿದರು.

15ಕ್ಕೆ 15 ಸ್ಥಾನ‌ ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ‌. ಇದನ್ನು ಗಮನಿಸಿದರೆ ಇವಿಎಂ ಮೇಲೆ ಅನುಮಾನ ಶುರುವಾಗುತ್ತಿದೆ ಎಂದು ಸಾ.ರಾ.ಮಹೇಶ್​ ಶಂಕೆ ವ್ಯಕ್ತಪಡಿಸಿದರು. ಇವಿಎಂ ಬಗ್ಗೆ ಹಲವು ನಾಯಕರು ಹಿಂದೆ‌ ಹಲವು ಹೇಳಿಕೆ ನೀಡಿದ್ದಾರೆ‌. ಆದರೆ‌ ಈಗ ನನಗೂ ಸಣ್ಣದಾಗಿ ಅನುಮಾನ ಶುರುವಾಗಿದೆ‌. ಇವಿಎಂ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಆಗ್ರಹ ಮಾಡಿದರು.

ಇವರು ಗೆದ್ದಿರೋದು ಕೆಲಸದಿಂದಲ್ಲ, ಕುಕ್ಕರ್ ಮಿಕ್ಸಿ ಕೊಟ್ಟು; ಸುಧಾಕರ್​ ವಿರುದ್ಧ ಎಚ್​ಡಿಕೆ ವಾಗ್ದಾಳಿಜಿ.ಟಿ.ದೇವೇಗೌಡ ನಮ್ಮ ನಾಯಕರು. ಅವರು ನಮ್ಮ ಜತೆಯಲ್ಲೇ ಇದ್ದಾರೆ. ಈಗಾಗಲೇ ಅವರು ನಮ್ಮ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಮುಖಂಡರಿಗೆ ದೂರವಾಣಿ ಮೂಲಕ ಜೆಡಿಎಸ್ ಪಕ್ಷದ ಪರ ಕೆಲಸ ಮಾಡುವಂತೆ ಹೇಳಿದ್ದಾರೆ ಎಂದರು.

First published: November 26, 2019, 3:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading