ಮಾಜಿ ಸಿಎಂ ದೇವರಾಜ್ ಅರಸು ಮಗಳ ಸೀರೆಯನ್ನು ಎಳೆಸಿದ್ದ ವ್ಯಕ್ತಿ ವಿಶ್ವನಾಥ್: ಸಾ.ರಾ.ಮಹೇಶ್​ ಗಂಭೀರ ಆರೋಪ

ನೆರೆ ಹಾವಳಿಯಿಂದ ಜನರು ಸಂಕಷ್ಟದಲ್ಲಿದ್ದರು. ಆದರೆ ‌ವಿಶ್ವನಾಥ್ ಬಾಂಬೆಗೆ ಹೋಗಿ ಕುಳಿತರು. ನೀವು ಸ್ವಾಮಿ ರಾಕ್ಷಸರು. ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಬಾಂಬೆಯಲ್ಲಿ ಕುಳಿತ ನೀವು ಮತ ಕೇಳ್ತೀರಲ್ಲ ನಾಚಿಕೆಯಾಗಲ್ವಾ...?  ಆಣೆ ಪ್ರಮಾಣ ಮಾಡಲು ಚಾಮುಂಡಿ ಬೆಟ್ಟಕ್ಕೆ ಕರೆದರು. ನಿನ್ನಂಥ ಆಯೋಗ್ಯನನ್ನು ಶಾಸಕನನ್ನಾಗಿ ಮಾಡಿದೆ- ಸಾ.ರಾ.ಮಹೇಶ್​

ಹೆಚ್. ವಿಶ್ವನಾಥ್- ಸಾರಾ ಮಹೇಶ್

ಹೆಚ್. ವಿಶ್ವನಾಥ್- ಸಾರಾ ಮಹೇಶ್

  • Share this:
ಮೈಸೂರು(ಡಿ.02): ಮಾಜಿ ಸಚಿವ ಸಾ.ರಾ.ಮಹೇಶ್​ ಮತ್ತು ಹುಣಸೂರು ಬಿಜೆಪಿ ಅಭ್ಯರ್ಥಿ ಹೆಚ್​​.ವಿಶ್ವನಾಥ್​ ನಡುವೆ ಆಗಾಗ್ಗೆ ವಾಗ್ವಾದಗಳು ನಡೆಯುತ್ತಲೇ ಇರುತ್ತದೆ. ಇಂದು ಹುಣಸೂರಿನಲ್ಲಿ ನಡೆದ ಜೆಡಿಎಸ್ ಪಕ್ಷದ ಬಹಿರಂಗ​ ಸಮಾವೇಶದಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್​ ಮತ್ತೆ ಹಳ್ಳಿ ಹಕ್ಕಿ ವಿಶ್ವನಾಥ್​​ಗೆ ಕುಟುಕಿದ್ದಾರೆ. ಅಷ್ಟೇ ಅಲ್ಲದೇ ಹೊಸ ಬಾಂಬ್ ಸಿಡಿಸಿದ್ಧಾರೆ.


"ಮಾಜಿ ಸಿಎಂ ದೇವರಾಜ್ ಅರಸು ಅವರ ಮಗಳ ಸೀರೆಯನ್ನು ಎಳೆಸಿದ್ದ ವ್ಯಕ್ತಿ ವಿಶ್ವನಾಥ್. ಕೆ.ಆರ್ ನಗರದ ಐಬಿಯಲ್ಲಿ ದೇವರಾಜ್ ಅರಸ್ ಅವರ ಮಗಳ‌ ಸೀರೆ ಎಳೆಸಿದ್ದರು," ಎಂದು ಸಾ.ರಾ.ಮಹೇಶ್​​ ಹೆಚ್​. ವಿಶ್ವನಾಥ್​​ ವಿರುದ್ಧ ಗಂಭೀರ ಆರೋಪ ಮಾಡಿದರು.

ಮುಂದುವರೆದ ಅವರು, "ಇದು ಅಂತಿಂಥ ಹಳ್ಳಿಹಕ್ಕಿಯಲ್ಲ. ಚಳಿಗಾಲಕ್ಕೆ ಒಂದು ಗೂಡು , ಮಳೆಗಾಲಕ್ಕೆ ಒಂದು ಗೂಡು, ಬೇಸಿಗೆ ಕಾಲಕ್ಕೆ ಒಂದು ಗೂಡು ಹುಡುಕುವ ಹಳ್ಳಿಹಕ್ಕಿ.  ಕಾಂಗ್ರೆಸ್​​ಗೆ ವಿಷ, ಜೆಡಿಎಸ್ ಗೆ ಬೆನ್ನಿಗೆ ಚೂರಿ ಹಾಕುವ ಹಳ್ಳಿಹಕ್ಕಿ ಇದು," ಎಂದು ಸಾ.ರಾ.ಮಹೇಶ್​ ಟೀಕಿಸಿದರು.

ಬೈಬಲ್ ಅಥವಾ ರಾಮಾಯಣದಲ್ಲಿ ಜಿಡಿಪಿ ಇಲ್ಲ, ಭವಿಷ್ಯದಲ್ಲಿ ಅದು ಮುಖ್ಯವೂ ಆಗುವುದಿಲ್ಲ; ಬಿಜೆಪಿ ಸಂಸದ ನಿಶಿಕಾಂತ್ ದುಬೆ

"ಕೃತಜ್ಞತೆ ಇಲ್ಲದ ವ್ಯಕ್ತಿ ವಿಶ್ವನಾಥ್ ಅವರನ್ನು ಪಕ್ಷಕ್ಕೆ ಸೇರಿಸಬೇಡ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೂ ಸೇರಿಸಿಕೊಂಡೆ. ಹಿಂದುಳಿದ ನಾಯಕನೆಂದು ಪಕ್ಷಕ್ಕೆ ಸೇರಿಸಿಕೊಂಡೆ. ಆದರೂ ಅವರನ್ನ ನಾವು ಕೂಡವಳಿ ಮಾಡಿಕೊಂಡೆವು. ಕಾಂಗ್ರೆಸ್ ನವರು ಅವರ ನೋವು ಹೇಳಿದ್ದಾರೆ. ಉಪಚುನಾವಣೆ ಬಂದ ಬಳಿಕ ಯಡಿಯೂರಪ್ಪನವರಿಗೆ ಎಲ್ಲವೂ ಗೊತ್ತಾಗುತ್ತೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಹವಾಸ ಬೇಡ ಎಂದೆ. ಆದರೆ ದೇವೇಗೌಡರು ಬಿಜೆಪಿ ಕೋಮುವಾದಿ ಪಕ್ಷ ಬೇಡ ಎಂದರು," ಎಂದು ಮೈತ್ರಿ ಸರ್ಕಾರದ ದಿನಗಳನ್ನು ನೆನೆಸಿಕೊಂಡರು.

ಇದೇ ವೇಳೆ, ಸಾ.ರಾ. ಮಹೇಶ್​ ವಿಶ್ವನಾಥ್​ ಅವರನ್ನು ರಾಕ್ಷಸನಿಗೆ ಹೋಲಿಸಿ ಮಾತನಾಡಿದರು. ನಮ್ಮ ಪಕ್ಷದ ಶಕ್ತಿ ನಿಷ್ಟಾವಂತ ಕಾರ್ಯಕರ್ತರು ನಿಮ್ಮ ಪಕ್ಷದಲ್ಲಿ ತಿಂದು, ತೇಗಿ, ದಪ್ಪ ಆಗಿ ಹೊರ ಹೋಗುತ್ತಾರೆ. ಕೆ.ಆರ್. ನಗರದಲ್ಲಿ ನನ್ನಿಂದ ಸೋತ ಒಬ್ಬ ರಾಕ್ಷಸನನ್ನು ಈ ಕ್ಷೇತ್ರಕ್ಕೆ ಕರೆ ತಂದಿದ್ದೆವು. ಕಾಂಗ್ರೆಸ್​ನವರು ತಿಪ್ಪೆಗೆ ಎಸೆದಿದ್ದರು.
ಆದರೂ ಆ ವ್ಯಕ್ತಿಯನ್ನ ನಾವು ಕರೆದುಕೊಂಡು ಬಂದು ಅಭ್ಯರ್ಥಿಯಾಗಿ ಮಾಡಿದ್ದೆವು.  ಆದರೆ ಕುಮಾರಸ್ವಾಮಿ‌ ಸರ್ಕಾರವನ್ನು ರಾಕ್ಷಸ ಸರ್ಕಾರ ಅಂತಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಹೊಸ ಸರ್ಕಾರವಲ್ಲ, ಫಲಿತಾಂಶದ ಬಳಿಕ ಕಾಂಗ್ರೆಸ್​ ಕಚೇರಿಗೆ ದೀಪ ಹಚ್ಚೋರೂ ಗತಿಯಿರಲ್ಲ; ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯ

"ನೆರೆ ಹಾವಳಿಯಿಂದ ಜನರು ಸಂಕಷ್ಟದಲ್ಲಿದ್ದರು. ಆದರೆ ‌ವಿಶ್ವನಾಥ್ ಬಾಂಬೆಗೆ ಹೋಗಿ ಕುಳಿತರು. ನೀವು ಸ್ವಾಮಿ ರಾಕ್ಷಸರು. ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. ಬಾಂಬೆಯಲ್ಲಿ ಕುಳಿತ ನೀವು ಮತ ಕೇಳ್ತೀರಲ್ಲ ನಾಚಿಕೆಯಾಗಲ್ವಾ...?  ಆಣೆ ಪ್ರಮಾಣ ಮಾಡಲು ಚಾಮುಂಡಿ ಬೆಟ್ಟಕ್ಕೆ ಕರೆದರು. ನಿನ್ನಂಥ ಆಯೋಗ್ಯನನ್ನು ಶಾಸಕನನ್ನಾಗಿ ಮಾಡಿದೆ," ಎಂದು ಕಿಡಿಕಾರಿದರು.

"ಬಿಜೆಪಿ ನಾಯಕರು ಒಂದೊಂದು‌ ಓಟಿಗೆ 2 ಸಾವಿರ ಕೊಡುತ್ತಿದ್ದಾರೆ ಎಂದು  ಬಿಜೆಪಿ ‌ವಿರುದ್ದ ಗಂಭೀರ ಆರೋಪ ಮಾಡಿದರು. ಮಿಸ್ಟರ್ ಕ್ಲೀನ್ , ಸರಕಾರ ಬಿಡುಗಡೆ ಮಾಡಿದ ಅನುದಾನದಲ್ಲಿ ಕಂಟ್ರ್ಯಾಕ್ಟರ್ ಅಂತೀರಾ ಎಷ್ಟು ಹಣ ಪಡೆದಿದ್ದೀರಾ ? ನಾನು ರಿಯಲ್ ಎಸ್ಟೇಟ್ ಮಾಡ್ತಿನಿ ...‌ನೀನು ಏನ್ ಮಾಡ್ತಿಯಾ ? ಅವರ ಜೀವನದಲ್ಲಿ ಎಂದು ನೋಡಿರದ ಹಣವನ್ನು ಹೇಗೆ ಈಗ ನೋಡ್ತಿದ್ದಾರೆ. ಮಿಸ್ಟರ್ ಕ್ಲೀನ್ ಇದಕ್ಕೆ ಉತ್ತರ ಕೊಡಿ," ಎಂದು ಆಗ್ರಹಿಸಿದರು.

ಬಿಜೆಪಿ ಸೋಲಿಸಲು ಜೆಡಿಎಸ್​​ನವರು ಕಾಂಗ್ರೆಸ್ ಗೆ ಮತ ಹಾಕೋಣಾ ಅಂತಾ ಹೇಳ್ತಾ ಇರೋರು ಪಕ್ಷ ದ್ರೋಹಿಗಳು. ಪಕ್ಷ ದ್ರೋಹಿಗಳ‌ ಮಾತು ಕೇಳಬೇಡಿ ಎಂದರು.

ನನ್ನ ಬಳಿ ಹಣ ಇದ್ದರಲ್ಲವೇ ಜನರಿಗೆ ಹಂಚೋದು; ಆರೋಪಕ್ಕೆ ಹೆಚ್​.ವಿಶ್ವನಾಥ್​​ ತಿರುಗೇಟು

First published: