ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ (Belagavi Politics) ಮಾಜಿ ಸಚಿವ ರಮೇಶ್ ಜಾರಕಿಹೊಳಿ (Former Minister Ramesh Jarkiholi) ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Congress MLA Laxmi Hebbalkar) ನಡುವೆ ಮಾತಿನ ಮಲ್ಲಯುದ್ಧ ಜೋರಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಮತ್ತೆ ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ. ಕಳೆದ 3 ತಿಂಗಳ ಹಿಂದೆ ಮೈದಾನ ಖುಲ್ಲಾ ಹೈ ಅಂತ ಹಿರೋಯಿನ್ ತರ ಕೈ ಮಾಡಿದ್ದರು. ಮೈದಾನ ಖಾಲಿ ಇದೆ ಯಾರ್ ಬೇಕಾದ್ರೂ ಬರ್ರಿ ಅಂದಿದ್ರು. ನಾ ಬಂದಿದ್ದೇನೆ, ಈಗ್ಯಾಕೆ ನಾಯಿ ತರಹ ಒದ್ದಾಡ್ತಿಯಾ ತಾಯಿ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ 20 ವರ್ಷ ರಮೇಶ್ ಜಾರಕಿಹೊಳಿ ಜೊತೆ ಇದ್ದು ಲಾಭ ಪಡೆದು ಕೈ ಕೊಟ್ರು ಎಂಬ ಮಾಜಿ ಶಾಸಕ ಸಂಜಯ್ ಪಾಟೀಲ್ (Former MLA Sanjay Patil) ಹೇಳಿಕೆಗೆ ಮಾಜಿ ಸಚಿವರು ಪ್ರತಿಕ್ರಿಯಿಸಿದರು. ಲಾಭ ಅಂದ್ರೆ ಏನು ಅರ್ಥ ಆಗಲಿಲ್ಲ. ನಾವು ಆಗ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದೇವು. ನಾವು ಎಲ್ಲಾ ಇದ್ದಾಗ ಒಳ್ಳೆಯ ರೀತಿ ಇದ್ದೇವು ಎಂದು ಕಾಂಗ್ರೆಸ್ ಜೊತೆಗಿನ ಒಡನಾಟ ಹಂಚಿಕೊಂಡರು.
ಡಿಕೆ ಶಿವಕುಮಾರ್ ಇರಬಹುದು, ಲಕ್ಷ್ಮಿ ಹೆಬ್ಬಾಳ್ಕರ್ ಇರಬಹುದು. ಆಗ ನಾವೆಲ್ಲರೂ ಒಂದಾಗಿ ಕೆಲಸ ಮಾಡಿದ್ದೇವೆ, ಇಲ್ಲ ಎಂದು ಹೇಳಲ್ಲ. ಅವಾಗ ಒಳ್ಳೆಯ ರೀತಿ ಇದ್ದು ಪಕ್ಷ ಕಟ್ಟಿ ಕಾಂಗ್ರೆಸ್ ಕಟ್ಟಡ ಮಾಡಲಾಗಿತ್ತು. ನಾವು ಆಗ ಒಳ್ಳೆಯ ರೀತಿ ಪಕ್ಷ ಕಟ್ಟಿದ್ದೆವು ಎಂದರು.
2018ರಲ್ಲಿ ಬೆಳಗಾವಿಯಲ್ಲಿ 8 ಸೀಟ್ ತಂದಿದ್ವಿ, ಇನ್ನೂ ಮೂರು ಬರುತ್ತಿದ್ದವು. ಆದ್ರೆ ಅಂದು ಕಾಂಗ್ರೆಸ್ ತೆಗೆದುಕೊಂಡ ನಿರ್ಧಾರದಿಂದ ಸವದತ್ತಿ, ಕುಡಚಿ, ರಾಯಬಾಗದಲ್ಲಿ ಸೋಲಬೇಕಾಯ್ತು. ಅದು ನಮ್ಮ ಹೋರಾಟ ಅಲ್ಲ. ಪಕ್ಷದ ಕೆಲಸ ಅಂತ ಮಾಡಲಾಗಿತ್ತು. ಪಾಪ ಆ ಹೆಣ್ಣು ಮಗಳ ವಿರುದ್ಧ ಏನು ಹೋರಾಟ ಎಂದು ಲೇವಡಿ ಮಾಡಿದರು.
ರಮೇಶ್ ಜಾರಕಿಹೊಳಿ ಮೆಂಟಲ್ ಕೇಸ್
ಇಂದು ಬೆಳಗಾವಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಯಾರಿಗೆ ಟಿಕೆಟ್ ಕೊಡಬೇಕು ಅನ್ನೋದನ್ನ 7 ನೇ ತಾರೀಖು ಸ್ಕ್ರೀನಿಂಗ್ ಕಮಿಟಿಯಲ್ಲಿ ತೀರ್ಮಾನ ಮಾಡಲಾಗುತ್ತದೆ.ಯಾರಿಗೆ ಕಿವಿಯಲ್ಲಿ ಹೇಳಬೇಕು ಅನ್ನೋದನ್ನ ಹೇಳ್ತಿನಿ ಎಂದರು.
ಇಡೀ ರಾಜ್ಯದಲ್ಲಿ ಬದಲಾವಣೆ ತರಬೇಕು. ಪರಿಶುದ್ಧವಾದ ರಾಜಕಾರಣ ನಾವು ಮಾಡಬೇಕು. ನಾವು ಯಾವುದೇ ಮೆಂಟಲ್ಕೇಸ್ಗಳಿಗೆ ಉತ್ತರ ಕೊಡಲು ಆಗುವುದಿಲ್ಲ. ಒತ್ತಡದಲ್ಲಿ ಇರೋರಿಗೆ ನಾನು ಉತ್ತರ ಕೊಡಲ್ಲ ಎಂದು ಹೇಳಿ ರಮೇಶ್ ಜಾರಕಿಹೊಳಿ ಅವರನ್ನು ಮೆಂಟಲ್ ಎಂದು ಕರೆದರು.
ಸಂಜಯ್ ಪಾಟೀಲ್ ಹೇಳಿದ್ದೇನು?
ಲಕ್ಷ್ಮಿ ಹೆಬ್ಬಾಳ್ಕರ್ (MLA Laxmi Hebbalkar) ಅವರನ್ನು ರಾಮಾಯಣದ ಕೈಕೇಯಿ (Kaike) ಹೋಲಿಸಿ ಸಂಜಯ್ ಪಾಟೀಲ್ ವಾಗ್ದಾಳಿ ನಡೆಸಿದ್ದರು. ನಾನು ಶ್ರೀರಾಮಚಂದ್ರ ಅಲ್ಲ ಸಾಮಾನ್ಯ ವ್ಯಕ್ತಿ. ನಾನು ಲಕ್ಷ್ಮಿ, ಸರಸ್ವತಿ, ದುರ್ಗಾ ಮಾತೆಯ ಪೂಜೆ ಮಾಡುತ್ತೇನೆ. ರಾಮಾಯಣದ ಕೈಕೇಯಿಯನ್ನು ಯಾರೂ ಪೂಜೆ ಮಾಡಲ್ಲ. ಕೈಕೇಯಿ ಎರಡನೇ ಹೆಸರು ಲಕ್ಷ್ಮಿ ಹೆಬ್ಬಾಳ್ಕರ್. ಅಂದು ಕೈಕೆಯಿಂದಲೇ ರಾಮಾಯಣ ಆಯ್ತು. ಇಂದು ಈ ಕೈಕೆಯಿಂದ ರಮೇಶ್ ಜಾರಕಿಹೊಳಿ ಮನೆತನ (Ramesh Jarkiholi) ಹಾಳಾಗಿದೆ ಎಂದು ಆರೋಪಿಸಿದ್ದರು.
ರಮೇಶ್ ಜಾರಕಿಹೊಳಿ ಜೊತೆ ಲಕ್ಷ್ಮಿ ಹೆಬ್ಬಾಳ್ಕರ್ 20 ವರ್ಷ ಬಹಳ ಒಳ್ಳೆಯ ಸಂಬಂಧ ಹೊಂದಿದ್ದರು. ಈ ಮಾತನ್ನು ಬೇಕಾದ್ರೆ ಒತ್ತು ಕೊಟ್ಟು ಹೇಳುತ್ತೇನೆ. ರಮೇಶ್ ಜಾರಕಿಹೊಳಿ ಅವರ ಕೈ ಹಿಡಿದು ಶಾಸಕಿಯಾಗಿ, ಇಂದು ಹಾಗೇ ಹೀಗೆ ಅಂತ ಮಾತನಾಡುತ್ತೀರಿ. ರಮೇಶ್ ಜಾರಕಿಹೊಳಿ ಇಲ್ಲ ಅಂದರೆ ಶಾಸಕಿ ಅಲ್ಲ ಗ್ರಾಪಂ ಸದಸ್ಯೆ ಸಹ ಆಗುತ್ತಿರಲಿಲ್ಲ ಎಂದು ಸಂಜಯ್ ಪಾಟೀಲ್ ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ