• Home
  • »
  • News
  • »
  • state
  • »
  • BJP: ಎಸ್​ಟಿ ಸಮಾವೇಶಕ್ಕೆ ರಮೇಶ್ ಜಾರಕಿಹೊಳಿ ಗೈರು; ಭಾಷಣಗಳ ಸಮಾವೇಶವೇ ಎಂದ ಸಿದ್ದರಾಮಯ್ಯ

BJP: ಎಸ್​ಟಿ ಸಮಾವೇಶಕ್ಕೆ ರಮೇಶ್ ಜಾರಕಿಹೊಳಿ ಗೈರು; ಭಾಷಣಗಳ ಸಮಾವೇಶವೇ ಎಂದ ಸಿದ್ದರಾಮಯ್ಯ

ರಮೇಶ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ

ಮಂತ್ರಿ ಸ್ಥಾನ ಸಿಗದ ಹಿನ್ನೆಲೆ ಮುನಿಸಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಸಮುದಾಯದ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

  • Share this:

ಇಂದು ಬಳ್ಳಾರಿಯಲ್ಲಿ (Ballary) ಬಿಜೆಪಿಯಿಂದ ಎಸ್​​ಟಿ ಸಮಾವೇಶ (BJP ST Program) ನಡೆಯುತ್ತಿದೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. 100 ಎಕರೆ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದ್ದು, 500 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್​ಗೆ ವ್ಯವಸ್ಥೆ (Parking Facility) ಕಲ್ಪಿಸಲಾಗಿದೆ. ಇನ್ನೂ ಸಮಾವೇಶಕ್ಕೆ ಬಂದ ಜನರಿಗೆ ಊಟಕ್ಕಾಗಿ 380 ಕೌಂಟರ್​​ನಲ್ಲಿ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಿಜೆಪಿ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (BJP President JP Nadda), ಬಿಜೆಪಿ ರಾಜ್ಯ ಉಸ್ತುವಾರಿ ನಾಯಕ ಅರುಣ್ ಸಿಂಗ್ (Arun Singh), ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ(Former CM BS Yediyurappa) ಹಾಗೂ ಹಿರಿಯ ನಾಯಕರೆಲ್ಲಾ ಭಾಗಿಯಾಗಲಿದ್ದಾರೆ.. ಸಮಾವೇಶದ ಉಸ್ತುವಾರಿಯನ್ನ ಸಚಿವ ಶ್ರೀರಾಮುಲು (Minister Sriramulu) ವಹಿಸಿಕೊಂಡಿದ್ದಾರೆ.


ಕಾರ್ಯಕ್ರಮದಿಂದ ದೂರ ಉಳಿದ ರಮೇಶ್ ಜಾರಕಿಹೊಳಿ


ಮಂತ್ರಿ ಸ್ಥಾನ ಸಿಗದ ಹಿನ್ನೆಲೆ ಮುನಿಸಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಸಮುದಾಯದ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಚುನಾವಣೆಗೆ ಇನ್ನು ನಾಲ್ಕೈದು ತಿಂಗಳು ಇರೋ ಹಿನ್ನೆಲೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಬಿಜೆಪಿಯಲ್ಲಿ ಒತ್ತಡ ಹೆಚ್ಚಾಗುತ್ತದೆ. ಆದ್ರೆ ಬಿಜೆಪಿ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಇದುವರೆಗೂ ಗ್ರೀನ್ ಸಿಗ್ನಲ್ ನೀಡಿಲ್ಲ.


ನಮ್ಮ ಸಮುದಾಯದವರು ಬಿಜೆಪಿಯನ್ನ ಬೆಂಬಲಿಸಲಿ


ನಮ್ಮ ಜೀವನ ಇರೋವರೆಗೂ ಬಿಜೆಪಿ ಮರೆಯೋದಿಲ್ಲ. ನಮಗೆ ಮರೆಯಲಾಗದಂತಹ ಕೆಲಸವನ್ನು ಬೊಮ್ಮಾಯಿ ಅಣ್ಣನವರು, ಮಾಡಿಕೊಟ್ಟಿದ್ದಾರೆ. ನಿಮಗೆ ನಮ್ಮ ಬೆಂಬಲ ಇರುತ್ತದೆ. ಮೀಸಲಾತಿಯ ಕ್ರೆಡಿಟ್ ಬೊಮ್ಮಾಯಿ, ಯಡಿಯೂರಪ್ಪ, ನಡ್ಡಾ ಅವರಿಗೆ ಹೋಗಬೇಕು. ನಮ್ಮ ಜೀವನ ಇರೋವರೆಗೂ ಇವರನ್ನು ನಾವು ಮರೆಯಬಾರದು. ನಮ್ಮ ಸಮುದಾಯದ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಶಾಸಕ ರಾಜೂಗೌಡ ಕರೆ ನೀಡಿದರು.


former minister ramesh jarkiholi skip sc st rally in ballary
ರಮೇಶ್ ಜಾರಕಿಹೊಳಿ


ಬಿಜೆಪಿ ಸಮಾವೇಶಕ್ಕೆ ಸಿದ್ದರಾಮಯ್ಯ ಕಿಡಿ


ನಮ್ಮ ಸರ್ಕಾರ ಜಾರಿಗೆ ತಂದಿದ್ದ  ಎಸ್‌ಸಿಪಿ/ಟಿಎಸ್‌ಪಿ ಯೋಜನೆಯ ಕ್ರಾಂತಿಕಾರಿ ಕಾಯ್ದೆಯನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೆ ತರುವ ಮೂಲಕ ಪರಿಶಿಷ್ಟ ಪಂಗಡದ 'ನವಶಕ್ತಿ ಸಮಾವೇಶ'ದ ಕಾಳಜಿ ಪ್ರಾಮಾಣಿಕವಾಗಿದೆ ಎನ್ನುವುದನ್ನು ಬಿಜೆಪಿ ಸಾಬೀತುಪಡಿಸಲಿ.


ರಾಜ್ಯದಲ್ಲಿ ಶೇಕಡಾ 24.1ರಷ್ಟಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಯೋಜನಾ ವೆಚ್ಚದ ಶೇಕಡಾ 24.1ರಷ್ಟು ಹಣವನ್ನು ಕಾನೂನುಬದ್ದವಾಗಿ ಮೀಸಲಿಟ್ಟಿದ್ದು ನಮ್ಮ ಬದ್ದತೆ. ನಿಮ್ಮ ಬದ್ದತೆ ಏನು? ಭಾಷಣಗಳ ಸಮಾವೇಶವೇ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.


ಇದನ್ನೂ ಓದಿ:  Voters Data Steal: ಮತದಾರರ ಮಾಹಿತಿ ಕನ್ನ; ಕಾಂಗ್ರೆಸ್ ಆರೋಪಕ್ಕೆ 5 ಅಂಶಗಳಲ್ಲಿ ಸಿಎಂ ತಿರುಗೇಟು


ಯೋಜನೆಯ ಹಣ ಅನ್ಯದೇಶಕ್ಕೆ ಬಳಕೆ


2008-09 ರಿಂದ 2012-13ರ ಅವಧಿಯ 5 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಪರಿಶಿಷ್ಟಜಾತಿ/ ಪಂಗಡದ ಕಲ್ಯಾಣಕ್ಕೆ ನೀಡಿದ್ದ ಹಣ ಕೇವಲ ರೂ.22,261 ಕೋಟಿ. ನಮ್ಮ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ನೀಡಿದ್ದು ರೂ.88,395 ಕೋಟಿ. ಇದು ನಮ್ಮ ಕಾಳಜಿ. ಎಸ್ ಸಿಪಿ/ಟಿಎಸ್ ಪಿ ಕಾಯ್ದೆಯಡಿ ಯೋಜನೆಯ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುವುದು ಅಪರಾಧ ಎಂದು ಕಿಡಿಕಾರಿದ್ದಾರೆ.


ಬಿಜೆಪಿ ಸರ್ಕಾರ 2021-22ರ  ನಿಗದಿತ ರೂ.26,695 ಕೋಟಿ ಹಣದಲ್ಲಿ ರೂ.7,885 ಕೋಟಿ ಹಣವನ್ನು ಮೂಲಸೌಕರ್ಯ ಅಭಿವೃದ್ದಿಗೆ ವರ್ಗಾವಣೆ ಮಾಡಿರುವುದು ದಲಿತರಿಗೆ ಬಗೆದಿರುವ ದ್ರೋಹ.


former minister ramesh jarkiholi skip sc st rally in ballary
ಮಾಜಿ ಸಿಎಂ ಸಿದ್ದರಾಮಯ್ಯ


ಬಿಜೆಪಿಯಿಂದ ದಲಿತ ಸಮುದಾಯದ ಬೆನ್ನಿಗೆ ಇರಿದಿದೆ


ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಎಸ್​​ಸಿ ಎಸ್ ಪಿ/ಟಿಎಸ್​​ಪಿ ಯೋಜನೆಗೆ ಮೀಸಲಿರಿಸಿದ್ದ ಹಣದಲ್ಲಿ ರೂ.7885.32 ಕೋಟಿಯನ್ನು ನೀರಾವರಿ, ನಗರಾಭಿವೃದ್ದಿ ಮತ್ತು ಮೂಲಸೌಕರ್ಯ ಅಭಿವೃದ್ದಿಗೆ  ವ್ಯಯ ಮಾಡಿರುವ ಬಿಜೆಪಿ ಸರ್ಕಾರ ದಲಿತ ಸಮುದಾಯದ ಬೆನ್ನಿಗೆ ಇರಿದಿದೆ ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ:  Mangaluru Blast: ವಿಳಾಸ, ಆಧಾರ್ ಸಂಖ್ಯೆ ಸತ್ಯ, ಫೋಟೋ ನಕಲಿ; ರಿಯಲ್ ಪ್ರೇಮ್​ರಾಜ್​ ತಂದೆಯ Exclusive ಹೇಳಿಕೆ


2012-13ರಲ್ಲಿ ಬಿಜೆಪಿ ಸರ್ಕಾರ ಎಸ್‌ಸಿ/ಎಸ್‌ಟಿ  ಕಲ್ಯಾಣಕ್ಕೆ ನೀಡಿದ್ದು ಕೇವಲ ರೂ.7200 ಕೋಟಿ. 2014-15ರಲ್ಲಿ ನಮ್ಮ ಸರ್ಕಾರ ನೀಡಿದ್ದ ಹಣ ರೂ.15,832 ಕೋಟಿ. 2018-19ರಲ್ಲಿ ನಮ್ಮ ಕೊನೆಯ ಬಜೆಟ್ ನಲ್ಲಿ ಎಸ್​​ಸಿ ಎಸ್ ಪಿ/ಟಿಎಸ್ ಪಿಗೆ ನೀಡಿದ್ದ ಹಣ ರೂ.29,691 ಕೋಟಿ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

Published by:Mahmadrafik K
First published: