• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ramesh Jarkiholi: ಅಮಿತ್ ಶಾ ಭೇಟಿಯಾದ ರಮೇಶ್ ಜಾರಕಿಹೊಳಿ; ಮಂತ್ರಿ ಸ್ಥಾನ ಬೇಡ ಎಂದ ಈಶ್ವರಪ್ಪ

Ramesh Jarkiholi: ಅಮಿತ್ ಶಾ ಭೇಟಿಯಾದ ರಮೇಶ್ ಜಾರಕಿಹೊಳಿ; ಮಂತ್ರಿ ಸ್ಥಾನ ಬೇಡ ಎಂದ ಈಶ್ವರಪ್ಪ

ರಮೇಶ್ ಜಾರಕಿಹೊಳಿ. ಕೆಎಸ್ ಈಶ್ವರಪ್ಪ

ರಮೇಶ್ ಜಾರಕಿಹೊಳಿ. ಕೆಎಸ್ ಈಶ್ವರಪ್ಪ

ಜಾರಕಿಹೊಳಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅಮಿತ್ ಶಾ, ಈ ಬಗ್ಗೆ ಕಾನೂನಾತ್ಮಕ ಮಾಹಿತಿ ಪಡೆದು, ಮುಂದಿನ ಕ್ರಮ ಮಾಡ್ತೀವಿ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

  • Share this:

ನವದೆಹಲಿ: ಸಿಡಿ ಪ್ರಕರಣವನ್ನು (CD Case) ತಾರ್ಕಿಕ ಅಂತ್ಯಕ್ಕೆ ಕೊಂಡ್ಯೊಯಲು ನಿರ್ಧರಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Former Minister Ramesh Jarkiholi) ನಿನ್ನೆ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ಜೊತೆ ಮಾತನಾಡಿರುವ ಅಮಿತ್ ಶಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಬೆಳಗ್ಗೆಯಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Union Minister Pralhad Joshi) ಜೊತೆಯಲ್ಲಿರುವ ರಮೇಶ್ ಜಾರಕಿಹೊಳಿ ಇತರೆ ಮುಖಂಡರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಇನ್ನು ಎರಡು ದಿನ ನವದೆಹಲಿಯಲ್ಲಿ ರಮೇಶ್ ಜಾರಕಿಹೊಳಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.


ಅಮಿತ್ ಶಾ ಭೇಟಿ ವೇಳೆ ರಮೇಶ್ ಜಾರಕಿಹೊಳಿ ಅವರಿಗೆ ರಾಜ್ಯ ನಾಯಕರು ಸಾಥ್ ನೀಡಿದ್ದಾರೆ. ಸುಮಾರು 20 ನಿಮಿಷ ಮಾತುಕತೆ ನಡೆಸಿರುವ ರಮೇಶ್ ಜಾರಕಿಹೊಳಿ, ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಹ ನೀಡುತ್ತೇನೆ. ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.


ಜಾರಕಿಹೊಳಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅಮಿತ್ ಶಾ, ಈ ಬಗ್ಗೆ ಕಾನೂನಾತ್ಮಕ ಮಾಹಿತಿ ಪಡೆದು, ಮುಂದಿನ ಕ್ರಮ ಮಾಡ್ತೀವಿ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.


Former minister met amit shah in delhi mrq
ರಮೇಶ್ ಜಾರಕಿಹೊಳಿ, ಮಾಜಿ ಸಚಿವ


ನನಗೆ ಮಂತ್ರಿ ಸ್ಥಾನ ಬೇಡ


ನನಗೆ ಮಂತ್ರಿ ಸ್ಥಾನ ಬೇಡ ಎಂದು ಸಿಎಂ ಬಸವರಾಜ್ ಬೊಮ್ಮಾಯಿಗೆ (CM Basavaraj Bommai) ಹೇಳಿದ್ದೇನೆ. ಗುತ್ತಿಗೆದಾರ ಸಂತೋಷ್ ಪಾಟೀಲ್ (Contractor Santosh Patil Case) ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತ ಯಾರಿಗೂ ಕನಸು ಬಿದ್ದಿರಲಿಲ್ಲ. ಅವರು ಮಲಗಿದ್ದು ಒಂದು ಕಡೆ ಪತ್ರ ಸಿಕ್ಕಿದ್ದು ಮತ್ತೊಂದು ಕಡೆ. ಆದ್ರು ನನಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.


ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಸಂಪುಟ ವಿಸ್ತರಣೆ ಮಾಡುವಂತೆ ಸಿಎಂಗೆ ಮನವಿ ಮಾಡಿದೆ. ಸಿಎಂ ಸಹ ಮಂತ್ರಿ ಮಾಡ್ತೀನಿ ಅಂತ ಭರವಸೆ ನೀಡಿದ್ರು. ಆದ್ರೆ ಈಗ ಅವರಿಗೆ ಏನೇನು ಸಮಸ್ಯೆ ಇದೆಯೋ ಅನ್ನೋದು ಗೊತ್ತಿಲ್ಲ. ಸಚಿವ ಸ್ಥಾನ ನನಗೆ ಬೇಡ ಎಂದು ಹೇಳಿ ಬಂದಿದ್ದೇನೆ  ಎಂದರು. ಈ ಹಿಂದೆ ಸಹ ಹೇಳಿದ್ದು ಇವತ್ತು ಸಿಎಂ ಭೇಟಿ ಮಾಡಿದಾಗಲೂ ಹೇಳಿ ಬಂದಿದ್ದೇನೆ ಎಂದರು.




ಗುಜರಾತ್ ಮಾಡೆಲ್ ಬಗ್ಗೆ ಮಾರ್ಮಿಕ ಮಾತು


ಗುಜರಾತ್​​ಗೆ ಗುಜರಾತ್ ಮಾಡೆಲ್ (Gujarat Model). ಕರ್ನಾಟಕಕ್ಕೆ ಕರ್ನಾಟಕ ಮಾಡೆಲ್. ಗುಜರಾತ್ ಗೆದ್ದ ಬಳಿಕ ಗುಜರಾತ್ ಮಾಡೆಲ್ ಅಂತ ಹೇಳಿದ್ರು. ನಾವು ಕರ್ನಾಟಕ ಗೆದ್ದ ಬಳಿಕ ಕರ್ನಾಟಕ ಮಾಡೆಲ್ ಎಂದು ಹೇಳ್ತೀವಿ. ಯಾವ ರೀತಿ ಗೆದ್ದಿದ್ದೇವೆ. ಯಾವ ರೀತಿ ಸರ್ಕಾರ ಮಾಡ್ತೀವಿ ಅಂತ ಹೇಳ್ತೀವಿ. ಇದು ಮುಂದೆ ಬರುವ ರಾಜ್ಯಗಳ ಚುನಾವಣೆಗೆ ಮಾದರಿ ಆಗುತ್ತೆ ಎಂದು ಹೇಳಿದರು.


ಒಂದೂ ಸಿಡಿ ರಿಲೀಸ್ ಆಗಿಲ್ಲ


ಸಿಡಿ ಬಗ್ಗೆ ಬರೀ ಮಾತಾಡಿದ್ದೇ ಆಗಿದೆ. ಒಂದನ್ನಾದ್ರೂ ರಿಲೀಸ್ ಮಾಡಿ ತೋರಿಸಿ ಅಂತ ಜಗದೀಶ್ ಶೆಟ್ಟರ್ (Former CM Jagadish Shettar ) ಮಾರ್ಮಿಕವಾಗಿ ನುಡಿದಿದ್ದಾರೆ.


ಇದನ್ನೂ ಓದಿ:   Pramod Mutalik: ಈ ಬಾರಿ ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ಚುನಾವಣೆಗೆ ನಿಲ್ತಾರೆ, ಬಿಜೆಪಿ ಅಭ್ಯರ್ಥಿ ಹಾಕಬಾರದು: ಶ್ರೀರಾಮ ಸೇನೆ


ಹುಬ್ಬಳ್ಳಿಯಲ್ಲಿ ನ್ಯೂಸ್ 18 ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿ.ಡಿ ರಾಜಕಾರಣ (Karnataka CD Politics) ಜೋರಾಗಿದೆ. ಒಬ್ಬರ ಬಗ್ಗೆ ಮತ್ತೊಬ್ಬರು ಮಾತಾಡುವುದು ಹೆಚ್ಚಾಗಿದೆ. ಆದರೆ ಇದುವರೆಗೂ ಒಂದು ಸಿ.ಡಿಯೂ ರಿಲೀಸ್ ಆಗಿಲ್ಲ ಎಂದಿದ್ದಾರೆ.

Published by:Mahmadrafik K
First published: