ಮೈಸೂರಿನಲ್ಲಿ ಮತದಾರರ ಪಟ್ಟಿಗೆ ಸೇರಲು 11 ಸಾವಿರ ನಕಲಿ ಅರ್ಜಿಗಳ ಭರ್ತಿ: ಮಾಜಿ ಸಚಿವ ರಾಮದಾಸ್ ಗಂಭೀರ ಆರೋಪ


Updated:February 14, 2018, 11:47 PM IST
ಮೈಸೂರಿನಲ್ಲಿ ಮತದಾರರ ಪಟ್ಟಿಗೆ ಸೇರಲು 11 ಸಾವಿರ ನಕಲಿ ಅರ್ಜಿಗಳ ಭರ್ತಿ: ಮಾಜಿ ಸಚಿವ ರಾಮದಾಸ್ ಗಂಭೀರ ಆರೋಪ
ಮಾಜಿ ಸಚಿವ ಎಸ್.ಎ. ರಾಮದಾಸ್

Updated: February 14, 2018, 11:47 PM IST
-ನ್ಯೂಸ್ 18 ಕನ್ನಡ

ಮೈಸೂರು(ಫೆ.14): ಮೈಸೂರಿನಲ್ಲಿ ಮತ್ತೆ ಅಕ್ರಮ ಮತದಾರ ಪಟ್ಟಿ ವಿಷಯ ಸದ್ದು ಮಾಡುತ್ತಿದೆ. ಒಬ್ಬನೇ ವ್ಯಕ್ತಿಯಿಂದ ಬರೋಬ್ಬರಿ 11 ಸಾವಿರ ಅರ್ಜಿ ಭರ್ತಿ ಮಾಡಿದ್ದು, ಅದೇ ವ್ಯಕ್ತಿ ಬೂತ್ ಮಟ್ಟದ ಚುನಾವಣಾ ಅಧಿಕಾರಿಯ ನಕಲು ಸಹಿ ಮಾಡಿದ್ದಾರೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಎಸ್.ಎ.ರಾಮದಾಸ್ ದಾಖಲೆ ಸಮೇತ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನ ಕುವೆಂಪು ನಗರದ ಜ್ಯೋತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಬೂತ್ ಕಚೇರಿಗೆ ದಾಳಿ ನಡೆಸಿದ ರಾಮದಾಸ್. ಮೈಸೂರಿನ 161 ಬೂತ್​ಗಳಲ್ಲಿ ಅಕ್ರಮ ನಡೆದಿದೆ. ಸ್ಥಳಿಯ ಶಾಸಕರ ಒತ್ತಡದಿಂದ ಕೆಲ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಸಿಎಂ ಸಿದ್ದರಾಮಯ್ಯನವರ ನಿರ್ದೇಶನದಂತೆ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ.

ಕೆ.ಆರ್.ಕ್ಷೇತ್ರದಲ್ಲಿ ಸ್ವಂತ ಮನೆ ಇರುವ ಮತದಾರರ ಹೆಸರುಗಳು ನಾಪತ್ತೆಯಾಗಿದ್ದು, ದುರುದ್ದೇಶಪೂರ್ವಕವಾಗಿ ನಕಲಿ ಅರ್ಜಿ ಭರ್ತಿ ಮಾಡಿ ನಕಲಿ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ಮತದಾರ ಸಲ್ಲಿಕೆ ಮಾಡದಿದ್ದರೂ ಕಾಂಗ್ರೆಸ್​ಗೆ ಸಂಬಂಧಿಸಿದ ವ್ಯಕ್ತಿ ಅರ್ಜಿ ಭರ್ತಿ ಮಾಡಿ ಈ ಅಕ್ರಮ ಎಸಗುತ್ತಿದ್ದಾನೆ. ಬಿಜೆಪಿಗೆ ಮತ ಹಾಕುವ ಮನೆಗಳನ್ನೆ ಟಾರ್ಗೆಟ್ ಮಾಡಲಾಗಿದ್ದು, ಮತದಾರರಿಗೆ ತಿಳಿಯದೇ ಅವರ ಹೆಸರಲ್ಲಿ ಸ್ಥಳಾಂತರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಬೂತ್ ಮಟ್ಟದ ಚುನಾವಣಾಧಿಕಾರಿ‌ ಸಹಿ ನಕಲಾಗಿರುವುದು ಬಿಎಲ್‌ಒಗಳಿಗೆ ಗೊತ್ತಿಲ್ಲ ಎಂದು ರಾಮದಾಸ್ ಆರೋಪಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಮೈಸೂರಿನಲ್ಲಿ ಮಾಜಿ ಸಚಿವ ರಾಮದಾಸ್ ಹೇಳಿದ್ಧಾರೆ.
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ