ಮೋದಿ ಟ್ರಂಪ್ ಹೆಂಡತಿಗೆ ವಿಶ್ ಮಾಡ್ತಾರೆ, ಆದ್ರೆ ಸಂತ್ರಸ್ತೆ ಬಗ್ಗೆ ಮಾತನಾಡಲ್ಲ; ಮಾಜಿ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಸತ್ತು ಹೋಗಿದೆ. ಗೂಂಡಾಗಳು ಸೇರಿರುವ ಸರ್ಕಾರ ಅಲ್ಲಿದೆ. ಯೋಗಿ ಆದಿತ್ಯನಾಥ ಸರ್ಕಾರ, ಸರ್ಕಾರವೇ ಅಲ್ಲ-ರಾಮಲಿಂಗಾರೆಡ್ಡಿ

ಮಾಜಿ ಸಚಿವ ರಾಮಲಿಂಗಾರೆಡ್ಡಿ

ಮಾಜಿ ಸಚಿವ ರಾಮಲಿಂಗಾರೆಡ್ಡಿ

 • Share this:
  ಬೆಂಗಳೂರು(ಅ.05): ಉತ್ತರ ಪ್ರದೇಶದಲ್ಲಿ ದಲಿತ ಯುವತಿ ಮೇಲಿನ ಅತ್ಯಾಚಾರ ಹಾಗೂ ರಾಷ್ಟ್ರೀಯ ಕಾಂಗ್ರೆಸ್​​ ನಾಯಕರ ಮೇಲಿನ ಹಲ್ಲೆಯನ್ನು ಖಂಡಿಸಿ ಕೇಂದ್ರದ ಬಿಜೆಪಿ ಹಾಗೂ ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್​ಭವನದಲ್ಲಿ ಇಂದು ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ನೂರಾರು ಕೈ ಕಾರ್ಯಕರ್ತರು ಭಾಗಿಯಾಗಿದ್ದಾರೆ.  ಈ ವೇಳೆ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದರು. ಉತ್ತರ ಪ್ರದೇಶ ಸರ್ಕಾರ ಸರ್ಕಾರವೇ ಅಲ್ಲ, ಓರ್ವ ಯುವತಿ ಮೇಲೆ ಅತ್ಯಾಚಾರ ನಡೆದರೆ ಕೇಸು ದಾಖಲಿಸಲ್ಲ. ಬಿಜೆಪಿ ಮುಖಂಡರೇ ಅತ್ಯಾಚಾರದ ಆರೋಪಿಗಳು ಎಂದು ಕಿಡಿಕಾರಿದರು.

  ಮುಂದುವರೆದ ಅವರು, ಅತ್ಯಾಚಾರಕ್ಕಿಂತ ಕೇಸು ಮುಚ್ಚಿ ಹಾಕಿದ್ದು ಇನ್ನಷ್ಟು ಹೇಯ ಕೃತ್ಯ.  ಘಟನೆ ನಡೆದಿಲ್ಲ ಎಂಬುದನ್ನ ಪೊಲೀಸರು ಸಾಧಿಸಲು ಹೊರಟಿದ್ದರು.  ಆದರೆ ಸಂತ್ರಸ್ತೆ ಹೇಳಿಕೆ ನೀಡಿದ್ದರಿಂದ ಹೊರ ಬಂತು ಎಂದರು.

  Coronavirus India Updates: ದೇಶದಲ್ಲಿ ಮುಂದುವರೆದ ಕೊರೋನಾ ಹಾವಳಿ; ನಿನ್ನೆ 74,442 ಕೇಸ್ ಪತ್ತೆ

  ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಸಹ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.  ಮೋದಿ ಟ್ರಂಪ್ ಪತ್ನಿಗೆ ವಿಶ್ ಮಾಡುತ್ತಾರೆ. ಆದರೆ ಸಂತ್ರಸ್ತೆ ಬಗ್ಗೆ ಮಾತನಾಡುವುದಿಲ್ಲ ರಾಜ್ಯ ಬಿಜೆಪಿ ನಾಯಕರು ಈವರೆಗೂ ಮಾತನಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಸತ್ತು ಹೋಗಿದೆ. ಗೂಂಡಾಗಳು ಸೇರಿರುವ ಸರ್ಕಾರ ಅಲ್ಲಿದೆ. ಯೋಗಿ ಆದಿತ್ಯನಾಥ ಸರ್ಕಾರ, ಸರ್ಕಾರವೇ ಅಲ್ಲ. ಕೇಂದ್ರ ಇರಲಿ, ರಾಜ್ಯ ಯಾಕೆ ಮಾತನಾಡಿಲ್ಲ? ಸಿಟಿ ರವಿ, ಶೋಭಾ ಕರಂದ್ಲಾಜೆ ಮಾತನಾಡಿಲ್ಲ. ಸಂತ್ರಸ್ತರ ಮನೆ ಮುಂದೆ ಹೋದಾಗ ರಾಹುಲ್ ಗಾಂಧಿ ಹಾಗೂ  ಪ್ರಿಯಾಂಕಾ ಗಾಂಧಿಯವರನ್ನು ತಳ್ಳಿಯೇ ಬಿಟ್ಟರು. ಇನ್ನು, ಪೊಲೀಸರು ನಿಷ್ಪಕ್ಷವಾಗಿ ಕೆಲಸ ಮಾಡಲು ಬಿಟ್ಟಿಲ್ಲ ಎಂದು ಹರಿಹಾಯ್ದರು.

  ಇನ್ನು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಮಾಡಿದ ವಿಚಾರವಾಗಿ, ಕಾಂಗ್ರೆಸ್ ಪ್ರಭಾವಿಗಳ ಮನೆ ಮೇಲೆ ದಾಳಿ ನಡೆಯುತ್ತಿದೆ. ಸಿಬಿಐಗೆ ಕರ್ನಾಟಕದ ಭ್ರಷ್ಟಾಚಾರ ಕಾಣುತ್ತಿಲ್ವಾ..? ಸಿಎಂ  ಕುಟುಂಬದ ಭ್ರಷ್ಟಚಾರ ಸಿಬಿಐ ಗಮನಕ್ಕೆ ಬರ್ತಾ ಇಲ್ವಾ.? ಕೊರೋನಾ ಸಮಯದಲ್ಲಿ ನಡೆದಿರುವ ಭ್ರಷ್ಟಾಚಾರ ಗೊತ್ತಿಲ್ವಾ? ಇದು ಖಂಡನೀಯ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು.
  Published by:Latha CG
  First published: