Karnataka BJP: ಮಂತ್ರಿ ಮಾಡ್ತೀನಿ ಅಂತ ಮಾತು ತಪ್ಪಿದ್ರಿ, ಆರ್ ಶಂಕರ್ ಆಕ್ರೋಶ; ಇತ್ತ ಸಿಎಂ ಕಿವಿಮಾತು!

ನನ್ನ ಮುಂದಿನ ರಾಜಕೀಯ ಭವಿಷ್ಯ ಏನು ಆಗಬೇಕು? ನೀವು ಮಾಡಿದ್ದು ಸರಿನಾ? ನನಗೆ ನಂಬಿಸಿ ಮೋಸ ಮಾಡಿದರಲ್ಲ? ಎಂದು ಬಿಜೆಪಿ ನಾಯಕರ ವಿರುದ್ಧ ಆರ್.ಶಂಕರ್ ವಾಗ್ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿಎಂ ಬೊಮ್ಮಾಯಿ, ಆರ್ ಶಂಕರ್

ಸಿಎಂ ಬೊಮ್ಮಾಯಿ, ಆರ್ ಶಂಕರ್

  • Share this:
ಬಿಜೆಪಿ (Karnataka BJP) ಮಂಗಳವಾರ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿದೆ. ಸಭೆಯಲ್ಲಿ ಕಾಂಗ್ರೆಸ್ (Congress) ತಂತ್ರಗಳಿಗೆ ಮರುತಂತ್ರಗಳ ಚರ್ಚೆ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈ ವೇಳೆ ಸಚಿವ ಸಂಪುಟ ವಿಸ್ತರಣೆ (Cabinet Expansion) ಆಗದ ವಿಚಾರದಲ್ಲಿ ಬಿಜೆಪಿ ನಾಯಕರ (BJP Leaders) ಮೇಲೆ ಮಾಜಿ ಸಚಿವ ಆರ್.ಶಂಕರ್ (Former Minister R Shankar) ಸಿಟ್ಟು ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಜೆಪಿ ಶಾಸಕಾಂಗ ಸಭೆಯಲ್ಲಿ (BJP CLP Meeting) ಏರುಧ್ವನಿಯಲ್ಲಿ ಆರ್.ಶಂಕರ್ ಮಾತನಾಡಿದ್ದಾರೆ ಎನ್ನಲಾಗಿದೆ.

ನನ್ನನ್ನು ನಂಬಿಸಿ ದ್ರೋಹ ಮಾಡಿದ್ರಿ. ಮಂತ್ರಿ ಮಾಡ್ತೀನಿ ಅಂತಾ ನನ್ನನ್ನು ಕರೆದುಕೊಂಡು ಬಂದ್ರಿ, ಆ‌ ನಂತರ ಸ್ವಲ್ಪ ದಿನ ಮಂತ್ರಿ ಮಾಡಿ, ಆ ನಂತರ ನನ್ನನ್ನು ಕೈ ಬಿಟ್ರಿ. ನನ್ನ ಏನು ಅಂತಾ ನೀವು ಮಾತಾಡಿಸಿಲ್ಲ. ನನ್ನ ಕ್ಷೇತ್ರದಲ್ಲಿ ಜನರು ದುಡ್ಡು ತಗೊಂಡು ಹೋದ ಅಂತಾ ಪ್ರಚಾರ ಮಾಡ್ತಿದ್ದಾರೆ. ಇದರಿಂದ ನನ್ನ ಮುಂದಿನ ರಾಜಕೀಯ ಭವಿಷ್ಯ ಏನು ಆಗಬೇಕು? ನೀವು ಮಾಡಿದ್ದು ಸರಿನಾ? ನನಗೆ ನಂಬಿಸಿ ಮೋಸ ಮಾಡಿದರಲ್ಲ? ಎಂದು ಬಿಜೆಪಿ ನಾಯಕರ ವಿರುದ್ಧ ಆರ್.ಶಂಕರ್ ವಾಗ್ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಶಾಸಕರಿಗೆ ಸಿಎಂ ಕಿವಿಮಾತು

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಆರೋಪಗಳಿಗೆ ಹೇಗೆ ಉತ್ತರ ಕೊಡಬೇಕೆಂದು ಚರ್ಚೆ ನಡೆಸಿದರು. ಈ ವೇಳೆ ಅನಗತ್ಯ ವಿವಾದಕ್ಕೀಡಾಗುವ ಶಾಸಕರಿಗೆ ಸಿಎಂ ಹಾಗೂ ಕಟೀಲ್ ಕಿವಿಮಾತು ಹೇಳಿದರು. ಚುನಾವಣೆ ಹತ್ತಿರ ಬರ್ತಿದೆ, ಹೆಸರು ಕೆಡಿಸ್ಕೋಬೇಡಿ. ವೈಯಕ್ತಿಕವಾಗಿ, ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರ ತರುವಂತ ಎಡವಟ್ಟುಗಳನ್ನು ಮಾಡಿಕೊಳ್ಳಬೇಡಿ. ಕ್ಷೇತ್ರಗಳಲ್ಲಿ ವಿರೋಧಿಗಳ ಸಂಚಿನ ಬಗ್ಗೆ ಎಚ್ಚರಿಕೆ ವಹಿಸಿ ಅಂತಾ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.

Former Minister R Shankar angry on BJP Leaders mrq
ಸಿಎಂ ಬೊಮ್ಮಾಯಿ


ಇನ್ನು ಕ್ಷೇತ್ರದ ಜನರಿಗೆ ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ಮನವರಿಕೆ ‌ಮಾಡಿಕೊಡಿ, ಕಾರ್ಯಕರ್ತರ ವಿಶ್ವಾಸ ಉಳಿಸಿಕೊಳ್ಳಿ ಅಂತಾ ಬಿಜೆಪಿ ಶಾಸಕರಿಗೆ  ಸೂಚನೆ ನೀಡಲಾಗಿದೆಯಂತೆ.

ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಭಿಯಾನ

ಬಿಜೆಪಿ ಅಂದ್ರೆ ಭ್ರಷ್ಟಾಚಾರ ಎಂದು ಕಾಂಗ್ರೆಸ್​ ವಿಭಿನ್ನ ರೀತಿಯ ಅಭಿಯಾನ ಮಾಡುತ್ತಿದೆ. ನಿನ್ನೆ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ, ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ್ದು, ಭ್ರಷ್ಟಾಚಾರ, ಕಮಿಷನ್ ಬಿಜೆಪಿಗೆ ಆಹಾರ ಎಂಬ ಸಾಂಗ್ ರಿಲೀಸ್ ಮಾಡಲಾಯಿತು.

ಇದನ್ನೂ ಓದಿ:  Transgender Reservations: ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ: ಆರಗ ಜ್ಞಾನೇಂದ್ರ

ಬೊಮ್ಮಾಯಿಗೆ ಧಮ್ ಬಂದಿದೆ ಅಂತ ಡಿಕೆಶಿ ಟಾಂಗ್!

ಸರ್ಕಾರ ಉಳಿಸಿಕೊಳ್ಳುವುದಕ್ಕಾಗಿ ಕಳಂಕಿತರನ್ನು ಕಾಪಾಡುತ್ತಿದ್ದೀರಿ. ಈಗ ನಮ್ಮ ಮೇಲೂ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ಏನೋ ಧಮ್ ಬಗ್ಗೆ ಮಾತನಾಡುತ್ತಿದ್ದರು. 3 ವರ್ಷದಿಂದ ತನಿಖೆ ಮಾಡಿಸದೇ ಏನು ಮಾಡುತ್ತಿದ್ದರು. ಈಗ ಏನೋ ಸಿಎಂ ಬೊಮ್ಮಾಯಿಗೆ ಧಮ್​ ಬಂದು ಬಿಟ್ಟಿದೆ ಎಂದು ಡಿ.ಕೆ.ಶಿವಕುಮಾರ್ ತೀವ್ರ ವಾಗ್ದಾಳಿ ಮಾಡಿದರು.

Former Minister R Shankar angry on BJP Leaders mrq
ಕಾಂಗ್ರೆಸ್ ನಾಯಕರು


ಕಾಂಗ್ರೆಸ್ ಶಾಸಕರಿಗೆ ಖಡಕ್ ಸಂದೇಶ

ಇಂದು ಮೂರನೇ ದಿನದ ವಿಧಾನಸಭೆ ಕಲಾಪ ಮತ್ತಷ್ಟು ರಂಗೇರಲಿದೆ. ಸದನದೊಳಗೆ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲು ನಿರ್ಧರಿಸಿದೆ. ಈ ಬಗ್ಗೆ ನಿನ್ನೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಿದ್ದು, ಸದನದಲ್ಲಿ ಬಿಜೆಪಿ ವಿರುದ್ಧ ಹೋರಾಟ ಮಾಡುವಂತೆ ತಮ್ಮ ಶಾಸಕರಿಗೆ ಖಡಕ್​​ ಸಂದೇಶ ನೀಡಲಾಗಿದೆ.

ಖಾಸಗಿ ಹೋಟೆಲ್​​​ನಲ್ಲಿ ನಡೆದ ಸಭೆಯಲ್ಲಿ ಮಲ್ಲಿಕಾರ್ಜುನ​ ಖರ್ಗೆ, ಸುರ್ಜೆವಾಲ, ಸಿದ್ದರಾಮಯ್ಯ, ಡಿಕೆಶಿ ಹಾಗೂ ಕಾಂಗ್ರೆಸ್​​ನ ಬಹುತೇಕ ಎಲ್ಲಾ MLAಗಳು, MLCಗಳು ಭಾಗಿಯಾಗಿದ್ರು. ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಅಭಿಯಾನ ಆರಂಭಿಸಿರೋ ಕಾಂಗ್ರೆಸ್, ಎಲ್ಲರಿಗೂ ಬಿಜೆಪಿ ಭ್ರಷ್ಟಾಚಾರದ ರೇಟ್ ​ಕಾರ್ಡ್​ ಕೊಟ್ಟಿದ್ದಾರೆ.

ಇದನ್ನೂ ಓದಿ:  Karnataka Politics: ಭ್ರಷ್ಟಾಚಾರದಿಂದ ಸರ್ಕಾರ ಗಬ್ಬೆದ್ದು ನಾರುತ್ತಿದೆ ಎಂದ ಸಿದ್ದು, ಬೊಮ್ಮಾಯಿಗೆ ಧಮ್ ಬಂದಿದೆ ಅಂತ ಡಿಕೆಶಿ ಟಾಂಗ್!

PSI ಹಗರಣ, 40 ಪರ್ಸೆಂಟ್ ಕಮಿಷನ್ ಸೇರಿ ಹಲವು ವಿಚಾರಗಳ ಬಗ್ಗೆ ಕಾಂಗ್ರೆಸ್ ಇಂದು ಧ್ವನಿ ಎತ್ತಲಿದೆ.. ಇನ್ನು ಇದೇ ಸಭೆಯಲ್ಲಿ ರಾಹುಲ್​ ಭಾರತ್​​ ಜೋಡೋ ಯಾತ್ರೆ ಬಗ್ಗೆಯೂ ಚರ್ಚೆ ಮಾಡಲಾಯ್ತು. 2023ರ ಚುನಾವಣೆವರೆಗೂ ಬಿಜೆಪಿ ವಿರುದ್ಧ ಭ್ರಷ್ಟಾಚಾರ ಅಭಿಯಾನ ಮಾಡುವಂತೆ ಸೂಚನೆ ಕೊಡಲಾಯ್ತು.
Published by:Mahmadrafik K
First published: