ಬಿಜೆಪಿ ಸಿದ್ಧಾಂತ ಒಪ್ಪದವರಿಗೆ, ಪ್ರಶ್ನೆ ಮಾಡುವವರಿಗೆ ದೇಶದ್ರೋಹಿ ಪಟ್ಟ; ಮಾಜಿ ಸಚಿವ ಪ್ರಿಯಾಂಕ್​​​ ಖರ್ಗೆ ಕಿಡಿ

ಗೋಡ್ಸೆ ದೇಶ ಪ್ರೇಮಿ ಎಂದು ಸಂಸತ್ತಿನಲ್ಲಿ ಸಂಸದರೊಬ್ಬರು ಅಂದಿದ್ದರು. ಹಾಗಾದರೆ ಗಾಂಧಿ‌ ಏನು?. ನಮ್ಮ ಸಿದ್ಧಾಂತ ಒಪ್ಪಿಲ್ಲ ಅಂದರೆ ಅವರಿಗೆ ದೇಶದ್ರೊಹಿ, ದೇಶ ವಿರೋಧಿ ಪಟ್ಟ ಕಟ್ಟುತ್ತಾರೆ‌.

news18-kannada
Updated:March 7, 2020, 3:08 PM IST
ಬಿಜೆಪಿ ಸಿದ್ಧಾಂತ ಒಪ್ಪದವರಿಗೆ, ಪ್ರಶ್ನೆ ಮಾಡುವವರಿಗೆ ದೇಶದ್ರೋಹಿ ಪಟ್ಟ; ಮಾಜಿ ಸಚಿವ ಪ್ರಿಯಾಂಕ್​​​ ಖರ್ಗೆ ಕಿಡಿ
ಮಾಜಿ ಸಚಿವ ಪ್ರಿಯಾಂಕ್​​​ ಖರ್ಗೆ
  • Share this:
ಬೆಂಗಳೂರು(ಮಾ.06) : ಈಗ ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು ಆತಂಕದಲ್ಲಿ ಇದ್ದಾರೆ. ಕೆಲವರು ತಮ್ಮ ಸಿದ್ಧಾಂತವನ್ನು ದೇಶದ ಮೇಲೆ ಹೇರುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ನಿಲುವಾಗಿದೆ. ಸ್ವಾತಂತ್ರ್ಯ ಹೋರಾಟ ವೇಳೆ ಇವರು ಇರಲಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಇವರ್ಯಾರು ಬೆವರು ಸುರಿಸಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್​​​​ ಖರ್ಗೆ ಬಿಜೆಪಿ ನಾಯಕರು ವಿರುದ್ಧ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಯಾರು ದೇಶದ ಐಕ್ಯತೆ, ಸಮಾನತೆ ಇಷ್ಟ ಪಡುವುದಿಲ್ಲ. ಯಾರು ಸಮಾಜದಲ್ಲಿ ಜಾತಿ ವ್ಯವಸ್ಥೆ ತರುತ್ತಿದ್ದಾರೆ. ಯಾರು ಧರ್ಮ ರಾಜಕಾರಣ ಮಾಡುತ್ತಾರೆ ಅವರು ದೇಶ ವಿರೋಧಿಗಳು ಎಂದು ಅಂಬೇಡ್ಕರ್ ಹೇಳಿದ್ದರು. ಜಾರ್ಖಂಡ್​ನಲ್ಲಿ 3000 ರೈತರ ಮೇಲೆ ದೇಶ ವಿರೋಧಿ ಕೇಸ್ ಹಾಕಲಾಗಿತ್ತು‌. ಕಳೆದ ಎರಡು ವರ್ಷದಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ, ಮಾನವ ಹಕ್ಕು ಹೋರಾಟಗಾರರ ಮೇಲೆ, ಅಲ್ಪಸಂಖ್ಯಾತರ ಮೇಲೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ ಎಂದರು.

ಗೋಡ್ಸೆ ದೇಶ ಪ್ರೇಮಿ ಎಂದು ಸಂಸತ್ತಿನಲ್ಲಿ ಸಂಸದರೊಬ್ಬರು ಅಂದಿದ್ದರು. ಹಾಗಾದರೆ ಗಾಂಧಿ‌ ಏನು?. ನಮ್ಮ ಸಿದ್ಧಾಂತ ಒಪ್ಪಿಲ್ಲ ಅಂದರೆ ಅವರಿಗೆ ದೇಶದ್ರೊಹಿ, ದೇಶ ವಿರೋಧಿ ಪಟ್ಟ ಕಟ್ಟುತ್ತಾರೆ‌. ಇದು ಸರಿಯಲ್ಲ. ದೇಶದ್ರೋಹಿಗಳು ಯಾರು ಎಂಬುದು ಈಗ ಮಾಧ್ಯಮಗಳ ಪ್ರೈಂ ಟೈಮ್ ನಲ್ಲಿ ನಿರ್ಧಾರ ಆಗುತ್ತದೆ. ಸರ್ಕಾರದ ವಿರುದ್ಧ ಮಾತನಾಡುವವರನ್ನು ದೇಶದ್ರೋಹಿಗಳು ಎಂದು ಕರೆಯಲಾಗುತ್ತದೆ. ಪ್ರಶ್ನೆ ಮಾಡಿದರೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತದೆ  ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನ ಹಾಗೂ ಅಂಬೇಡ್ಕರ್ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಾರೆ. ಸಂವಿಧಾನದ ವಿರುದ್ಧ ಮಾತನಾಡಿರುವವರು ಎಲ್ಲರೂ ಒಂದೇ ಸಂಘದಿಂದ ಬಂದಿರುವವರು. ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನದ ವಿರುದ್ಧ ಮಾತನಾಡುತ್ತಾರೆ. ಆದರೆ ನನಗೆ ಅನಿಸುವ ಪ್ರಕಾರ ಅದರಲ್ಲಿ ಅವರದ್ದೇನು ತಪ್ಪಿಲ್ಲ . ಹಿಂದಿನಿಂದಲೂ ಕೆಲ ಸಂಘ‌ ಸಂಸ್ಥೆಗಳ ಪ್ರಮುಖರು ಸಂವಿಧಾನದ ವಿರುದ್ಧ ಮಾತನಾಡುತ್ತಾ ಬರುತ್ತಿದ್ದಾರೆ. ಸಂವಿಧಾನ ವಿರೋಧಿಸುತ್ತಿರುವವರು ಪ್ರಭಾವಿಗಳು. ಸಂಘಟನೆಗೆ ಸೇರಿದ ಪ್ರಮುಖರಾಗಿದ್ದಾರೆ ಎಂದರು.

ಇದನ್ನೂ ಓದಿ : ಕೇವಲ ಹೆಸರು ಬದಲಾವಣೆಯಿಂದ ಕಲ್ಯಾಣ ಕರ್ನಾಟಕದ ಭವಿಷ್ಯ ಬದಲಾಗುವುದಿಲ್ಲ; ಅನುದಾನ ನೀಡದ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

ಇವತ್ತು ನಾವು ಏನೂ‌ ಮಾತಾಡೋ ಹಾಗೇ ಇಲ್ಲ. ಮಾತಾಡಿದರೆ ಅಸಹನೆ, ಅಡೆತಡೆ ಹಾಕುತ್ತಾರೆ.  ಇದೇ ಪರಿಸ್ಥಿತಿ ಇವತ್ತು ದೇಶದಲ್ಲಿರೋದು ಎಂದು  ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.

ದೇಶದಲ್ಲಿ ಪ್ರಜಾಪ್ರಭುತ್ವ ಇದೆ ಅನ್ನೋದೇ ಅನುಮಾನವಾಗಿದೆ. ಕಾಶ್ಮೀರದಲ್ಲಿ ನಾಯಕರು ಅರೆಸ್ಟ್ ಆಗಿದ್ದಾರೆ. ಅಸ್ಸಾಂನಲ್ಲಿ ಹೊರಗಿನವರಿಗೆ ಪ್ರವೇಶ ಇಲ್ಲ. ಸರ್ಕಾರದ ವಿರುದ್ಧ ಸುದ್ದಿ ಬರೆದ ಪತ್ರಕರ್ತರ ಬಂಧನ ಆಗಗುತ್ತಿದೆ.  ಸಂಸತ್, ವಿಧಾನಸಭೆಗಳಲ್ಲಿ ಮಾಧ್ಯಮಗಳನ್ನು ಬಹಿಷ್ಕರಿಸಲಾಗಿದೆ. ಇದು ಪ್ರಜಾಪ್ರಭುತ್ವನಾ? ಹೀಗಾದ್ರೆ ಪ್ರಜಾಪ್ರಭುತ್ವ ಉಳಿಯುತ್ತಾ? ಎಂದು ಪ್ರಿಯಾಂಕ್​​​ ಖರ್ಗೆ ಪ್ರಶ್ನೆ ಮಾಡಿದರು.

 
First published: March 6, 2020, 6:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading