HOME » NEWS » State » FORMER MINISTER PRIYANK KHARGE HITS OUT AT BJP MP UMESH JADHAV HK

ಚಿಂಚೋಳಿ ಅಭಿವೃದ್ಧಿಗಾಗಿ ಬಿಜೆಪಿ ಯಾವಾಗ ತೊರೀತೀರಿ - ಉಮೇಶ್ ಜಾಧವ್ ಕಾಲೆಳೆದ ಪ್ರಿಯಾಂಕ್ ಖರ್ಗೆ

ಕಲಬುರ್ಗಿ - ಚಿಂಚೋಳಿ ಅಭಿವೃದ್ಧಿಗಾಗಿ ಕಾಂಗ್ರೆಸ್ ತೊರೆದಿದ್ದ ಡಾ. ಉಮೇಶ್ ಜಾಧವ್ ಅವರೇ ಬಿಜೆಪಿ ತೊರೆಯುವದು ಯಾವಾಗ ಎಂದು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ, ಜಾಧವ್ ಕಾಲೆಳೆದಿದ್ದಾರೆ

news18-kannada
Updated:February 27, 2020, 7:55 PM IST
ಚಿಂಚೋಳಿ ಅಭಿವೃದ್ಧಿಗಾಗಿ ಬಿಜೆಪಿ ಯಾವಾಗ ತೊರೀತೀರಿ - ಉಮೇಶ್ ಜಾಧವ್ ಕಾಲೆಳೆದ ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ ಹಾಗೂ ಉಮೇಶ್ ಜಾಧವ್
  • Share this:
ಕಲಬುರ್ಗಿ(ಜ.04) : ಚಿಂಚೋಳಿ ಕ್ಷೇತ್ರಕ್ಕೆ ಸಮ್ಮಿಶ್ರ ಸರ್ಕಾರದಲ್ಲಿ ನೀಡಿದ್ದ 30 ಕೋಟಿ ಪೈಕಿ 20 ಕೋಟಿಯನ್ನು ಬಿಜೆಪಿ ಸರ್ಕಾರ ವಾಪಸ್ ಪಡೆದಿದೆ ಎನ್ನಲಾಗಿರುವ ವಿಚಾರ ಟ್ವೀಟ್ ವಾರ್ ಗೆ ಕಾರಣವಾಗಿದೆ. ಚಿಂಚೋಳಿ ಅಭಿವೃದ್ಧಿ ಹೆಸರಲ್ಲಿ ಕಾಂಗ್ರೆಸ್ ತೊರೆದಿದ್ದ ಜಾಧವ್ ಅವರೇ, ಅಭಿವೃದ್ಧಿಗೆ ನೀಡಿದ್ದ ಹಣವನ್ನೇ ವಾಪಸ್ ಪಡೆದ ಬಿಜೆಪಿಯನ್ನು ಯಾವಾಗ ತೊರೀತೀರಿ ಅಂತ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಸ್ನಿಸಿದ್ದಾರೆ.

ಕಲಬುರ್ಗಿ - ಚಿಂಚೋಳಿ ಅಭಿವೃದ್ಧಿಗಾಗಿ ಕಾಂಗ್ರೆಸ್ ತೊರೆದಿದ್ದ ಡಾ. ಉಮೇಶ್ ಜಾಧವ್ ಅವರೇ ಬಿಜೆಪಿ ತೊರೆಯುವದು ಯಾವಾಗ ಎಂದು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ, ಜಾಧವ್ ಕಾಲೆಳೆದಿದ್ದಾರೆ. ಚಿಂಚೋಳಿ ಕ್ಷೇತ್ರಕ್ಕೆ ನೀಡಿದ್ದ ಅನುದಾನವನ್ನು ಬಿಜೆಪಿ ಸರ್ಕಾರ ಕಡಿತಗೊಳಿಸರುವ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಸಂಸದ ಉಮೇಶ್ ಜಾಧವ್ ಕಾಲೆಳೆದಿದ್ದಾರೆ.
ಕಾಂಗ್ರೆಸ್ - ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅನುದಾನ ಕೊಟ್ಟಿಲ್ಲ ಅಂತ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರಿ. ಚಿಂಚೋಳಿ ಅಭಿವೃದ್ದಿಗಾಗಿ ಅಂತ ಹೇಳಿ ಪುತ್ರ ಅವಿನಾಶ್ ಜಾಧವ್ ಗೆ ಟಿಕೆಟ್ ಕೊಡಿಸಿ, ಗೆಲ್ಲಿಸಿದ್ರಿ. ಆದ್ರೆ ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಮಾಜ ಕಲ್ಯಾಣ ಇಲಾಖೆಯಿಂದ ಚಿಂಚೋಳಿಗೆ 30 ಕೋಟಿ ನೀಡಿದ್ದೆ. ಬಿಜೆಪಿ ಸರ್ಕಾರ ಬಂದ ಮೇಲೆ 30 ಕೋಟಿ ಪೈಕಿ 20 ಕೋಟಿ ರೂಪಾಯಿ ಕಡಿತ ಮಾಡಿದೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.ಹಿಂದೆ ಅಭಿವೃದ್ಧಿ ಹೆಸರು ಹೇಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಗೂ ಗುಡ್ ಬೈ ಹೇಳಿದ್ದಿರಿ. ಅಭಿವೃದ್ಧಿ ಮಾಡ್ತಾರೆ ಅಂತ ಬಿಜೆಪಿಗೆ ಹೋಗಿದ್ದಿರಿ. ಆದ್ರೆ ನಮ್ಮ ಸರ್ಕಾರ ಚಿಂಚೋಳಿಗೆ ಕೊಟ್ಟ ಹಣವನ್ನೂ ಬಿಜೆಪಿ ಕಿತ್ತುಕೊಂಡಿದೆ. ಹೀಗಾಗಿ ಚಿಂಚೋಳಿ ಅಭಿವೃದ್ಧಿಗಾಗಿ ಬಿಜೆಪಿಗೆ ರಾಜೀನಾಮೆ ಯಾವಾಗ ನೀಡ್ತೀರಿ ಎಂದು ಟ್ವಿಟರ್ ನಲ್ಲಿ ಪ್ರಿಯಾಂಕ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಸೋಲಿನ ಬಳಿಕ ಎಚ್ಚೆತ್ತುಕೊಂಡ ಕಾಂಗ್ರೆಸ್​; ಒಗ್ಗಟ್ಟಿನ ಮಂತ್ರ ಜಪಿಸಲು ಮುಂದಾದ ನಾಯಕರು

ಸಾಮಾಜಿಕ ಜಾಲತಾಣದಲ್ಲಿ ಡಾ.ಉಮೇಶ್ ಜಾಧವ್ ಗೆ ಕೈ ಕಾರ್ಯಕರ್ತರೂ ತರಾಟೆಗೆ ತೆಗೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರಶ್ನೆ ವೈರಲ್ ಆಗಿದೆ.
First published: January 4, 2020, 3:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories