• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Kolara: ರಾಹುಲ್ ಗಾಂಧಿ ಪ್ರಚಾರ ಮಾಡಿದ್ರು, ರಮೇಶ್‌ ಕುಮಾರ್ ಸೋಲು ಖಚಿತ ಎಂದ KH ಮುನಿಯಪ್ಪ

Kolara: ರಾಹುಲ್ ಗಾಂಧಿ ಪ್ರಚಾರ ಮಾಡಿದ್ರು, ರಮೇಶ್‌ ಕುಮಾರ್ ಸೋಲು ಖಚಿತ ಎಂದ KH ಮುನಿಯಪ್ಪ

KH ಮುನಿಯಪ್ಪ

KH ಮುನಿಯಪ್ಪ

ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರ ವಿರುದ್ದವೂ ಕಿಡಿಕಾರಿದ ಕೆಎಚ್ ಮುನಿಯಪ್ಪ, ಮಾಲೂರು ಶಾಸಕ ನಂಜೇಗೌಡ ಜೈಲಿಗೆ ಹೋಗಬೇಕಿದ್ದವರು, ಅಂತಹವರನ್ನ ಕಾಂಗ್ರೆಸ್ ಸೇರಿಸಿಕೊಂಡು ಶಾಸಕನನ್ನಾಗಿ ಮಾಡಿದೆ, ಆದರೆ ಎಲ್ಲರು ರಮೇಶ್ ಕುಮಾರ್ ಬೆಂಬಲಿಗರಾಗಿ ಹೊಸ ಬಣ ರಚನೆಯಾಗಿದೆ ಎಂದು ಕಿಡಿಕಾರಿದರು.

ಮುಂದೆ ಓದಿ ...
  • Share this:

ಕೋಲಾರ (ಜು.03): ಜಿಲ್ಲೆಯ ಹಿರಿಯ ಕಾಂಗ್ರೆಸ್ (Congress)ನಾಯಕರಾದ ಕೆ.ಎಚ್. ಮುನಿಯಪ್ಪ ಹಾಗು  ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ನಡುವಿನ ಮಾತಿನ ಯುದ್ದಕ್ಕೆ (War) ವಿರಾಮ ಇಲ್ಲದಂತಾಗಿದೆ. ಅದರಲ್ಲು ಕಳೆದ ಲೋಕಸಭೆ ಚುನಾವಣೆಯಲ್ಲಿ ಮುನಿಯಪ್ಪ ಸೋತ ನಂತರ, ರಮೇಶ್ ಕುಮಾರ್ ವಿರುದ್ದ ಆಗಾಗ್ಗೆ ಪಕ್ಷ ವಿರೋದಿ ಚಟುವಟಿಕೆ ಆರೋಪ ಹೊರಿಸಿ, ತೀವ್ರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಮಾಜಿ ಶಾಸಕರಾದ (MLA) ಕೊತ್ತೂರು ಮಂಜುನಾಥ್, ಚಿಂತಾಮಣಿ ಮಾಜಿ ಶಾಸಕ ಎಂಸಿ ಸುಧಾಕರ್ ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಉಪಸ್ತಿತಿಯಲ್ಲಿ, ಜಿಲ್ಲೆಯ ಕೈ ಶಾಸಕರು, ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.


ಆದರೆ ಇದಕ್ಕೆ ತೀವ್ರ ವಿರೋದ ವ್ಯಕ್ತಪಡಿಸಿದ್ದ ಕೆಎಚ್ ಮುನಿಯಪ್ಪ ರಾಜ್ಯ ನಾಯಕರ ಮೇಲೆ ನೇರವಾಗಿ ಬೇಸರ ಹೊರಹಾಕಿದ್ದಾರೆ, ಕೊತ್ತೂರು ಮಂಜುನಾಥ್ ಹಾಗು ಚಿಂತಾಮಣಿ ಸುಧಾಕರ್ ದೆಹಲಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಸೇರ್ಪಡೆ ಕಾರ್ಯಕ್ರಮಕ್ಕೆ ನನ್ನನ್ನ ಆಹ್ವಾನಿಸಿ, ಕಡೆಯದಾಗಿ ಮಾಹಿತಿ ನೀಡದೆ ನಿರ್ಲಕ್ಷ್ಯ ಮಾಡಿದ್ದಾರೆಂದು ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ಬಹಿರಂಗವಾಗಿ, ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.


ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಲು, ಕೆಎಚ್ ಮುನಿಯಪ್ಪ ಅವ್ರ ನಿವಾಸದ ಬಳಿ ಆಯೋಜಿಸಿದ್ದ ಸಭೆಯಲ್ಲಿ, ಜಿಲ್ಲೆಯ ಎಲ್ಲಾ ತಾಲೂಕಿನ ಪ್ರಮುಖ ಮುಖಂಡರು ಭಾಗಿಯಾಗಿದ್ದು, ಮಾಜಿ ಶಾಸಕರ ಇಬ್ಬರ ಸೇರ್ಪಡೆ ನಿರ್ಧಾರ ಏಕಪಕ್ಷೀಯ ಎಂದು ಎಲ್ಲಾ ನಾಯಕರು ಕಿಡಿಕಾರಿದರು.


ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೆಎಚ್ ಮುನಿಯಪ್ಪ


ಸಭೆ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೆಎಚ್ ಮುನಿಯಪ್ಪ, ರಾಹುಲ್ ಗಾಂಧಿ ಸಮ್ಮುಖದಲ್ಲಿ ಆಯೋಜಿಸಿದ್ದ ಸೇರ್ಪಡೆ ಕಾರ್ಯಕ್ರಮಕ್ಕೆ ಬರುವಂತೆ ಡಿಕೆ ಶಿವಕುಮಾರ್ ನನ್ನನ್ನ ಆಹ್ವಾನಿಸಿದ್ರು, ನಾನು ವಿಶೇಷ ವಿಮಾನದಲ್ಲಿ  ದೆಹಲಿಗೆ ತೆರಳಿದ್ದೆ, ಆದರೆ ಕಡೆ ಗಳಿಗೆಯಲ್ಲಿ ನನಗು ಮಾಹಿತಿ ನೀಡಿದೆ, ಕಾರ್ಯಕ್ರಮ ಮುಗಿಸಿದ್ದಾರೆ.


ಇದನ್ನೂ ಓದಿ: ಮಲೆನಾಡಲ್ಲಿ ಮಳೆ ಅಬ್ಬರ, ಮೈದುಂಬಿ ಹರಿಯುತ್ತಿರೋ ಭದ್ರೆ: ಹೆಬ್ಬಾಳೆ ಸೇತುವೆ ಮುಳುಗಡೆ ಭೀತಿ


ಈ ಬಗ್ಗೆ ನನಗೆ ಬೇಸರವಾಗಿದೆ. ನಿಮ್ಮ ನಿರ್ಧಾರದ ಹಿಂದಿನ ಗುಟ್ಟೇನು, ರಾಜ್ಯದ ಪ್ರತಿನಿಧಿಗಳಾಗಿ ನಿಮ್ಮ ನಿರ್ಧಾರಕ್ಕೆ ಹೈ ಕಮಾಂಡ್ ಬೆಂಬಲಿಸಿದೆ, ಇಬ್ಬರ ಸೇರ್ಪಡೆಯಿಂದ ಯಾವುದೇ ಸಮಸ್ಯೆಯಿಲ್ಲ, ಆದರೆ ಪಕ್ಷ ವಿರೋದಿ ಚಟುವಟಿಕೆ ಯಿಂದ ನಡೆದ ಬೆಳವಣಿಗೆಗಳು ವೈಯಕ್ತಿಕವಾಗಿ ನೋವುಂಟುಮಾಡಿದೆ, ಆದರೆ ಅದನ್ನೆಲ್ಲಾ ಪರಿಗಣಿಸದೆ ನಿಗದಿಯಂತೆ ರಾಜಿ ಸಂಧಾನಕ್ಕು ಮುಂದಾಗಿಲ್ಲ,  ಈ ಬೆಳವಣಿಗೆ ಕುರಿತು ಒಂದು ತಿಂಗಳಲ್ಲಿ ಉತ್ತರ ಕೊಡಿ ಎಂದರು.


ರಮೇಶ್ ಕುಮಾರ್ ಗೆಲ್ಲಲ್ಲ


ಇನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್  ವಿರುದ್ದ ಕೆಲಸ ಮಾಡಿದ್ದ, ಮಾಜಿ ಸ್ಪೀಕರ್  ರಮೇಶ್ ಕುಮಾರ್ ಅಂಡ್ ಟೀಂ ವಿರುದ್ದ ಕ್ರಮಕ್ಕೆ ಮನವಿ ಸಲ್ಲಿಸಿದ್ದರು,  ಅದನ್ನು ಹೈ ಕಮಾಂಡ್ ಪರಿಗಣಿಸಿಲ್ಲ, ಕಾಂಗ್ರೆಸ್ ಪಕ್ಷದ ಏಳಿಗೆಗೆ ಸಹಕರಿಸುವಂತೆ ದೆಹಲಿಯ ಕಾಂಗ್ರೆಸ್ ನಾಯಕರು ನನಗೆ ಮನವಿ ಮಾಡಿದ್ದರು, ಹಾಗಾಗು ವೈಯುಕ್ತಿಕವಾದ ನನ್ನ ನೋವನ್ನು ಮರೆತು ಮಾತುಕತೆಗೆ ಒಪ್ಪಿದ್ದೆ, ಅಸಮಾಧಾನ ಹಿನ್ನಲೆ  ನಾನು ಬೇರೆ ಯಾವ ಪಕ್ಷಕ್ಕು ಸೇರುವ ಮಾತಿಲ್ಲ, 5 ಲಕ್ಷ ಜನ ನನಗೆ ಮತ ಹಾಕಿದ್ದಾರೆ.


ಎಲ್ಲರ ನಿರ್ಧಾರವೇ ನನಗೆ ಮುಖ್ಯ ಎಂದು, ಪಕ್ಷ ಸೇರ್ಪಡೆ ವದಂತಿಯನ್ನ ತಳ್ಳಿ ಹಾಕಿದರು. ಇನ್ನು ರಮೇಶ್ ಕುಮಾರ್  ಬ್ಲಾಕ್ ಮೇಲೆ ರಾಜಕೀಯ ಮಾಡುತ್ತಿದ್ದು,  ರಮೇಶ್ ಕುಮಾರ್ ಶಕುನಿ ಇದ್ದಂತೆ ಎಂದು ಕೆಎಚ್ ಮುನಿಯಪ್ಪ ಟೀಕಿಸಿದ್ದಾರೆ, ರಮೇಶ್ ಕುಮಾರ್ ಅಂಡ್ ಟೀಂ ವಿರುದ್ದ ಮಹಾಭಾರತದ ಕಥೆ ಹೇಳಿ ಒಂದು ಕೈ ನೋಡಿಕೊಳ್ಳೋದಾಗಿ ಸವಾಲು ಹಾಕಿದ್ದಾರೆ.


ಇದನ್ನೂ ಓದಿ: B C Nagesh: ಅಪ್ರಯೋಜಕ ಸಚಿವರಿಂದ ಶಿಕ್ಷಣ ಕ್ಷೇತ್ರ ಅಧ್ವಾನ; ಬಿಕೆ ಹರಿಪ್ರಸಾದ್ ವಾಗ್ದಾಳಿ


ಜೈಲಿಗೆ ಹೋಗಬೇಕಿದ್ದ ಮಾಲೂರು ಶಾಸಕ ನಂಜೇಗೌಡ ನನ್ನ ಎಂಎಲ್​ಎ ಮಾಡಿದ್ದು ನಾನು ಹಾಗು ಅನಿಲ್ ಕುಮಾರ್, ನಾರಾಯಣಸ್ವಾಮಿ, ನಜೀರ್ ಅಹಮದ್ , ಚಿಂತಾಮಣಿ ಸುಧಾಕರ್ ರನ್ನ ಬೆಳೆಸಿದ್ದು ನಾನು, ಎಲ್ಲರನ್ನು ನನ್ನ ವಿರುದ್ದವೇ ಎತ್ತಿಕಟ್ಟಿ ಶಕುನಿ ಪಾತ್ರ ಮಾಡಿರುವ ರಮೇಶ್ ಕುಮಾರ್, ಏಕ ಪಾತ್ರಾಭಿನಯ ಮಾಡ್ತಿದ್ದಾರೆ, ಪಾಂಡವರ ವನವಾಸ ಮುಗಿಯುತ್ತಿದೆ, ಕೌರವರ ಅಂತ್ಯಕಾಲ ಸನ್ನಿಹಿತ ವಾಗುತ್ತಿದೆ, ನಾನಲ್ಲ. ಮುಂದಿನ ವಿಧಾನಸಭೆ   ಚುನಾವಣೆಯಲ್ಲಿ ರಾಹುಲ್ ಗಾಂಧಿ ಬಂದರು ರಮೇಶ್ ಕುಮಾರ್  ಗೆಲ್ಲಲ್ಲ ಎಂದು ಮುನಿಯಪ್ಪ ಭವಿಷ್ಯ ನುಡಿದಿದ್ದಾರೆ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು