ಸಮ್ಮಿಶ್ರ ಸರ್ಕಾರ ಉರುಳಿದರೆ ಎಚ್​ಡಿ ರೇವಣ್ಣ ಕಾರಣವಂತೆ?: ಸಿಎಂಗೆ ಮಾಜಿ ಸಚಿವ ಬಹಿರಂಗ ಎಚ್ಚರಿಕೆ


Updated:August 27, 2018, 4:25 PM IST
ಸಮ್ಮಿಶ್ರ ಸರ್ಕಾರ ಉರುಳಿದರೆ ಎಚ್​ಡಿ ರೇವಣ್ಣ ಕಾರಣವಂತೆ?: ಸಿಎಂಗೆ ಮಾಜಿ ಸಚಿವ ಬಹಿರಂಗ ಎಚ್ಚರಿಕೆ

Updated: August 27, 2018, 4:25 PM IST
ನ್ಯೂಸ್​-18 ಕನ್ನಡ

ಬೆಂಗಳೂರು(ಆಗಸ್ಟ್​.27): ಸಿಎಂ ಕುಮಾರಸ್ವಾಮಿ ಅವರೇ ಸಮ್ಮಿಶ್ರ ಸರ್ಕಾರ ಉರುಳಿದರೇ, ಅದಕ್ಕೆ ನಿಮ್ಮಣ್ಣ ಲೋಕೋಪಯೋಗಿ ಸಚಿವ ಎಚ್​.ಡಿ ರೇವಣ್ಣ ಅವರೇ ಕಾರಣ ಎಂದು ಕಾಂಗ್ರೆಸ್​ ಮಾಜಿ ಸಚಿವ ಎ ಮಂಜು ಎಚ್ಚರಿಕೆ ನೀಡಿದ್ಧಾರೆ. ಅಲ್ಲದೇ ಸರ್ಕಾರ ಪತನಕ್ಕೆ ನಾವು  ಜವಾಬ್ದಾರ​ರಲ್ಲ ಎಂದು ಸ್ಫೋಟಕ ಹೇಳಿಕೆ ಕೊಟ್ಟಿದ್ಧಾರೆ.

ಸಕಲೇಶಪುರದಲ್ಲಿ ಮಾತಾಡಿದ ಮಾಜಿ ಸಚಿವ ಎ ಮಂಜು ಅವರು, ಸಮ್ಮಿಶ್ರ ಸರ್ಕಾರದ ಆಂತರಿಕ ಅಸಮಾಧಾನವನ್ನ ಬಹಿರಂಗ ಪಡಿಸಿದ್ದಾರೆ.  ಸಮ್ಮಿಶ್ರ ಸರ್ಕಾರ ಉರುಳಿದರೆ ನಾವು ಜವಾಬ್ದಾರರಲ್ಲ. ಸಮ್ಮಿಶ್ರ ಸರ್ಕಾರ ಪತನಕ್ಕೆ ನಿಮ್ಮ ಅಣ್ಣನೇ ಕಾರವಾಗಲಿದ್ದಾರೆ ಎಂದು ಸಿಎಂಗೆ ಬಹಿರಂಗ ಎಚ್ಚರಿಕೆ ನೀಡಿದ್ಧಾರೆ.

ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿ ಹಾಸನ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಶುರುವಾಗಿದೆ. ನಾವು ಇನ್ನೂ‌ ದ್ವೇಷದ ರಾಜಕಾರಣ ಸಹಿಸಲು ಸಾಧ್ಯವಿಲ್ಲ. ನಿಮ್ಮ ಅಣ್ಣನಿಗೆ ಮುಖ್ಯಮಂತ್ರಿಗಳೇ ನೀವು ಬುದ್ದಿ ಹೇಳಿ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಬಲಹೀನವಾಗುತ್ತಿದೆ. ಕಾಂಗ್ರೆಸ್ ವಿರುದ್ಧ ಜೆಡಿಎಸ್ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.

ಇದೆ ವೇಳೆ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಅಥವಾ ಹಾಸನ ಕ್ಷೇತ್ರವನ್ನು ಬಿಟ್ಟುಕೊಡಬೇಕು. ಎರಡೂ ಕ್ಷೇತ್ರದಲ್ಲಿ ಒಂದು ಕಾಂಗ್ರೆಸ್ ಪಾಲಾಗಬೇಕು. ಇಲ್ಲಾವಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಗತಿಯೇನು? ಎಂದು ತಮ್ಮಲ್ಲಿನ ಅಸಮಾಧಾನವನ್ನು ಹೊರಹಾಕಿದರು.

ನೇರವಾಗಿ ಲೋಕೋಪಯೋಗಿ ಸಚಿವ ರೇವಣ್ಣರನ್ನ ಗುರಿಯಾಗಿಸಿದ ಮಾಜಿ ಸಚಿವ ಮಂಜು ಅವರು, ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದರು. ಎ ಮಂಜು ಹೇಳಿಕೆಯಂತೇ ಸಮ್ಮಿಶ್ರ ಸರ್ಕಾರ ಉರುಳುತ್ತಾ? ಎಂದು ಕಾದು ನೋಡಬೇಕಿದೆ.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ