HOME » NEWS » State » FORMER MINISTER MB PATIL REACTION ON BSY BUDGET KARNATAKA BUDJET 2020 STATE BUDGET NEWS UPDATES MAK

Karnataka Budget Updates: ಇದು ಸತ್ವ ಇಲ್ಲದ ನೀರಸ ಬಜೆಟ್, ಹಳೆಯ ಯೋಜನೆ ಬಿಟ್ಟರೆ, ಹೊಸದೂಂತ ಯಾವ್ದೂ ಇಲ್ಲ; ಎಂ.ಬಿ. ಪಾಟೀಲ್ ಕಿಡಿ

Karnataka Budget Highlights : ಹಣವೇ ಇಲ್ಲ ಎಂದ ಮೇಲೆ ಬಿಎಸ್​ ಯಡಿಯೂರಪ್ಪ ಬಜೆಟ್​ನಲ್ಲಿನ ಯೋಜನೆಗಳನ್ನು ಹೇಗೆ ಪೂರೈಸುತ್ತಾರೆ. ಇನ್ನೂ ಈ ಬಜೆಟ್​ನಲ್ಲಿ ಹೊಸ ಯೋಜನೆ ಎಂದು ಯಾವುದೂ ಇಲ್ಲ, ಹಳೆಯ ಯೋಜನೆಗಳನ್ನೇ ಮುಂದುವರೆಸಲಾಗಿದೆ. ರೈತರಿಗೆ ಈ ಬಜೆಟ್​ನಲ್ಲಿ ಅನ್ಯಾಯ ಮಾಡಲಾಗಿದೆ. ಇದೊಂದು ಸತ್ವ ಇಲ್ಲದ ಅನವಶ್ಯಕ ಮತ್ತು ನೀರಸ ಬಜೆಟ್ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಕಿಡಿಕಾರಿದ್ದಾರೆ.

MAshok Kumar | digpu-news-network
Updated:March 5, 2020, 1:20 PM IST
Karnataka Budget Updates: ಇದು ಸತ್ವ ಇಲ್ಲದ ನೀರಸ ಬಜೆಟ್, ಹಳೆಯ ಯೋಜನೆ ಬಿಟ್ಟರೆ, ಹೊಸದೂಂತ ಯಾವ್ದೂ ಇಲ್ಲ; ಎಂ.ಬಿ. ಪಾಟೀಲ್ ಕಿಡಿ
ಮಾಜಿ ಸಚಿವ ಎಂ.ಬಿ. ಪಾಟೀಲ್​
  • Share this:
ಬೆಂಗಳೂರು (ಮಾರ್ಚ್​ 05); ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಮಂಡಿಸಿರುವ ಇಂದಿನ ರಾಜ್ಯ ಬಜೆಟ್​ನಲ್ಲಿ ಸತ್ವವೇ ಇಲ್ಲ, ಹಳೆಯ ಯೋಜನೆಗಳನ್ನು ಬಿಟ್ಟರೆ ಹೊರ ಯೋಜನೆ ಅಂತ ಏನೂ ಇಲ್ಲ. ಇನ್ನೂ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರಶ್ನೆ ಮಾಡುವ ತಾಕತ್ತು ಯಾರಿಗೂ ಇಲ್ಲ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಕಿಡಿಕಾರಿದ್ದಾರೆ. 

ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಅಧಿವೇಶನದಲ್ಲಿ ಬಜೆಟ್​ ಮಂಡಿಸಿದ ನಂತರ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿರುವ ಎಂ.ಬಿ. ಪಾಟೀಲ್, "ಕೇಂದ್ರದಿಂದ ರಾಜ್ಯಕ್ಕೆ ಕಾನೂನು ಪ್ರಕಾರ ಸಿಗಬೇಕಾದ ಹಣ ಇನ್ನೂ ಸಿಕ್ಕಿಲ್ಲ. ಆದರೂ ಅವರ ವಿರುದ್ದ ಪ್ರಶ್ನೆ ಮಾಡುವ ತಾಕತ್ತು ರಾಜ್ಯದ ಯಾವ ಬಿಜೆಪಿ ನಾಯಕನಿಗೂ ಇಲ್ಲ. ಇನ್ನೂ 25 ಜನ ಬಿಜೆಪಿ ಸಂಸದರು ಇದ್ದೂ ಏನೂ ಪ್ರಯೋಜನವಾಗಿಲ್ಲ. ಎಲ್ಲರು ಪ್ರಶ್ನೆ ಮಾಡಿದರೆ ತಮ್ಮ ಖುರ್ಚಿಗೆ ಎಲ್ಲಿ ಆಪತ್ತು ಬರುತ್ತೋ? ಎಂಬ ಭಯದಲ್ಲೇ ಬದುಕುತ್ತಿದ್ದಾರೆ.

ಹಣವೇ ಇಲ್ಲ ಎಂದ ಮೇಲೆ ಬಿಎಸ್​ ಯಡಿಯೂರಪ್ಪ ಬಜೆಟ್​ನಲ್ಲಿನ ಯೋಜನೆಗಳನ್ನು ಹೇಗೆ ಪೂರೈಸುತ್ತಾರೆ. ಇನ್ನೂ ಈ ಬಜೆಟ್​ನಲ್ಲಿ ಹೊಸ ಯೋಜನೆ ಎಂದು ಯಾವುದೂ ಇಲ್ಲ, ಹಳೆಯ ಯೋಜನೆಗಳನ್ನೇ ಮುಂದುವರೆಸಲಾಗಿದೆ. ರೈತರಿಗೆ ಈ ಬಜೆಟ್​ನಲ್ಲಿ ಅನ್ಯಾಯ ಮಾಡಲಾಗಿದೆ. ಇದೊಂದು ಸತ್ವ ಇಲ್ಲದ ಅನವಶ್ಯಕ ಮತ್ತು ನೀರಸ ಬಜೆಟ್ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ : Karnataka Budget Updates: ಬೆಂಗಳೂರು ನಗರ ಅಭಿವೃದ್ಧಿಗೆ 8,772 ಕೋಟಿ, ಮೂಲಭೂತ ಸೌಲಭ್ಯಗಳ ಅಬಿವೃದ್ಧಿಗೆ ಒತ್ತು
Youtube Video
First published: March 5, 2020, 1:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories