ಪ್ರವಾಹ ಬಂದಾಗ ಈಶ್ವರಪ್ಪ, ತೇಜಸ್ವಿ ಸೂರ್ಯರನ್ನು ನಡುಗಡ್ಡೆಯಲ್ಲಿ ಬಿಟ್ಟು ಬರಬೇಕು; ಎಂ.ಬಿ.ಪಾಟೀಲ ವಾಗ್ದಾಳಿ

ಬಿಜೆಪಿಗೆ ಆರ್ ಎಸ್ ಎಸ್ ಮೂಲ. ಆದರೆ, ಆರ್ ಎಸ್ ಎಸ್ ಗರ್ಭ ಗುಡಿಯೊಳಗೆ ಕೆಲವರಿಗಷ್ಟೇ ಪ್ರವೇಶವಿದೆ. ಸಿಎಂ ಯಡಿಯೂರಪ್ಪ ಸೇರಿದಂತೆ ಉಳಿದ ಮುಖಂಡರಿಗೆ ಆರ್ ಎಸ್ ಎಸ್ ಹೊಸ್ತಿಲೊಳಗೆ ಬಿಡುವುದಿಲ್ಲ. ಆರ್ ಎಸ್ ಎಸ್ ನಿರ್ಧಿಷ್ಠ ನಾಯಕರನ್ನು ಹೊರತು ಪಡಿಸಿ ಉಳಿದವರನ್ನು ಕೇವಲ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದರು.

Latha CG | news18-kannada
Updated:October 1, 2019, 10:16 AM IST
ಪ್ರವಾಹ ಬಂದಾಗ ಈಶ್ವರಪ್ಪ, ತೇಜಸ್ವಿ ಸೂರ್ಯರನ್ನು ನಡುಗಡ್ಡೆಯಲ್ಲಿ ಬಿಟ್ಟು ಬರಬೇಕು; ಎಂ.ಬಿ.ಪಾಟೀಲ ವಾಗ್ದಾಳಿ
ಎಂ.ಬಿ.ಪಾಟೀಲ-ತೇಜಸ್ವಿ ಸೂರ್ಯ-ಕೆ.ಎಸ್​.ಈಶ್ವರಪ್ಪ
  • Share this:
ವಿಜಯಪುರ(ಅ.01): ಪ್ರಧಾನಿ ಮೋದಿ ಬಳಿ ಪರಿಹಾರ ಕೇಳಲು ಸಿಎಂ ಬಿ.ಎಸ್​. ಯಡಿಯೂರಪ್ಪನವರಿಗೆ ಧೈರ್ಯವಿಲ್ಲ. ಸಿಎಂ ಸ್ಥಾನದಲ್ಲಿ ನಾನಿದ್ದಿದ್ದರೆ ರಾಜೀನಾಮೆ ಬಿಸಾಕಿ ಬರುತ್ತಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಸಿಎಂ ಬಿಎಸ್​ವೈ ವಿರುದ್ಧ ಹರಿಹಾಯ್ದಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿ ಸರಕಾರ ಹಾಲಿ ಬಿಜೆಪಿ ಸರಕಾರಕ್ಕಿಂತ ಸಾವಿರ ಪಾಲು ಉತ್ತಮವಿತ್ತು. ಬಿಜೆಪಿ ಸರಕಾರಕ್ಕೆ ಗೊತ್ತು ಗುರಿ ಇಲ್ಲ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಇವರ ಬಳಿ ಹಣವಿಲ್ಲ. ಇವರು ರೂ. 2-3 ಸಾವಿರ ಕೋಟಿ ಮಾತ್ರ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಪ್ರವಾಹ ಸಂತ್ರಸ್ತರ ಶಾಪ ಇವರಿಗೆ ತಟ್ಟಲಿದೆ. ಈಶ್ವರಪ್ಪ, ತೇಜಸ್ವಿ ಸೂರ್ಯ ಅವರನ್ನು ಪ್ರವಾಹ ಸಂದರ್ಭದಲ್ಲಿ ನಡುಗಡ್ಡೆಯಲ್ಲಿ ಬಿಟ್ಟು ಬರಬೇಕು ಎಂದು ಕಿಡಿಕಾರಿದ್ದಾರೆ.

ಉತ್ತರ ಕರ್ನಾಟಕ ಯಡಿಯೂರಪ್ಪನವರಿಗೆ ಬಲ ನೀಡಿದೆ ಅಂತಾರೆ.ಆದರೆ, ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಇವರು ಸ್ಪಂದಿಸುತ್ತಿಲ್ಲ. ತಾತ್ಕಾಲಿಕ ಶೆಡ್ ನಿರ್ಮಿಸಲು ಸಾಧ್ಯವಾಗದ ಇವರು ಶಾಶ್ವತ ಕೆಲಸ ಮಾಡಲು ಹೇಗೆ ಸಾಧ್ಯ? ಅಧಿಕಾರ ಹೋಗುವ ಹೆದರಿಕೆಯಿಂದ ಸಚಿವ ಸಂಪುಟದಲ್ಲಿರುವವರು ಪ್ರವಾಹ ಸಂತ್ರಸ್ತರ ಪರ ಧ್ವನಿ ಎತ್ತುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಆಗದಿದ್ದರೆ ಸಿಎಂ, ಸಚಿವ ಸ್ಥಾನದಲ್ಲಿದ್ದು ಪ್ರಯೋಜನವೇನು? ಎಂದು ಪ್ರಶ್ನಿಸಿದರು.

ತಂತಿ ಮೇಲೆ ನಡಿಗೆ ಎಂಬ ಸಿಎಂ ಹೇಳಿಕೆಗೆ ಎಂ.ಬಿ.ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ. ತಂತಿ ಮೇಲೆ ನಡೆಯುತ್ತಿದ್ದಾರೋ, ಬೆಂಕಿ ಮೇಲೆ ನಡೆಯುತ್ತಿದ್ದಾರೊ ಎಂಬುದನ್ನು ಅವರನ್ನೇ ಕೇಳಿ ಎಂದರು.

ಬಿಬಿಎಂಪಿ ಮೇಯರ್ ಚುನಾವಣೆ, ಬಿಜೆಪಿಯಲ್ಲಿ ಹೈಡ್ರಾಮ; ಗೌತಮ್ ಕುಮಾರ್ ಹೆಸರು ಫೈನಲ್; ಮುನಿಸಿಕೊಂಡ ಯಡಿಯೂರಪ್ಪ

ಅನರ್ಹ ಶಾಸಕರ ಕುರಿತು ಉಮೇಶ ಕತ್ತಿ ಹೇಳಿಕೆ ವಿಚಾರವಾಗಿ, ಯಾವ ಬೀಜ ಬಿತ್ತುತ್ತೀರಿ ಆ ಫಸಲು ಬರುತ್ತದೆ. ಅನರ್ಹರಿಗೂ ಈಗ ತಪ್ಪಿನ ಅರಿವಾಗಿದೆ. ನಮ್ಮ ಜೊತೆ ಅವರು ನಮ್ಮ ಜೊತೆ ಸಂಪರ್ಕದಲ್ಲಿಲ್ಲ ಎಂದು ಹೇಳಿದರು.

ಇನ್ನು, ಇದೇ ವೇಳೆ ಲಿಂಗಾಯತ ಧರ್ಮವನ್ನು ಒಡೆಯುವ ಪ್ರಶ್ನೆಯೇ ಇಲ್ಲ ಎಂದು ಎಂ.ಬಿ.ಪಾಟೀಲ ಹೇಳಿದರು. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ನಮ್ಮ ಅಸ್ಮಿತೆ. ಲಿಂಗಾಯತ ಧರ್ಮ ಒಡೆಯುವ ಪ್ರಶ್ನೆಯೇ ಇಲ್ಲ. 12ನೇ ಶತಮಾನದಲ್ಲಿ ಬಸವಣ್ಣ, ಬಸವಾದಿ ಶರಣರು ಹುಟ್ಟು ಹಾಕಿದ್ದಾರೆ ಎಂದರು.ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡುತ್ತೇನೆ ಎಂಬ ಬಿಎಸ್​ವೈ ಹೇಳಿಕೆಗೆ ಪಾಟೀಲ ಪ್ರತಿಕ್ರಿಯೆ ನೀಡಿದರು. 15 ರಲ್ಲಿ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. 3ರಲ್ಲಿ ಜೆಡಿಎಸ್ ಗೆಲ್ಲಲಿದೆ. ಅಥಣಿ ಮತಕ್ಷೇತ್ರದ ಉಸ್ತುವಾರಿ ನನಗಿದೆ. ಅಥಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಗೆದ್ದರೆ ಬಾಳಾ ಠಾಕ್ರೆ ಮೊಮ್ಮಗ ಆದಿತ್ಯ ಉಪ ಮುಖ್ಯಮಂತ್ರಿ?

ಬಿಜೆಪಿಗೆ ಆರ್ ಎಸ್ ಎಸ್ ಮೂಲ. ಆದರೆ, ಆರ್ ಎಸ್ ಎಸ್ ಗರ್ಭ ಗುಡಿಯೊಳಗೆ ಕೆಲವರಿಗಷ್ಟೇ ಪ್ರವೇಶವಿದೆ. ಸಿಎಂ ಯಡಿಯೂರಪ್ಪ ಸೇರಿದಂತೆ ಉಳಿದ ಮುಖಂಡರಿಗೆ ಆರ್ ಎಸ್ ಎಸ್ ಹೊಸ್ತಿಲೊಳಗೆ ಬಿಡುವುದಿಲ್ಲ. ಆರ್ ಎಸ್ ಎಸ್ ನಿರ್ಧಿಷ್ಠ ನಾಯಕರನ್ನು ಹೊರತು ಪಡಿಸಿ ಉಳಿದವರನ್ನು ಕೇವಲ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದರು.

First published: October 1, 2019, 10:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading