HOME » NEWS » State » FORMER MINISTER MB PATIL HITS OUT AT BJP FOR CBI RAIDS ON DK SHIVAKUMAR RESIDENCE LG

ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ತನಿಖಾ ಸಂಸ್ಥೆಗಳ ದುರುಪಯೋಗ; ಎಂ.ಬಿ.ಪಾಟೀಲ್ ಆಕ್ರೋಶ

ಈ ಸಿಬಿಐ ದಾಳಿ ರಾಜಕೀಯ ದುರುದ್ದೇಶದಿಂದ ಕೂಡಿದೆ.  ಉಪಚುನಾವಣೆ ಸಂದರ್ಭದಲ್ಲಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ.  ಕಾಂಗ್ರೆಸ್​ನ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಇದಾಗಿದೆ.  ಅಪಪ್ರಚಾರ ಮಾಡುವ ದುರುದ್ದೇಶ ಇದರ ಹಿಂದಿದೆ. 

news18-kannada
Updated:October 7, 2020, 1:18 PM IST
ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ತನಿಖಾ ಸಂಸ್ಥೆಗಳ ದುರುಪಯೋಗ; ಎಂ.ಬಿ.ಪಾಟೀಲ್ ಆಕ್ರೋಶ
ಮಾಜಿ ಸಚಿವ ಎಂ.ಬಿ.ಪಾಟೀಲ್
  • Share this:
ವಿಜಯಪುರ (ಅ. 07): ಕೆಪಿಸಿಸಿ ಅಧ್ಯಕ್ಷ  ಡಿ. ಕೆ. ಶಿವಕುಮಾರ್​​ ನಿವಾಸದ ಮೇಲೆ ಸಿಬಿಐ ನಡೆಸಿದ ದಾಳಿಯ ಬಗ್ಗೆ ಮಾಜಿ ಸಚಿವ ಮತ್ತು ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಎಲ್ಲರ ಮೇಲೆ ದಾಳಿ ನಡೆಸುವ ಹಕ್ಕು ತನಿಖಾ ಸಂಸ್ಥೆಗಳಿಗಿದೆ.  ಆದರೆ, ಈಗ ನಡೆದಿರುವ ದಾಳಿ ದುರುದ್ದೇಶದಿಂದ ಕೂಡಿದೆ.  ಚುನಾವಣೆ ಸಂದರ್ಭದಲ್ಲಿ ಯಾಕೆ ಈ ದಾಳಿ ನಡೆಯುತ್ತಿದೆ? ಎಂದು ಅವರು ಪ್ರಶ್ನಿಸಿದರು. ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ.  ಎಷ್ಟು ಜನ ಬಿಜೆಪಿ ಮುಖಂಡರ ಮನೆ ಮೇಲೆ ದಾಳಿ ನಡೆದಿದೆ? ಬಿಜೆಪಿಯ ದೊಡ್ಡ ಮುಖಂಡರ ಮೇಲೆ ಆರೋಪಗಳಿವೆ.  ಅವರ ಮೇಲೆ ಏಕೆ ದಾಳಿ ನಡೆಯುತ್ತಿಲ್ಲ? ಎಂದು ಎಂ. ಬಿ. ಪಾಟೀಲ ವಾಗ್ದಾಳಿ ನಡೆಸಿದರು.

ಈ ಹಿಂದೆ ಗುಜರಾತ್ ಕಾಂಗ್ರೆಸ್ ಶಾಸಕರು ಕರ್ನಾಟಕ್ಕೆ ಬಂದಾಗ ದಾಳಿ ನಡೆಸಲಾಗಿತ್ತು.  ಈಗ ಉಪಚುನಾವಣೆ ಸಂದರ್ಭದಲ್ಲಿ ಈ ದಾಳಿ ನಡೆಸಲಾಗಿದೆ.  ಈ ಸಿಬಿಐ ದಾಳಿ ರಾಜಕೀಯ ದುರುದ್ದೇಶದಿಂದ ಕೂಡಿದೆ.  ಉಪಚುನಾವಣೆ ಸಂದರ್ಭದಲ್ಲಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ.  ಕಾಂಗ್ರೆಸ್​ನ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಇದಾಗಿದೆ.  ಅಪಪ್ರಚಾರ ಮಾಡುವ ದುರುದ್ದೇಶ ಇದರ ಹಿಂದಿದೆ.  ಇದನ್ನು ನೋಡಿದರೆ ಕಾಂಗ್ರೆಸ್ ಕಂಡರೆ ಬಿಜೆಪಿಗೆ ಭಯವಿದ್ದಂತೆ ಕಾಣುತ್ತದೆ ಎಂದರು. ಇದೇ ವೇಳೆ ರಾಜರಾಜೇಶ್ವರಿನಗರ, ಶಿರಾ ಎರಡೂ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಬಿಐ ದಾಳಿ ಬಳಿಕ ಡಿಕೆಶಿ ಭೇಟಿಯಾದ ಜಿಟಿ ದೇವೇಗೌಡ; ರಾಜಕಾರಣವೇ ಬೇರೆ, ಸ್ನೇಹವೇ ಬೇರೆ ಎಂದ ಕೆಪಿಸಿಸಿ ಅಧ್ಯಕ್ಷ

ಮಹಾದಾಯಿ ಗೋವಾ ಕ್ಯಾತೆ ವಿಚಾರ

ಮಹಾದಾಯಿ ವಿಚಾರದಲ್ಲಿ ಗೋವಾ ಈ ಹಿಂದೆ ಸಮ್ಮತಿ ಸೂಚಿಸಿದೆ.  ಅಂದು ವಿರೋಧ ವ್ಯಕ್ತಪಡಿಸಿರಲಿಲ್ಲ.  ಈ ಹಿನ್ನೆಲೆಯಲ್ಲಿ ನ್ಯಾಯಾಧೀಕರಣ ತೀರ್ಪು ನೀಡಿದೆ.  ಈಗ ಗೋವಾ ಕ್ಯಾತೆ ತೆರೆಯುತ್ತಿರುವುದು ರಾಜಕೀಯ ದುರುದ್ದೇಶ ಹೊಂದಿದೆ.  ತಮ್ಮ ಜನರ ಓಲೈಕೆಗೆ ಈ ರೀತಿ ಗೋವಾ ಹೇಳಿಕೆ ನೀಡುತ್ತಿದೆ ಎಂದು ಎಂ. ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ವಿಜಯಪುರ ನೀರಾವರಿ ಯೋಜನೆಗೆ ಸರಕಾರ ಒಪ್ಪಿಗೆ

ಇದೇ ವೇಳೆ ವಿಜಯಪುರ ಜಿಲ್ಲೆಯ ತುಬಚಿ- ಬಬಲೇಶ್ವರ ಏತ ನೀರಾವರಿ ವ್ಯಾಪ್ತಿಯಲ್ಲಿ159 ಹಳ್ಳಗಳು ಬರುತ್ತವೆ.  ಆಲಮಟ್ಟಿ ಪ್ರವಾಹದ ಹೆಚ್ಚುವರಿ ನೀರು ಬಳಸಲು ಈ ಹಳ್ಳಗಳ ಮೂಲಕ ನೀರನ್ನು ಸದ್ಭಳಕ್ಕೆ ಮಾಡಿಕೊಳ್ಳಲಾಗುವುದು.  ಈ ಹಳ್ಳಗಳಿಗೆ ಪ್ರತಿ 100 ಮೀಚರ್‌ಗೊಂದರಂತೆ ಚೆಕ್ ಡ್ಯಾಂ ನಿರ್ಮಿಸಿ ನೀರು ಇಂಗಲು ಇಂದು ಬಾವಿ ತೆರೆಯಲಾಗುವುದು.  ಈ ಯೋಜನೆಗೆ ಮೊನ್ನೆ ನಡೆದ ಜಲಸಂಪನ್ಮೂಲ ಇಲಾಖೆಯ ಬೋರ್ಡ್ ಮೀಟಿಂಗ್ ನಲ್ಲಿ ಒಪ್ಪಿಗೆ ಸೂಚಿಸಲಾಗಿದೆ.  ರೂ.59 ಕೋ. ವೆಚ್ಚದ ಯೋಜನೆ ಇದಾಗಿದೆ.  ಇದರಿಂದ ಸುಮಾರು 500 ಗ್ರಾಮಗಳಿಗೆ ಅನುಕೂಲವಾಗಲಿದ್ದು, ಈ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಲಿದೆ.  ಮುಂದಿನ ಐದಾರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣವಾಗಲಿದೆ.  ಅಲ್ಲದೇ, ಈ ಹಳ್ಳಗಳ ದಡದಲ್ಲಿ ಅರಣ್ಯ ಬೆಳೆಸಲು ಕೂಡ ಕ್ರಮ ಕೈಗೊಳ್ಳಲಾಗುವುದು ಎಂದು ಎಂ.ಬಿ. ಪಾಟೀಲ ತಿಳಿಸಿದರು.
Youtube Video

ಮತ್ತೊಂದೆಡೆ, ತಿಡಗುಂದಿ ಅಕ್ವಾಡಕ್ಟ್ ಕಾಲುವೆ ಸುಮಾರು 60 ಕಿ. ಮೀ. ಇದೆ.  ಈ ಕಾಲುವೆಯ 56 ಕಿ. ಮೀ. ಬಳಿ ಪೈಪ್ ಲೈನ್ ಅಳವಡಿಸಿಕೊಂಡು ಇಂಡಿ ತಾಲೂಕಿನ 16 ಸಣ್ಣ ನೀರಾವರಿ ಕೆರೆಗಳನ್ನು 51 ದಿನಗಳಲ್ಲಿ ತುಂಬಿಸಲು ಯೋಜನೆ ರೂಪಿಸಲಾಗಿದ್ದು,  ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ರೂ.140 ಕೋ. ಈ ಯೋಜನೆ ಅನುಷ್ಠಾನಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.  ಈ ಯೋಜನೆಗೆ ಎಲ್ಲ ಶಾಸಕರು, ಸಂಸದರು, ಸಚಿವರು ಮತ್ತು ಸರಕಾರದಿಂದ ಸ್ಪಂದನೆ ಸಿಕ್ಕಿದೆ.  ಇವರೆಲ್ಲರಿಗೂ ತಾವು ಕೃತಜ್ಞತೆ ಸಲ್ಲಿಸುವುದಾಗಿ ಎಂ. ಬಿ. ಪಾಟೀಲ ಇದೇ ಸಂದರ್ಭದಲ್ಲಿ ತಿಳಿಸಿದರು.
Published by: Latha CG
First published: October 7, 2020, 1:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories