HOME » NEWS » State » FORMER MINISTER M B PATIL HITS OUT AT BJP GOVERNMENT AT HAVERI TODAY LG

ರಾಜ್ಯ ಸರ್ಕಾರಕ್ಕೆ ಕೊರೋನಾ ದೊಡ್ಡ ಜಾತ್ರೆಯಂತಾಗಿದೆ; ಕಿಡಿಕಾರಿದ ಮಾಜಿ ಸಚಿವ ಎಂ.ಬಿ.ಪಾಟೀಲ

ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಬೇಕು. ನಿವೃತ್ತ ನ್ಯಾಯಾಧೀಶರು ಬೇಡ, ಅವರು ಮುಚ್ಚಿ ಹಾಕಿ ಬಿಡುತ್ತಾರೆ. ಈ ಬಗ್ಗೆ ಸರಕಾರ ಶ್ವೇತ ಪತ್ರ ಹೊರಡಿಸಬೇಕು. ತಪ್ಪು ಮಾಡಿದ ಸಚಿವ, ಅಧಿಕಾರಿಗಳ ಮೇಲೆ ಎಷ್ಟೇ ದೊಡ್ಡವರಿದ್ದರೂ ನಿರ್ದಾಕ್ಷಿಣ್ಯ ಕ್ರಮವಾಗಲಿ. ಇವರನ್ನು ಜೈಲಿಗೆ ಹಾಕಬೇಕು ಎಂದು ಒತ್ತಾಯಿಸಿದರು‌.

news18-kannada
Updated:August 3, 2020, 5:42 PM IST
ರಾಜ್ಯ ಸರ್ಕಾರಕ್ಕೆ ಕೊರೋನಾ ದೊಡ್ಡ ಜಾತ್ರೆಯಂತಾಗಿದೆ; ಕಿಡಿಕಾರಿದ ಮಾಜಿ ಸಚಿವ ಎಂ.ಬಿ.ಪಾಟೀಲ
ಎಂಬಿ ಪಾಟೀಲ್
  • Share this:
ಹಾವೇರಿ(ಆ.03): ಹೆಮ್ಮಾರಿ ಕೊರೋನಾದಿಂದ ಇಡೀ ವಿಶ್ವ ತಣ್ಣಲ್ಲಣಗೊಂಡಿದೆ. ಆದರೆ ಕರ್ನಾಟಕ ಸರಕಾರಕ್ಕೆ ಇದು ಕಲ್ಪವೃಕ್ಷ, ಕಾಮಧೇನು, ದೊಡ್ಡ ಜಾತ್ರೆ, ಹಬ್ಬವಾಗಿದೆ ಎಂದು ಹಾವೇರಿಯಲ್ಲಿ ಮಾಜಿ ಸಚಿವ ಎಂ ಬಿ ಪಾಟೀಲ ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದರು.

ಬಿಜೆಪಿ ಸರಕಾರದ ಸಚಿವರು, ಅಧಿಕಾರಿಗಳು ಈ ಕೊರೋನಾ ಅವಕಾಶವನ್ನು ಲೂಟಿ ಹೊಡೆಯಲು ಬಳಸಿಕೊಳ್ಳುತ್ತಿದ್ದಾರೆ. ಕೊರೋನಾ ಸಂಕಷ್ಟ ಕಾಲದಲ್ಲಿ ಎಲ್ಲರೂ ಸಹಾಯ ಮಾಡಿದ್ದಾರೆ. ಆದರೆ ಇವರು ಏನು ಮಾಡುತ್ತಿದ್ದಾರೆ? ಅಧಿಕೃತ ಮಾಹಿತಿ ಪ್ರಕಾರ ಆರೋಗ್ಯ ಇಲಾಖೆ ಏಳುನೂರು ಕೋಟಿ, ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಎರಡುನೂರು ಕೋಟಿ, ಒಟ್ಟಾರೆ 4167 ಕೋಟಿ ರೂಪಾಯಿ ಬಳಸಿದ್ದಾರೆ. ಈ ಕೊರೋನಾ ಅನುದಾನದಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಲೂಟಿ ಮಾಡಿದ್ದಾರೆ.  ಸಿಎಂ, ಸಚಿವರು, ಅಧಿಕಾರಿಗಳು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

Sushant Singh Rajput: ಸಾಯುವುದಕ್ಕೂ ಮೊದಲು ತನ್ನ ಹೆಸರನ್ನೇ ಎರಡು ಗಂಟೆ ಗೂಗಲ್ ಮಾಡಿದ್ದ ಸುಶಾಂತ್ ಸಿಂಗ್!

ಇದೇ ವೇಳೆ ಎಂ.ಬಿ.ಪಾಟೀಲ, ನಮಗೂ ನೋಟಿಸ್ ಕೊಡಿ ನಾನು ಉತ್ತರ ಕೊಡುತ್ತೇನೆ ಎಂದು ಬಿಜೆಪಿ ಸರಕಾರಕ್ಕೆ ಸವಾಲು ಹಾಕಿದರು. ಈ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಬೇಕು. ನಿವೃತ್ತ ನ್ಯಾಯಾಧೀಶರು ಬೇಡ, ಅವರು ಮುಚ್ಚಿ ಹಾಕಿ ಬಿಡುತ್ತಾರೆ. ಈ ಬಗ್ಗೆ ಸರಕಾರ ಶ್ವೇತ ಪತ್ರ ಹೊರಡಿಸಬೇಕು. ತಪ್ಪು ಮಾಡಿದ ಸಚಿವ, ಅಧಿಕಾರಿಗಳ ಮೇಲೆ ಎಷ್ಟೇ ದೊಡ್ಡವರಿದ್ದರೂ ನಿರ್ದಾಕ್ಷಿಣ್ಯ ಕ್ರಮವಾಗಲಿ. ಇವರನ್ನು ಜೈಲಿಗೆ ಹಾಕಬೇಕು ಎಂದು ಒತ್ತಾಯಿಸಿದರು‌.

ತನಿಖೆಗೆ ಬೇಕಾದ ಮಾಹಿತಿ, ದಾಖಲೆ ನಮ್ಮ ಬಳಿ ಇದೆ. ಅತ್ಯಂತ ಕೆಟ್ಟದಾದ ಕೆಲಸ ಬಿಜೆಪಿ ಸರಕಾರ ಮಾಡಿದೆ. ವೆಂಟಿಲೇಟರ್ಸ್ ಗಳು ಕಳಪೆ ಗುಣಮಟ್ಟದವು. ಇವು ಉಪಯೋಗಿಸಿದ, ಮುರಿದ ಸೆಕೆಂಡ್ ಹ್ಯಾಂಡ್ ಗಳು. ಯಾವುದಕ್ಕೂ ಅಗತ್ಯ ದಾಖಲಾತಿಗಳಿಲ್ಲ.ಕಳಪೆ ಮಟ್ಟದ ಪಿಪಿಇ ಕಿಟ್ ನ್ನು ವೈದ್ಯರು,ಆರೋಗ್ಯ ಸಿಬ್ಬಂದಿಗೆ ನೀಡಿದ್ದಾರೆ‌. ಇದು ದುಡ್ಡು ಹೊಡೆಯುವುದರ ಜೊತೆ,  ಕ್ರಿಮಿನಲ್ ಅಪರಾಧವಾಗಿದೆ ಎಂದು ಕಿಡಿಕಾರಿದರು.

ಇನ್ನೂ ಸರಕಾರದಿಂದ ನೀಡಿದ ಆಹಾರ ಕಿಟ್ ಮೇಲೆ ತಮ್ಮ ಹೆಸರು, ಸ್ಟಿಕರ್ ಹಚ್ಚಿದರು. ಅದು ಸ್ವಂತದ್ದಾಗಿದ್ದರೆ ಹೆಸರು ಹಾಕಲಿ, ಆದರೆ ಅದು ಸರಕಾರದ್ದು.ಆಹಾರ ಕಿಟ್ ಕಾರ್ಮಿಕರರಿಗೆ ನೀಡಿಲ್ಲ. ತಮ್ಮ ಓಟರ್ಸ್, ಕಾರ್ಯಕರ್ತರಿಗೆ ಕೊಟ್ಟಿದ್ದಾರೆ. ನೋಟ್ ಬ್ಯಾನ್ ಮಾಡಿದ ರೀತಿ, ಲಾಕ್ ಡೌನ್ ಮಾಡಿದರು. ಭಾಷಣ ಮಾಡಿ, ದಿಢೀರ್ ಲಾಕ್ ಡೌನ್ ಘೋಷಣೆ ಮಾಡಿದರು.
Youtube Video
ಇದು ಕೇಂದ್ರ ಸರಕಾರ ಮಾಡಿದ ದೊಡ್ಡ ತಪ್ಪು, ಜನರ ಜೀವನ ಜೊತೆ ಆಟವಾಡಿದರು. 18 ದಿನದಲ್ಲಿ ಮಹಾಭಾರತ ಮುಗಿಯಿತು. 21 ದಿನದಲ್ಲಿ ಕೊರೋನಾ ಮುಕ್ತ ಮಾಡ್ತಿವಿ ಎಂದರು. ಮಾಡಿದ್ರಾ ಇವರು? ಎಲ್ಲಾ ಪ್ರಚಾರಕ್ಕಾಗಿ ಮಾತನಾಡುತ್ತಾರೆ. ಕೇಂದ್ರ, ರಾಜ್ಯ ಸರಕಾರ ಕೊರೋನಾ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು.
Published by: Latha CG
First published: August 3, 2020, 5:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories