Agnipath: ಯುವಕ 21 ವರ್ಷಕ್ಕೆ ಮದುವೆಯಾಗಿ ಮಕ್ಕಳು ಮಾಡ್ತಾನಾ? ಕೆ ಎಸ್ ಈಶ್ವರಪ್ಪ

ಮಾಜಿ ಸಿಎಂ ಆದವರು ಈ ರೀತಿ ಹೇಳಿಕೆ ನೀಡಲು ನಾಚಿಕೆ ಆಗಲ್ವಾ? ಸಿದ್ದರಾಮಯ್ಯ ಎಷ್ಟು ವರ್ಷಕ್ಕೆ ಮದುವೆ ಆದ್ರು? ಎಷ್ಟು ವರ್ಷಕ್ಕೆ ಮಕ್ಕಳನ್ನ ಮಾಡಿದ್ರು ಎಂದು ವೈಯಕ್ತಿಕವಾಗಿ ಟೀಕೆ ಮಾಡಿದರು. ಸಿದ್ದರಾಮಯ್ಯ ಸಂವಿಧಾನಕ್ಕೆ ದ್ರೋಹ ಮಾಡ್ತಿದ್ದಾರೆ.  ಅಂಬೇಡ್ಕರ್ ಗೆ ಅವಮಾನ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಕೆ ಎಸ್ ಈಶ್ವರಪ್ಪ

ಕೆ ಎಸ್ ಈಶ್ವರಪ್ಪ

  • Share this:
ಅಗ್ನಿಪಥ್ ಯೋಜನೆ (Agnipath Scheme) ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (Former Minister KSEshwarappa) ಶಿವಮೊಗ್ಗದಲ್ಲಿ ಮಾತನಾಡಿದರು. ರೈಲು (Train) ಸುಟ್ಟಿದ್ದಾರೆ ಅಷ್ಟೇ ಅಲ್ಲ, ಈಡಿ ದೇಶಕ್ಕೆ ಬೆಂಕಿ ಹಚ್ಚಿದ್ದಾರೆ. ಅಧಿಕಾರದ ಲಾಲಸೆ, ಕಾಂಗ್ರೆಸ್ (Congress) ಪಕ್ಷ ಗೂಂಡಾಗಳ ಕೈಗೆ ಸಿಲುಕಿ ದೇಶಕ್ಕೆ ಬೆಂಕಿ ಹಚ್ಚುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ನಿರುದ್ಯೋಗ ಯುವಕರನ್ನು (Youths) ಏಕೆ ದಾರಿ ತಪ್ಪಿಸುತ್ತೀರಾ? ಕಾಂಗ್ರೆಸ್ ನವರು ಯುವಕರು ಭಯೋತ್ಪಾದಕ ರೀತಿ ಆಗ್ತಾರೆ ಅಂತಾರೆ. ನಮ್ಮ ದೇಶದ ಯುವಕರು ಭಯೋತ್ಪಾದಕರಾಗಲ್ಲ. ಕಾಂಗ್ರೆಸ್ ನವರು ಭಯೋತ್ಪಾದಕರಾಗಿ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಅಗ್ನಿಪಥ್ ಯೋಜನೆಗೆ ಒಳಪಟ್ಟ ಯುವಕ 21 ವರ್ಷಕ್ಕೆ ನಿರುದ್ಯೋಗಿ ಅಗ್ತಾನೆ ಎಂದು ಸಿದ್ದರಾಮಯ್ಯನವರು ಹೇಳಿದ್ದರು. ಈ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಈಶ್ವರಪ್ಪ ವೈಯಕ್ತಿಕ ನಿಂದನೆಗೆ ಮುಂದಾದರು. ಏನ್ರಿ ಯುವಕ 21 ವರ್ಷಕ್ಕೆ ಮದುವೆಯಾಗಿ ಮಕ್ಕಳು ಮಾಡ್ತಾನಾ? ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವ್ವಾ?

ಮಾಜಿ ಸಿಎಂ ಆದವರು ಈ ರೀತಿ ಹೇಳಿಕೆ ನೀಡಲು ನಾಚಿಕೆ ಆಗಲ್ವಾ? ಸಿದ್ದರಾಮಯ್ಯ ಎಷ್ಟು ವರ್ಷಕ್ಕೆ ಮದುವೆ ಆದ್ರು? ಎಷ್ಟು ವರ್ಷಕ್ಕೆ ಮಕ್ಕಳನ್ನ ಮಾಡಿದ್ರು ಎಂದು ವೈಯಕ್ತಿಕವಾಗಿ ಟೀಕೆ ಮಾಡಿದರು. ಸಿದ್ದರಾಮಯ್ಯ ಸಂವಿಧಾನಕ್ಕೆ ದ್ರೋಹ ಮಾಡ್ತಿದ್ದಾರೆ.  ಅಂಬೇಡ್ಕರ್ ಗೆ ಅವಮಾನ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ:  Agnipath: ಸೇನೆಯಲ್ಲಿ RSSನವರನ್ನು ತುಂಬುವ ಪ್ಲಾನ್ ಆಗ್ನಿಫಥ್; ಹೆಚ್ ಡಿ ಕುಮಾರಸ್ವಾಮಿ ಆರೋಪ

ರಾಹುಲ್ ಗಾಂಧಿಯನ್ನು ವಿಚಾರಣೆ ಕರೆದ್ರಾ ತಪ್ಪಾ?

ಇನ್ನೂ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಇಡಿ ವಿಚಾರಣೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಪ್ರತಿಭಟನೆಗೆ ಅವಕಾಶ ಇದೆ. ತಪ್ಪಿದ್ದರೆ ವಿರೋಧ ಮಾಡಬಹುದು. ರಾಹುಲ್ ಗಾಂಧಿ ವಿಚಾರಣೆಗೆ ಕರೆದ್ರೆ ತಪ್ಪಾ? ರಾಹುಲ್ ಗಾಂಧಿ ಈ ದೇಶದ ಒಬ್ಬ ಪ್ರಜೆ. ಅವರನ್ನು ಇನ್ನು ಬಂಧಿಸಿಲ್ಲ, ಜೈಲಿಗೆ ಕಳುಹಿಸಿಲ್ಲ. ವಿಚಾರಣೆಗೆ ಕರೆಯಲೇ ಬೇಡಿ ಅಂತಾ ನಿಮ್ಮ ಎಐಸಿಸಿ ಯಲ್ಲಿ ಒಂದು ರೆಸ್ಯೂಲುಷನ್ ಮಾಡಿ. ಅದರಲ್ಲೂ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ವಿಚಾರಣೆಗೆ ಕರೆಯಲೇ ಬೇಡಿ ಅಂತಾ ರೆಸ್ಯೂಲುಷನ್ ಮಾಡಿ ಎಂದು ವ್ಯಂಗ್ಯ ಮಾಡಿದರು.

ಹೀಗಾಗಿಯೇ ಕಾಂಗ್ರೆಸ್ ಇಡೀ ದೇಶದಲ್ಲಿ ಸೋಲುತ್ತಿದೆ. ಕಾಂಗ್ರೆಸ್ ಗಂಧ ಗಾಳಿಯೇ ಇಲ್ಲದ ಸಿದ್ದರಾಮಯ್ಯ, ಡಿಕೆಶಿ, ನಲಪಾಡ್ ಅಂತಹವರ ಕೈಯಲ್ಲಿ ಸಿಕ್ಕಿ ಪಕ್ಷ ನರಳುತ್ತಿದೆ.

ಆಗ್ನಿಪಥ್ ಹಲವು ರಾಷ್ಟ್ರಗಳಲ್ಲಿದೆ

ಅಗ್ನಿಪಥ್ ಯೋಜನೆ ಈ ದೇಶದಲ್ಲಿ ಮಾತ್ರ ಇಲ್ಲ. ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಈ ಯೋಜನೆ ಇದೆ. ಅಗ್ನಿಪಥ್ ದ ವಿಚಾರ ತಿರುಚಿ ಯುವಕರ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ನೇತೃತ್ವ ಇದ್ದರೆ ಅದನ್ನು ತಡೆಯುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.

ಮೋದಿ ರಾಜಕಾರಣ ಮಾಡದೇ ಏನು ಪೇಪರ್ ಮೆಂಟ್ ಹಂಚೋದಕ್ಕೆ ಬರುತ್ತಿದ್ದಾರಾ? ಯುವಕರು ಆರೋಗ್ಯವಂತರಾಗಿ ಸದೃಢವಾಗಿ ಇರಲಿ ಅಂತಾ ಯೋಗ ಬಗ್ಗೆ ಪ್ರಚಾರ ಮಾಡಲು ಬರುತ್ತಿದ್ದಾರೆ. ಮೋದಿ ರಾಜಕಾರಣನು ಮಾಡ್ತಾರೆ, ಅಭಿವೃದ್ಧಿ ಕೆಲಸವನ್ನು ಮಾಡ್ತಾರೆ ಎಂದು ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದರು.

ಡಿಕೆ ಶಿವಕುಮಾರ್ ಪಠ್ಯ ಪುಸ್ತಕ ಹರಿದು ಸರಸ್ವತಿಗೆ ಅವಮಾನ ಮಾಡಿದ್ದಾರೆ. ಕೈಯಲ್ಲಿ ಆಗದಿರುವವರು ಮೈಯೆಲ್ಲಾ ಪರಚಿಕೊಂಡ್ರು ಅನ್ನುವ ಹಾಗೆ ಏನು ಕೆಲಸ ಇಲ್ಲದಿರುವವರು ಈ ರೀತಿ‌ ಮಾಡ್ತಾರೆ ಅಷ್ಟೇ ಎಂದು ಹೇಳಿದರು.

ಇದನ್ನೂ ಓದಿ: Siddaramaiah: ಯೋಗ ದಿನಾಚರಣೆ ಇನ್ವಿಟೇಷನ್‌ನಲ್ಲಿ ಹೆಸರು ಹಾಕಿದ್ದಕ್ಕೆ ಸಿದ್ದು ಸಿಡಿಮಿಡಿ! ಬಾಗಲಕೋಟೆ ಡಿಸಿಗೆ ಏಕವಚನದಲ್ಲೇ ತರಾಟೆ

ಏನಿದು ಅಗ್ನಿಪಥ್ ಯೋಜನೆ?:

ಅಗ್ನಿಪಥ್ ಸೈನಿಕರು, ವಾಯು ಸೇನೆ ಮತ್ತು ನಾವಿಕರು ಸೇರ್ಪಡೆಗೊಳ್ಳಲು ಪ್ಯಾನ್ ಇಂಡಿಯಾ ಮೆರಿಟ್ ಆಧಾರಿತ ನೇಮಕಾತಿ ಯೋಜನೆಯಾಗಿದೆ. ಈ ಯೋಜನೆಯು ಯುವಕರಿಗೆ ಸಶಸ್ತ್ರ ಪಡೆಗಳ ನಿಯಮಿತ ಕೇಡರ್‌ನಲ್ಲಿ ಸೇವೆ ಸಲ್ಲಿಸಲು ಅವಕಾಶವನ್ನು ಒದಗಿಸುತ್ತದೆ. ‘ಅಗ್ನಿಪಥ’ ಯೋಜನೆಯಡಿ ನೇಮಕಗೊಂಡವರೆಲ್ಲರನ್ನು ‘ಅಗ್ನಿವೀರ್’ ಎಂದು ಕರೆಯಲಾಗುವುದು.

ತರಬೇತಿ ಅವಧಿ ಸೇರಿದಂತೆ 4 ವರ್ಷಗಳ ಸೇವಾ ಅವಧಿಗೆ ಅಗ್ನಿವೀರ್‌ಗಳನ್ನು ನೋಂದಾಯಿಸಿಕೊಳ್ಳಲಾಗುತ್ತದೆ. ನಾಲ್ಕು ವರ್ಷಗಳ ನಂತರ, ಕೇವಲ 25% ಅಗ್ನಿವೀರ್‌ಗಳನ್ನು ಅರ್ಹತೆ, ಇಚ್ಛೆ ಮತ್ತು ವೈದ್ಯಕೀಯ ಫಿಟ್‌ನೆಸ್ ಆಧಾರದ ಮೇಲೆ ನಿಯಮಿತ ಕೇಡರ್‌ನಲ್ಲಿ ಉಳಿಸಿಕೊಳ್ಳಲಾಗುತ್ತದೆ.

1.25 ಲಕ್ಷ ಹುದ್ದೆಗಳು ಖಾಲಿ:

ಕಳೆದ ಕೆಲ ವರ್ಷಗಳಿಂದ ಸೇನಾ ನೇಮಕಾತಿ ಕಡಿಮೆಯಾಗಿದ್ದು, ಸೇನಾ ಸಿಬ್ಬಂದಿಗಳ ಸಂಕ್ಯೆಯಲ್ಲಿಯೂ ಕಡಿಮೆ ಇದೆ. ಇದರಿಂದಾಗಿ ಪ್ರಸ್ಥುತ ಭಾರತೀಯ ವಾಯು ಸೇನೆ, ನೌಆ ಪಡೆ ಮತ್ತು ಭೂ ಸೇನಯಲ್ಲಿ ಒಟ್ಟು 1.25 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಗ್ನಿಪಥ್ ಯೋಜನೆಯಿಂದ ಈ ಖಾಲಿ ಇರುವ ಅನೇಕ ಹುದ್ದೆಗಳು ತುಂಬಲಿದೆ ಎಂಬ ನಿರೀಕ್ಷೆಯಿದೆ.
Published by:Mahmadrafik K
First published: