Kodagu: ಅಪ್ಪಚ್ಚು ರಂಜನ್, ಜೀವಿಜಯ ಜೊತೆಗಿರುವ ಸಂಪತ್ ಫೋಟೋಗಳು ವೈರಲ್ 

ಸಂಪತ್‍ನ ಚಿಕ್ಕಪ್ಪನ ಮಗ ರಾಜೇಶ್ ಎಂಬಾತ ನನ್ನ ಮಗನ ಬಳಿ ಕೆಲಸ ಮಾಡುತ್ತಾನೆ. ಅವನು ಮದುವೆಗೆ ಆಹ್ವಾನ ಪತ್ರಿಕೆ ಕೊಟ್ಟಿದ್ದ ಅನ್ನಿಸುತ್ತೆ . ಸಾಮಾನ್ಯವಾಗಿ ನಾನು ಆಹ್ವಾನ ಪತ್ರಿಕೆ ಕೊಟ್ಟವರ ಎಲ್ಲರ ಮದುವೆಗೆ ಹೋಗುತ್ತೇನೆ. ಹೀಗಾಗಿ ಹೋಗಿರಬಹುದು. ಇಲ್ಲ ಫೋಟೋ ಎಡಿಟಿಂಗ್ ಕೂಡ ಮಾಡಿರಬಹುದು.

ಜೀವಿಜಯ ಜೊತೆ ಸಂಪತ್

ಜೀವಿಜಯ ಜೊತೆ ಸಂಪತ್

  • Share this:
ಕೊಡಗು: ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರ ಕಾರಿನ ಮೇಲೆ ಮೊಟ್ಟೆ (Egg) ಹೊಡೆದಿದ್ದ ಸೋಮವಾರಪೇಟೆಯ ಸಂಪತ್ (Sampath) ಯಾವ ಪಕ್ಷದ ಕಾರ್ಯಕರ್ತ ಎನ್ನುವ ಗೊಂದಲ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ (MLA Appachchu Ranjan) ಅವರೊಂದಿಗೆ ಆರ್​ಎಸ್‍ಎಸ್‍ನ (RSS) ಬೈಟಕ್​ನಲ್ಲಿ ಆರೋಪಿ ಸಂಪತ್ ಇರುವ ಫೋಟೋ ಭಾನುವಾರ ವೈರಲ್ (Viral Photo) ಆಗಿತ್ತು. ಅದರ ಹಿಂದೆಯೇ ಸೋಮವಾರ ಮಾಜಿ ಸಚಿವ ವಿ.ಎ. ಜೀವಿಜಯ (Former Minister VA Jeevijaya) ಅವರು ಆರೋಪಿ ಸಂಪತ್‍ನ ಸಹೋದರನ ಮದುವೆಯಲ್ಲಿ ಭಾಗಹಿಸಿರುವ ಮತ್ತು ಜೀವಿಜಯ ಅವರೊಂದಿಗೆ ಸಂಪತ್ ಇರುವ ಫೋಟೋವು ಹರಿದಾಡಿದೆ. ಹೀಗಾಗಿ ಸಂಪತ್ ಬಿಜೆಪಿ ಮತ್ತು ಕಾಂಗ್ರೆಸ್ ನವನು ಎನ್ನುವ ಆರೋಪ ಪ್ರತ್ಯಾರೋಪ ಮತ್ತಷ್ಟು ತೀವ್ರಗೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು, ಆ ಫೋಟೋ 6-7 ವರ್ಷಗಳ ಹಿಂದಿನದ್ದು ಎನ್ನಿಸುತ್ತದೆ. ಅದು ಮಡಿಕೇರಿಯ ಜೂನಿಯರ್ ಕಾಲೇಜ್‍ನಿಂದ ಮೆರವಣಿಗೆ ಹೋದ ಫೋಟೋ. ಅಂದು  ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನಸೇರಿದ್ದರು.

 ಆ ಫೋಟೋ ನೋಡಿ ಆಶ್ಚರ್ಯ ಆಯ್ತು

ಯಾರು ಹಿಂದೆ ನಿಂತಿದ್ದರು ಅಂತ ಹೇಳೋಕಾಗಲ್ಲ. ನನಗೆ ಆ ಫೋಟೋ ನೋಡಿ ಆಶ್ವರ್ಯ ಆಗಿದೆ ಎಂದಿದ್ದಾರೆ. ಆರ್‍ಎಸ್‍ಎಸ್‍ನಲ್ಲಿ ಯಾರಿಗೂ ಅಂತಸ್ತು ಶ್ರೀಮಂತಿಕೆ ಅನ್ನೋದು ಇಲ್ಲ. ಹಾಗೆ ಅವರು ಚಡ್ಡಿ ಹಾಕಿಕೊಂಡು ನಮ್ಮ ಹಿಂದೆ ನಿಂತಿರಬಹುದು. ನಮ್ಮ ಬಗ್ಗೆ ಅಭಿಮಾನ ಇರುವವರು ಬಂದು ನಿಲ್ಲೋದು ಫೋಟೋ ತೆಗೆಯೋದು ಸಾಮಾನ್ಯ. ಅವರ ತಂದೆಯವರೂ ಕೂಡ ಹೇಳಿದ್ದಾರೆ ನಾವು ಕಾಂಗ್ರೆಸ್‍ನವರು ಅಂತ. ಜೆಡಿಎಸ್‍ನಲ್ಲಿ ಇದ್ದು ನಂತರ ಕಾಂಗ್ರೆಸ್‍ಗೆ ಬಂದಿದ್ದು ಅಂತ ಹೇಳಿದ್ದಾರೆ ಎಂದು ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

Egg Sampath is not my follower says former minister jeevijaya rsk mrq
ಅಪ್ಪಚ್ಚು ರಂಜನ್ ಜೊತೆ ಸಂಪತ್


ಇದನ್ನೂ ಓದಿ:  Bee Hotel: ಬೆಂಗಳೂರಿನಲ್ಲಿ‌ ಜೇನು ಹೋಟೆಲ್! 50 ಕಡೆ ಹೊಸ ಸಾಹಸ

ನಾನು ಆತನಿಗೆ ಜಾಮೀನು ನೀಡಿಲ್ಲ

ನಾನು ಮೊನ್ನೆ ಕುಶಾಲನಗರ ಠಾಣೆಗೆ ಹೋದಾಗ ಆತ ಇರಲಿಲ್ಲ. ಆದರೆ ಮೊಟ್ಟೆ ಹೊಡೆದದ್ದು ಈ ವ್ಯಕ್ತಿ ಅಂತ ಫೋಟೋ ತೋರಿಸಿದ್ದರು. ಆಗ ನನಗೆ ಅವನ್ಯಾರು ಅನ್ನೋದು ಗೊತ್ತಾಗಿದ್ದು ಅಷ್ಟೇ. ನಾನು ಆತನನ್ನು ಬಿಡಿಸಿಲ್ಲ, ನಾನು ಬಿಡಿಸಿದ್ದು ನಮ್ಮ ಕಾರ್ಯಕರ್ತರನ್ನು ಮಾತ್ರ. ನಾನೂ ಕೂಡ ಜಾಮೀನು ಕೊಡಲಿಲ್ಲ, ಜಾಮೀನು ಕೊಟ್ಟಿದ್ದು ನಮ್ಮ ಕಾರ್ಯಕರ್ತರು. ನಮ್ಮವರು 18ರ ರಾತ್ರಿ ಬಿಡುಗಡೆಯಾದರು.

ಅದಕ್ಕಿಂತ ಸಾಕ್ಷಿ ಇನ್ನೇನು ಬೇಕು?

ಆತ ಅರೆಸ್ಟ್ ಆಗಿ ಬಿಡುಗಡೆಯಾಗಿದ್ದು ಆ.20 ರಂದು. ನಮಗೂ ಮೊಟ್ಟೆ ಹೊಡೆದ ಸಂಪತ್‍ಗೂ ಸಂಬಂಧವಿಲ್ಲ ಎಂದರು ಶಾಸಕ ರಂಜನ್ ಹೇಳಿದ್ದಾರೆ. ಆತ ತಮ್ಮ ಫಾಲೋವರ್ ಅಲ್ಲ ಅಂತ ಜೀವಿಜಯ ಅವರು ಎದೆ ಮುಟ್ಟಿಕೊಂಡು ಹೇಳಲಿ. ಸಂಪತ್ ಹಾಗೂ ಅವರ ಅಪ್ಪನೇ ಕಾಂಗ್ರೆಸ್ ಮತ್ತು ಜೀವಿಜಯ ಅವರ ಅನುಯಾಯಿ ಅಂದಿದ್ದಾರೆ. ಅದಕ್ಕಿಂತ ಸಾಕ್ಷಿ ಇನ್ನೇನು ಬೇಕಾಗುತ್ತದೆ ಎಂದರು.

ಜೀವಿಜಯ ಪ್ರತಿಕ್ರಿಯೆ

ಇನ್ನು ತಮ್ಮೊಂದಿಗೆ ಮದುವೆಯೊಂದರಲ್ಲಿ ಸಂಪತ್ ಇರುವ ಫೋಟೋ ಕುರಿತು ಪ್ರತಿಕ್ರಿಯಿಸಿರುವ ವಿ.ಎ. ಜೀವಿಜಯ ಅವರು ಸಂಪತ್‍ನ ಚಿಕ್ಕಪ್ಪನ ಮಗ ರಾಜೇಶ್ ಎಂಬಾತ ನನ್ನ ಮಗನ ಬಳಿ ಕೆಲಸ ಮಾಡುತ್ತಾನೆ. ಅವನು ಮದುವೆಗೆ ಆಹ್ವಾನ ಪತ್ರಿಕೆ ಕೊಟ್ಟಿದ್ದ ಅನ್ನಿಸುತ್ತೆ . ಸಾಮಾನ್ಯವಾಗಿ ನಾನು ಆಹ್ವಾನ ಪತ್ರಿಕೆ ಕೊಟ್ಟವರ ಎಲ್ಲರ ಮದುವೆಗೆ ಹೋಗುತ್ತೇನೆ. ಹೀಗಾಗಿ ಹೋಗಿರಬಹುದು. ಇಲ್ಲ ಫೋಟೋ ಎಡಿಟಿಂಗ್ ಕೂಡ ಮಾಡಿರಬಹುದು. ಹಾಗೆಂದ ಮಾತ್ರಕ್ಕೆ ಸಂಪತ್ ನನ್ನ ಫಾಲೋವರ್ ಅಲ್ಲ ಎಂದಿದ್ದಾರೆ.

ಒಟ್ಟಿನಲ್ಲಿ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಹೊಡೆದಿದ್ದ ಸಂಪತ್ ಯಾವ ಪಕ್ಷದ ಕಾರ್ಯಕರ್ತ ಎನ್ನುವ ಗೊಂದಲ ಇನ್ನೂ ಬಗೆಹರಿದಿಲ್ಲ. ಮತ್ತೊಂದೆಡೆ ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಹೊಡೆದ ದಿನವೇ ನನ್ನ ಕಾರಿಗೂ ಮಡಿಕೇರಿಯಲ್ಲಿ ಮೊಟ್ಟೆ ಹೊಡೆದಿದ್ದಾರೆ ಎಂದು ಮಾಜಿ ಸಚಿವ ಜೀವಿಜಯ ಹೇಳಿದ್ದಾರೆ.

Egg Sampath is not my follower says former minister jeevijaya rsk mrq
ಗಣವೇಷಧಾರಿಯಾಗಿ ಸಂಪತ್


ಇದನ್ನೂ ಓದಿ:  Crime News: ಸರ್ಕಾರಿ ಕೆಲಸ ಸಿಗದ್ದಕ್ಕೆ ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ!

ಅಂದು ನನಗೆ ಶಬ್ಧ ಕೇಳಿತ್ತು. ಆದರೆ ಅಷ್ಟಾಗಿ ನಾನು ಗಮನಿಸಿರಲಿಲ್ಲ, ಮರುದಿನ ನನ್ನ ಡ್ರೈವರ್ ಕಾರು ತೊಳೆಯುವಾಗ ಗೊತ್ತಾಯಿತು. ನನ್ನ ಕಾರಿನ ಮೇಲೂ ಮೊಟ್ಟೆ ದಾಳಿ ನಡೆದಿದೆ. ಇಂತಹ ಘಟನೆಗಳು ನಡೆಯಬಾರದು, ಇದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.
Published by:Mahmadrafik K
First published: