• Home
  • »
  • News
  • »
  • state
  • »
  • Janardhan Reddy: ಬಳ್ಳಾರಿಯಿಂದ ಜನಾರ್ದನ ರೆಡ್ಡಿ ಪತ್ನಿ ಕಣಕ್ಕೆ? ಕೆಆರ್​ಪಿಪಿ ಬೃಹತ್​ ಸಮಾವೇಶಕ್ಕೆ ಅರುಣಾ ಲಕ್ಷ್ಮಿ ಸಿದ್ಧತೆ!

Janardhan Reddy: ಬಳ್ಳಾರಿಯಿಂದ ಜನಾರ್ದನ ರೆಡ್ಡಿ ಪತ್ನಿ ಕಣಕ್ಕೆ? ಕೆಆರ್​ಪಿಪಿ ಬೃಹತ್​ ಸಮಾವೇಶಕ್ಕೆ ಅರುಣಾ ಲಕ್ಷ್ಮಿ ಸಿದ್ಧತೆ!

ಜನಾರ್ದನ ರೆಡ್ಡಿ, ಮಾಜಿ ಸಚಿವ

ಜನಾರ್ದನ ರೆಡ್ಡಿ, ಮಾಜಿ ಸಚಿವ

ಜನವರಿ 11 ರಂದು ರೆಡ್ಡಿ ಬರ್ತ್​ಡೇ ಪ್ರಯುಕ್ತ ಬಳ್ಳಾರಿ ನಗರದಲ್ಲಿ ಕೆಆರ್​ಪಿಪಿ ಸಮಾವೇಶಕ್ಕೆ ಸಿದ್ದತೆ ನಡೆದಿದ್ದು, ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಸಮಾವೇಶದ ನೇತೃತ್ವ ವಹಿಸಲಿದ್ದಾರೆ. ಅಂದೇ ಅರುಣಾ ಲಕ್ಷ್ಮಿ ಸ್ಫರ್ಧೆ ಬಗ್ಗೆ ಘೋಷಣೆ ಮಾಡ್ತಾರೆ ಎನ್ನಲಾಗಿದೆ.

  • Share this:

ಬಳ್ಳಾರಿ: ಮಾಜಿ ಸಚಿವ ಜನಾರ್ದನರೆಡ್ಡಿ (Janardhan Reddy) ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (Kalyana Rajya Pragati Paksha) ಘೋಷಿಸಿದ್ದಾರೆ. ಇದರ ನಡುವೆ ಬಳ್ಳಾರಿ ನಗರ (Bellary) ಕ್ಷೇತ್ರದಿಂದ ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ (Aruna Lakshmi )ಅವರನ್ನು ಕಣಕ್ಕಿಳಿಯೋ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಜನವರಿ 11 ರಂದು ರೆಡ್ಡಿ ಬರ್ತ್​ಡೇ ಪ್ರಯುಕ್ತ ಬಳ್ಳಾರಿ ನಗರದಲ್ಲಿ ಕೆಆರ್​ಪಿಪಿ (KRPP) ಸಮಾವೇಶಕ್ಕೆ ಸಿದ್ದತೆ ನಡೆದಿದ್ದು, ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಸಮಾವೇಶದ ನೇತೃತ್ವ ವಹಿಸಲಿದ್ದಾರೆ. ಅಂದೇ ಅರುಣಾ ಲಕ್ಷ್ಮಿ ಸ್ಫರ್ಧೆ ಬಗ್ಗೆ ಘೋಷಣೆ ಮಾಡ್ತಾರೆ ಎನ್ನಲಾಗಿದೆ.


ಅಂದಹಾಗೇ, ಬಳ್ಳಾರಿ ನಗರ ಕ್ಷೇತ್ರದಲ್ಲಿ ಬಿಜೆಪಿಯ ಸೋಮಶೇಖರ್ ರೆಡ್ಡಿ ಶಾಸಕರಾಗಿದ್ದಾರೆ. ಇದೀಗ ಸೋಮಶೇಖರ ರೆಡ್ಡಿ ತಮ್ಮ ನಾದಿನಿ ವಿರುದ್ಧವೇ ಸ್ಪರ್ಧಿಸ್ತಾರಾ ಇಲ್ವಾ ಅನ್ನೋ ಚರ್ಚೆ ಜೋರಾಗಿದೆ. ಇನ್ನು, ಬಳ್ಳಾರಿಗೆ ಬರಲು ಜನಾರ್ದನ ರೆಡ್ಡಿ ಅವರಿಗೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಅರುಣಾ ಲಕ್ಷ್ಮಿ ಅವರೇ ಪಕ್ಷದ ಸಮಾವೇಶವನ್ನು ವಹಿಸಲಿದ್ದಾರಂತೆ. ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಘೋಷಣೆ ಮಾಡಿದ್ರು, ಶಾಸಕ ಸೋಮಶೇಖರ್ ರೆಡ್ಡಿ ಅವರು ಬಿಜೆಪಿಯಲ್ಲಿಯೇ ಮುಂದುವರಿಯುವುದಾಗಿ ಹೇಳಿದ್ದರು.


union minister pralhad joshi reacts in janardhan reddy new political party saklb mrq
ಜನಾರ್ದನ್ ರೆಡ್ಡಿ, ಮಾಜಿ ಸಚಿವ


ಇದನ್ನೂ ಓದಿ: Karnataka Politics: ಜನಾರ್ದನ ರೆಡ್ಡಿ ಹೊಸ ಪಕ್ಷದಿಂದ ಬಿಜೆಪಿಗೆ ಹಿನ್ನೆಡೆ? ಇಲ್ಲಿದೆ ವಿಶ್ಲೇಷಣೆ


ರೆಡ್ಡಿ ಪಾಳ್ಯದಿಂದ ಬಿಜೆಪಿಗೆ ಮತ್ತೊಂದು ಬಿಗ್ ಶಾಕ್


ಹೊಸ ಪಕ್ಷ ಸ್ಥಾಪನೆ ಮಾಡುವ ಮೂಲಕ ಬಿಜೆಪಿಗೆ ಸೇಡ್ಡು ಹೊಡೆದಿದ್ದ ಜನಾರ್ದನ ರೆಡ್ಡಿ ಅವರು, ಬಳ್ಳಾರಿ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿದ್ದ, ಬೂಡಾ ಮಾಜಿ ಅಧ್ಯಕ್ಷರಾಗಿದ್ದ ದಮ್ಮೂರು ಶೇಖರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.


ಇನ್ನು, ಬಳ್ಳಾರಿ ಬಿಜೆಪಿ ಜಿಲ್ಲಾ ಘಟಕದಲ್ಲಿ ಸದಸ್ಯರ ರಾಜೀನಾಮೆ ಮುಂದುವರಿದಿದ್ದು, ಬಳ್ಳಾರಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹಾಗೂ ಮಾಜಿ ಪಾಲಿಕೆ ಸದಸ್ಯ ಚಂದ್ರು ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಅವರಿಗೆ ರಾಜೀನಾಮೆ ಪತ್ರ ರವಾನೆ ಮಾಡಿದ್ದಾರೆ. ಜನಾರ್ದನ ರೆಡ್ಡಿ ಅವರನ್ನ ಬಿಜೆಪಿ ಕೈ ಬಿಟ್ಟ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದು, ರೆಡ್ಡಿ ಅವರನ್ನು ಪಕ್ಷ ನಡೆಸಿಕೊಂಡ ರೀತಿ ಬೇಸರ ಮೂಡಿಸಿದೆ ಅಂತ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ: Janardhana Reddy: ಗಣಿ ಧಣಿ ಜನಾರ್ದನ ರೆಡ್ಡಿ ಗೃಹ ಪ್ರವೇಶ, ಇಲ್ಲಿವೆ ನೋಡಿ ನೂತನ ಮನೆಯ ಫೋಟೋಸ್​


ಹೊಸ ಪಕ್ಷದ ಘೋಷಣೆ ಸಂದರ್ಭದಲ್ಲಿ ಮಾತನಾಡಿದ್ದ ಜನಾರ್ದನ ರೆಡ್ಡಿ ಅವರು, ನನ್ನ ಜೊತೆ ಶ್ರೀರಾಮುಲು ಅವರಿಗೆ ಬರುವಂತೆ ಹೇಳಿಲ್ಲ. ನಮ್ಮದು ಒಳ್ಳೆಯ ಸ್ನೇಹ. ಮುಂದಿನ ದಿನಗಳಲ್ಲಿ ಶ್ರೀಮತಿ ಅರುಣಾ ಲಕ್ಷ್ಮಿ ಅವರು ಸಹ ಪಕ್ಷ ಸಂಘಟನೆಗಳಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದರು.


ಜನಾರ್ದನ ರೆಡ್ಡಿ, ಮಾಜಿ ಸಚಿವ


ಅಲ್ಲದೇ, ಈ ಹಿಂದೆ ರೆಡ್ಡಿ ಸಮುದಾಯ ಪ್ರಾಬಲ್ಯ ಹೊಂದಿರುವ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಅರುಣಾ ಲಕ್ಷ್ಮಿ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ದೇವರ ಹಿಪ್ಪರಗಿ ಭಾಗದ ಮುಖಂಡರ ಜೊತೆ ಜನಾರ್ದನ ರೆಡ್ಡಿ ಮಾತುಕತೆ ಸಹ ನಡೆಸಿದ್ದರು. ಆ ಬಳಿಕ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಬಳ್ಳಾರಿಯಿಂದಲೇ ಅರುಣಾ ಲಕ್ಷ್ಮಿ ಅವರು ಸ್ಪರ್ಧೆ ಮಾಡುವ ಸಾಧ್ಯತೆಗಳಿದೆ ಎನ್ನಲಾಗಿದೆ. ಇನ್ನು ಬಳ್ಳಾರಿಯಲ್ಲಿ ನಡೆಯಲಿರುವ ಬೃಹತ್​ ಸಮಾವೇಶದಲ್ಲಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಅರುಣಾ ಲಕ್ಷ್ಮಿ ಅವರು ನಿರಂತರವಾಗಿ ಮುಂದಿನ ದಿನಗಳಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದಾರೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು