Budget Session: ಎಚ್.ಕೆ.ಪಾಟೀಲ್ ಪರ ನಿಂತ ಯಡಿಯೂರಪ್ಪ: ರೇವಣ್ಣ ನನ್ನ ದೋಸ್ತಿ ಬಿಟ್ಟಂಗ್ ಇದೆ ಅಂದ್ರು ಸ್ಪೀಕರ್

ಇದೊಂದು ಗಂಭೀರವಾದ ಪ್ರಕರಣ. ಎಚ್ ಕೆ ಪಾಟೀಲ್ ಹೇಳಿರುವುದು ಸತ್ಯವಾಗಿದೆ. ಸಿಎಂ ಆದಷ್ಟು ಬೇಗ ಕ್ರಮ ವಹಿಸಿ ಸಮಸ್ಯೆ ಕೊನೆಗಾಣಿಸಬೇಕು. ಸಮಸ್ಯೆ ಮುಂದುವರಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವುದಿಲ್ಲ. ಹೋರಾಟಗಳು ಶುರುವಾಗಬಹುದು, ಅಗತ್ಯ ಬಿದ್ರೆ ಸದನ ಸಮಿತಿ ರಚಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಮಾಜಿ ಸಿಎಂ ಯಡಿಯೂರಪ್ಪ

ಮಾಜಿ ಸಿಎಂ ಯಡಿಯೂರಪ್ಪ

  • Share this:
ಇಂದು ಎರಡನೇ ದಿನದ ಬಜೆಟ್ ಅಧಿವೇಶನ (Budget Session 2022) ನಡೆಯುತ್ತಿದೆ. ಶೂನ್ಯ ವೇಳೆ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ್(Former Minister HK Patil), ಮುಂಡರಗಿ ತಾಲೂಕಿನಲ್ಲಿ ರೈತ ಮಹಿಳೆಯರು (Mundaragi Woman Farmers) ವಿಷ ಕುಡಿದ ಪ್ರಕರಣವನ್ನು ಪ್ರಸ್ತಾಪ ಮಾಡಿದರು. ಈ ವಿಷಯ ಪ್ರಸ್ತಾಪ ಮಾಡುತ್ತಿದ್ದಂತೆ ಅರಣ್ಯ ಇಲಾಖೆಯ (Forest Department) ಕಿರುಕುಳದಿಂದ ವಿಷ ಕುಡಿದ ಪ್ರಕರಣ ಸದನದಲ್ಲಿ ಪ್ರತಿಧ್ವನಿಸಿತು.  ಪರಿಸ್ಥಿತಿಯ ಗಂಭೀರತೆಯನ್ನು ಶೂನ್ಯವೇಳೆಯಲ್ಲಿ  ಹೆಚ್.ಕೆ.ಪಾಟೀಲ್ ವಿವರಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಸಹ ಎಚ್.ಕೆ.ಪಾಟೀಲ್ ಪರವಾಗಿ ನಿಂತರು.

ಇದೊಂದು ಗಂಭೀರವಾದ ಪ್ರಕರಣ. ಎಚ್ ಕೆ ಪಾಟೀಲ್ ಹೇಳಿರುವುದು ಸತ್ಯವಾಗಿದೆ. ಸಿಎಂ ಆದಷ್ಟು ಬೇಗ ಕ್ರಮ ವಹಿಸಿ ಸಮಸ್ಯೆ ಕೊನೆಗಾಣಿಸಬೇಕು. ಸಮಸ್ಯೆ ಮುಂದುವರಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವುದಿಲ್ಲ. ಹೋರಾಟಗಳು ಶುರುವಾಗಬಹುದು, ಅಗತ್ಯ ಬಿದ್ರೆ ಸದನ ಸಮಿತಿ ರಚಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ರೈತರ ಸಮಸ್ಯೆ ಪರಿಹಾರಕ್ಕೆ ಸಿದ್ದರಾಮಯ್ಯ ಒತ್ತಾಯ

ಯಡಿಯೂರಪ್ಪ ಅವರು ಹೇಳುತ್ತಿದ್ದಂತೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಮಸ್ಯೆ ಪರಿಹಾರ ಮಾಡಲು ಸರ್ಕಾರ ಮುಂದಾಗಬೇಕು. ಅರಣ್ಯಾಧಿಕಾರಿಗಳ ಧೋರಣೆ ಸರಿಯಲ್ಲ. ಕೂಡಲೇ ಸಾಗುವಳಿ ಮಾಡಿದ ರೈತರ ಸಂಕಷ್ಟ ಪರಿಹಾರ ಮಾಡಲು ಆಗ್ರಹಿಸಿದರು. ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿ ಸೇರಿದಂತೆ ಬಹುತೇಕ ಹಿರಿಯ ಸದಸ್ಯರಿಂದ ಅರಣ್ಯ ಇಲಾಖೆಯ ಕಾರ್ಯವೈಖರಿಗೆ ಆಕ್ಷೇಪ ವ್ಯಕ್ತವಾಯ್ತು.

ಇದನ್ನೂ ಓದಿ:  BJP ಜೊತೆ JDS ಮೈತ್ರಿ ಮಾಡಿಕೊಳ್ಳುತ್ತಾ? H.D.Kumaraswamy ಸ್ಪಷ್ಟನೆ

ಇಂದು ಸಹ ಎತ್ತಿನಹೊಳೆ ಯೋಜನೆ ಪ್ರಸ್ತಾಪ

ಜೆಡಿಎಸ್ ಶಾಸಕ ಶ್ರೀನಿವಾಸ್ ಎತ್ತಿನಹೊಳೆ ಯೋಜನೆ ವಿಚಾರ ಪ್ರಸ್ತಾಪ ಮಾಡಿದರು. ಎತ್ತಿನ ಹೊಳೆ ಕಾಮಗಾರಿಗೆ ಭೂಸ್ವಾಧೀನ ಮಾಡಲಾಗಿದೆ. ಆದರೆ ಇಲ್ಲಿಯವರೆಗೆ ಪರಿಹಾರ ನೀಡಿಲ್ಲ. 231 ಹಳ್ಳಿಗೆ ನೀರು ಕೊಡ್ತೇವೆ ಎಂದಿದ್ದಾರೆ. ಆದರೆ ಯಾವ ಕೆರೆಗಳು ಅನ್ನೋದನ್ನ ತೋರಿಸಿಲ್ಲ. ನೀರಿನ ಹರಿವು ಕೊರಟಗೆರೆ ಕಡೆ ಹೋಗಲಿದೆ. ಕುಲುವನಹಳ್ಳಿ, ಮಣ್ಣೆ ಕೆರೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಶ್ರೀನಿವಾಸ್ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉತ್ತರ ನೀಡಿದರು. ಕೆಲವು ರೈತರಿಗೆ ತೊಂದರೆಯಾಗಿದೆ. ಹಾಸನ ಜಿಲ್ಲಾ ಕಚೇರಿಯಲ್ಲಿ ಸಭೆ ಮಾಡಿದ್ದೇನೆ. 200 ಕೋಟಿ ಪರಿಹಾರ ಕೊಡಿಸುವ ಕೆಲಸ ಮಾಡಿದ್ದೇನೆ. ರಾಮನಗರ ವ್ಯಾಪ್ತಿಯಲ್ಲೂ ಪರಿಹಾರ ಕೊಡಿಸುವ ಪ್ರಯತ್ನ, ಭೂಸ್ವಾಧೀನ ಮಾಡಿದ ರೈತರಿಗೆ ಕೊಡಿಸ್ತೇನೆ. ಶೇ.70 ರಷ್ಟು ಕಾಮಗಾರಿ ಮುಗಿದಿದೆ ಎಂದು ಹೇಳಿದರು.

ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಚಿವ ಗೋವಿಂದ ಕಾರಜೋಳ ಅವರು ಸ್ಪಷ್ಟವಾದ ಉತ್ತರ ನೀಡಲಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಘೋಷಣೆಯಾದ ಯೋಜನೆ ಜಾರಿಗೆ  ಶಾಸಕ ಭೀಮಾ ನಾಯ್ಕ ಒತ್ತಾಯಿಸಿದರು.

ರಾಜ್ಯದಲ್ಲಿ ಬಹಳ ಇಂತಹ ಯೋಜನೆ ಘೋಷಣೆ ಆಗಿದೆ ಟೋಕನ್ ಅಮೌಂಟ್ ಇಟ್ಟು ಇದನ್ನು ಘೋಷಣೆ ಮಾಡಲಾಗಿದೆ. ಅದನ್ನು ಜಾರಿ ಮಾಡುವುದು ಬಹಳ ಕಷ್ಟ ಆಗ್ತಾ ಇದೆ. ಇಂತಹ ಟೋಕನ್ ಅಮೌಂಟ್ ಇಟ್ಟಿರೋ ಯೋಜನೆಗಳ ಮೊತ್ತ ಲಕ್ಷಾಂತರ ಕೋಟಿ ಆಗ್ತಾ ಇದೆ  ಎಂದು ಹೇಳಿ ನುಣುಚಿಕೊಂಡರು.

ಸ್ಪೀಕರ್ ಕಾಗೇರಿ ನಗೆ ಚಟಾಕಿ

ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಹೆಚ್.ಡಿ.ರೇವಣ್ಣ ಗೈರು ಆಗಿದ್ದರು.  ಪ್ರಶ್ನೋತ್ತರ ವೇಳೆ ಎರಡು ಸಲ ರೇವಣ್ಣ ಅವರ ಹೆಸರನ್ನು ಸ್ಪೀಕರ್ ಕಾಗೇರಿ ಕೂಗಿದರು. ಆಗಲೂ ಗೈರಾಗಿದ್ದಕ್ಕೆ ರೇವಣ್ಣ ಅವರು ನನ್ನ ದೋಸ್ತಿ ಬಿಟ್ಟಂಗೆ ಇದೆ ಅಂತಾ ಹೇಳಿ ಸ್ಪೀಕರ್ ನಕ್ಕರು.

ಇದನ್ನೂ ಓದಿ:  Siddaramaiah: ಡಬಲ್ ಇಂಜಿನ್ ಸರ್ಕಾರ ಅಲ್ಲ ಡಬ್ಬಾ ಸರ್ಕಾರ ಎಂದ್ರು ಸಿದ್ದು; ಕಲಾಪದಲ್ಲಿ ಅನುದಾನದ ಬಗ್ಗೆ ವಾಕ್ಸಮರ

ಈಶ್ವರಪ್ಪ ಬಗ್ಗೆ ತಮಾಷೆ ಮಾಡಿದ ಸಿದ್ದರಾಮಯ್ಯ

ನಾನು ಮಾತಾಡುವಾಗ ನೀವೆಲ್ಲಾ ಸಂದರ್ಭಕ್ಕೆ ಅಗತ್ಯದಂತೆ ಮಧ್ಯ ಪ್ರವೇಶ ಮಾಡುತ್ತೀರಿ. ಆದರೆ ಈಶ್ವರಪ್ಪ ದುರುದ್ದೇಶದಿಂದಲೇ ಮಧ್ಯ ಪ್ರವೇಶ ಮಾಡುತ್ತಾರೆ. ಅವರಿಗೆ ಗೊತ್ತಿದೆ ಮಧ್ಯ ಪ್ರವೇಶ ಮಾಡಿದರೆ ಜಗಳ ಆಗುತ್ತದೆ ಅಂತ. ಯಾಕೆಂದರೆ ಈಶ್ವರಪ್ಪ ಆಡುವುದೇ ಜಗಳದ ಮಾತುಗಳನ್ನು. ಜಗಳ ಮಾಡುಬೇಕು ಅಂತಾನೇ ಬರುತ್ತಾರೆ. ನನ್ನ ದಾರಿ ತಪ್ಪಿಸಬೇಕು, ನನ್ನ ಮಾತಿನ ಚೈನ್ ಬ್ರೇಕ್ ಮಾಡಬೇಕು ಅಂತಾನೆ ಬರುತ್ತಾರೆ.

ಮಧ್ಯ ಪ್ರವೇಶ ಮಾಡಿದರೆ ಜಗಳ ಮಾಡಬಹುದು ಅಂತಾ ಈಶ್ವರಪ್ಪ ಲೆಕ್ಕಾಚಾರ ಇರುತ್ತೆ ಅಂತ ಸಿದ್ದರಾಮಯ್ಯ ಹೇಳಿದರು. ಸಿದ್ದರಾಮಯ್ಯನವರು ಈಶ್ವರಪ್ಪ ಬಗ್ಗೆ ತಮಾಷೆ ಮಾಡುತ್ತಿದ್ದಾಗ ಸಿಎಂ ಬೊಮ್ಮಾಯಿ ನಗುತ್ತಿದ್ದರು.
Published by:Mahmadrafik K
First published: