ವಿಶ್ವನಾಥ್​ ಗೆದ್ದರೆ ತಾನೇ ಮಂತ್ರಿಯಾಗೋದು?; ಮಾಜಿ ಸಚಿವ ಹೆಚ್​​​.ಸಿ.ಮಹದೇವಪ್ಪ ಲೇವಡಿ

ಬದ್ದತೆ, ಸಿದ್ಧಾಂತ ಹಾಗೂ ಜನಪರ ಕಾಳಜಿ ಇಲ್ಲದ ವಿಶ್ವನಾಥ್​​ ಅವರ ಮಾತನ್ನು ಯಾರೂ ನಂಬುತ್ತಿಲ್ಲ. ಸಂವಿಧಾನವನ್ನು ಬುಡಮೇಲು ಮಾಡಲು ಹೊರಟಿರುವ ಕೋಮುವಾದಿ ಬಿಜೆಪಿ ಸೇರಿರುವ ವಿಶ್ವನಾಥ್​​ಗೆ ನಾಚಿಕೆ ಆಗಬೇಕು ಎಂದರು.

Latha CG | news18-kannada
Updated:November 22, 2019, 7:39 PM IST
ವಿಶ್ವನಾಥ್​ ಗೆದ್ದರೆ ತಾನೇ ಮಂತ್ರಿಯಾಗೋದು?; ಮಾಜಿ ಸಚಿವ ಹೆಚ್​​​.ಸಿ.ಮಹದೇವಪ್ಪ ಲೇವಡಿ
ಹೆಚ್​​.ಸಿ.ಮಹದೇವಪ್ಪ-ಹೆಚ್.ವಿಶ್ವನಾಥ್​​​
  • Share this:
ಚಾಮರಾಜನಗರ(ನ.22): ಹುಣಸೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅನರ್ಹ ಶಾಸಕ ಹೆಚ್​.ವಿಶ್ವನಾಥ್​ ವಿರುದ್ಧ ಮಾಜಿ ಸಚಿವ ಹೆಚ್​​.ಸಿ. ಮಹದೇವಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಕೊಳ್ಳೇಗಾಲದಲ್ಲಿ ಮಾತನಾಡಿದ ಅವರು, ಹಳ್ಳಿಹಕ್ಕಿ ವಿಶ್ವನಾಥ್​ ವಿರುದ್ಧ ಟೀಕೆ ಮಾಡಿದರು. ವಿಶ್ವನಾಥ್​ ಗೆದ್ದರೆ ತಾನೇ ಮಂತ್ರಿಯಾಗುವುದು? ಅವರು ಪಕ್ಷದಿಂದ ಪಕ್ಷಕ್ಕೆ ಹಾರುವ ಹಕ್ಕಿ. ಕಾಂಗ್ರೆಸ್​​, ಜೆಡಿಎಸ್​, ಬಿಜೆಪಿ ಎಲ್ಲಾ ಆಯ್ತು. ಅವರು ಯಾವಾಗ ಸತ್ಯ ಹೇಳುತ್ತಾರೆಂದೇ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಹುಣಸೂರು ಉಪಚುನಾವಣೆ: 40 ಎಫ್​ಐಆರ್​ ದಾಖಲು, 6 ಲಕ್ಷ ಹಣ ಜಪ್ತಿ; ಮಾಹಿತಿ ನೀಡಿದ ಮೈಸೂರು ಜಿಲ್ಲಾಧಿಕಾರಿ

ವಿಶ್ವನಾಥ್ ತಾವೇ ಬರೆದಿರುವ 'ಮತಸಂತೆ' ಪುಸ್ತಕದಂತೆ ತಾವೇ ನಡೆದುಕೊಂಡು ನಗೆಪಾಟಲಿಗೀಡಾಗಿದ್ಧಾರೆ. ಕಾಂಗ್ರೆಸ್​ ಬಿಟ್ಟು ಜೆಡಿಎಸ್​​ಗೆ ಹೋಗಿ ರಾಜ್ಯಾಧ್ಯಕ್ಷರಾದರು. ಬಳಿಕ ಸರ್ಕಾರ  ನಡೆಸಬೇಕಾದ ಇವರೇ ಸರ್ಕಾರವನ್ನು ಕೆಡವಲು ನಾಯಕತ್ವ ವಹಿಸಿದರು ಎಂದು ವಾಗ್ದಾಳಿ ನಡೆಸಿದರು.

ಬದ್ದತೆ, ಸಿದ್ಧಾಂತ ಹಾಗೂ ಜನಪರ ಕಾಳಜಿ ಇಲ್ಲದ ವಿಶ್ವನಾಥ್​​ ಅವರ ಮಾತನ್ನು ಯಾರೂ ನಂಬುತ್ತಿಲ್ಲ. ಸಂವಿಧಾನವನ್ನು ಬುಡಮೇಲು ಮಾಡಲು ಹೊರಟಿರುವ ಕೋಮುವಾದಿ ಬಿಜೆಪಿ ಸೇರಿರುವ ವಿಶ್ವನಾಥ್​​ಗೆ ನಾಚಿಕೆ ಆಗಬೇಕು ಎಂದರು.

ಬಿಜೆಪಿಯದ್ದು ಗರ್ಭಗುಡಿ ಸಂಸ್ಕೃತಿ; ಬಡವರು, ದಲಿತರಿಗೆ ಅಲ್ಲಿ ಜಾಗ ಇಲ್ಲ: ಶಿವಶಂಕರ್ ರೆಡ್ಡಿ

First published: November 22, 2019, 7:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading