Karnataka ByPolls : ಶ್ರವಣಬೆಳಗೊಳದಲ್ಲಿ ಮದ್ಯ, ಮಾಂಸ ಸೇವಿಸಿ ಕ್ಷೇತ್ರದ ಪಾವಿತ್ಯತೆ ಹಾಳು ; ಶಾಸಕ ಪ್ರೀತಂಗೌಡ ವಿರುದ್ಧ ರೇವಣ್ಣ ವಾಗ್ದಾಳಿ

news18-kannada
Updated:December 5, 2019, 3:43 PM IST
Karnataka ByPolls : ಶ್ರವಣಬೆಳಗೊಳದಲ್ಲಿ ಮದ್ಯ, ಮಾಂಸ ಸೇವಿಸಿ ಕ್ಷೇತ್ರದ ಪಾವಿತ್ಯತೆ ಹಾಳು ; ಶಾಸಕ ಪ್ರೀತಂಗೌಡ ವಿರುದ್ಧ ರೇವಣ್ಣ ವಾಗ್ದಾಳಿ
ಮಾಜಿ ಸಚಿವ ರೇವಣ್ಣ ಹಾಗೂ ಶಾಸಕ ಪ್ರೀತಮ್​​ ಗೌಡ
  • Share this:
ಹಾಸನ(ಡಿ.05): ಶ್ರವಣಬೆಳಗೊಳದಲ್ಲಿ ಹಾಸನ ಶಾಸಕರು ಕಾರಿನಲ್ಲಿ ಕಳಿಸಿ ಹಣ ಹಂಚಿದ್ದಾರೆ. ಇದರಿಂದ ಶ್ರವಣಬೆಳಗೊಳದಲ್ಲಿ ಮದ್ಯ ಮಾಂಸ ಸೇವಿಸಿ ಕ್ಷೇತ್ರದ ಪಾವಿತ್ರ್ಯತೆ ಹಾಳುಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಪ್ರೀತಂಗೌಡ ವಿರುದ್ದ ಮಾಜಿ ಸಚಿವ ಎಚ್ ಡಿ ರೇವಣ್ಣ ವಾಗ್ದಾಳಿ ನಡೆಸಿದರು.

ಚುನಾವಣೆ ನಡೆಯುತ್ತಿರುವ ಕೆ.ಆರ್.ಪೇಟೆ ಗಡಿಭಾಗದಲ್ಲಿ ಕೂತು ಹಣ ಹಂಚಿದ್ದಾರೆ ಈ ಬಗ್ಗೆ ಪೊಲೀಸರು ಏನು ಕ್ರಮ ಕೈಗೊಂಡಿದ್ದಾರೆ. ಹಾಸನ ಶಾಸಕರಿಗೆ ಶ್ರವಣಬೆಳಗೊಳದಲ್ಲಿ ಏನು ಕೆಲಸ. ನಂಬಿಹಳ್ಳಿ ಘಟನೆ ಬಳಿಕವೂ ಬಿಜೆಪಿಯಿಂದ ದುರುಪಯೋಗ ವಾಗುತ್ತಿದೆ. ಚುನಾವಣೆ ಮುಗಿದ ಮೇಲೆ ಬಿಜೆಪಿ ಮುಖಂಡರು ನಂಬಿಹಳ್ಳಿಗೆ ಯಾಕೆ ಹೋದರು ಎಂದು ಪ್ರಶ್ನೆ ಮಾಡಿದರು.

ಚೀಲದಲ್ಲಿ ಹಣ ತುಂಬಿಕೊಂಡು ಹೋಗಿ ಹುಣಸೂರು ಕ್ಷೇತ್ರದಲ್ಲಿ ಹಣ ಹಂಚಿದ್ದಾರೆ ಈ ಬಗ್ಗೆ ಚುನಾವಣಾ ಆಯೋಗಕ್ಕೆ ನಮ್ಮ ಪಕ್ಷದಿಂದ ದೂರು ನೀಡಿದ್ದೆವು. ಇದೀಗ ಐಜಿಗೆ ಆಯೋಗದಿಂದ ನೊಟೀಸ್ ನೀಡಲಾಗಿದೆ. ಬಿಜೆಪಿಯ ಕಾರ್ಪೋರೆಟರ್ ಆಗಿದೀನಿ ಅಂತಾ ಜನರಿಗೆ ಬೆದರಿಕೆ ಹಾಕೋಕೆ ಹೋದ್ರೆ ಜನ ಕೇಳ್ತಾರಾ ತಪ್ಪಿದ್ದರೆ ರೇವಣ್ಣನ ಮಗನ ಮೇಲೂ ಕ್ರಮ ಕೈಗೊಳ್ಳಲಿ. ಸರಿಯಾದ ಪೊಲೀಸ್ ಅಧಿಕಾರಿಯಾಗಿದ್ರೆ, ಡಿಸಿಎಂ ಹಾಗು ಹಾಸನ ಶಾಸಕರ ಮೇಲೆ ಕೇಸ್ ಹಾಕಬೇಕಿತ್ತು ನಮ್ಮ ಮಗನಮೇಲೆ ಇವರು ಹೇಗೆ ಕೇಸ್ ಹಾಕಿದ್ರು. ನಾಳೆ ನಾವು ಹಾಸನದಲ್ಲಿ ಎಸ್ಪಿ ಕಛೇರಿ ಎದುರು ಪ್ರತಿಭಟನೆ ಮಾಡ್ತೀವಿ. ಸ್ಥಳಕ್ಕೆ ಐಜಿಯೇ ಬರಲಿ, ಸ್ಥಳದಲ್ಲಿದ್ದವರನ್ನ ವಿಚಾರಣೆ ಮಾಡಲಿ ಎಂದು ರೇವಣ್ಣ ಕಿಡಿಕಾರಿದರು.

ಇದನ್ನೂ ಓದಿ : Karnataka ByPolls : ಶ್ರೀರಾಮುಲು ನನ್ನ ಜೊತೆ ಮಾತೇ ಆಡುವುದಿಲ್ಲ; ಸಿದ್ದರಾಮಯ್ಯ

ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಹಣ ಸೀರೆ ಹಂಚಿದಾರೆ. ಬಾಂಬೆ ದುಡ್ಡು ಜೆಡಿಎಸ್ ಗೆ ಓಟು ಮಾಡಿ ಎಂದೇ ನಾನೇ‌ ಹೇಳಿದ್ದೇನೆ. ಅವನ್ಯಾರೋ ಹೋಟೆಲ್ ನಲ್ಲಿದ್ದವನನ್ನ ಕರೆತಂದರು. ಎಲ್ಲಾ ಕುಮಾರಸ್ವಾಮಿ ಕೃಪೆ ಬಿಡಿ ಎಂದು ಕೆ.ಆರ್.ಪೇಟೆ ಬಿಜೆಪಿ ಅಭ್ಯರ್ಥಿ ವಿರುದ್ದ ಮಾಜಿ ಸಚಿವ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಅಭ್ಯರ್ಥಿಯಾಗಿರುವ ಹೆಚ್​ ವಿಶ್ವನಾಥ್​ ಅವರು ಮನೆಯಲ್ಲಿ ಕೂತಿದ್ದರು ಅವರನ್ನು ಕರೆತಂದಿದ್ದು ಮಾಜಿ ಸಿಎಂ ಕುಮಾರಸ್ವಾಮಿಯವರು ಆದರೆ ನಮಗೆ ಮೋಸ ಮಾಡಿದರು ಎಂದರು.
First published:December 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ