ಹಾಸನ (ನ.30) : ಇತ್ತ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ (H D Kumaraswamy) ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಇಬ್ಬರೂ ಒಬ್ಬರ ಮೇಲೆ ಒಬ್ಬರು ಆರೋಪಗಳ ಸುರಿಮಳೆಗೈಯುತ್ತಾ ಕೆಂಡಕಾರುತ್ತಿದ್ರೆ. ಇತ್ತ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಸಚಿವ ಹೆಚ್. ಡಿ ರೇವಣ್ಣ (Revanna) ಅವರು ನಾನು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರು ಒಳ್ಳೆಯ ಸ್ನೇಹಿತರು, ಇಬ್ಬರೂ ಕೂಡ ಆಪ್ತರೇ ಅದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ಸ್ಪರ್ಧೆ ಗೊತ್ತಿಲ್ಲ
ಹಾಸನದಲ್ಲಿ ಮಾತಾಡಿದ ಹೆಚ್ಡಿ ರೇವಣ್ಣ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಇಂದಿಗೂ, ಮುಂದೆಯೂ ಕೂಡ ನಾವು ವಿಶ್ವಾಸದಲ್ಲೇ ಇರ್ತೇವೆ ಎಂದು ಹೇಳಿದ್ದಾರೆ. ಆದ್ರೆ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ನಮಗೇನು ಗೊತ್ತಿಲ್ಲ ಎಂದು ರೇವಣ್ಣ ಹೇಳಿದ್ದಾರೆ.
ಹಾಸನದಲ್ಲೂ ವೋಟರ್ ಲಿಸ್ಟ್ ನಲ್ಲಿ ಅವ್ಯವಹಾರ- ರೇವಣ್ಣ
ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ವೋಟರ್ ಲಿಸ್ಟ್ ನಲ್ಲಿ ಅವ್ಯವಹಾರ ನಡೆಯುತ್ತಿದೆ. ಬಿಎಲ್ಓ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೆಲವರು ಹಿತಾಸಕ್ತಿಗೆ ಬೇಕಾದಂತೆ ವೋಟರ್ ಲಿಸ್ಟ್ ನಲ್ಲಿ ಹೆಸರು ಕೈ ಬಿಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ವಹಿಸಬೇಕು. ಹಳೆಯ ಮತದಾರರ ಪಟ್ಟಿ ನೋಡಿ ಮತ್ತೆ ಪರಿಶೀಲಿಸಬೇಕು ಎಂದು ರೇವಣ್ಣ ಹೇಳಿದ್ದಾರೆ.
ಪ್ರೀತಂಗೌಡ ವಿರುದ್ಧ ರೇವಣ್ಣ ಗಂಭೀರ ಆರೋಪ
ಕೆಲವರು ಹಬ್ಬಕ್ಕೆ ಸೀರೆ ಹಂಚಲು ಹೋದಾಗ ಮತದಾರರ ಚೀಟಿ ಪಡೆದಿದ್ದಾರೆ. ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ ಎಂದು ಪರೋಕ್ಷವಾಗಿ ಪ್ರೀತಂಗೌಡ ವಿರುದ್ಧ ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ. ನನ್ನ ಕ್ಷೇತ್ರದಲ್ಲೂ ಅಕ್ರಮ ನಡೆದಿದ್ರೆ ಅಲ್ಲಿಯೂ ಪರಿಶೀಲನೆ ನಡೆಸಲಿ ಎಂದು ಹೇಳಿದ್ರು.
ಏಜೆಂಟ್ರ ಮೂಲಕ ಮತದಾರರ ಪಟ್ಟಿ ತಯಾರಾಗಿದೆ
ಉದ್ದೇಶ ಪೂರಕವಾಗಿ ಬೇಕಾದವರ ಹೆಸರು ಸೇರಿಸಲಾಗ್ತಿದೆ. ಈ ವಿಚಾರವನ್ನ ಗಂಭೀರವಾಗಿ ಜಿಲ್ಲಾಧಿಕಾರಿಗಳು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಕೆಲಸದಲ್ಲಿ ತಪ್ಪಾಗಿದ್ರೆ ಅದಕ್ಕೆ ಅಧಿಕಾರಿಗಳೇ ಹೊಣೆ ಆಗುತ್ತಾರೆ. ಹಾಸನ ಜಿಲ್ಲೆಯಲ್ಲೂ ಏಜೆಂಟ್ರ ಮೂಲಕ ಮತದಾರರ ಪಟ್ಟಿ ತಯಾರಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರೇವಣ್ಣ ಆಗ್ರಹಿಸಿದ್ದಾರೆ.
ಭವಾಬಿ ರೇವಣ್ಣಗೆ ಹಾಸನ ಟಿಕೆಟ್ ಸಿಗುತ್ತಾ?
ಭವಾಬಿ ರೇವಣ್ಣಗೆ ಹಾಸನ ಟಿಕೆಟ್ ನೀಡುವಂತೆ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ಭವಾನಿ ರೇವಣ್ಣ ಈ ಹಿಂದೆ ಬೇಲೂರಿನಲ್ಲೂ ಕೆಲಸ ಮಾಡಿದ್ರು ಅಲ್ಲಿ ಟಿಕೆಟ್ ಸಿಕ್ತಾ? ಹಾಸನ ಜಿಲ್ಲೆಯ ಪಟ್ಟಿ ಬಿಡುಗಡೆ ವೇಳೆ ಎಲ್ಲಾ ಕ್ಷೇತ್ರದ ಆಭ್ಯರ್ಥಿಗಳ ಹೆಸರಿರುತ್ತದೆ ಎಂದ್ರು. ಜೊತೆಗೆ ಅರಸೀಕೆರೆ ಶಾಸಕ ಕೆ. ಎಂ ಶಿವಲಿಂಗೇಗೌಡ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ವಿರುದ್ಧ ಕಿಡಿ
ಮಳೆ ಹಾನಿ ಪ್ರದೇಶಕ್ಕೆ ಲೋಕೋಪಯೋಗಿ ಇಲಾಖೆಯಿಂದ ಇಲ್ಲಿಯವರೆಗೆ ಒಂದು ರೂ ಹಣ ನೀಡಿಲ್ಲ. ರಸ್ತೆ ಸರಿ ಇಲ್ಲದೆ ಅಪಘಾತಗಳು ಹೆಚ್ಚಾಗುತ್ತಿವೆ. ಇಲಾಖೆ ತಪ್ಪಿನಿಂದ ಜನರು ಪರಿತಪಿಸುವಂತಾಗಿದೆ. ಅಪಘಾತಕ್ಕೆ ಈಡಾದವರಿಗೆ ಸರ್ಕಾರವೇ ಪರಿಹಾರ ಕೊಡಬೇಕು. ಕಾರಣವಾದವರೇ ಜನರಿಗೆ ಪರಿಹಾರ ನೀಡಬೇಕು ಎಂದು ರೇವಣ್ಣ ಆಗ್ರಹಿಸಿದ್ದಾರೆ.
ಇದನ್ನೂ ಓದಿ: KSRTC ಇ-ಬಸ್ಗಳಿಗೆ ನೀವೇ ಹೆಸರು ಸೂಚಿಸಿ; ಆಕರ್ಷಕ ಬ್ರಾಂಡಿಂಗ್ ಐಡಿಯಾ ಕೊಟ್ಟವರಿಗೆ 35 ಸಾವಿರ ಬಹುಮಾನ!
ಲೋಕೋಪಯೋಗಿ ಸಚಿವರೂ ಭೇಟಿಗೆ ಸಿಗುತ್ತಿಲ್ಲ ಅಲ್ಲದೇ ತೋಟಗಾರಿಕೆ ಮಂತ್ರಿಯನ್ನ ಸರ್ಕಾರವೇ ಹುಡುಕಿ ಕೊಡಬೇಕು ಎಂದು ರೇವಣ್ಣ ಕಿಡಿಕಾರಿದ್ದಾರೆ. ಇಂತಹ ತೋಟಗಾರಿಕಾ ಸಚಿವರನ್ನ ನಾನು ನೋಡಿಯೇ ಇಲ್ಲ. ಬೆಳೆ ಹಾನಿಯಾದ ಪ್ರದೇಶಕ್ಕೆ ಒಂದು ಬಾರಿಯೂ ಭೇಟಿ ನೀಡಿಲ್ಲ. ನಾನು 25 ವರ್ಷ ರಾಜಕೀಯದಲ್ಲಿದ್ದೇನೆ. ಸೌಜನ್ಯಕ್ಕೆ ಒಂದು ಕರೆ ಸ್ವೀಕರಿಸಲ್ಲ. ರೈತರ ಮನೆ ಹಾಳು ಮಾಡೋದಕ್ಕೆ ಇಂತವರನ್ನ ಮಂತ್ರಿ ಮಾಡಿಕೊಂಡಿದ್ದಾರೆ ಎಂದು ರೇವಣ್ಣ ಆಕ್ರೋಶ ಹೊರಹಾಕಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ