ಕಾಂಗ್ರೆಸ್​-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡ ಕಾರಣ ಜೆಡಿಎಸ್​ ಸೋಲಬೇಕಾಯ್ತು; ಎಚ್​​.ಡಿ ರೇವಣ್ಣ

ಇನ್ನು ಜೆಡಿಎಸ್​​ 15 ಕ್ಷೇತ್ರಗಳ ಪೈಕಿ ಒಂದರಲ್ಲೂ ಗೆಲುವು ಕಂಡಿಲ್ಲ. ಪ್ರಮುಖವಾಗಿ ಕೆ.ಆರ್​​ ಪೇಟೆ ಮತ್ತು ಹುಣಸೂರಿನಲ್ಲಿ ಯಾಕೇ ಸೋತಿದ್ದು ಎಂಬ ಪರಮಾರ್ಶಗೆ ಮುಂದಾಗಿದೆ. ಈ ಸೋಲಿಗೀಗ ಎಚ್‌.ಡಿ.ರೇವಣ್ಣ ಭಿನ್ನ ಕಾರಣವೊಂದು ಪತ್ತೆ ಹಚ್ಚಿದ್ದಾರೆ.

news18-kannada
Updated:December 11, 2019, 7:20 PM IST
ಕಾಂಗ್ರೆಸ್​-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡ ಕಾರಣ ಜೆಡಿಎಸ್​ ಸೋಲಬೇಕಾಯ್ತು; ಎಚ್​​.ಡಿ ರೇವಣ್ಣ
ಎಚ್​.ಡಿ. ರೇವಣ್ಣ
  • Share this:
ಬೆಂಗಳೂರು(ಡಿ.11): ಕಾಂಗ್ರೆಸ್​-ಬಿಜೆಪಿ ಒಳ ಒಪ್ಪದಿಂದಾಗಿ ಜೆಡಿಎಸ್​​ ಸೋಲಬೇಕಾಯ್ತು ಎಂದು ಮಾಜಿ ಸಚಿವ ಎಚ್​​.ಡಿ ರೇವಣ್ಣ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್​-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡು ಹಣದ ಹೊಳೆಯನ್ನೇ ಹರಿಸಿವೆ. ರಾಜ್ಯದ 15 ಕ್ಷೇತ್ರಗಳಲ್ಲೂ ವೋಟಿಗೆ ನೋಟು ನೀಡಿದ್ದಾರೆ. ಒಂದು ಕ್ಷೇತ್ರಕ್ಕೆ ಸುಮಾರು 60 ಕೋಟಿ ರೂ. ಹಣ ಖರ್ಚು ಮಾಡಿದ್ದಾರೆ. ಒಟ್ಟು 15 ಕ್ಷೇತ್ರಗಳಲ್ಲಿ ಬರೋಬ್ಬರಿ 750 ಕೋಟಿ ರೂ. ಹಣ ವ್ಯಯಿಸಿದ್ದಾರೆ. ಖುದ್ದು ಬಿಜೆಪಿ 15 ಮಂತ್ರಿಗಳು ತಮ್ಮ ಕೈಯಾರೆ ಹಣ ಹಂಚಿಕೆ ಮಾಡಿದ್ದಾರೆ ಎಂದು ಎಚ್​​.ಡಿ ರೇವಣ್ಣ ಗಂಭೀರ ಆರೋಪ ಎಸಗಿದ್ದಾರೆ.

ಇಂದು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಮಾಜಿ ಸಚಿವ ಎಚ್​​.ಡಿ ರೇವಣ್ಣ, ಉಪಚುನಾವಣೆ ಸೋಲಿನಿಂದ ಜೆಡಿಎಸ್​ ಬೇಗ ಹೊರ ಬರಲಿದೆ. ಈ ಚುನಾವಣಾ ಕಣದ ಸೋಲಿನ ಧೂಳಿನಿಂದ ಎದ್ದು ಬಂದು 2023ರಲ್ಲಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್​-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದವು. ಹಾಗೆಯೇ ಈ ವಿಧಾನಸಭಾ ಉಪಚುನಾವಣೆಯಲ್ಲೂ ಒಳ ಒಪ್ಪಂದ ಮಾಡಿಕೊಂಡ ಕಾರಣದಿಂದಾಗಿ ಜೆಡಿಎಸ್ ಸೋಲು ಅನುಭವಿಸಬೇಕಾಯ್ತು ಎಂದು ಭಿನ್ನ ಕಾರಣ ಬಿಚ್ಚಿಟ್ಟರು.

ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ನೇತೃತ್ವದ 20-20 ಸರ್ಕಾರಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೆವು. ಆಗ ಬಿಜೆಪಿಗೆ ಅವಕಾಶ ಕೊಡದಿದ್ದರೆ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಅಂದಿನ ಚುನಾವಣೆಯಲ್ಲಿ ನಾವೇ ಗೆದ್ದಿದ್ದೆವು. ರಾಷ್ಟ್ರೀಯ ಪಕ್ಷವೊಂದಕ್ಕೆ 40 ಕ್ಷೇತ್ರಗಳಲ್ಲಿ ಪೈಪೋಟಿ ನೀಡಿದ್ದೆವು ಎಂದು ಇತಿಹಾಸ ನೆನೆದರು.

ಇದನ್ನೂ ಓದಿ: ಉಪಚುನಾವಣೆಯಲ್ಲಿ ಸೋತರೂ ಎಂಟಿಬಿ ನಾಗರಾಜ್​​ ಮತ್ತು ಎಚ್​ ವಿಶ್ವನಾಥ್​​ ಕೈಬಿಡದ ಸಿಎಂ ಬಿಎಸ್​ವೈ; ಎಂಎಲ್​​ಸಿ ಸ್ಥಾನ ಪಕ್ಕಾ?

ಡಿಸೆಂಬರ್​​ 5ನೇ ತಾರೀಕಿನಂದು ನಡೆದ ರಾಜ್ಯ ವಿಧಾನಸಭಾ ಉಪಚುನಾವಣೆ ಫಲಿತಾಂಶವೂ ಡಿ.9ರಂದೇ ಹೊರ ಬಿದ್ದಿದೆ. ಬಿಜೆಪಿ 12 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ಭದ್ರಪಡಿಸಿಕೊಂಡಿದೆ. ಕನಿಷ್ಠ 9 ಕ್ಷೇತ್ರಗಳಲ್ಲಿ ಗೆಲುವು ಕಾಣುವ ನಿರೀಕ್ಷೆ ಇಟ್ಟುಕೊಂಡಿದ್ದ ಕಾಂಗ್ರೆಸ್ ಪಕ್ಷ ಕೇವಲ 2 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಹುಣಸೂರು ಮತ್ತು ಶಿವಾಜಿನಗರ ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಉಳಿದ ಕ್ಷೇತ್ರಗಳು ಪಕ್ಷದ ಕೈ ತಪ್ಪಿವೆ.

ಇನ್ನು ಜೆಡಿಎಸ್​​ 15 ಕ್ಷೇತ್ರಗಳ ಪೈಕಿ ಒಂದರಲ್ಲೂ ಗೆಲುವು ಕಂಡಿಲ್ಲ. ಪ್ರಮುಖವಾಗಿ ಕೆ.ಆರ್​​ ಪೇಟೆ ಮತ್ತು ಹುಣಸೂರಿನಲ್ಲಿ ಯಾಕೇ ಸೋತಿದ್ದು ಎಂಬ ಪರಮಾರ್ಶಗೆ ಮುಂದಾಗಿದೆ. ಈ ಸೋಲಿಗೀಗ ಎಚ್‌.ಡಿ.ರೇವಣ್ಣ ಭಿನ್ನ ಕಾರಣವೊಂದು ಪತ್ತೆ ಹಚ್ಚಿದ್ದಾರೆ.
First published:December 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ