ಹಾಸನಕ್ಕೆ ಇರದಿದ್ದ ಅನುದಾನ ಶಿವಮೊಗ್ಗಕ್ಕೆ ಹೇಗೆ ಬಂತು?; ಸಿಎಂಗೆ ಎಚ್​.ಡಿ.ರೇವಣ್ಣ ಪ್ರಶ್ನೆ

 ಅನುದಾನವಿಲ್ಲವೆಂದು ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನು ತಟಸ್ಥಗೊಳಿಸಿದ್ದಾರೆ. ಆದರೆ ಶಿವಮೊಗ್ಗ ವಿಮಾನ ನಿಲ್ದಾಣದ ಅಭಿವೃದ್ದಿಗೆ 220 ಕೋಟಿ ನೀಡಿದ್ದಾರೆ. ಶಿಕಾರಿಪುರ ಒಂದಕ್ಕೆ 3 ಸಾವಿರ ಕೋಟಿ ನೀಡಿದ್ದಾರೆ. ಹಾಸನಕ್ಕೆ ಇರದಿದ್ದ ಅನುದಾನ ಇಲ್ಲಿಗೆ ಹೇಗೆ ಬಂತು? ಇದು ದ್ವೇಷದ ರಾಜಕಾರಣವಲ್ಲದೆ ಮತ್ತೇನು? -ರೇವಣ್ಣ

ರೇವಣ್ಣ- ಬಿಎಸ್​ ಯಡಿಯೂರಪ್ಪ

ರೇವಣ್ಣ- ಬಿಎಸ್​ ಯಡಿಯೂರಪ್ಪ

 • Share this:
  ಬೆಂಗಳೂರು(ಫೆ.14): ಶಿವಮೊಗ್ಗ, ಶಿಕಾರಿಪುರಕ್ಕೆ ಮಾತ್ರ ಸಿಎಂ ಬಳಿ ಹಣ ಇದೆ. ಉಳಿದ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಪಾಪ ಹಣ ಇಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಮಾತ್ರ ಅನುದಾನ ನೀಡಲು ಕಾಸಿಲ್ಲ. ಇದೇ ರೀತಿ ಮುಂದುವರಿದರೆ ರಾಜಕೀಯ ಹೋರಾಟ ಮಾಡುತ್ತೇವೆ. ಹೆದರಿಕೊಂಡು ಮನೆಯಲ್ಲಿ ಕೂರಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಎಚ್ಚರಿಕೆ ನೀಡಿದ್ದಾರೆ.

  ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿಎಸ್​ ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅನುದಾನವಿಲ್ಲವೆಂದು ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನು ತಟಸ್ಥಗೊಳಿಸಿದ್ದಾರೆ. ಆದರೆ ಶಿವಮೊಗ್ಗ ವಿಮಾನ ನಿಲ್ದಾಣದ ಅಭಿವೃದ್ದಿಗೆ 220 ಕೋಟಿ ನೀಡಿದ್ದಾರೆ. ಶಿಕಾರಿಪುರ ಒಂದಕ್ಕೆ 3 ಸಾವಿರ ಕೋಟಿ ನೀಡಿದ್ದಾರೆ. ಹಾಸನಕ್ಕೆ ಇರದಿದ್ದ ಅನುದಾನ ಇಲ್ಲಿಗೆ ಹೇಗೆ ಬಂತು? ಇದು ದ್ವೇಷದ ರಾಜಕಾರಣವಲ್ಲದೆ ಮತ್ತೇನು? ಇಷ್ಟೇ ಅಲ್ಲ, ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳೂ ನಡೆಯುತ್ತಿಲ್ಲ. ಅಲ್ಲಿಯೂ ಅನುದಾನವನ್ನು ಕಡಿತಗೊಳಿಸಿದ್ದಾರೆ.  ಕಾಂಗ್ರೆಸ್, ಜೆಡಿಎಸ್ ಶಾಸಕರ ಅನುದಾನ ಕಡಿತವಾಗಿದೆ ಎಂದು ಕಿಡಿಕಾರಿದರು.

  ವರ್ಷವೇ ಕಾದಿದ್ದೀರಿ, ಇನ್ನೂ 15 ದಿನದಲ್ಲಿ ಏನೂ ಆಗಲ್ಲ: ಓಮರ್​ ಅಬ್ದುಲ್ಲಾ ಬಂಧನ ಪ್ರಶ್ನಿಸಿದ ಅರ್ಜಿಗೆ ಸುಪ್ರೀಂ ಕೋರ್ಟ್​​

  ವಿಧಾನಪರಿಷತ್ ಚುನಾವಣೆ ವಿಚಾರವಾಗಿ, ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಿದ್ದಕ್ಕೆ ರೇವಣ್ಣ ಸಮರ್ಥನೆ ನೀಡಿದರು. ಕಾಂಗ್ರೆಸ್​​​ ಪಕ್ಷದ ಜವಾಬ್ದಾರಿಯುತ ಮುಖಂಡರ ಜತೆ ನಾನೇ ಮಾತನಾಡಿದ್ದೇನೆ. ಪರಿಷತ್ ಚುನಾವಣೆಗೆ ಸಮಾನ ಮನಸ್ಕ ಅಭ್ಯರ್ಥಿ ಹಾಕುವ ಸಲುವಾಗಿ ಮಾತನಾಡಿದ್ದೆ. ಯಾರ ಬಳಿ ಮಾತನಾಡಿದ್ದೆ ಅಂತ ಮುಂದೆ ಹೇಳುತ್ತೇನೆ. ಈ ನಿಟ್ಟಿನಲ್ಲಿ ಜೆಡಿಎಸ್ ಬೆಂಬಲಿತ ಕಾಂಗ್ರೆಸ್ ನ ಅನಿಲ್‌ ಕುಮಾರ್ ಅವರನ್ನು ಕಣಕ್ಕೆ ಇಳಿಸಿದ್ದೆವು. ಆದರೆ ಬೆಂಬಲ ನೀಡಲು ಈಗ ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ. ಯಾಕೆ ಅಂತ ಗೊತ್ತಿಲ್ಲ.‌ ಅದು ಅವರಿಗೆ ಬಿಟ್ಟ ವಿಚಾರ ಎಂದು ಕೈ ಮುಖಂಡರ ವಿರುದ್ಧ ರೇವಣ್ಣ ಅಸಹನೆ ವ್ಯಕ್ತಪಡಿಸಿದರು.

  ಕಾರು ಚಾಲಕರೆಲ್ಲಾ ಎನ್​ಒಸಿ ಮಾಡಿಸಿಕೊಡುತ್ತಾರೆ. ಶೇ.5ಕ್ಕೆ ಕಾಮಗಾರಿ ಎನ್​ಒಸಿ ತರುತ್ತಾರೆ. ಡ್ರೈವರೇಗಳೇ ಇದನ್ನು ಮಾಡುತ್ತಾರೆ ಅಂದರೆ ನೀವೇ ತಿಳಿದುಕೊಳ್ಳಿ. ಇದರ ಬಗ್ಗೆ ಸದನದಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ ಎಂದರು. ಮುಂದುವರೆದ ಅವರು, ಹಾಸ್ಟೆಲ್​ಗಳಲ್ಲಿ ಸರಿಯಾದ ಊಟ ಪೂರೈಕೆಯಾಗುತ್ತಿಲ್ಲ. ರಾಜ್ಯದ ಎಲ್ಲಾ ಹಾಸ್ಟೆಲ್​​ಗಳಲ್ಲೂ ಅವ್ಯವಸ್ಥೆಯಾಗಿದೆ ಎಂದು  ರಾಜ್ಯ ಸರ್ಕಾರದ ವಿರುದ್ಧ ಹೆಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
  First published: