ಬೆಂಗಳೂರು: ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ (Former Minister HC Mahadevappa) ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಈ ಬಾರಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ (Nanjanagudu Assembly Constituenct) ಮಹದೇವಪ್ಪ ಸ್ಪರ್ಧೆ ಮಾಡಲು ನಿರ್ಧರಿಸಿದ್ದರು. ಇದೇ ಕ್ಷೇತ್ರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧ್ರುವ ನಾರಾಯಣ್ (Dhruva Narayan) ಸಹ ನಂಜನಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಹಾಗಾಗಿ ಮಹದೇವಪ್ಪ ಮತ್ತು ಧ್ರುವ ನಾರಾಯಣ್ ಮಧ್ಯೆ ಟಿಕೆಟ್ ಫೈಟ್ ಏರ್ಪಡಬಹುದು ಎಂಬುದರ ಬಗ್ಗೆ ಚರ್ಚೆಗಳು ನಡೆದಿದ್ದವು. ಇದೀಗ ಧ್ರುವ ನಾರಾಯಣ್ ಅವರು ನಿಧನರಾಗಿದ್ದು, ಪುತ್ರ ದರ್ಶನ್ಗೆ (Darshan Dhruva Narayan) ಟಿಕೆಟ್ ನೀಡಬೇಕೆಂಬ ಒತ್ತಾಯಗಳು ಕೇಳಿ ಬಂದಿದ್ದವು. ಧ್ರುವ ನಾರಾಯಣ್ ಅಂತಿಮ ಸಂಸ್ಕಾರದ ವೇಳೆ ಅಭಿಮಾನಿಗಳು ದರ್ಶನ್ ಅವರಿಗೆ ಟಿಕೆಟ್ ನೀಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಂದೆ ಘೋಷಣೆ ಕೂಗಿದ್ದರು.
ಇದೀಗ ನಂಜನಗೂಡು ಕ್ಷೇತ್ರದ ಟಿಕೆಟ್ ಅಕಾಂಕ್ಷಿಯಾಗಿದ್ದ ಹೆಚ್.ಸಿ.ಮಹದೇವಪ್ಪ ಚುನಾವಣಾ ಕಣದಿಂದ ಹಿಂದೆ ಸರಿದು ದರ್ಶನ್ ಧ್ರುವ ನಾರಾಯಣ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
ದರ್ಶನ್ಗೆ ನನ್ನ ಬೆಂಬಲ
ಬುಧವಾರ ಪುತ್ರ ಸುನಿಲ್ ಬೋಸ್ ಜೊತೆ ಧ್ರುವ ನಾರಾಯಣ್ ನಿವಾಸಕ್ಕೆ ಭೇಟಿ ನೀಡಿದ ಮಹದೇವಪ್ಪ, ಕುಟುಂಬರಸ್ಥರಿಗೆ ಸಾಂತ್ವಾನ ಹೇಳಿದರು. ಇದೇ ವೇಳೆ ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇನೆ. ನನ್ನ ಬೆಂಬಲ ದರ್ಶನ್ಗೆ ಇರಲಿದೆ. ನೀನು ಸಹ ನನ್ನ ಸುನಿಲ್ ಇದ್ದಂತೆ. ನಿನ್ನ ರಾಜಕೀಯ ಬೆಳವಣಿಗೆಗೆ ನನ್ನಿಂದಾಗುವ ಸಹಾಯ ಮಾಡುವೆ ಎಂದು ಹೇಳಿದ್ದಾರೆ.
ಸಾವಿನಲ್ಲಿ ರಾಜಕೀಯ ಮಾಡಲ್ಲ
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಸಿ.ಮಹದೇವಪ್ಪ, ನನ್ನ ಬೆಂಬಲವನ್ನು ದರ್ಶನ್ ಅವರಿಗೆ ನೀಡುತ್ತೇನೆ. ಧ್ರುವ ನಾರಾಯಣ್ ನಿಧನವೇ ಈ ವಿಷಯವನ್ನು ತಿಳಿಸಬೇಕಾಗಿತ್ತು. ಕುಟುಂಬಸ್ಥರು ಆಘಾತದಲ್ಲಿದ್ದರಿಂದ ಹೇಳಿರಲಿಲ್ಲ. ಸಾವಿನಲ್ಲೂ ರಾಜಕೀಯ ಮಾಡಲು ನನಗೆ ಇಷ್ಟವಿಲ್ಲ. ದರ್ಶನ್ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದರು.
ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ
ಧ್ರುವ ನಾರಾಯಣ್ ಮತ್ತು ನಾನು ಒಂದೇ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದೇವೆ. ಆದರೆ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಆದ್ರೆ ಧ್ರುವ ನಾರಾಯಣ್ ನಮ್ಮ ಜೊತೆಯಲ್ಲಿಲ್ಲ. ಸಾಮಾನ್ಯ ಕಾರ್ಯಕರ್ತನಂತೆ ದುಡಿದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ಮಹದೇವಪ್ಪ ಹೇಳಿದ್ದಾರೆ. ಮಹದೇವಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ದರ್ಶನ್ ಧನ್ಯವಾದ ತಿಳಿಸಿದರು.
ಬಿಜೆಪಿಗೆ ಗುಡ್ ಬೈ, ‘ಕೈ’ಗೆ ಜೈ
ವಿಧಾನಸಭೆ ಚುನಾವಣೆ ಹತ್ತಿರವಾಗ್ತಿದೆ. ರಾಜ್ಯದಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ ಮೋಹನ್ ಲಿಂಬಿಕಾಯಿ (Mohan Limbikai) ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ. BJP ಪ್ರಾಥಮಿಕ ಸದಸ್ಯತ್ವಕ್ಕೆ ಮಾಜಿ MLC ಮೋಹನ್ ಲಿಂಬಿಕಾಯಿ ರಾಜೀನಾಮೆ ನೀಡಿದ್ದಾರೆ. ಹಿರಿಯ ನಾಯಕರ ವರ್ತನೆಯಿಂದ ಬೇಸತ್ತು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಮೋಹನ್ ಲಿಂಬಿಕಾಯಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಇದನ್ನೂ ಓದಿ: Congress List: ಇಂದು ರಿಲೀಸ್ ಆಗುತ್ತಾ ಕಾಂಗ್ರೆಸ್ ಫಸ್ಟ್ ಲಿಸ್ಟ್? ಈ ಬಾರಿ ಯಾರ 'ಕೈ'ಗೆ ಸಿಗುತ್ತೆ ಟಿಕೆಟ್?
ಕಾರ್ಯಕರ್ತರಿಗೆ ಪೆಟ್ರೋಲ್ ಫ್ರೀ
ಗದಗ ನಗರದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರಿಗೆ ಪೆಟ್ರೋಲ್ ಆಫರ್. ಬೈಕ್ ಜಾಥಾದಲ್ಲಿ ಭಾಗಿಯಾಗುವ ಕಾರ್ಯಕರ್ತರಿಗೆ ಪೆಟ್ರೋಲ್ ಫ್ರೀ ಆಗಿ ಹಾಕಿಸಲಾಯ್ತು. ಪೆಟ್ರೋಲ್ ಹಾಕಿಸಿಕೊಳ್ಳಲು ಚೀಟಿ ಹಿಡಿದು ಕಾರ್ಯಕರ್ತರು ನಿಂತಿದ್ರು. ಈ ವೇಳೆ ನೂಕುನುಗ್ಗಲು ಉಂಟಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ