ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್, ಸೋಲನ್ನು ಒಪ್ಪಿಕೊಳ್ಳಲ್ಲ; ಹಳ್ಳಿಹಕ್ಕಿ ಹೆಚ್​.ವಿಶ್ವನಾಥ್ ಲೇವಡಿ

ಸಿದ್ದರಾಮಯ್ಯ ಯಾರ ಯಶಸ್ಸನ್ನು ಸಹಿಸುವುದಿಲ್ಲ. ತಮ್ಮ ಸಮುದಾಯದ ಸ್ವಾಮೀಜಿಯವರ ಹೋರಾಟವನ್ನು ಅವರು ಸಹಿಸುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಸ್ವಾರ್ಥ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಅವರಿಗೆ ಇನ್ನೂ ಸಹ ಕಾಂಗ್ರೆಸ್ ಸಂಸ್ಕೃತಿ ಒಗ್ಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ ಎಂದು ವ್ಯಂಗ್ಯ ಮಾಡಿದರು.

ಹೆಚ್. ವಿಶ್ವನಾಥ್- ಸಿದ್ದರಾಮಯ್ಯ

ಹೆಚ್. ವಿಶ್ವನಾಥ್- ಸಿದ್ದರಾಮಯ್ಯ

  • Share this:
ಮೈಸೂರು(ಫೆ.12): ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್. ಸೋಲನ್ನು ಒಪ್ಪಿಕೊಳ್ಳಲ್ಲ. ಗೆಲ್ಲೋದಕ್ಕೂ ಆಗಲ್ಲ. ಇವರದ್ದು ಒಂಥರ ಟ್ರಂಪಾಯಣದ ಕಥೆ. ಸಿದ್ದರಾಮಯ್ಯ ಸೋಲನ್ನು ಒಪ್ಪಿಕೊಳ್ಳಲ್ಲ. ಸೋತರೆ ರಾಹುಕೇತುಗಳು ಸೋಲಿಸಿದರು ಅಂತಾರೆ. ನನ್ನನ್ನ ಬಿಟ್ಟರೆ ಇನ್ಯಾರು ಇರಬಾರದು ಅನ್ನೋ ಮನಸ್ಥಿತಿ ಅವರದ್ದು. ಸಿದ್ದರಾಮಯ್ಯ ಕರ್ನಾಟಕ ಟ್ರಂಪ್ ಇದ್ದಂತೆ. ಹತಾಶೆಯಿಂದ ಚಡಪಡಿಸುತ್ತಿದ್ದಾರೆ.  ಸಿದ್ದರಾಮಯ್ಯಗೆ ರಾಜಕೀಯ ಚಡಪಡಿಕೆ ಶುರುವಾಗಿದೆ ಎಂದು ಹಳ್ಳಿಹಕ್ಕಿ ಹೆಚ್​. ವಿಶ್ವನಾಥ್​​ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಲೇವಡಿ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ. ಯಡಿಯೂರಪ್ಪನವರನ್ನು ನೋಡಿದ ಕೂಡಲೇ ಅವರಿಗೆ ಸಿಎಂ ಮಿಠಾಯಿ ನೆನಪಾಗುತ್ತದೆ. ಅದ‌ನ್ನು ಒಮ್ಮೆ ಪಡೆಯಬೇಕೆಂಬ ಚಡಪಡಿಕೆ ಅವರಿಗೆ. ಹೀಗಾಗಿ ನಾಯಕತ್ವದ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಅದು ನಮ್ಮ ಪಕ್ಷದ ಆಂತರಿಕ ವಿಚಾರ. ಈಗ ಅದನ್ನ ಬಿಟ್ಟು ಅಹಿಂದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಪಾಂಡಾ ಜೊತೆಗೆ ಫುಡ್ ಡೆಲಿವರಿಗೆ ಹೊರಟ ಯುವಕ..!; ಫೋಟೋ ವೈರಲ್

ರಾಜ್ಯದಲ್ಲಿ ಸಿದ್ದರಾಮಯ್ಯರಿಂದ ಅಹಿಂದ ಹೋರಾಟ ವಿಚಾರ ಕುರಿತಾಗಿ ಪ್ರತಿಕ್ರಿಯಿಸಿದ ವಿಶ್ವನಾಥ್,  ಇದು ಯಾವ ಅಹಿಂದ ಹೋರಾಟವೂ ಅಲ್ಲ. ಇದು ಸಿದ್ದರಾಮಯ್ಯ ಹಾಗೂ ಮಹದವೇಪ್ಪ ಅವರ ಸ್ವಾರ್ಥದ ಹೋರಾಟ. ಸ್ವಾರ್ಥಕ್ಕಾಗಿ ಸಿದ್ದರಾಮಯ್ಯ ಹಿಂದ ಅಹಿಂದ ಎಂದು ಚಡಪಡಿಸುತ್ತಿದ್ದಾರೆ. ಅವರಿಗೆ ಅಸ್ತಿತ್ವ ಅಭದ್ರತೆ ಕಾಡುತ್ತಿದೆ. ಕುರುಬ ಸಮಾಜದ ಎಸ್ ಟಿ ಹೋರಾಟ ಅವರಿಲ್ಲದೆ ಯಶಸ್ವಿಯಾಗಿದೆ. ಲಕ್ಷಾಂತರ ಜನರು ಸೇರಿಸಿ ಯಶಸ್ಸು ಕಂಡಿದ್ದೇವೆ. ನಾನು ಇಲ್ಲದಿದ್ದರೆ ಆಗಲ್ಲ ಅಂತಾ ಅಂದುಕೊಂಡಿದ್ದರು. ಅವರಲ್ಲಿ ನಾನು ನಾನು ಅನ್ನೋ ಸ್ವಾರ್ಥ ಇತ್ತು. ಸಮುದಾಯ ನನ್ನ ಜೊತೆ ಇಲ್ಲ ಅನ್ನೋದು ಈಗ ಅವರಿಗೆ ಕಾಣುತ್ತಿದೆ ಎಂದು ಕುಟುಕಿದರು.

ಮುಂದುವರೆದ ಅವರು,  ಕಾಂಗ್ರೆಸ್‌ನಲ್ಲಿ ಡಿಕೆ ಶಿವಕುಮಾರ್ ನಾಯಕತ್ವ ಪ್ರಬಲವಾಗುತ್ತಿದೆ. ಪಕ್ಷ ಹಾಗೂ ಸಮುದಾಯ ಎರಡರಲ್ಲೂ ಸಿದ್ದು ಏಕಾಂಗಿಯಾಗುತ್ತಿದ್ದಾರೆ. ರಾಜಕೀಯ ಅಸ್ತಿತ್ವಕ್ಕೆ ಚಡಪಡಿಕೆ ಶುರುವಾಗಿದೆ. ಯಾವ ಹೋರಾಟ ಮಾಡುತ್ತೀರಾ ? ನಾನು ಸಿದ್ದರಾಮಯ್ಯ ಮೈಸೂರಿನಲ್ಲೇ ಓದಿದ್ದು. ಅವರು ಯಾವ ವಿದ್ಯಾರ್ಥಿ ಹೋರಾಟದಲ್ಲೂ ಇರಲಿಲ್ಲ. ತಮ್ಮ ಅಭದ್ರತೆ ಮುಚ್ಚಿಕೊಳ್ಳಲು ಅಹಿಂದ ಬಳಸುತ್ತಿದ್ದಾರೆ. ಅಲ್ಪಸಂಖ್ಯಾತರರನ್ನು ಬಿಟ್ಟು ಹಿಂದ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಲೆ ಅಲ್ಪಸಂಖ್ಯಾತರನ್ನು ತುಳಿದು ಹಾಕಿದ್ದಾರೆ. ಮುಸ್ಲಿಂರನ್ನು ಸಾಕಷ್ಟು ಬಾರಿ ಸೋಲಿಸಲು ಕಾರಣರಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್​​  ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಕಾಂಗ್ರೆಸ್​ನ ಸಂಸ್ಕಾರ -ಸಂಸ್ಕೃತಿ ಇಲ್ಲದ ಮನುಷ್ಯ. ಅಚಾನಕ್ ಆಗಿ ನಾವು ಕರೆದುಕೊಂಡು ಬಂದಿದ್ದಕ್ಕೆ ಸಿಎಂ ಆದವರು. ಅದೃಷ್ಟದಿಂದ ಸಿಎಂ ಆದವರು. ಸಿದ್ದರಾಮಯ್ಯ ಯಾರ ಯಶಸ್ಸನ್ನು ಸಹಿಸುವುದಿಲ್ಲ. ತಮ್ಮ ಸಮುದಾಯದ ಸ್ವಾಮೀಜಿಯವರ ಹೋರಾಟವನ್ನು ಅವರು ಸಹಿಸುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಸ್ವಾರ್ಥ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಅವರಿಗೆ ಇನ್ನೂ ಸಹ ಕಾಂಗ್ರೆಸ್ ಸಂಸ್ಕೃತಿ ಒಗ್ಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ ಎಂದು ವ್ಯಂಗ್ಯ ಮಾಡಿದರು.
Published by:Latha CG
First published: