ಕಾಂಗ್ರೆಸ್ ಪಕ್ಷವನ್ನ ಮುಳುಗಿಸುವವರೇ ನಾಯಕತ್ವ ಬಿಟ್ಟು ಹೋಗಿರೋದು ದೊಡ್ಡ ಭಾಗ್ಯ ; ಹೆಚ್.ವಿಶ್ವನಾಥ್

ಸಿದ್ದರಾಮಯ್ಯ ನಾನು ಅಣ್ಣತಮ್ಮನಿದ್ದಂತೆ ನಾವಿಬ್ಬರು ಕುರುಬ ಸಮುದಾಯದವರು ಯಾವತ್ತೂ ಅಣ್ಣನ್ನ ತಮ್ಮ ಬೆಳೆಯೋದಕ್ಕೆ ಬಿಡೊದಿಲ್ಲ. ಸಿದ್ದರಾಮಯ್ಯ ಜೊತೆ ದಾಯದಿ ಕಲಹವಿದ್ರೆ ತೊಂದರೆ ಇರುತ್ತಿರಲಿಲ್ಲ

G Hareeshkumar | news18-kannada
Updated:December 11, 2019, 7:32 PM IST
ಕಾಂಗ್ರೆಸ್ ಪಕ್ಷವನ್ನ ಮುಳುಗಿಸುವವರೇ ನಾಯಕತ್ವ ಬಿಟ್ಟು ಹೋಗಿರೋದು ದೊಡ್ಡ ಭಾಗ್ಯ ; ಹೆಚ್.ವಿಶ್ವನಾಥ್
ಹೆಚ್.ವಿಶ್ವನಾಥ್
  • Share this:
ಬೆಂಗಳೂರು(ಡಿ.11): ಕಾಂಗ್ರೆಸ್ ಪಕ್ಷವನ್ನ ಮುಳುಗಿಸುವವರು ಮುಳುಗುವ ಮುನ್ನ ನಾಯಕತ್ವದಿಂದ ಹೊರ ಹೋಗಿದ್ದು ಕಾಂಗ್ರೆಸ್ ಭಾಗ್ಯ. ನನಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಬಗ್ಗೆ ಗೌರವವಿದೆ. ಆದರೆ, ಆ ಪಕ್ಷದ ನಾಯಕತ್ವದ ಬಗ್ಗೆ ನನಗೆ ಬೇಸರವಿದೆ ಎಂದು ಮಾಜಿ ಸಚಿವ ಹೆಚ್​.ವಿಶ್ವನಾಥ್​ ಹೇಳಿದ್ದಾರೆ.

ರಾಜಕಾರಣ ಮತ್ತು ರಾಜಕಾರಣಿಗಳಿಗೆ ಸಾವಿಲ್ಲ. ನಾನು ಮೂರು ವರ್ಷದಲ್ಲಿ ಮೂರು ಪಕ್ಷ ಬದಲಿಸಿದ್ದಾರೆ ಎನ್ನುತ್ತಾರೆ. ನಾನು 40 ವರ್ಷ ಕಾಂಗ್ರೆಸ್ ನಲ್ಲಿ ಸಕ್ರಿಯನ್ನಾಗಿದ್ದೆ. ಬಲವಾದ ಕಾರಣದಿಂದ ಅಯ್ಯೋಗ್ಯ ಸರ್ಕಾರವನ್ನ ಕಿತ್ತೋಗೆಯಲು ಪಕ್ಷ ಬದಲಿಸಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯನವರು ಆರು ಬಾರಿ ಪಕ್ಷಾಂತರ ಮಾಡಿದ್ದಾರೆ. ರಮೇಶ್ ಕುಮಾರ್ ಒಂಭತ್ತು ಬಾರೀ ಪಕ್ಷ ಬದಲಿಸಿದ್ದಾರೆ. ಅವರದು ಪಕ್ಷಾಂತರವಲ್ಲದೆ ಮತ್ತೇನು ಎಂದು  ಹೆಚ್​. ವಿಶ್ವನಾಥ್ ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯ ನಾನು ಅಣ್ಣತಮ್ಮನಿದ್ದಂತೆ ನಾವಿಬ್ಬರು ಕುರುಬ ಸಮುದಾಯದವರು ಯಾವತ್ತೂ ಅಣ್ಣನ್ನ ತಮ್ಮ ಬೆಳೆಯೋದಕ್ಕೆ ಬಿಡೊದಿಲ್ಲ. ಸಿದ್ದರಾಮಯ್ಯ ಜೊತೆ ದಾಯದಿ ಕಲಹವಿದ್ರೆ ತೊಂದರೆ ಇರುತ್ತಿರಲಿಲ್ಲ. ಆದರೆ, ಇದು ಅಣ್ಣ ತಮ್ಮನ ಕಿತ್ತಾಟ ಎಂದು ಎಂದು ವಿಶ್ವನಾಥ ಕುಟುಕಿದರು.

ಇದನ್ನೂ ಓದಿ : ಹುಣಸೂರಿನಲ್ಲಿ ವಿಶ್ವನಾಥ್ ಸೋಲಿಗೆ ಯೋಗೀಶ್ವರ್ ಕಾರಣ : ಜಿಟಿ ದೇವೇಗೌಡ

ನಾನು ಚುನಾವಣೆಯಲ್ಲಿ ಸೋತ್ತಿರಬಹುದು ಅದರೆ, ನಮ್ಮ ಉದ್ದೇಶ ಗೆದ್ದಿದೆ. ನಮಗೆ ಯಾವುದೇ ಸಚಿವ ಸ್ಥಾನದ ಮೇಲೆ ಕಣ್ಣಿಲ್ಲ. ಸಿಎಂ ಬಿ ಎಸ್ ಯಡಿಯೂರಪ್ಪನವರೇ ನಮಗೆ ಹೈಕಮಾಂಡ್ ಎಂದು ತಿಳಿಸಿದರು
First published:December 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ