ಸರ್ಕಾರ ಬಂದು 7 ತಿಂಗಳಾದರೂ ನಮ್ಮ ಜಿಲ್ಲೆಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ; ಹೆಚ್ ಡಿ ರೇವಣ್ಣ ಕಿಡಿ

ನಮ್ಮ ಜಿಲ್ಲೆಯ ವಿಮಾನ ನಿಲ್ದಾಣ ಕಾಮಗಾರಿ ಕೆಲಸ ಸೇರಿದಂತೆ ಹಲವು ಕಾಮಗಾರಿಗಳು ನಿಂತಿದೆ. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಪತ್ರ ಬರೆದಿದ್ದಾರೆ

 ಎಚ್​.ಡಿ. ರೇವಣ್ಣ

ಎಚ್​.ಡಿ. ರೇವಣ್ಣ

  • Share this:
ಹಾಸನ(ಫೆ.12) : ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು 7 ತಿಂಗಳಾಯ್ತು, ಯಾವುದೇ ಪಕ್ಷಪಾತ ಮಾಡದೇ ಎಲ್ಲಾ ಕೆಲಸ ಮಾಡುತ್ತೇವೆ ಅಂತ ಸಿಎಂ ಯಡಿಯೂರಪ್ಪ ಹೇಳಿದರು. ಆದರೆ, ನಮ್ಮ ಜಿಲ್ಲೆಯ ಯಾವ ಕೆಲಸಗಳು ಆಗುತ್ತಿಲ್ಲ ಎಂದು ಬಿಎಸ್​ವೈ ವಿರುದ್ದ ಮಾಜಿ ಸಚಿವ ಹೆಚ್ ಡಿ ರೇವಣ್ಣ ಕಿಡಿಕಾರಿದ್ದಾರೆ.  

ನಮ್ಮ ಜಿಲ್ಲೆಯ ವಿಮಾನ ನಿಲ್ದಾಣ ಕಾಮಗಾರಿ ಕೆಲಸಗಳು ಸೇರಿದಂತೆ ಹಲವು ಕಾಮಗಾರಿಗಳು ಅರ್ಧಕ್ಕೆ ನಿಂತಿದೆ. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಪತ್ರ ಬರೆದಿದ್ದಾರೆ, ಇದೇ ತಿಂಗಳ 24 ರಂದು ಹಾಸನ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಮಾಡುತ್ತೇವೆ ಎಂದು ತಿಳಿಸಿದರು.

ಜೆಡಿಎಸ್ ಪಕ್ಷ ಸವಕಲು ನಾಣ್ಯ ಎಂದು ಸಚಿವ ಆರ್ ಅಶೋಕ್ ಲೇವಡಿ ಮಾಡಿದ್ದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗ ಹಳೇ ಕಾಲದ ಮೇಲೆ ನಾಣ್ಯವೇ ನಡೆಯೋದು, ಈಗ ಮೊದಲು ಪ್ರಧಾನಿ ನರೇಂದ್ರ ಮೋದಿಯವರು ಅವರನ್ನ ಮೊದಲು ಉಳಿಸಿಕೊಳ್ಳಲಿ, ದೆಹಲಿಯಲ್ಲಿ ಬಿಜೆಪಿಯನ್ನಿ ಆಮ್​​​ಆದ್ಮಿ ಪಕ್ಷದವರು ಗುಡಿಸಿ ಹಾಕಿದ್ದಾರೆ ಎಂದು ಸಚಿವ ಆರ್.ಅಶೋಕ್ ವಿರುದ್ದ ಮಾಜಿ ಸಚಿವ ಹೆಚ್ ಡಿ ರೇವಣ್ಣ ತಿರುಗೇಟು ನೀಡಿದರು.

ಹಾಸನದಲ್ಲಿ ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಐಟಿ ದಾಳಿ ಕೇವಲ ತುಮಕೂರು, ಹಾಸನ ಹಾಗೂ ಮಂಡ್ಯ ದಲ್ಲಿ ಮಾತ್ರ ನಡೆಯುತ್ತಿದೆ. ಸವಕಲು ನಾಣ್ಯ ಅಂತಾರೆ ಯಾಕೆ ರೇಡ್ ಮಾಡುತ್ತಾರೆ ಎಂದು ಎಚ್. ಡಿ ರೇವಣ್ಣ ಪ್ರಶ್ನೆ ಮಾಡಿದರು.

 ಕರ್ನಾಟಕ ಬಂದ್​​ಗೆ ಜೆಡಿಎಸ್ ಬೆಂಬಲ:

ನೆಲ ಜಲದ ದೃಷ್ಟಿಯಿಂದ ನಾಳಿನ ಕನ್ನಡಪರ ಸಂಘಟನೆಗಳ ಕರ್ನಾಟಕ ಬಂದ್‌ಗೆ ಜೆಡಿಎಸ್ ಬೆಂಬಲಿ ನೀಡುತ್ತದೆ. ನಾಳೆ ಎಲ್ಲ ಕನ್ನಡಪರ ಸಂಘಟನೆ ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು ಎಂದು ಪ್ರತಿಭಟನೆ ನಡೆಸುತ್ತವೆ. ನೆಲ, ಜಲದ ದೃಷ್ಟಿಯಿಂದ ಅವರು ಮಾಡುತ್ತಿರುವ ಪ್ರತಿಭಟನೆ ಸರಿಯಿದೆ ಎಂದರು.

ಸ್ವತಂತ್ರ ಅಭ್ಯರ್ಥಿಗೆ ಬೆಂಬಲ :

ವಿಧಾನ ಪರಿಷತ್​​ಗೆ ಸ್ವತಂತ್ರ ಅಭ್ಯರ್ಥಿ ಅನಿಲ್ ಕುಮಾರ್​ಗೆ ಬೆಂಬಲ ಕುರಿತ ವಿಚಾರ, ಅನಿಲ್ ಕುಮಾರ್ ಕಾಂಗ್ರೆಸ್ ಪಕ್ಷದಲ್ಲಿದ್ದವರು, ಸಿದ್ದಗಂಗಾ ಮಠಕ್ಕೆ ಓಡಾಡಿಕೊಂಡಿದ್ದವರು, ಅನಿಲ್ ನಮ್ಮಲ್ಲಿ ಬಂದು ಬೆಂಬಲಿಸುವಂತೆ ಕೇಳಿ ಕೊಂಡರು. ಆಗ ನಾನು ಕಾಂಗ್ರೆಸ್ ನವರನ್ನ ಕೇಳಿದೆ. ಕಾಂಗ್ರೆಸ್ ನವರು ಸ್ವತಂತ್ರ ಅಭ್ಯರ್ಥಿ ಮಾಡಿದ್ರೆ ಬೆಂಬಲ ನೀಡುವುದಾಗಿ ಹೇಳಿದರು. ನಂತರ ನಾನು ಅನಿಲ್ ಗೆ ಬೆಂಬಲ ಸೂಚಿಸಿದೆ ಎಂದರು.

ಇದನ್ನೂ ಓದಿ :  ದೇವೇಗೌಡರ ವಿರುದ್ಧ ಆರೋಪ ಮಾಡಿದವರಿಗೆ ಗಿಫ್ಟ್ ಕೊಡ್ತಾರಂತೆ - ಯಡಿಯೂರಪ್ಪ ವಿರುದ್ಧ ರೇವಣ್ಣ ಕಿಡಿ

ಎಂಎಲ್ ಸಿ ಚುನಾವಣಾ ವಿಚಾರದಲ್ಲಿ ಕಾಂಗ್ರೆಸ್ ಮತ್ತು ನಾವು ಸಮಾನ ಮನಸ್ಕರು ಒಗ್ಗಾಟ್ಟಾಗಬೇಕು, ಕಾಂಗ್ರೆಸ್ ಮುಖಂಡರ ಗಮನಕ್ಕೆ ತಂದೇ ಅನಿಲ್ ಕುಮಾರ್ ಅಭ್ಯರ್ಥಿ ಮಾಡಿದ್ದು, ಕೋಮುವಾದ ಪಕ್ಷ ದೂರವಿಡಲು ಅನಿಲ್ ಕುಮಾರ್ ಗೆ ಬೆಂಬಲ ನೀಡಬೇಕು ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಮನವಿ ಮಾಡಿದರು.

 
First published: