• Home
  • »
  • News
  • »
  • state
  • »
  • GT Devegowda: ಜೆಡಿಎಸ್​ ಬಿಡಲ್ಲ ಎಂದು ಗಳಗಳನೇ ಕಣ್ಣೀರಿಟ್ಟ ಜಿಟಿಡಿ; ಪುತ್ರ ಹರೀಶ್​ಗೆ ಸಿಗುತ್ತಾ ಟಿಕೆಟ್​?

GT Devegowda: ಜೆಡಿಎಸ್​ ಬಿಡಲ್ಲ ಎಂದು ಗಳಗಳನೇ ಕಣ್ಣೀರಿಟ್ಟ ಜಿಟಿಡಿ; ಪುತ್ರ ಹರೀಶ್​ಗೆ ಸಿಗುತ್ತಾ ಟಿಕೆಟ್​?

ಜಿಟಿ ದೇವೇಗೌಡ  ಮತ್ತು ಹೆಚ್​​ ಡಿ ದೇವೇಗೌಡ

ಜಿಟಿ ದೇವೇಗೌಡ ಮತ್ತು ಹೆಚ್​​ ಡಿ ದೇವೇಗೌಡ

ಇನ್ನು ಜಿ.ಟಿ.ದೇವೇಗೌಡರು ಜೆಡಿಎಸ್​​ನಿಂದ ಅಂತರ ಕಾಯ್ಗುಕೊಳ್ಳುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಇವರನ್ನು ಸಂಪರ್ಕಿಸಿ ಪಕ್ಷಕ್ಕೆ ಬರುವಂತೆ ಆಹ್ವಾನ ಸಹ ನೀಡಿದ್ದರು ಎಂದು ವರದಿಯಾಗಿದೆ.

  • News18 Kannada
  • Last Updated :
  • Karnataka, India
  • Share this:

ಜೆಡಿಎಸ್​ನಿಂದ (JDS) ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ಜಿ.ಟಿ.ದೇವೇಗೌರ (Former Minister GT Devegowda) ಮನವೊಲಿಸುವಲ್ಲಿ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು (Former PM HD Devegowda) ಯಶಸ್ವಿಯಾಗಿದ್ದಾರೆ. ಜೆಡಿಎಸ್​ನಿಂದ ದೂರ ಉಳಿದಿದ್ದ ಜಿ.ಟಿ.ದೇವೇಗೌಡರು ಹಲವು ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಜೊತೆ ವೇದಿಕೆ ಹಂಚಿಕೊಳ್ಳುವ ಮೂಲಕ ದಳಪತಿಗಳಿಗೆ ಟಾಂಗ್ ಕೊಟ್ಟಿದ್ದರು. ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಜಿಟಿಡಿ, ಹೆಚ್.ಡಿ.ದೇವೇಗೌಡರ ಜೊತೆಗಿನ ಸ್ನೇಹದಿಂದಾಗಿ ತಡವಾಗಿದ್ದು, 15 ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಅಂತ ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಜಿಟಿಡಿ ನಿವಾಸಕ್ಕೆ ಭೇಟಿ ನೀಡಿದ ಹೆಚ್​​ಡಿಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮುನಿಸಿಕೊಂಡಿದ್ದ ಅರಸಿಕೆರೆ ಶಾಸಕ ಶಿವಲಿಂಗೇಗೌಡರು (MLA Shivalingegowda) ಪಕ್ಷದಲ್ಲಿಯೇ ಉಳಿಯುವ ಬಗ್ಗೆ ತೀರ್ಮಾನ ಮಾಡಿದ್ದಾರೆ.


ಜೆಡಿಎಸ್​ ಪಕ್ಷವನ್ನ ರಾಜ್ಯದಲ್ಲಿ ಸಂಪೂರ್ಣ ಅಧಿಕಾರಕ್ಕೆ ತರೋದಕ್ಕೆ ಕುಮಾರಸ್ವಾಮಿ ಕಾಲಿಗೆ ಚಕ್ರ ಕಟ್ಕೊಂಡ್​ ಓಡಾಡ್ತಿದ್ದಾರೆ. ಆದ್ರೆ ಹೆಚ್​ಡಿಕೆಗೆ ಸಾಥ್​ ಕೊಡಬೇಕಿದ್ದ ಜಿ.ಟಿ.ದೇವೇಗೌಡ, ಶಿವಲಿಂಗೇಗೌಡ ಸೇರಿ ಅನೇಕರು ಜೆಡಿಎಸ್​​ನಿಂದ ದೂರ ಉಳಿದಿದ್ದರು. ಈಗ ದೇವೇಗೌಡರೇ ಖುದ್ದು ಅಖಾಡಕ್ಕೆ ಇಳಿದು ಬಂಡಾಯ ಶಮನ ಮಾಡುತ್ತಿದ್ದಾರೆ.


ಗಳಗಳನೇ ಕಣ್ಣೀರಿಟ್ಟ ಜಿಟಿಡಿ


ಜೆಡಿಎಸ್​​ ಬಿಟ್ಟು ಹೋಗಲ್ಲ ಅಂತ ಜಿ.ಟಿ.ದೇವೇಗೌಡರು ಗಳಗಳನೆ ಕಣ್ಣೀರಿಟ್ಟಿದ್ದಾರೆ. ಗುರುವಾರ ದೇವೇಗೌಡರನ್ನು ಭೇಟಿಯಾದ ಅವರು, ದೇವೇಗೌಡರಿಗೆ ನನ್ನ ಬಗ್ಗೆ ಪ್ರೀತಿ ಇದೆ. ನನ್ನನ್ನು ಮರಿ ದೇವೇಗೌಡ ಎಂದು ಕರೆಯುತ್ತಿದ್ರು. ಜಿಟಿಡಿ ಜೆಡಿಎಸ್ ಪಕ್ಷದಲ್ಲೆ ಇರುತ್ತಾನೆ ಎಂದು ಹೆಚ್.ಡಿ ದೇವೇಗೌಡರು ಹೇಳಿದ್ರು. ಆದ್ದರಿಂದ ದೇವೇಗೌಡರು ಕಂಡ ಕನಸು ನನಸು ಮಾಡುತ್ತೇವೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರುತ್ತೇನೆ. ಕುಮಾರಸ್ವಾಮಿಯವರನ್ನ ಸಿಎಂ ಮಾಡುತ್ತೇನೆ ಎಂದು ಜಿಟಿ ದೇವೇಗೌಡ ಕಣ್ಣೀರಿಟ್ಟಿದ್ದಾರೆ.


ಇನ್ನು ಜಿ.ಟಿ.ದೇವೇಗೌಡರು ಜೆಡಿಎಸ್​​ನಿಂದ ಅಂತರ ಕಾಯ್ಗುಕೊಳ್ಳುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಇವರನ್ನು ಸಂಪರ್ಕಿಸಿ ಪಕ್ಷಕ್ಕೆ ಬರುವಂತೆ ಆಹ್ವಾನ ಸಹ ನೀಡಿದ್ದರು ಎಂದು ವರದಿಯಾಗಿದೆ.


2023ಕ್ಕೆ ಮಿಷನ್​ 123


2023ಕ್ಕೆ ಮಿಷನ್​ 123 ಶುರು ಮಾಡಿರುವ ಕುಮಾರಸ್ವಾಮಿ ಈಗ 126 ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಿದ್ದಾರೆ. ಇದರಲ್ಲಿ ನಿಖಿಲ್​ ಕುಮಾರಸ್ವಾಮಿ ಮತ್ತು ಜಿಟಿ ದೇವೇಗೌಡ ಪುತ್ರ ಹರೀಶ್​​ಗೂ ಟಿಕೆಟ್​ ಸಿಗೋದು ಬಹುತೇಕ ಖಚಿತವಾಗಿದೆ .


‘40 ಸ್ಥಾನ ಬಂದ್ರೆ ರಾಜಕೀಯ ಬಿಡ್ತೀನಿ’


ಈ ಬಾರಿ ಜೆಡಿಎಸ್​ಗೆ 30ರಿಂದ 40 ಸ್ಥಾನ ಬಂದರೆ ಅಧಿಕಾರದಿಂದ ದೂರ ಇರುತ್ತೇನೆ. 30ರಿಂದ 40 ಸ್ಥಾನ ಬಂದರೂ ನಾನು ಸಿಎಂ ಆಗುತ್ತೇನೆ ಎಂದು ನಮ್ಮ ಪಕ್ಷದ ಶಾಸಕರು ಅಂದುಕೊಳ್ಳುವುದು ಬೇಡ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.




ಇದನ್ನೂ ಓದಿ: Mandya Politics: ಸುಮಲತಾ Vs ಅನ್ನದಾನಿ: ಸಾವಿನ ನೆರವು ಕೊಡಿಸೋದರಲ್ಲಿ ಕ್ರೆಡಿಟ್​ ಪಾಲಿಟಿಕ್ಸ್

 ನ.1ಕ್ಕೆ ಅಧಿಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್​


ಮುಂಬರುವ ವಿಧಾನಸಭೆ ಚುನಾವಣೆಗೆ ಮೊದಲ ಹಂತದಲ್ಲಿ 126 ವಿಧಾನಸಭಾ ಕ್ಷೇತ್ರಗಳ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ನ.1ರಂದು ಪ್ರಕಟಿಸಲಾಗುವುದು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. ಯಾರೊಂದಿಗೂ ಕೈಜೋಡಿಸುವ ಪ್ರಶ್ನೆಯೇ ಇಲ್ಲ. ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ. ಎಲ್ಲ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಹಾಕಲಾಗುವುದು. 123 ಸ್ಥಾನಗಳನ್ನು ಗೆಲ್ಲಬೇಕು ಎನ್ನುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.


ಇದನ್ನೂ ಓದಿ:   Karnataka Weather Report: ದಿಢೀರ್ ಎಂಟ್ರಿ ಕೊಟ್ಟು ಅಬ್ಬರಿಸೋ ವರುಣನ ಆಟಕ್ಕೆ ಜನರು ಹೈರಾಣು; ಇಂದಿನ ಹವಾಮಾನ ವರದಿ


ಸಿಎಂ ಬೊಮ್ಮಾಯಿಗೆ ಹೆಚ್​​ಡಿಕೆ ಸವಾಲು


ಸಿದ್ದರಾಮಯ್ಯ ಸಿಎಂ ಆಗಿದ್ದ  ಅವಧಿಯಲ್ಲಿ ನೇಮಕಾತಿಯಲ್ಲಿ (Recruitment) ನಡೆದಿರುವ ಅಕ್ರಮ ವ್ಯವಹಾರಗಳ ದಾಖಲೆಗಳನ್ನು ರಾಹುಲ್‌ ಗಾಂಧಿಗೆ (Rahul Gandhi) ಕಳುಹಿಸುತ್ತೀರೇಕೆ? ನಿಮಗೆ ಧಮ್ ಇದ್ದರೆ ಸಚಿವ ಸಂ‍ಪುಟದಲ್ಲಿಟ್ಟು ತನಿಖೆ ಮಾಡಿಸಿ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರಿಗೆ ಸವಾಲು ಹಾಕಿದ್ದಾರೆ.

Published by:Mahmadrafik K
First published: