ಕಳೆದ ಒಂದು ತಿಂಗಳಿನಿಂದ ರಾಜ್ಯ ರಾಜಕಾರಣದಲ್ಲಿ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ (Former Minister Janardhan Reddy) ಸದ್ದು ಮಾಡುತ್ತಿದ್ದಾರೆ. ತಾವು ರಾಜಕೀಯಕ್ಕೆ (Politics) ಹಿಂದರುಗುತ್ತಿರೋದನ್ನು ಘೋಷಣೆ ಮಾಡಿದ ನಂತರ ರಾಜಕೀಯ ಲೆಕ್ಕಾಚಾರಗಳು ಆರಂಭಗೊಂಡಿದೆ. ತಮ್ಮನ್ನ ಮತ್ತೆ ಪಕ್ಷಕ್ಕೆ ಕರೆಸಿಕೊಳ್ಳಬೇಕೆಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್ಗೂ (BJP High command) ಜನಾರ್ದನ ರೆಡ್ಡಿ ತಲುಪಿಸಿದ್ದರು. ಇತ್ತ ಬಿಜೆಪಿ ಹೈಕಮಾಂಡ್ ಸಾರಿಗೆ ಸಚಿವ ಬಿ ಶ್ರೀರಾಮುಲು (Minister Sriramulu) ಅವರಿಗೆ ಗೆಳೆಯ ಜನಾರ್ದನ ರೆಡ್ಡಿ ಮನವೊಲಿಸುವ ಟಾಸ್ಕ್ ನೀಡಿತ್ತು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa) ಹೊರತುಪಡಿಸಿ ಮತ್ಯಾವ ನಾಯಕರು ಜನಾರ್ದನ ರೆಡ್ಡಿ ಅವರ ಕುರಿತು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುತ್ತಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡ್ತಾರೆ ಅನ್ನೋ ವದಂತಿಗಳು ಕೇಳಿ ಬಂದಿದ್ದವು. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಜನಾರ್ದನ ರೆಡ್ಡಿ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿ ಆರಂಭಿಸಿದ ಜನಾರ್ದನ ರೆಡ್ಡಿ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಿಕೊಂಡರು. ನಂತರ ಬಸವಣ್ಣವರ ವಚನಗಳನ್ನು ಹೇಳಿದರು.
ಕಲ್ಯಾಣ ಪ್ರಗತಿ ಪಕ್ಷ ಘೋಷಣೆ
ಸುದೀರ್ಘವಾಗಿ ಮಾತನಾಡಿದ ಬಳಿಕ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನ ಘೋಷಿಸಿದರು. ಮುಂದಿನ ದಿನಗಳಲ್ಲಿ ರಾಜ್ಯದ ಮನೆ ಮನೆಗೂ ಬರುತ್ತೇನೆ ಎಂದರು.
ನನ್ನ ಜೊತೆ ಶ್ರೀರಾಮುಲು ಅವರಿಗೆ ಬರುವಂತೆ ಹೇಳಿಲ್ಲ. ನಮ್ಮದು ಒಳ್ಳೆಯ ಸ್ನೇಹ. ಮುಂದಿನ ದಿನಗಳಲ್ಲಿ ಶ್ರೀಮತಿ ಅರುಣಾ ಲಕ್ಷ್ಮಿ ಅವರು ಸಹ ಪಕ್ಷ ಸಂಘಟನೆಗಳಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ರಾಜಕೀಯ ಜೀವನದ ಬಗ್ಗೆ ಮಾತು
ಸುದ್ದಿಗೋಷ್ಠಿಯಲ್ಲಿ ತಮ್ಮ ರಾಜಕೀಯ ಜೀವನ ಹೇಗೆ ಆರಂಭವಾಯ್ತು? ಸುಷ್ಮಾ ಸ್ವರಾಜ್ ಜೊತೆಗಿನ ಒಡನಾಟ ಮತ್ತು ಯಡಿಯೂರಪ್ಪ ಅವರೊಂದಿಗೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಂಡರು.
ನಾಳೆಯಿಂದಲೇ ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಜನವರಿ 11ರಂದು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಿ ಅಂದೇ ಕಲ್ಯಾಣ ಕರ್ನಾಟಕದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟ ಜನಾರ್ದನ ರೆಡ್ಡಿ
ಈ ಹಿಂದೆ ರೆಡ್ಡಿ ಸಮುದಾಯ ಪ್ರಾಬಲ್ಯ ಹೊಂದಿರುವ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಅರುಣಾ ಲಕ್ಷ್ಮಿ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ದೇವರ ಹಿಪ್ಪರಗಿ ಭಾಗದ ಮುಖಂಡರ ಜೊತೆ ಜನಾರ್ದನ ರೆಡ್ಡಿ ಮಾತುಕತೆ ಸಹ ನಡೆಸಿದ್ದರು.
ಮನವೊಲಿಸುವ ಕೆಲಸ ಎಂದಿದ್ದ ಶ್ರೀರಾಮುಲು
ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಾರಿಗೆ ಸಚಿವ ಶ್ರೀರಾಮುಲು, ಜನಾರ್ದನರೆಡ್ಡಿ ಈ ಭಾಗದ ಹಿರಿಯ ನಾಯಕರು. ಪಕ್ಷದ ಹಿರಿಯ ನಾಯಕರು ಮನವೊಲಿಸುವ ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ನೀಡಿದ್ದರು.
ಇದನ್ನೂ ಓದಿ: Janardhan Reddy: ಬಿಜೆಪಿಗೆ ಬಿಸಿ ತುಪ್ಪವಾದ ಜನಾರ್ದನ ರೆಡ್ಡಿ; ಶ್ರೀರಾಮುಲುಗೆ ‘ಹೈ’ ಟಾಸ್ಕ್
ಬಿಜೆಪಿ ಜನಾರ್ದನರೆಡ್ಡಿ ಅವರನ್ನ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಜನಾರ್ದನರೆಡ್ಡಿ ಅವರ ಬೇಡಿಕೆಗಳ ಬಗ್ಗೆ ಸಿಎಂ ಬೊಮ್ಮಾಯಿ ಮಾತನಾಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ಕೂಡ ತರಲಾಗಿದೆ. ಪಕ್ಷದ ನಾಯಕರು ಜನಾರ್ದನರೆಡ್ಡಿ ಅವರನ್ನ ಬಿಜೆಪಿಯಲ್ಲಿಯೇ ಉಳಿಸಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ